logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ರಾಶಿಗೆ ಸೇರಿದವರಿಗೆ ಆಧ್ಯಾತ್ಮ, ವೈರಾಗ್ಯದ ಕಡೆಗೆ ಒಲವು ಹೆಚ್ಚು: ನಿಮ್ಮದೂ ಇದೇ ರಾಶಿನಾ ಪರೀಕ್ಷಿಸಿ

ಈ ರಾಶಿಗೆ ಸೇರಿದವರಿಗೆ ಆಧ್ಯಾತ್ಮ, ವೈರಾಗ್ಯದ ಕಡೆಗೆ ಒಲವು ಹೆಚ್ಚು: ನಿಮ್ಮದೂ ಇದೇ ರಾಶಿನಾ ಪರೀಕ್ಷಿಸಿ

HT Kannada Desk HT Kannada

Dec 04, 2024 11:39 AM IST

google News

ಈ ರಾಶಿಗೆ ಸೇರಿದವರಿಗೆ ಆಧ್ಯಾತ್ಮ, ವೈರಾಗ್ಯದ ಕಡೆಗೆ ಒಲವು ಹೆಚ್ಚು: ನಿಮ್ಮದೂ ಇದೇ ರಾಶಿನಾ ಪರೀಕ್ಷಿಸಿ

    • ಮನುಷ್ಯನ ವ್ಯಕ್ತಿತ್ವ, ಆಸಕ್ತಿ, ಆಲೋಚನೆ ಮತ್ತು ನಡವಳಿಕೆಗಳನ್ನು ಅವರ ಹುಟ್ಟಿದ ಸಮಯ ಮತ್ತು ಜನ್ಮ ರಾಶಿಯನ್ನು ಅವಲಂಬಿಸಿ ಅಂದಾಜು ಮಾಡಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದೇ ರೀತಿ ಕೆಲವು ರಾಶಿಗೆ ಸೇರಿದವರು ಜೀವನದ ಬಗ್ಗೆ ಹೆಚ್ಚು ನಿರಾಸಕ್ತಿ ಹೊಂದಿರುತ್ತಾರೆ. ಆ ರಾಶಿಯವರು ಯಾರು ಎಂದು ನೋಡೋಣ.
ಈ ರಾಶಿಗೆ ಸೇರಿದವರಿಗೆ ಆಧ್ಯಾತ್ಮ, ವೈರಾಗ್ಯದ ಕಡೆಗೆ ಒಲವು ಹೆಚ್ಚು: ನಿಮ್ಮದೂ ಇದೇ ರಾಶಿನಾ ಪರೀಕ್ಷಿಸಿ
ಈ ರಾಶಿಗೆ ಸೇರಿದವರಿಗೆ ಆಧ್ಯಾತ್ಮ, ವೈರಾಗ್ಯದ ಕಡೆಗೆ ಒಲವು ಹೆಚ್ಚು: ನಿಮ್ಮದೂ ಇದೇ ರಾಶಿನಾ ಪರೀಕ್ಷಿಸಿ (PC: Pixabay)

ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ವಿಷಯಗಳನ್ನು ಹೇಳಲಾಗಿದೆ. ಅದರಲ್ಲಿ ಜನ್ಮರಾಶಿಗೆ ಅನುಗುಣವಾಗಿ ಮನುಷ್ಯನಲ್ಲಿರುವ ಗುಣಗಳನ್ನು ಅಂದಾಜು ಮಾಡಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಗೆ ಸೇರಿದವರು ನಿರಾಶಾವಾದಿಗಳಾಗಿರುತ್ತಾರೆ ಮತ್ತು ಅದರ ಬಗ್ಗೆಯೇ ಹೆಚ್ಚು ಆಲೋಚನೆ ಮಾಡುತ್ತಾರೆ. ಅವರು ತಮ್ಮ ಜೀವನದ ಬಗ್ಗೆ ನಿರಾಶೆಯ ಭಾವನೆಯನ್ನು ಹೊಂದಿದ್ದು, ವೈರಾಗ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅಂದರೆ ಅವರಿಗೆ ಲೌಕಿಕ ಆಸೆಗಳು, ಸಂತೋಷ ಮತ್ತು ಆನಂದ ಎಲ್ಲದರಲ್ಲೂ ಕಡಿಮೆ ಆಸಕ್ತಿಯಿರುತ್ತದೆ. ಈ ರೀತಿ ನಡವಳಿಕೆಯನ್ನು ಸಾಮಾನ್ಯವಾಗಿ ಆಧ್ಯಾತ್ಮದ ಕಡೆಗೆ ಒಲವು ತೋರುವ ಜನರು ಅನುಸರಿಸುತ್ತಾರೆ. ಇದರರ್ಥ ಅವರೆಲ್ಲರೂ ಭೌತಿಕ ಪ್ರಪಂಚ ಮತ್ತು ಸಾಮಾನ್ಯ ಜೀವನದಲ್ಲಿ ಕಡಿಮೆ ಆಸಕ್ತಿ ಹೊಂದಿರುವರಾಗಿರುತ್ತಾರೆ. ಅವರು ಆಧ್ಯಾತ್ಮ, ಸತ್ಯ ಮತ್ತು ಸ್ವಾತಂತ್ರ್ಯದ ಮೇಲೆ ಕೇಂದ್ರೀಕರಿಸುವ ಸ್ವಭಾವದವರಾಗಿರುತ್ತಾರೆ. ಹಾಗಾದರೆ ಯಾವ ರಾಶಿಗೆ ಸೇರಿದವರು ಹೆಚ್ಚು ವೈರಾಗ್ಯದ ಆಲೋಚನೆಗಳನ್ನು ಹೊಂದಿರುತ್ತಾರೆ ಎಂದು ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಸಂಗಾತಿಯೊಂದಿಗೆ ವಾದಗಳನ್ನು ತಪ್ಪಿಸಿ, ಶೈಕ್ಷಣಿಕ ಕೆಲಸದ ಸವಾಲುಗಳನ್ನು ನಿವಾರಿಸಲು ಪ್ರಯತ್ನಿಸುತ್ತೀರಿ

Dec 03, 2024 04:12 PM

ಲಕ್ಷ್ಮಿ ಅನುಗ್ರಹ: ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಈ ರಾಶಿಯವರು ಬೆಳೆಯುತ್ತಾರೆ, ಹಣದ ಜೊತೆಗೆ ಸಂತೋಷವು ಇರುತ್ತೆ

Dec 03, 2024 09:02 AM

ನಾಳಿನ ದಿನ ಭವಿಷ್ಯ: ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು, ಸಣ್ಣ ಪ್ರವಾಸಗಳು ಹೆಚ್ಚಿನ ಆನಂದವನ್ನು ನೀಡುತ್ತವೆ

Dec 02, 2024 03:50 PM

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ವೈರಾಗ್ಯದ ಕಡೆಗೆ ಆಸಕ್ತಿ ತೋರಿಸುವ ರಾಶಿಗಳು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ, ಧನು, ಮಕರ, ಕಟಕ ಮತ್ತು ಮೀನ ಮುಂತಾದ ರಾಶಿಗೆ ಸೇರಿದವರು ಸಂನ್ಯಾಸ ಜೀವನಕ್ಕೆ ಹೆಚ್ಚು ಒಳಗಾಗುತ್ತಾರೆ ಎಂದು ಹೇಳಲಾಗುತ್ತದೆ. ಈ ರಾಶಿಯ ಜನರು ಅಂತರ್ಮುಖಿಗಳಾಗಿರುತ್ತಾರೆ ಮತ್ತು ಆಧ್ಯಾತ್ಮದ ಮಾರ್ಗದಲ್ಲಿ ಬದುಕಲು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ಅವರ ಜೀವನದಲ್ಲಿರುವ ಉನ್ನತ ಗುರಿಗಳು, ಶಾಂತಿ ಎಲ್ಲವೂ ಇಡೀ ವಿಶ್ವವೇ ಅನುಸರಿಸುವ ದೈವಿಕ ಮಾರ್ಗಗಳಾಗಿರುತ್ತದೆ.

ಕುಂಭ ರಾಶಿ: ಈ ರಾಶಿಗೆ ಸೇರಿದವರು ಸ್ವಾಭಾವಿಕವಾಗಿಯೇ ಭಾವನಾತ್ಮಕ ಸ್ವಾತಂತ್ರ್ಯ ಮತ್ತು ಅಹಂಕಾರ ವ್ಯಕ್ತಿತ್ವವನ್ನು ವಿರೋಧಿಸುತ್ತಾರೆ. ಅವರ ಆಲೋಚನೆಗಳು ಸಾಮಾನ್ಯವಾಗಿ ಸಮಾಜ, ಪ್ರಪಂಚ, ಜ್ಞಾನದ ವಿಷಯಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಅವರು ಮಾನವ ಹಕ್ಕುಗಳು, ಧರ್ಮ, ಜೀವನ ವಿಧಾನ ಮತ್ತು ಧಾರ್ಮಿಕ ಜೀವನದಲ್ಲಿ ತೀವ್ರ ಆಸಕ್ತಿಯನ್ನು ತೋರಿಸುತ್ತಾರೆ. ಆದ್ದರಿಂದ, ಈ ರಾಶಿಗೆ ಸೇರಿದ ಅನೇಕರು ನಿರ್ಲಿಪ್ತ ಆಲೋಚನೆಗಳನ್ನು ವ್ಯಕ್ತಪಡಿಸುವ ಸಾಧ್ಯತೆಯಿದೆ. ಅವರು ಆಂತರಿಕವಾಗಿ ಎದುರಿಸುವ ಪ್ರಶ್ನೆಗಳಿಗೆ ಉತ್ತರಿಸಲು, ಜೀವನದ ನಿಜವಾದ ಉದ್ದೇಶವನ್ನು ತಿಳಿಯಲು, ಅವರು ಯಾವಾಗಲೂ ಆಧ್ಯಾತ್ಮದ ಮಾರ್ಗವನ್ನು ಅನುಸರಿಸುತ್ತಾರೆ.

ಧನು ರಾಶಿ: ಧನು ರಾಶಿಗಳು ಸ್ವಾಭಾವಿಕವಾಗಿ ತತ್ವವಿಚಾರ, ಆಧ್ಯಾತ್ಮ ಮತ್ತು ಸ್ವಾತಂತ್ರ್ಯ ಪ್ರಿಯರಾಗಿರುತ್ತಾರೆ. ಅವರು ಸತ್ಯ–ನೀತಿಗಳನ್ನು ಇಷ್ಟಪಡುತ್ತಾರೆ. ಈ ರಾಶಿಯ ಜನರು ಜೀವನದಲ್ಲಿಬಾಹ್ಯ ಸಂತೋಷಕ್ಕಿಂತ ಆಂತರಿಕ ಶಾಂತಿ ಮತ್ತು ಆಧ್ಯಾತ್ಮದ ವಿಷಯಗಳಿಗೆ ಆದ್ಯತೆ ನೀಡುತ್ತಾರೆ. ಹಿಂದಿನದನ್ನು ಪ್ರತಿಬಿಂಬಿಸುವುದು ಅಥವಾ ಆತ್ಮಾವಲೋಕನ, ಧ್ಯಾನ ಅಥವಾ ಇತರ ಆಧ್ಯಾತ್ಮದ ಅಭ್ಯಾಸಗಳನ್ನು ಮಾಡುತ್ತಾರೆ.

ಮಕರ ರಾಶಿ: ಈ ರಾಶಿಯವರು ಸ್ವಾಭಾವಿಕವಾಗಿ ಕೆಲಸಗಳನ್ನು ಕಠಿಣ ಪರಿಶ್ರಮದಿಂದ ಪೂರ್ಣಗೊಳಿಸುತ್ತಾರೆ. ಆದರೆ ಅವರು ಆಂತರಿಕ ಪ್ರಶ್ನೆಗಳು ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಅವರು ಇಂದ್ರಿಯನಿಗ್ರಹವನ್ನು ಸಾಧಿಸುವ ಸಾಧ್ಯತೆ ಹೆಚ್ಚು. ಈ ರಾಶಿಯ ಜನರು ಸಮಾಜದ ನಡೆ ಮತ್ತು ವೈಯಕ್ತಿಕ ಅಭಿವೃದ್ಧಿಯ ಬಗ್ಗೆ ತಾತ್ವಿಕವಾಗಿ ಯೋಚಿಸಲು ಸಮರ್ಥರಾಗಿರುತ್ತಾರೆ. ಇತರರ ಅನುಮೋದನೆಯನ್ನು ಪಡೆಯಲು ಪ್ರಯತ್ನಿಸುವ ಬದಲು, ಆಧ್ಯಾತ್ಮಿಕ ಗುರಿಗಳನ್ನು ಸಾಧಿಸಲು ಯೋಚಿಸುತ್ತಾರೆ.

ಕಟಕ ರಾಶಿ: ಈ ರಾಶಿಯವರು ಆಳವಾದ ಭಾವನೆಗಳನ್ನು ಹೊಂದಿರುತ್ತಾರೆ. ಈ ರಾಶಿಯವರು ತಮ್ಮದೇ ಆದ ಭಾವನಾತ್ಮಕ ಪ್ರಪಂಚ ಮತ್ತು ಆಧ್ಯಾತ್ಮಿಕ ಪರಿಶೋಧನೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಅವರು ಆಗಾಗ್ಗೆ ತಮ್ಮನ್ನು ತಾವೇ ಅನ್ವೇಷಣೆಗೊಳಪಡಿಸಿಕೊಳ್ಳುತ್ತಾರೆ. ಧಾರ್ಮಿಕ ಪ್ರಶ್ನೆಗಳು ಮತ್ತು ಸದ್ಗುರುಗಳು ಹೇಳುವಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಾರೆ. ವೈರಾಗ್ಯದ ಲಕ್ಷಣವು ಈ ರಾಶಿಯವರಿಗೆ ಸ್ವಲ್ಪ ಹೆಚ್ಚಾಗಿರುತ್ತದೆ. ಏಕೆಂದರೆ ಅವರು ಕೆಲವು ಸಂದರ್ಭಗಳಲ್ಲಿ ಪ್ರೀತಿ–ಪ್ರೇಮದಂತಹ ಭೌತಿಕ ವಿಷಯಗಳಿಂದ ದೂರವಿರಲು ಬಯಸುತ್ತಾರೆ.

ಮೀನ ರಾಶಿ: ರಾಶಿ ಚಕ್ರದ ಕೊನೆಯ ರಾಶಿಯಾದ ಮೀನ ರಾಶಿಯವರು ಸ್ವಾಭಾವಿಕವಾಗಿಯೇ ಆಧ್ಯಾತ್ಮದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಇದು ಅವರಿಗೆ ತಮ್ಮ ಅತ್ಯಂತ ಅನುಕೂಲಕರವಾದ ಆಲೋಚನೆಗಳನ್ನು ಅವರ ಮೇಲೆ ಪ್ರದರ್ಶಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಈ ರಾಶಿಯ ಜನರು ಸಾಮಾನ್ಯವಾಗಿ ಆಧ್ಯಾತ್ಮಿಕ ಶಾಂತಿ, ಸ್ವಾತಂತ್ರ್ಯ ಮತ್ತು ದಿವ್ಯದೃಷ್ಟಿಯ ಬಗ್ಗೆ ಯೋಚಿಸುತ್ತಾರೆ. ಅವರು ಭೌತಿಕ ಜಗತ್ತಿನಲ್ಲಿ ಎದುರಿಸುತ್ತಿರುವ ಸಂದರ್ಭಗಳು ಮತ್ತು ಕಷ್ಟಗಳಿಂದ ಬೇಸತ್ತಿರುತ್ತಾರೆ. ತತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಸಾಮಾನ್ಯವಾಗಿ ಆಧ್ಯಾತ್ಮಿಕ ಸಿದ್ಧಾಂತಗಳು ಅಥವಾ ಧ್ಯಾನದಂತಹ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ