Rudraksha: ನಿಮ್ಮ ರಾಶಿಗೆ ಯಾವ ರುದ್ರಾಕ್ಷಿ ಧರಿಸಿದರೆ ಸೂಕ್ತ, ಯಾವ ರಾಶಿಯವರಿಗೆ ಯಾವ ರುದ್ರಾಕ್ಷಿ ಹೆಚ್ಚು ಪ್ರಯೋಜನ ಅಂತ ತಿಳಿಯೋಣ
Rudraksha: ರುದ್ರಾಕ್ಷಿ ಕತ್ತಿನಲ್ಲಿದ್ದರೆ ಶಿವನ ಕೃಪೆ ಇರುವುದೆಂಬ ನಂಬಿಕೆ. ಆದರೆ, ರುದ್ರಾಕ್ಷಿ ಧರಿಸುವಾಗ ಕೆಲವೊಂದು ನಿಯಮ, ಅನುಷ್ಠಾನಗಳ ಪಾಲನೆ ಮಾಡಬೇಕಾದ್ದು ಕಡ್ಡಾಯ. ಇದು ಪ್ರಯೋಜನಕಾರಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಿಮ್ಮ ರಾಶಿಗೆ ಯಾವ ರುದ್ರಾಕ್ಷಿ ಧರಿಸಿದರೆ ಸೂಕ್ತ ಎಂದು ಗೊತ್ತಿದೆಯಾ, ಯಾವ ರಾಶಿಯವರಿಗೆ ಯಾವ ರುದ್ರಾಕ್ಷಿ ಹೆಚ್ಚು ಪ್ರಯೋಜನ ತಿಳಿಯೋಣ.
Rudraksha: ರುದ್ರಾಕ್ಷಿ ಎಂದ ಕೂಡಲೇ ನೆನಪಾಗುವುದು ಶಿವ ದೇವರನ್ನು. ಹೌದು, ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ವಿಶೇಷ ಸ್ಥಾನವಿದೆ. ಅವುಗಳನ್ನು ಧರಿಸುವುದರಿಂದ ಅನೇಕ ಆಧ್ಯಾತ್ಮಿಕ ಮತ್ತು ಶಾರೀರಿಕ ಪ್ರಯೋಜನಗಳಿವೆ ಎನ್ನುತ್ತಾರೆ ಬಲ್ಲವರು. ಆದರೆ ಅವುಗಳನ್ನು ಧರಿಸುವುದಾದರೆ ಅನುಸರಿಸಬೇಕಾದ ಕೆಲವು ನಿಯಮಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಶಿವನ ಅನುಗ್ರಹಕ್ಕಾಗಿ ಧರಿಸುವ ರುದ್ರಾಕ್ಷಿಗಳು ನಮಗೆ ಯಶಸ್ಸು ಮತ್ತು ಸಂತೋಷವನ್ನು ತರಬೇಕಾದರೆ, ನಾವು ಅಂತಹ ನಿಯಮಗಳನ್ನು ಅನುಸರಿಸಬೇಕು. ಅನುಷ್ಠಾನವನ್ನು ಪಾಲಿಸಬೇಕು. ಅದೇ ರೀತಿ, ರುದ್ರಾಕ್ಷಿಯನ್ನು ಆಯ್ಕೆ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಜ್ಯೋತಿಷ್ಯದ ಪ್ರಕಾರ, ರಾಶಿಚಕ್ರ ಚಿಹ್ನೆಯ ಪ್ರಕಾರ ರುದ್ರಾಕ್ಷಿಯನ್ನು ಧರಿಸುವುದು ಒಳ್ಳೆಯದು. ಅದನ್ನು ಪಡೆಯಬಹುದು. ಯಾವ ರಾಶಿಚಕ್ರ ಚಿಹ್ನೆಗೆ ಯಾವ ರೀತಿಯ ರುದ್ರಾಕ್ಷಿ ಒಳ್ಳೆಯದು ಎಂಬುದನ್ನು ತಿಳಿಯೋಣ.
ಯಾವ ರಾಶಿಯವರಿಗೆ ಯಾವ ರುದ್ರಾಕ್ಷಿ ಹೆಚ್ಚು ಪ್ರಯೋಜನ
1) ಮೇಷ: ಏಕಮುಖಿ ರುದ್ರಾಕ್ಷಿ, ತ್ರಿಮುಖಿ ರುದ್ರಾಕ್ಷಿ, ಅಥವಾ ಪಂಚಮುಖಿ ರುದ್ರಾಕ್ಷಿ ಸೂಕ್ತ. ಮೇಷ ರಾಶಿಯವರು ಸಾಹಸ ಪ್ರವೃತ್ತಿಯವರಾಗಿರುವ ಕಾರಣ ಅವರಿಗೆ ಈ ರುದ್ರಾಕ್ಷಿಗಳು ಪಂಚಪ್ರತಿಹಾರವಾಗಿ ಅನುಕೂಲಕರವಾಗಿರುತ್ತದೆ.
2) ವೃಷಭ: ಚತುರ್ಮುಖಿ ರುದ್ರಾಕ್ಷಿ, ಶತಮುಖಿ ರುದ್ರಾಕ್ಷಿ, ಅಥವಾ 13 ಮುಖದ ರುದ್ರಾಕ್ಷಿ ಸೂಕ್ತ. ವೃಷಭ ರಾಶಿಯವರು ಸ್ಥಿರತೆ ಮತ್ತು ಸಂಪತ್ತು ಬಯಸುತ್ತಾರೆ. ಆದ್ದರಿಂದ ಈ ರುದ್ರಾಕ್ಷಿಗಳನ್ನು ಅವನ್ನು ಕರುಣಿಸುವ ರೀತಿಯಲ್ಲಿ ಅನುಕೂಲಕರವಾಗಿವೆ.
3) ಮಿಥುನ: ಚತುರ್ಮುಖಿ ರುದ್ರಾಕ್ಷಿ, ಪಂಚಮುಖಿ ರುದ್ರಾಕ್ಷಿ, ಅಥವಾ 13 ಮುಖಗಳ ರುದ್ರಾಕ್ಷಿಗಳು ಈ ರಾಶಿಯವರಿಗೆ ಸೂಕ್ತ. ಈ ರಾಶಿಯಲ್ಲಿ ಜನಿಸಿದವರು ಬುದ್ಧಿವಂತರು ಮತ್ತು ಜ್ಞಾನವನ್ನು ಬಯಸುವವರು. ಅವರು ಈ ರುದ್ರಾಕ್ಷಿಗಳನ್ನು ಧರಿಸುವುದರಿಂದ ಉತ್ತಮ ಫಲ ಪಡೆಯಬಹುದು.
4) ಕರ್ಕಾಟಕ: ತ್ರಿಮುಖಿ ರುದ್ರಾಕ್ಷಿ, ಪಂಚಮುಖಿ ರುದ್ರಾಕ್ಷಿ, ಅಥವಾ ಗೌರಿ-ಶಂಕರ್ ರುದ್ರಾಕ್ಷಿಗಳನ್ನು ಈ ರಾಶಿಯವರು ಧರಿಸಬಹುದು. ಈ ರಾಶಿಯ ಜನರು ಆಧ್ಯಾತ್ಮ, ಶಾಂತಿ ಮತ್ತು ಶಕ್ತಿಯನ್ನು ಬಯಸುವವರು. ಅವರ ಇಷ್ಟಾರ್ಥ ಈಡೇರಲು ಈ ರುದ್ರಾಕ್ಷಿ ಧಾರಣೆ ಅನುಕೂಲಕರ.
5) ಸಿಂಹ: ಏಕಮುಖಿ ರುದ್ರಾಕ್ಷಿ, ತ್ರಿಮುಖಿ ರುದ್ರಾಕ್ಷಿ, ಅಥವಾ ಪಂಚಮುಖಿ ರುದ್ರಾಕ್ಷಿಗಳನ್ನು ಈ ರಾಶಿಯವರು ದರಿಸಬಹುದು. ಸಿಂಹ ರಾಶಿಯವರು ನಾಯಕತ್ವದ ಗುಣ ಹೊಂದಿರುವ ಕಾರಣ ಈ ರುದ್ರಾಕ್ಷಿ ಧಾರಣೆ ಅವರ ಬಲವನ್ನು ಹೆಚ್ಚಿಸಬಹುದು.
6) ಕನ್ಯಾ: ಚತುರ್ಮುಖಿ ರುದ್ರಾಕ್ಷಿ, ಪಂಚಮುಖಿ ರುದ್ರಾಕ್ಷಿ, ಅಥವಾ 13 ಮುಖಗಳ ರುದ್ರಾಕ್ಷಿಗಳ ಧಾರಣೆ ಅನುಕೂಲಕರ. ಕನ್ಯಾ ರಾಶಿಯವರು ಅಧ್ಯಾತ್ಮ ಬೆಳವಣಿಗೆ ಮತ್ತು ಹಣವನ್ನು ಹೊಂದಲು ಬಯಸುವುದರಿಂದ ಈ ರುದ್ರಾಕ್ಷಿ ಅವರಿಗೆ ಸೂಕ್ತ.
7) ತುಲಾ: ಚತುರ್ಮುಖಿ ರುದ್ರಾಕ್ಷಿ, ಶತಮುಖಿ ರುದ್ರಾಕ್ಷಿ, ಅಥವಾ 13 ಮುಖಗಳ ರುದ್ರಾಕ್ಷಿಗಳು ಈ ರಾಶಿಯವರಿಗೆ ಬದುಕಿನ ಸಮತೋಲನ ಕಾಪಾಡಲು ಮತ್ತು ಸಂಪತ್ತು ವೃದ್ಧಿಗೆ ಅನುಕೂಲಕರ.
8) ವೃಶ್ಚಿಕ: ತ್ರಿಮುಖಿ ರುದ್ರಾಕ್ಷಿ, ಪಂಚಮುಖಿ ರುದ್ರಾಕ್ಷಿ ಅಥವಾ ಗೌರಿ-ಶಂಕರ್ ರುದ್ರಾಕ್ಷಿಗಳು ಈ ರಾಶಿಯವರ ಪ್ರಗತಿಗೆ ಅನುಕೂಲಕರವಾಗಿರುತ್ತದೆ. ಈ ರಾಶಿಯವರು ಧೈರ್ಯಶಾಲಿಗಳಾಗಿದ್ದು, ಆಧ್ಯಾತ್ಮಿಕ ಪ್ರಗತಿ ಬಯಸುವ ಕಾರಣ ಈ ರುದ್ರಾಕ್ಷಿ ಧಾರಣೆ ಅವರ ಬಲವನ್ನು ಹೆಚ್ಚಿಸಬಹುದು.
9) ಧನುಸ್ಸು: ಏಕಮುಖಿ ರುದ್ರಾಕ್ಷಿ, ತ್ರಿಮುಖಿ ರುದ್ರಾಕ್ಷಿ ಅಥವಾ ಪಂಚಮುಖಿ ರುದ್ರಾಕ್ಷಿಗಳನ್ನು ಧನು ರಾಶಿಯವರು ಧರಿಸುವುದರಿಂದ ಅವರ ಬದುಕು ಉನ್ನತಿಗೇರುತ್ತದೆ. ಧನು ರಾಶಿಯವರು ನೀತಿವಂತರಾಗಿದ್ದು, ತಮ್ಮ ಯಶಸ್ಸು ಬಯಸುತ್ತಿರುವ ಕಾರಣ ಈ ರುದ್ರಾಕ್ಷಿ ಧಾರಣೆ ಅನುಕೂಲಕರ.
10) ಮಕರ: ಚತುರ್ಮುಖಿ ರುದ್ರಾಕ್ಷಿ, ಶತಮುಖಿ ರುದ್ರಾಕ್ಷಿ, ಅಥವಾ 13 ಮುಖಗಳ ರುದ್ರಾಕ್ಷಿಗಳು ಮಕರ ರಾಶಿಯವರ ದೀರ್ಘಕಾಲದ ಯಶಸ್ಸಿಗೆ ಪೂರಕ.
11) ಕುಂಭ: ಚತುರ್ಮುಖಿ ರುದ್ರಾಕ್ಷಿ, ಶತಮುಖಿ ರುದ್ರಾಕ್ಷಿ, ಅಥವಾ 13 ಮುಖಗಳ ರುದ್ರಾಕ್ಷಿ ಧಾರಣೆ ಮಾಡುವುದರಿಂದ ಕುಂಭ ರಾಶಿಯವರಲ್ಲಿ ಹೊಸ ಉತ್ಸಾಹ ಸದಾ ಇರಬಹುದು. ಈ ರಾಶಿಯ ಜನರು ಹೊಸ ಆಲೋಚನೆಗಳನ್ನು ಮಾಡುತ್ತಿರುತ್ತಾರೆ. ಈ ರುದ್ರಾಕ್ಷಿ ಧಾರಣೆಯು ಅವರಿಗೆ ಹೊಸ ಅಧ್ಯಾತ್ಮಿಕ ದೃಷ್ಟಿಕೋನವನ್ನು ಒದಗಿಸಬಹುದು.
12) ಮೀನ: ತ್ರಿಮುಖಿ ರುದ್ರಾಕ್ಷಿ, ಪಂಚಮುಖಿ ರುದ್ರಾಕ್ಷಿ, ಅಥವಾ ಗೌರಿ-ಶಂಕರ ರುದ್ರಾಕ್ಷಿಗಳನ್ನು ಮೀನ ರಾಶಿಯವರು ಪರಿಗಣಿಸಬಹುದು. ಈ ರಾಶಿಯವರು ಹೆಚ್ಚಾಗಿ ಶಾಂತಿ, ನೆಮ್ಮದಿಯನ್ನು ಬಯಸುತ್ತಾರೆ. ಲೆಕ್ಕಾಚಾರದೊಂದಿಗೆ ಧೈರ್ಯವಾಗಿ ಮುನ್ನುಗ್ಗುವುದಕ್ಕೂ ಪ್ರಯತ್ನಿಸುತ್ತಾರೆ. ಅಂಥವರಿಗೆ ಈ ರುದ್ರಾಕ್ಷಿ ಧಾರಣೆ ಅನುಕೂಲಕರ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.