ಕುಟುಂಬದಲ್ಲಿ ಕಲಹ ಹೆಚ್ಚಾಯ್ತಾ, ವೃತ್ತಿಯಲ್ಲಿ ಪ್ರಗತಿ ಕಾಣ್ತಿಲ್ವಾ; ನಕಾರಾತ್ಮಕತೆ ತೊಲಗಿ ಸಂತೋಷ ನೆಲೆಸಲು ಈ ವಾಸ್ತು ಟಿಪ್ಸ್ ಅನುಸರಿಸಿ
Jun 11, 2024 11:56 AM IST
5 Effective Vastu Tips to get rid of Negative energy at home
ಎಲ್ಲರ ಜೀವನದಲ್ಲೂ ಕಷ್ಟ ಸುಖ ಇದ್ದದ್ದೇ. ಆದರೆ ಕೆಲವೊಮ್ಮೆ ನಮ್ಮ ಸಮಸ್ಯೆಗಳಿಗೆ ನಾವೇ ಕಾರಣ ಆಗುತ್ತೇವೆ. ವಾಸ್ತುವಿಗೆ ಹಿಂದಿನಿಂದಲೂ ಬಹಳ ಪ್ರಾಮುಖ್ಯತೆ ಇದೆ. ಆದ್ದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಲು ಸುಲಭವಾದ ಪರಿಣಾಮಕಾರಿಯಾದ ಈ ಕೆಲವೊಂದು ವಾಸ್ತು ಟಿಪ್ಸ್ ಅನುಸರಿಸಿ.
ಜೀವನದಲ್ಲಿ ಸುಖ ಸಂತೋಷ ನೆಲೆಸಬೇಕೆಂದರೆ ನಾವು ವಾಸಿಸುವ ಸ್ಥಳದ ಸ್ವಚ್ಚತೆ ಕೂಡಾ ಅಷ್ಟೇ ಮುಖ್ಯ. ಅದರಲ್ಲೂ ವಾಸ್ತು ನಿಯಮವನ್ನು ಪಾಲಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರ ಇರುತ್ತವೆ. ಕೆಲಸದ ಒತ್ತಡ, ಅನಾರೋಗ್ಯ, ಹಣಕಾಸಿನ ಪರಿಸ್ಥಿತಿ, ವೈಯಕ್ತಿಕ ಜೀವನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ನಾವು ವಾಸಿಸುವ ಸ್ಥಳ ಧನಾತ್ಮಕವಾಗಿರಬೇಕು.
ತಾಜಾ ಫೋಟೊಗಳು
ನೀವು ಮನೆಯಲ್ಲೇ ದೊರೆಯುವ ಕೆಲವೊಂದು ವಸ್ತುಗಳೊಂದಿಗೆ ಮನೆಯಲ್ಲಿ ನೆಲೆಸಿರುವ ನೆಗೆಟಿವ್ ಎನರ್ಜಿಯನ್ನು ದೂರ ಮಾಡಬಹುದು. 5 ಪರಿಣಾಮಕಾರಿ ವಾಸ್ತು ಟಿಪ್ಸ್ ಇಲ್ಲಿವೆ.
ನೀವು ಇರುವ ಸ್ಥಳವನ್ನು ಉಪ್ಪಿನೊಂದಿಗೆ ಸ್ವಚ್ಛ ಮಾಡಿ
ಉಪ್ಪು ಆಹಾರಕ್ಕೆ ಮಾತ್ರವಲ್ಲ ವಾಸ್ತುಶಾಸ್ತ್ರದಲ್ಲಿ ಕೂಡಾ ಪ್ರಮುಖ ಸ್ಥಾನ ಗಳಿಸಿದೆ. ಬಹಳ ಹಿಂದಿನಿಂದಲೂ ವಾಸ್ತುವಿನಲ್ಲಿ ಉಪ್ಪಿಗೆ ಬಹಳ ಮಹತ್ವವಿದೆ. ಮನೆ ಹಾಗೂ ಕೋಣೆಗಳು ಪ್ರತಿ ಮೂಲೆಯಲ್ಲೂ ಒಂದಿಷ್ಟು ಉಪ್ಪನ್ನು ಹರಡಿ, ಸ್ವಲ್ಪ ಸಮಯದ ನಂತರ ಅದನ್ನು ಪೊರಕೆಯಿಂದ ಶುದ್ಧೀಕರಿಸಿ ಅದನ್ನು ಹೊರಗೆ ಎಸೆಯಿರಿ. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ತೊಲಗಿ ಮನೆಯಲ್ಲಿ ಧನಾತ್ಮಕತೆ ಆವರಿಸುತ್ತದೆ. ಮನೆಯ ಸದಸ್ಯರು ಸುಖ ಸಂತೋಷದಿಂದ ಇರುತ್ತಾರೆ ಎಂದು ನಂಬಲಾಗಿದೆ.
ಸ್ಪಟಿಕಗಳನ್ನು ಬಳಸಿ
ಸ್ಪಟಿಕಗಳಿಗೆ ಕೂಡಾ ಮನೆಯಲ್ಲಿ ನಕಾರಾತ್ಮಕತೆಯನ್ನು ಹೀರಿಕೊಳ್ಳುವ ಗುಣವಿದೆ. ಆದ್ದರಿಂದ ಮನೆಯ ಪ್ರತಿ ಕೋಣೆಯಲ್ಲೂ ಸೆಲೆನೈಟ್, ಅಮೆಥಿಸ್ಟ್ ಅಥವಾ ಬ್ಲಾಕ್ ಟೂರ್‌ಮಲೈನ್‌ನಂಥ ಸ್ಪಟಿಕಗಳನ್ನು ಇಡಿ. ನಿಮ್ಮ ಹೆಸರಿಗೆ ಅಥವಾ ಜಾತಕಕ್ಕೆ ಹೊಂದುವಂಥ ಸ್ಪಟಿಕಗಳನ್ನು ಮೊದಲು ಆಯ್ಕೆ ಮಾಡಿ.
ಅನಗತ್ಯ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯಿರಿ
ಮನೆಯಲ್ಲಿ ನಕಾರಾತ್ಮಕತೆ ಆವರಿಸಿಕೊಳ್ಳಲು ಮತ್ತೊಂದು ಕಾರಣ ಮನೆಯಲ್ಲಿ ನಾವು ಬಳಸದೆ ಇರುವಂಥ ಅನಾವಶ್ಯಕ ವಸ್ತುಗಳು. ಹಾಗೇ ಮನೆ ಒಳಗೆ ಅಸ್ತವ್ಯಸ್ತವಾದ ವಸ್ತುಗಳು. ಎಷ್ಟೋ ಮನೆಗಳಲ್ಲಿ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಹೀಗೆ ಅಸ್ತವ್ಯಸ್ತವಾದ ವಸ್ತುಗಳಿಂದ ಕೂಡಾ ನಕಾರಾತ್ಮಕತೆ ಮನೆಯನ್ನು ಪ್ರವೇಶಿಸಬಹುದು. ಧೂಳು ಹಾಗೂ ಕೊಳಕಿನಿಂದ ತುಂಬಿದ ವಸ್ತುಗಳನ್ನು, ನೀವು ಬಹಳ ದಿನಗಳಿಂದ ಬಳಸದೆ ಇರುವ ವಸ್ತುಗಳನ್ನು ಮನೆಯಿಂದ ಹೊರ ಎಸೆದು ಮನೆಯನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ನೀವು ಬದಲಾವಣೆ ಕಾಣಬಹುದು.
ಸದಾ ಕಿಟಕಿ, ಬಾಗಿಲುಗಳನ್ನು ಮುಚ್ಚಬೇಡಿ
ಮನೆ ಒಳಗೆ ಸಾಕಷ್ಟು ಗಾಳಿ ಬೆಳಕು ಇರಬೇಕು. ಮನೆ ಒಳಗೆ ಕತ್ತಲು ಇದ್ದರೆ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಬಾಗಿಲು, ಕಿಟಕಿಗಳನ್ನು ಸದಾ ಕಾಲ ಮುಚ್ಚಿರಬೇಡಿ. ಅದಷ್ಟು ತೆರೆದಿಡಿ , ಅವಶ್ಯಕ ಸಮಯದಲ್ಲಿ ಮಾತ್ರ ಬಂದ್ ಮಾಡಿ. ಮನೆ ಒಳಗೆ ಸೂರ್ಯನ ಬೆಳಕು, ಶುದ್ಧವಾದ ಗಾಳಿ ಬರುವಂತೆ ವ್ಯವಸ್ಥೆ ಮಾಡಿ.
ಪಾಲೊ ಸಾಂಟೋ ಕಡ್ಡಿಯ ಹೊಗೆಯನ್ನು ಮನೆಯಲ್ಲಿ ಹರಡಿ
ಸುಂಗಧಭರಿತ ಪಾಲೋ ಸಾಂಟೋ ಮರದ ತುಂಡನ್ನು ಸುಟ್ಟು , ಅದರಿಂದ ಬರುವ ಹೊಗೆಯನ್ನು ಮನೆಯ ಪ್ರತಿ ಕೋಣೆಗೂ ಹರಡಿ. ಹೀಗೆ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಒಂದು ಕ್ಷಣವೂ ಇರುವುದಿಲ್ಲ. ಈ ವಿಧಾನ ಬಹಳ ಪ್ರಾಚೀನ ಪದ್ಧತಿಯಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.