logo
ಕನ್ನಡ ಸುದ್ದಿ  /  ಕ್ರೀಡೆ  /  ಕೊಲಂಬಿಯಾದಲ್ಲಿ ಖ್ಯಾತ ಫುಟ್ಬಾಲ್‌ ಆಟಗಾರನ ಪೋಷಕರ ಕಿಡ್ನಾಪ್‌; ತಾಯಿಯ ರಕ್ಷಣೆ

ಕೊಲಂಬಿಯಾದಲ್ಲಿ ಖ್ಯಾತ ಫುಟ್ಬಾಲ್‌ ಆಟಗಾರನ ಪೋಷಕರ ಕಿಡ್ನಾಪ್‌; ತಾಯಿಯ ರಕ್ಷಣೆ

Jayaraj HT Kannada

Oct 29, 2023 09:35 PM IST

google News

ಲಿವರ್‌ಪೂಲ್‌ ಆಟಗಾರ ಲೂಯಿಸ್ ಡಯಾಸ್

    • ಉತ್ತರ ಕೊಲಂಬಿಯಾದಲ್ಲಿ ಅಪಹರಣಕ್ಕೊಳಗಾದ ಫುಟ್ಬಾಲ್ ಆಟಗಾರ ಲೂಯಿಸ್ ಡಯಾಜ್ ಅವರ ತಾಯಿಯನ್ನು ರಕ್ಷಿಸಲಾಗಿದೆ.
ಲಿವರ್‌ಪೂಲ್‌ ಆಟಗಾರ ಲೂಯಿಸ್ ಡಯಾಸ್
ಲಿವರ್‌ಪೂಲ್‌ ಆಟಗಾರ ಲೂಯಿಸ್ ಡಯಾಸ್ (REUTERS)

ಕೊಲಂಬಿಯಾದ ಖ್ಯಾತ ಫುಟ್ಬಾಲ್‌ ಆಟಗಾರ ಲೂಯಿಸ್ ಡಯಾಸ್‌ (Luis Diaz) ಅವರ ತಾಯಿಯನ್ನು ರಕ್ಷಿಸಲಾಗಿದೆ ಎಂದು ಕೊಲಂಬಿಯಾ ದೇಶದ ಅಧ್ಯಕ್ಷರು ತಿಳಿಸಿದ್ದಾರೆ. ಡಯಾಸ್‌ ಅವರ ತಂದೆ-ತಾಯಿ ಉತ್ತರ ಕೊಲಂಬಿಯಾದಲ್ಲಿ ಅಪಹರಣಕ್ಕೊಳಗಾಗಿದ್ದರು. ಲಿವರ್‌ಪೂಲ್ ಫುಟ್ಬಾಲ್‌ ಕ್ಲಬ್‌ ಆಟಗಾರನ ತಾಯಿಯನ್ನು ಸದ್ಯ ರಕ್ಷಿಸಲಾಗಿದೆ ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಶನಿವಾರ ಹೇಳಿದ್ದಾರೆ.

ತಾಯಿಯನ್ನು ರಕ್ಷಿಸಲಾಗಿದ್ದರೂ, ನಾಪತ್ತೆಯಾಗಿರುವ ತಂದೆಗಾಗಿ ಅಧಿಕಾರಿಗಳು ಇನ್ನೂ ಹುಡುಕಾಟ ಮುಂದುವರೆಸಿದ್ದಾರೆ. ಕೊಲಂಬಿಯಾದ ಅಟಾರ್ನಿ ಜನರಲ್ ಕಚೇರಿಯು ಈ ಹಿಂದೆ ಕೊಲಂಬಿಯಾದ ಉತ್ತರ ಲಾ ಗುವಾಜಿರಾ ಪ್ರಾಂತ್ಯದ ಮುನ್ಸಿಪಾಲಿಟಿಯಾದ ಬರಾನ್ಕಾಸ್‌ನಲ್ಲಿ ದಂಪತಿಯನ್ನು ಹುಡುಕಲು ತನಿಖಾಧಿಕಾರಿಗಳ ತಂಡವನ್ನು ಒಟ್ಟುಗೂಡಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಡಯಾಸ್ ಅವರ ತಾಯಿ ಸಿಲೆನಿಸ್ ಮರುಲಾಂಡಾ ಅವರನ್ನು ರಕ್ಷಿಸಿರುವ ಕುರಿತು ಕೊಲಂಬಿಯಾ ಪೊಲೀಸರು ಖಚಿತಪಡಿಸಿದ್ದಾರೆ.

ಲೂಯಿಸ್ ಡಯಾಸ್‌ ಅವರ ತಂದೆ ತಾಯಿಯಾದ ಲೂಯಿಸ್ ಮ್ಯಾನುಯೆಲ್ ಡಯಾಜ್ ಮತ್ತು ಸಿಲೆನಿಸ್ ಮರುಲಾಂಡ ಅವರು, ಸೇವಾ ಕೇಂದ್ರದಲ್ಲಿದ್ದಾಗ ಕಿಡ್ನಾಪ್‌ ಆಗಿದ್ದರು. ಮೋಟಾರ್ ಬೈಕ್‌ಗಳಲ್ಲಿ ಬಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಪೊಲೀಸ್ ನಿರ್ದೇಶಕ ಜನರಲ್ ವಿಲಿಯಂ ಸಲಾಮಾಂಕಾ ಅವರು ಪ್ರಕರಣವನ್ನು ಗುಪ್ತಚರ ಏಜೆಂಟ್‌ಗಳಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿಸುಬಂದಿದೆ.

ಪ್ರೀಮಿಯರ್ ಲೀಗ್ ಫುಟ್ಬಾಲ್‌ ಕ್ಲಬ್ ಲಿವರ್‌ಪೂಲ್, 2022ರ ಜನವರಿಯಲ್ಲಿ ಕೊಲಂಬಿಯಾ ಆಟಗಾರ ಡಯಾಸ್‌ ಅವರನ್ನು ತನ್ನ ತಂಡಕ್ಕೆ ಕರೆಸಿಕೊಂಡಿತ್ತು.

ಏಷ್ಯನ್‌ ಗೇಮ್ಸ್‌ ಬಳಿಕ ಪ್ಯಾರಾ ಗೇಮ್ಸ್‌ನಲ್ಲೂ ಶತಕ ಸಾಧನೆ; 100 ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತ

ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ (Asian Para Games) ಕೂಡಾ ಭಾರತೀಯ ಅಥ್ಲೀಟ್‌ಗಳು 100 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಭಾರತದ ದಿಲೀಪ್ ಮಹಾದು ಗವಿತ್ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡುವ ಮೂಲಕ ಭಾರತವು ಪದಕ ಗಳಿಕೆಯಲ್ಲಿ ಶತಕ ಸಾಧನೆ ಮಾಡಿದೆ. ಅಲ್ಲದೆ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಪುರುಷರ 400 ಮೀಟರ್ ಟಿ47 ಸ್ಪರ್ಧೆಯಲ್ಲಿ ಗವಿತ್ ಬಂಗಾರದ ಪದಕ ಗೆದ್ದಿದ್ದಾರೆ. ಅವರು 49.48 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಪ್ರತಿಷ್ಠಿತ ಚಿನ್ನ ಗೆದ್ದರು. ‌ಭಾರತೀಯದ ಸಾಧನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ