logo
ಕನ್ನಡ ಸುದ್ದಿ  /  ಕ್ರಿಕೆಟ್  /  Match Fixing: ವಿಶ್ವಕಪ್‌ ಸೋತ ಕಾರಣ ‘ಮ್ಯಾಚ್‌ ಫಿಕ್ಸಿಂಗ್’ ವಿಚಾರ ಸ್ಪಷ್ಟವಾಯಿತು ನೋಡಿ ಎಂದ ಅನುಪಮ್ ಮಿತ್ತಲ್

Match Fixing: ವಿಶ್ವಕಪ್‌ ಸೋತ ಕಾರಣ ‘ಮ್ಯಾಚ್‌ ಫಿಕ್ಸಿಂಗ್’ ವಿಚಾರ ಸ್ಪಷ್ಟವಾಯಿತು ನೋಡಿ ಎಂದ ಅನುಪಮ್ ಮಿತ್ತಲ್

HT Kannada Desk HT Kannada

Nov 21, 2023 06:23 PM IST

google News

ಅನುಪಮ್ ಮಿತ್ತಲ್ - ಪೀಪಲ್ ಗ್ರೂಪ್‌ನ ಸ್ಥಾಪಕ ಮತ್ತು CEO ಮತ್ತು ಶಾರ್ಕ್ ಟ್ಯಾಂಕ್ ಇಂಡಿಯಾದ ತೀರ್ಪುಗಾರ.

  • ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ ಕುರಿತಾಗಿ ಟ್ವೀಟ್‌ಗಳ ಸರಮಾಲೆ. ಆದರೆ, ಅನುಪಮ್ ಮಿತ್ತಲ್ ಅವರ ಟ್ವೀಟ್ ಉಳಿದವರಿಗಿಂತ ಭಿನ್ನವಾಗಿದೆ. ಪಂದ್ಯದ ಕುರಿತು ಚರ್ಚಿಸುವ ಇತರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಸೌಮ್ಯವಾದ ಧ್ವನಿಯ ನಡುವೆ ಮಿತ್ತಲ್‌ ಟ್ವೀಟ್‌ನಲ್ಲಿ ನವಿರು ಹಾಸ್ಯದ ಲೇಪವಿದೆ.

ಅನುಪಮ್ ಮಿತ್ತಲ್ - ಪೀಪಲ್ ಗ್ರೂಪ್‌ನ ಸ್ಥಾಪಕ ಮತ್ತು CEO ಮತ್ತು ಶಾರ್ಕ್ ಟ್ಯಾಂಕ್ ಇಂಡಿಯಾದ ತೀರ್ಪುಗಾರ.
ಅನುಪಮ್ ಮಿತ್ತಲ್ - ಪೀಪಲ್ ಗ್ರೂಪ್‌ನ ಸ್ಥಾಪಕ ಮತ್ತು CEO ಮತ್ತು ಶಾರ್ಕ್ ಟ್ಯಾಂಕ್ ಇಂಡಿಯಾದ ತೀರ್ಪುಗಾರ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ನವೆಂಬರ್ 19 ರಂದು ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತ ಆಘಾತದಿಂದ ಇನ್ನೂ ಭಾರತೀಯ ಕ್ರಿಕೆಟ್ ಪ್ರೇಮಿಗಳು ಚೇತರಿಸಿಕೊಂಡಿಲ್ಲ. ಪಂದ್ಯ ಮುಗಿದು ಎರಡು ದಿನ ಕಳೆದರೂ ನಿರಾಶೆಗೊಂಡಿರುವ ಕ್ರಿಕೆಟ್ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಇವೆಲ್ಲದರ ನಡುವೆ ಗಮನಸೆಳೆದುದು ಪೀಪಲ್ ಗ್ರೂಪ್ ಸಿಇಒ ಆಗಿರುವ ಅನುಪಮ್ ಮಿತ್ತಲ್ ಅವರ ಟ್ವೀಟ್‌. ಅನುಪಮ್ ಮಿತ್ತಲ್‌ ಅವರು ಶಾರ್ಕ್‌ ಟ್ಯಾಂಕ್ ಇಂಡಿಯಾದ ತೀರ್ಪುಗಾರರು ಕೂಡ.

ಅವರ ಟ್ವೀಟ್‌ ಆಘಾತದ ಏಕತಾನತೆಯ ಟ್ವೀಟ್‌ಗಳಿಂದ ಹೊರಬರುವುದಕ್ಕೆ ಬೇಕಾದಂತೆ, ನವಿರು ಹಾಸ್ಯದ ಧ್ವನಿಯನ್ನು ಹೊಂದಿದೆ. ಹೀಗಾಗಿ ಜನ ಬೇಗ ಅದರೆಡೆಗೆ ಆಕರ್ಷಿತರಾದರು.

“ವಿಶ್ವಕಪ್ ಕಳೆದುಕೊಂಡ ಕಾರಣ ಒಂದಂತೂ ಸ್ಪಷ್ಟವಾಯಿತು ನೋಡಿ. ಭಾರತದಲ್ಲಿ ಮ್ಯಾಚ್‌ ಫಿಕ್ಸಿಂಘ್ ಏನಿದ್ದರೂ ಶಾದಿ ಡಾಟ್‌ಕಾಮ್‌ನಲ್ಲಿ ಮಾತ್ರ ಆಗೋದು ಅಂತ!” - ಹೀಗೆ ಅನುಪಮ್ ಮಿತ್ತಲ್‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಅನುಪಮ್ ಮಿತ್ತಲ್ ಅವರ ಟ್ವೀಟ್‌ ಕಡೆಗೊಂದು ನೋಟ ಬೀರಿ:

ಅನುಪಮ್ ಮಿತ್ತಲ್ ಅವರ ಈ ಪೋಸ್ಟ್ ಅನ್ನು ಇಂದು (ನ.21) ಬೆಳಗ್ಗೆ 9.21ಕ್ಕೆ ಮಾಡಿದ್ದು ಈಗ (ಸಂಜೆ 6) 58100 ವ್ಯೂವ್ಸ್ ಪಡೆದಿದೆ. ಅದೇ ರೀತಿ 1,100 ಲೈಕ್ಸ್, 60ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

ಅನುಮಪ್ ಮಿತ್ತಲ್‌ ಟ್ವೀಟ್‌ಗೆ ಜನರ ಪ್ರತಿಕ್ರಿಯೆ ಹೀಗಿತ್ತು:

“ಲವ್ ಹೇಳುವಷ್ಟು ಉತ್ತಮ ಮ್ಯಾಚ್‌ ಅನ್ನು ಬೇರಾವುದೂ ಹೇಳಲಾರದು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

“Shaadi.com ನಲ್ಲಿ ಲೈಫ್‌ಟೈಮ್‌ಗೆ ಬೇಕಾದ ಮ್ಯಾಚ್ ಫಿಕ್ಸ್ ಆಗುತ್ತದೆ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

“ಹೌದಪ್ಪಾ ಹೌದು” ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.

ವಾಹ್‌!, ಎಂಥಾ ಟೈಮಿಂಗ್‌, ಪರ್ಫೆಕ್ಟ್‌, ಹ್ಞೂಂ ವಾವ್‌ ಎಂದು ಕಾಮೆಂಟ್ ಮಾಡಿದ್ದಾರೆ.

ನಿಮ್ಮ ಕ್ರಿಯೇಟಿವ್ ಆಲೋಚನೆಗಳನ್ನು ಹಂಚಿಕೊಳ್ಳಿ…

ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್

ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತಿಮವಾಗಿ ಆರು ವಿಕೆಟ್‌ಗಳಿಂದ ಜಯ ಸಾಧಿಸಿ ಆರನೇ ಬಾರಿಗೆ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು. ಎರಡು ತಂಡಗಳು ಇದಕ್ಕೂ ಮೊದಲು 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಅಲ್ಲಿ ಕೂಡ ಆಸ್ಟ್ರೇಲಿಯಾವು ವಿಜಯಶಾಲಿಯಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ