LIVE UPDATES
ವಿಸ್ತೃತ ಹಸಿರು ಮಾರ್ಗದಲ್ಲಿ ಅಕ್ಟೋಬರ್‌ನಲ್ಲೇ ಮೆಟ್ರೋ ಓಡಾಟ; ಉದ್ಘಾಟನೆ ದಿನಾಂಕ ನಿಗದಿಗೆ ನಗರಾಭಿವೃದ್ಧಿ ಇಲಾಖೆಗೆ ಪತ್ರ (HT_PRINT)
Karnataka News Live October 14, 2024 : ವಿಸ್ತೃತ ಹಸಿರು ಮಾರ್ಗದಲ್ಲಿ ಅಕ್ಟೋಬರ್‌ನಲ್ಲೇ ಮೆಟ್ರೋ ಓಡಾಟ; ಉದ್ಘಾಟನೆ ದಿನಾಂಕ ನಿಗದಿಗೆ ನಗರಾಭಿವೃದ್ಧಿ ಇಲಾಖೆಗೆ ಪತ್ರ
Oct 14, 2024 08:02 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: ವಿಸ್ತೃತ ಹಸಿರು ಮಾರ್ಗದಲ್ಲಿ ಅಕ್ಟೋಬರ್‌ನಲ್ಲೇ ಮೆಟ್ರೋ ಓಡಾಟ; ಉದ್ಘಾಟನೆ ದಿನಾಂಕ ನಿಗದಿಗೆ ನಗರಾಭಿವೃದ್ಧಿ ಇಲಾಖೆಗೆ ಪತ್ರ
- Namma Metro: ನಾಗಸಂದ್ರ ಮತ್ತು ಮಾದಾವರ ನಡುವಿನ ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆಯಾಗಿದ್ದು, ರೈಲು ಓಡಾಟಕ್ಕೆ ರೈಲ್ವೆ ಸುರಕ್ಷತೆ ಆಯುಕ್ತರು ಅನುಮತಿ ನೀಡಿದ್ದಾರೆ. ಅದರ ಬೆನ್ನಲ್ಲೇ ಉದ್ಘಾಟನೆ ದಿನಾಂಕ ನಿಗದಿಪಡಿಸಲು ಬಿಎಂಆರ್‌ಸಿಎಲ್ ಮುಂದಾಗಿದ್ದು, ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.
ಕರ್ನಾಟಕ News Live: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಅವ್ಯವಹಾರ; ಮಾಜಿ ಸಚಿವ ನಾಗೇಂದ್ರಗೆ ಷರತ್ತು ಬದ್ಧ ಜಾಮೀನು ಮಂಜೂರು
- Valmiki scam: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಅವ್ಯವಹಾರಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ನಾಗೇಂದ್ರಗೆ 82 ನೇ ಸಿಟಿ ಸಿವಿಲ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. (ವರದಿ-ಎಚ್. ಮಾರುತಿ)
ಕರ್ನಾಟಕ News Live: ಕೋರ್ಟ್ ತೀರ್ಮಾನವನ್ನು ಸ್ವಾಗತಿಸಿದ ರೇಣುಕಾಸ್ವಾಮಿ ತಂದೆ ಕಾಶಿನಾಥ್; ಭಾವುಕರಾಗಿ ಹೇಳಿದ್ದೇನು ನೋಡಿ
- ಇಂದು ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ದರ್ಶನ್‌ಗೆ ಇಂದು ಜಾಮೀನಾಗುತ್ತದೆ ಎಂದು ಹಲವಾರು ಅಭಿಮಾನಿಗಳು ಬಳ್ಳಾರಿ ಜೈಲ್‌ನ ಹೊರ ಭಾಗದಲ್ಲಿ ಸೇರಿದ್ದರು. ಆದರೆ ದರ್ಶನ್ ಬೇಲ್ ಅರ್ಜಿ ವಜಾ ಮಾಡಲಾಗಿದೆ. ಈ ಬಗ್ಗೆ ರೇಣುಕಾಸ್ವಾಮಿ ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ. ಕೋರ್ಟ್ ನ್ಯಾಯದ ಪರ ಇದೆ ಎಂದಿದ್ದಾರೆ.
ಕರ್ನಾಟಕ News Live: ಹಿಂದೂ ಧರ್ಮದಲ್ಲಿ ಜಾತೀಯತೆ ಬಗ್ಗೆ ಬೇಸರ; ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ ಸಚಿವ ಹೆಚ್ಸಿ ಮಹದೇವಪ್ಪ
- HC Mahadevappa: ಹಿಂದೂ ಧರ್ಮ ಸುಧಾರಣೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ. ಹಾಗಾಗಿ ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ ಎಂದು ಸಚಿವ ಹೆಚ್ಸಿ ಮಹದೇವಪ್ಪ ಅವರು ಹೇಳಿದ್ದಾರೆ.
ಕರ್ನಾಟಕ News Live: ಅಧಿಕಾರಿಗಳ ಎಡವಟ್ಟು; ಮೈಸೂರು ದಸರಾ ಜಂಬೂಸವಾರಿ ಮುಗಿಸಿದ ಗಜಪಡೆಗೆ ಒಂದೂವರೆ ಗಂಟೆ ಕಾಲ ಲಾರಿಯಲ್ಲೇ ನಿಲ್ಲುವ ಶಿಕ್ಷೆ
- Mysore Dasara 2024: ಅಧಿಕಾರಿಗಳ ಎಡವಟ್ಟಿನಿಂದಾಗಿ ಯಶಸ್ವಿಯಾಗಿ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಮುಗಿಸಿದ ಗಜಪಡೆಗೆ ಒಂದೂವರೆ ಗಂಟೆ ಕಾಲ ಲಾರಿಯಲ್ಲೇ ನಿಲ್ಲುವ ಶಿಕ್ಷೆ ನೀಡಿದ್ದಾರೆ.
ಕರ್ನಾಟಕ News Live: Video: ಪಾಪ ಗುರು, ನವರಾತ್ರಿ ಪೂಜೆಗೂ ಭಾಗಿ- ಲ್ಯಾಪ್ಟಾಪ್ ಹಿಡ್ಕೊಂಡ್ ಮೀಟಿಂಗ್ಗೂ ಭಾಗಿ; ಬೆಂಗಳೂರಿನಲ್ಲಿ ಉದ್ಯೋಗಿಯೊಬ್ಬರು ಕಂಡದ್ದು ಹೀಗೆ
- Bengaluru Video Viral: ಬೆಂಗಳೂರಿನಲ್ಲಿ ಉದ್ಯೋಗಿಯೊಬ್ಬರು ನವರಾತ್ರಿ ಪೂಜೆಗೂ ಭಾಗಿ, ಲ್ಯಾಪ್ಟಾಪ್ ಹಿಡ್ಕೊಂಡು ಮೀಟಿಂಗ್ಗೂ ಭಾಗಿಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ಕರ್ನಾಟಕ News Live: Mysore Dasara: ಮೈಸೂರು ದಸರಾ ಡ್ಯೂಟಿ ಮುಗಿಸಿ ನಾಡಿನಿಂದ ಕಾಡಿಗೆ ಹೊರಟ ಗಜಪಡೆ, ಅರಮನೆ ಅಂಗಳದಲ್ಲಿ ಭಾವುಕ ಬಿಳ್ಕೊಡುಗೆ
- Mysore Dasara 2024: ಕಳೆದ ಒಂದೂವರೆ ತಿಂಗಳಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ಮೈಸೂರು ದಸರಾ ಗಜಪಡೆ, ಜಂಬೂಸವಾರಿಯಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಈಗ ನಾಡಿನಿಂದ ಕಾಡಿನತ್ತ ಹೊರಟಿದೆ.
ಕರ್ನಾಟಕ News Live: ಮುಡಾ ಕೇಸ್ನಿಂದ ಹೆದರಿದರೇ ಮಲ್ಲಿಕಾರ್ಜುನ್ ಖರ್ಗೆ? ಕೆಐಎಡಿಬಿಗೆ ಐದು ಎಕರೆ ಸಿಎ ನಿವೇಶನ ಮರಳಿಸಿದ ಖರ್ಗೆ ಕುಟುಂಬ
Mallikarjun Kharge: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ಸೈಟ್ ಹಂಚಿಕೆ ಪ್ರಕರಣ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಬೆನ್ನಲ್ಲೇ ಮಲ್ಲಿಕಾರ್ಜುನ್ ಖರ್ಗೆ ಕುಟುಂಬ ಕೂಡ ವಿವಾದದ ಸೈಟ್ ಹಿಂತಿರುಗಿಸಲು ನಿರ್ಧರಿಸಿದೆ.
ಕರ್ನಾಟಕ News Live: Karnataka Rains: ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೈದು ದಿನಗಳ ಕಾಲ ಭಾರೀ ಮಳೆ, ಬಹುತೇಕ ಕಡೆಗಳಲ್ಲಿ ಯೆಲ್ಲೋ ಅಲರ್ಟ್
- Heavy Rainfall in Karnataka: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇನ್ನೂ 5 ದಿನಗಳ ಕಾಲ ಮಳೆ ಇರಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆ ಮತ್ತು ಚಳಿ ಎರಡೂ ಒಟ್ಟೊಟ್ಟಿಗೆ ದಾಳಿ ಇಟ್ಟಿದ್ದು, ಜನರು ಹೈರಾಣಾಗಿದ್ದಾರೆ.