ದರ್ಶನ್‌ಗೆ ಜಾಮೀನು ನಿರಾಕರಿಸುವ ಕೋರ್ಟ್ ತೀರ್ಮಾನಕ್ಕೆ ಮೃತ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಸ್ವಾಗತ; ಹೇಳಿದ್ದೇನು ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ದರ್ಶನ್‌ಗೆ ಜಾಮೀನು ನಿರಾಕರಿಸುವ ಕೋರ್ಟ್ ತೀರ್ಮಾನಕ್ಕೆ ಮೃತ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಸ್ವಾಗತ; ಹೇಳಿದ್ದೇನು ನೋಡಿ

ದರ್ಶನ್‌ಗೆ ಜಾಮೀನು ನಿರಾಕರಿಸುವ ಕೋರ್ಟ್ ತೀರ್ಮಾನಕ್ಕೆ ಮೃತ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಸ್ವಾಗತ; ಹೇಳಿದ್ದೇನು ನೋಡಿ

ಇಂದು ದರ್ಶನ್‌ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ದರ್ಶನ್‌ಗೆ ಇಂದು ಜಾಮೀನಾಗುತ್ತದೆ ಎಂದು ಹಲವಾರು ಅಭಿಮಾನಿಗಳು ಬಳ್ಳಾರಿ ಜೈಲ್‌ನ ಹೊರ ಭಾಗದಲ್ಲಿ ಸೇರಿದ್ದರು. ಆದರೆ ದರ್ಶನ್‌ ಬೇಲ್‌ ಅರ್ಜಿ ವಜಾ ಮಾಡಲಾಗಿದೆ. ಈ ಬಗ್ಗೆ ರೇಣುಕಾಸ್ವಾಮಿ ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ. ಕೋರ್ಟ್‌ ನ್ಯಾಯದ ಪರ ಇದೆ ಎಂದಿದ್ದಾರೆ.

ಕೋರ್ಟ್‌ ತೀರ್ಮಾನವನ್ನು ಸ್ವಾಗತಿಸಿದ ರೇಣುಕಾಸ್ವಾಮಿ ತಂದೆ ಕಾಶಿನಾಥ್
ಕೋರ್ಟ್‌ ತೀರ್ಮಾನವನ್ನು ಸ್ವಾಗತಿಸಿದ ರೇಣುಕಾಸ್ವಾಮಿ ತಂದೆ ಕಾಶಿನಾಥ್

ಕೋರ್ಟ್ ತೀರ್ಪು ಬರುತಿದ್ದಂತೆ ಭಾವುಕರಾದ ರೇಣುಕಸ್ವಾಮಿ ತಂದೆ ಕಾಶಿನಾಥ್ ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ ಎಂದಿದ್ದಾರೆ. ಪೊಲೀಸರು ಪ್ರಕರಣದಲ್ಲಿ ತುಂಬಾ ಚನ್ನಾಗಿ ಕೆಲಸ ಮಾಡಿದ್ದಾರೆ. ನ್ಯಾಯಾಂಗದ ತೀರ್ಪು ಸ್ವಾಗತಿಸುತ್ತೇನೆ ಎನ್ನುತ್ತಲೇ ಭಾವುಕರಾಗಿದ್ದಾರೆ. ಕೋರ್ಟ್‌ನಲ್ಲಿ SPP ಕೂಡ ತಮ್ಮ ಪರವಾಗಿ ಉತ್ತಮವಾಗಿ ವಾದ ಮಂಡನೆ ಮಾಡುತ್ತಿದ್ದಾರೆ ಎಂದು ಚಿತ್ರದುರ್ಗದಲ್ಲಿ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಇಂದು ದರ್ಶನ್‌ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ದರ್ಶನ್‌ಗೆ ಇಂದು ಜಾಮೀನಾಗುತ್ತದೆ ಎಂದು ಹಲವಾರು ಅಭಿಮಾನಿಗಳು ಬಳ್ಳಾರಿ ಜೈಲ್‌ನ ಹೊರ ಭಾಗದಲ್ಲಿ ಸೇರಿದ್ದರು. ಆದರೆ ದರ್ಶನ್‌ ಬೇಲ್‌ ಅರ್ಜಿ ವಜಾ ಮಾಡಲಾಗಿದೆ. ಈ ಬಗ್ಗೆ ರೇಣುಕಾಸ್ವಾಮಿ ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ. ಕೋರ್ಟ್‌ ನ್ಯಾಯದ ಪರ ಇದೆ ಎಂದಿದ್ದಾರೆ.

ಆರು ಆರೋಪಿಗಳಲ್ಲಿ ನಾಲ್ವರ ಜಾಮೀನು ಅರ್ಜಿ ವಜಾ ಆಗಿದೆ. ಪವಿತ್ರಾಗೌಡ, ದರ್ಶನ್, ನಾಗರಾಜ್ ಹಾಗೂ ಲಕ್ಷ್ಮಣ್ ಅರ್ಜಿ ವಜಾ ಮಾಡಲಾಗಿದೆ. ನಾಳೆ ಮತ್ತೆ ದರ್ಶನ್‌ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ರವಿಶಂಕರ್ ಹಾಗೂ ದೀಪಕ್ ಈ ಇಬ್ಬರಿಗೆ ಈಗ ಜಾಮೀನು ಸಿಕ್ಕಿದೆ. 57ನೇ ಸಿಟಿ ಸಿವಿಲ್ ಕೋರ್ಟ್‌ನಿಂದ ಈ ಆದೇಶ ಹೊರಬಂದಿದೆ. ಎಂಟನೇ ಆರೋಪಿ ರವಿಶಂಕರ್‌ ಅಲಿಯಾಸ್‌ ರವಿಗೆ ಜಾಮೀನು ಮಂಜೂರಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಹೊತ್ತು ಕಳೆದ ನೂರಿಪ್ಪತ್ತು ದಿನಗಳಿಂದ ಜೈಲಿನಲ್ಲಿದ್ದ ಎ-2 ಚಿತ್ರ ನಟ ದರ್ಶನ್ ಮತ್ತು ಎ-1 ಆಗಿದ್ದ ಪವಿತ್ರಾ ಗೌಡಗೆ ಜಾಮೀನು ನಿರಾಕರಿಸಲಾಗಿದೆ. ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ದೀಪಕ್ ಮತ್ತು ರವಿಶಂಕರ್ ಗೆ ಜಾಮೀನು ನೀಡಲಾಗಿದೆ. ಇತರ ಆರೋಪಿಗಳಾದ ಲಕ್ಷ್ಮಣ್, ನಾಗರಾಜು ಅವರಿಗೂ ಜಾಮೀನು ನಿರಾಕರಿಸಲಾಗಿದೆ. ಸದ್ಯ ದರ್ಶನ್ ಬಾರಿ ಜೈಲು ಮತ್ತು ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Whats_app_banner