LIVE UPDATES
ಹುಬ್ಬಳ್ಳಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್ನ ಐವರು ಖಾಕಿ ಬಲೆಗೆ; ಕಲಘಟಗಿಯಲ್ಲಿ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ
Karnataka News Live October 9, 2024 : ಹುಬ್ಬಳ್ಳಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್ನ ಐವರು ಖಾಕಿ ಬಲೆಗೆ; ಕಲಘಟಗಿಯಲ್ಲಿ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ
Oct 09, 2024 08:06 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
ಕರ್ನಾಟಕ News Live: ಹುಬ್ಬಳ್ಳಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್ನ ಐವರು ಖಾಕಿ ಬಲೆಗೆ; ಕಲಘಟಗಿಯಲ್ಲಿ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ
- ಹುಬ್ಬಳ್ಳಿಯಲ್ಲಿ ವ್ಯಾಪಾರಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಅಶೋಕ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ News Live: Tumakuru News: ಕೈಯಲ್ಲಿ ಹಿಡಿದ ಜಿಲಟಿನ್ ಕಡ್ಡಿ ಸ್ಪೋಟ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಬೆರಳುಗಳು ಕಟ್
- Gelatin Sticks Explosion: ಕೈಯಲ್ಲಿ ಹಿಡಿದ ಜಿಲಟಿನ್ ಕಡ್ಡಿ ಸ್ಪೋಟಗೊಂಡ ಹಿನ್ನೆಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಬೆರಳುಗಳು ಕಟ್ ಆಗಿರುವ ಘಟನೆ ಗುಬ್ಬಿ ತಾಲೂಕಿನ ಸಿಎಸ್ ಪುರ ಹೋಬಳಿ ಇಡಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಕರ್ನಾಟಕ News Live: ದರ್ಶನ್ ಜಾಮೀನು ಅರ್ಜಿ ವಿಚಾರಣೆ; ರೋಚಕ ಘಟ್ಟ ತಲುಪಿದ ವಾದ-ಪ್ರತಿವಾದ, ನಾಳೆ ನಟನ ಬೇಲ್ ಭವಿಷ್ಯ ನಿರ್ಧಾರ?
- Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ರೋಚಕ ಘಟ್ಟ ತಲುಪಿದೆ. ನಾಳೆ ನಟನ ಬೇಲ್ ಭವಿಷ್ಯ ನಿರ್ಧಾರವಾಗಲಿದೆ. (ವರದಿ-ಎಚ್.ಮಾರುತಿ)
ಕರ್ನಾಟಕ News Live: Mysore Dasara 2024: ಮೈಸೂರು ದಸರಾ ಡ್ರೋನ್ ಶೋ ನ ಅನಧಿಕೃತ ಡ್ರೋನ್ ವಿಡಿಯೋ ಚಿತ್ರೀಕರಣ ಮಾಡೀರಿ ಹುಷಾರ್
- ಮೈಸೂರಿನಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿರುವ ಡ್ರೋನ್ ಪ್ರದರ್ಶನವನ್ನು ಅನಧಿಕೃತವಾಗಿ ಡ್ರೋನ್ ಬಳಸುತ್ತಿರುವುದು ಕಂಡು ಬಂದ ನಂತರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಮುನ್ನೆಚ್ಚರಿಕೆ ನೀಡಿದೆ.
ಕರ್ನಾಟಕ News Live: ಸಾಕು ಪ್ರಾಣಿಗಳನ್ನು ಕರೆದೊಯ್ಯುವ ಸಮಸ್ಯೆಗೆ ಕೊನೆಗೂ ಪರಿಹಾರ; ಬೆಂಗಳೂರಿನಲ್ಲಿ ಉಬರ್ ಒದಗಿಸಲಿದೆ ಪೆಟ್ ಕ್ಯಾಬ್ ಸೇವೆ
- Uber Pet Service in Bangalore: ಬೆಂಗಳೂರಿನಲ್ಲಿ ಉಬರ್ ಪೆಟ್ ಸೇವೆಯನ್ನು ಪ್ರಾರಂಭಿಸಿದೆ. ಸಾಕು ಪ್ರಾಣಿಗಳೊಂದಿಗೆ ಕ್ಯಾಬ್‌ನಲ್ಲಿ ಹೋಗಲು ಇದ್ದ ಅಡತಡೆಗಳು ಬಗೆಹರಿದಿವೆ.
ಕರ್ನಾಟಕ News Live: Indian Railways: ದಸರಾ ಹಬ್ಬಕ್ಕೆ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸೇವೆ, ನಾಳೆಯಿಂದ ಮೂರು ದಿನಗಳ ಕಾಲ ಸಂಚಾರ
- ಅರಸೀಕೆರೆ ಹಾಗೂ ಮೈಸೂರು ನಡುವೆ ಡೆಮು ರೈಲು ಸೇವೆಯನ್ನು ಅಕ್ಟೋಬರ್ 10ರಿಂದ ಮೂರು ದಿನ ಕಾಲ ಭಾರತೀಯ ರೈಲ್ವೆ ಹುಬ್ಬಳ್ಳಿ ವಲಯದ ಮೈಸೂರು ವಿಭಾಗವು ಆರಂಭಿಸಲಿದೆ.
ಕರ್ನಾಟಕ News Live: Melkote Navratri 2024: ಮೇಲುಕೋಟೆಯಲ್ಲಿ ವಿಜಯದಶಮಿಯಂದು ಚೆಲುವನಾರಾಯಣನಿಗೆ ಮೈಸೂರು ಮಹಾರಾಜರ ಅಲಂಕಾರ, ಏನಿದರ ವಿಶೇಷ
- ಮಂಡ್ಯ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲೂ ನವರಾತ್ರಿ ಅಂಗವಾಗಿ ವಿಶೇಷ ಅಲಂಕಾರವೂ ಇರಲಿದೆ. ವಿಜಯದಶಮಿ ದಿನ ಮೈಸೂರು ಮಹಾರಾಜರ ಅಲಂಕಾರ ವಿಶೇಷ ಆಕರ್ಷಣೆಯಾಗಲಿದೆ.
ಕರ್ನಾಟಕ News Live: Mysore Dasara 2024: ಮೈಸೂರು ದಸರಾ ಜಂಬೂ ಸವಾರಿಗೆ ಮೂರು ದಿನ ಮೊದಲೇ ಪೂರ್ವ ತಾಲೀಮು, ಗಜ ಪಡೆ ವಂದನೆ, ಪೊಲೀಸ್ ತಂಡದ ಪಥ ಸಂಚಲನ
- ಮೈಸೂರು ದಸರಾ ಅಂಗವಾಗಿ ನಡೆಯುವ ಜಂಬೂ ಸವಾರಿಗೆ ಇನ್ನು ಮೂರು ದಿನ ಬಾಕಿ ಇರುವಾಗ ಪೂರ್ವ ತಾಲೀಮು ಅರಮನೆ ಅಂಗಳದಲ್ಲಿ ಯಶಸ್ವಿಯಾಗಿ ನಡೆಯಿತು.
ಕರ್ನಾಟಕ News Live: ವಾಹನ ಲೈಸನ್ಸ್ ಹೊಂದಿಲ್ಲದಿದ್ದರೂ ಅಪಘಾತ ಸಂತ್ರಸ್ಥರಿಗೆ ವಿಮಾ ಸಂಸ್ಥೆ ಪರಿಹಾರ ನೀಡಬೇಕು, ಬಳಿಕ ಮಾಲೀಕರಿಂದ ವಸೂಲು ಮಾಡಿ ಎಂದ ಹೈಕೋರ್ಟ್
- ಕರ್ನಾಟಕ ಹೈಕೋರ್ಟ್ ಸುದ್ದಿಗಳು: ಅಪಘಾತಕ್ಕೆ ಕಾರಣವಾದ ವಾಹನವು ಆಕ್ಸಿಡೆಂಟ್ ಸಂದರ್ಭದಲ್ಲಿ ಮಾನ್ಯ ಪರವಾನಿಗೆ ಮತ್ತು ಫಿಟ್ನೆಸ್ ಪ್ರಮಾಣಪತ್ರ ಹೊಂದಿರದೆ ಇದ್ದರೂ ಸಂತ್ರಸ್ಥರಿಗೆ ಪರಿಹಾರ ನೀಡುವ ಬಾಧ್ಯತೆ ವಿಮಾ ಕಂಪನಿ ಹೊಂದಿರುತ್ತದೆ. ಈ ಪರಿಹಾರ ಮೊತ್ತವನ್ನು ವಾಹನ ಮಾಲೀಕರಿಂದ ವಿಮಾ ಸಂಸ್ಥೆ ವಸೂಲು ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ News Live: Indian Railways: ಬೆಂಗಳೂರು, ಮಂಗಳೂರು, ಮೈಸೂರು ಸಹಿತ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸಿಗಲಿದೆ ನವರಾತ್ರಿ ವಿಶೇಷ ಥಾಲಿ ಊಟ
- Indian Railways Navaratri Thali ಭಾರತೀಯ ರೈಲ್ವೆಯು ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ನಿಲ್ದಾಣಗಳಲ್ಲಿಯೇ ನವರಾತ್ರಿ ಥಾಲಿ ಒದಗಿಸುವ ವ್ಯವಸ್ಥೆಯನ್ನು ಈ ಬಾರಿಯೂ ಮಾಡಿದೆ.
ಕರ್ನಾಟಕ News Live: ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇಂದು ಭಾರೀ ಮಳೆ ನಿರೀಕ್ಷೆ; ಬೆಂಗಳೂರಲ್ಲೂ ಗುಡುಗು ಸಹಿತ ಮಳೆ
- ಕರ್ನಾಟಕದ ಕರಾವಳಿ ಭಾಗದಲ್ಲಿ ಇನ್ನೂ ಮಳೆ ಪ್ರಮಾಣ ಕಡಿಮೆಯಾಗಿಲ್ಲ. ಬುಧವಾರವೂ ಭಾರೀ ಮಳೆಯಾಗುವ ಸೂಚನೆಯಿದ್ದು, ಎರಡು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕ News Live: ಬೆಂಗಳೂರಲ್ಲಿ ಎಳನೀರು, ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿಯೂ ದುಬಾರಿ; ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದ ಬೆಲೆ ಏರಿಕೆ
ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದ ಬೆಲೆ ಏರಿಕೆ ಬಡ ಮಧ್ಯಮ ವರ್ಗವನ್ನು ಸಂಕಷ್ಟಕ್ಕೆ ತಳ್ಳಿದೆ. ಹೌದು, ಬೆಂಗಳೂರಲ್ಲಿ ಎಳನೀರು, ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿಯೂ ದುಬಾರಿಯಾಗಿದೆ. ಸದ್ಯದ ಮಾರುಕಟ್ಟೆ ಚಿತ್ರಣ ಹೀಗಿದೆ.
ಕರ್ನಾಟಕ News Live: ದರ್ಶನ್ ಕ್ರೂರ ವ್ಯಕ್ತಿತ್ವ ಬಿಚ್ಚಿಟ್ಟ ಪಬ್ಲಿಕ್ ಪ್ರಾಸಿಕ್ಯೂಟರ್; ಇಂದು ಜಾಮೀನು ಅರ್ಜಿ ವಿಚಾರಣೆ, ನಟನಿಗೆ ಜೈಲಾ, ಬೇಲಾ?
- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಜಾಮೀನು ಅರ್ಜಿ ಭವಿಷ್ಯ ಬುಧವಾರ (ಅಕ್ಟೋಬರ್ 9) ಮಧ್ಯಾಹ್ನ ನಿರ್ಧಾರವಾಗಲಿದೆ. ಮಂಗಳವಾರ (ಅಕ್ಟೋಬರ್ 8) ನಡೆದ ವಿಚಾರಣೆಯಲ್ಲಿ ಸಮರ್ಥವಾಗಿ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಯಾವುದೇ ಕಾರಣಕ್ಕೂ ಬೇಲ್ ಕೊಡಬೇಡಿ ಎಂದಿದ್ದಾರೆ. (ವರದಿ: ಎಚ್.ಮಾರುತಿ)