Karnataka News Live September 15, 2024 : ಮೂರು ತಿಂಗಳಲ್ಲಿ 2ನೇ ಬಾರಿಗೆ ಹಾಲಿನ ದರ ಏರಿಕೆ; ಹಣ್ಣು, ತರಕಾರಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕನ ಮೇಲೆ ಬರೆ
Sep 15, 2024 06:52 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
- Milk Rate Hike: ಮೂರು ತಿಂಗಳಲ್ಲಿ ಎರಡನೇ ಬಾರಿಗೆ ಹಾಲಿನ ದರ ಏರಿಕೆಗೆ ಸರ್ಕಾರ ಸಜ್ಜಾಗಿದ್ದು, ಹಣ್ಣು, ತರಕಾರಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕನ ಮೇಲೆ ಬರೆ ಎಳೆದಿದೆ. ಪ್ರತಿಪಕ್ಷಗಳು ಟೀಕಿಸಿದರೆ, ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. (ವರದಿ-ಎಚ್. ಮಾರುತಿ)
- Hubballi News: ರಸ್ತೆಯಲ್ಲಿ ತೆರಳುತ್ತಿದ್ದ ಅವಧಿಯಲ್ಲಿ ಫ್ಲೈಓವರ್ ಕಾಮಗಾರಿಯ ಕಬ್ಬಿಣದ ತುಂಡು ತಲೆಗೆ ಬಿದ್ದ ಪರಿಣಾಮ ಎಎಸ್‌ಐ ನಾಭಿರಾಜ್ ದಯಣ್ಣವರ ಅವರು ಮೃತಪಟ್ಟಿದ್ದಾರೆ.
Kodagu News ಕೊಡಗಿನ ಪ್ರಮುಖ ಉತ್ಸವವಾದ ತಲಕಾವೇರಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವು 2024 ಅಕ್ಟೋಬರ್ 17ರಂದು ಬೆಳಗಿನ 7.40ಕ್ಕೆ ಸಂಭವಿಸಲಿದೆ. ಇದಕ್ಕೆ ಕೊಡಗಿನಲ್ಲಿ ಸಿದ್ದತೆಯೂ ಶುರುವಾಗಿದೆ.
- Tumkur New ತುಮಕೂರಿನಲ್ಲಿ ಜನರ ಸಂಚಾರಕ್ಕೆ ಅಡಚಣೆಯಾಗಿದ್ದ ಶಿರಾ ಗೇಟ್ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಇದಲ್ಲದೇ ಮೇಲ್ಸೇತುವೆಯನ್ನು ಪ್ರಾರಂಭ ಮಾಡಲಾಗಿದೆ.
- ವರದಿ: ಈಶ್ವರ್ ತುಮಕೂರು
Dharwad News ಧಾರವಾಡದಲ್ಲಿದ್ದುಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾದ ಪ್ರಜೆಯನ್ನು ಬಂಧಿಸಲಾಗಿದೆ. ಆತನಿಂದ ಭಾರೀ ಪ್ರಮಾಣದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
- Human Chain ಕರ್ನಾಟಕದಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ನಿರ್ಮಾಣಕ್ಕೆ ಭಾರೀ ಬೆಂಬಲ ದೊರಕಿತು.
Milk Rate Hike ನಂದಿನಿ ಹಾಲಿನ ದರ( Nandini Milk) ಕರ್ನಾಟಕದಲ್ಲಿ ಮತ್ತೆ ಹೆಚ್ಚಳವಾಗುವ ಸೂಚನೆಯಿದೆ. ಸರ್ಕಾರದ ಪ್ರಮುಖರು ಹೇಳಿರುವ ಪ್ರಕಾರ ಲೀಟರ್ ಹಾಲಿನ ದರ ಲೀಟರ್‌ಗೆ 3 ರಿಂದ 5 ರೂ. ಏರಿಕೆಯಾಗಬಹುದು. ಇದನ್ನು ಉತ್ಪಾದಕರಿಗೆ ನೀಡುವುದಾಗಿ ಸರ್ಕಾರ ಹೇಳಿದೆ. ಹಾಲಿನ ದರ ಏರಿಕೆ ಕುರಿತ ಈವರೆಗಿನ ಬೆಳವಣಿಗೆಗಳ ಅಂಶಗಳು ಇಲ್ಲಿವೆ.
HSRP Updates ನಿಮ್ಮ ವಾಹನಗಳಿಗೆ ಕಡ್ಡಾಯವಾಗಿ ಎಚ್‌ಎಸ್‌ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಸಾರಿಗೆ ಇಲಾಖೆ ನೀಡಿರುವ ಮೂರು ದಿನಗಳ ಗಡುವು ಭಾನುವಾರಕ್ಕೆ ಮುಕ್ತಾಯವಾಗಲಿದೆ.
Karnataka Weather ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಉಷ್ಣಾಂಶ ಕುಸಿತದಿಂದ ಚಳಿಯ ವಾತಾವರಣವಿದ್ದರೆ, ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಕಂಡು ಬಂದಿದೆ.