Karnataka Weather: ಹಾಸನ, ಮಂಡ್ಯ, ಮೈಸೂರಲ್ಲಿ ಬಿರು ಬಿಸಿಲು; ಬೀದರ್‌, ಹಾವೇರಿ ಉಷ್ಣಾಂಶ ಕುಸಿತದಿಂದ ಚಳಿ, ಬೆಂಗಳೂರಲ್ಲಿ ಹವಾಮಾನ ಹೇಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಹಾಸನ, ಮಂಡ್ಯ, ಮೈಸೂರಲ್ಲಿ ಬಿರು ಬಿಸಿಲು; ಬೀದರ್‌, ಹಾವೇರಿ ಉಷ್ಣಾಂಶ ಕುಸಿತದಿಂದ ಚಳಿ, ಬೆಂಗಳೂರಲ್ಲಿ ಹವಾಮಾನ ಹೇಗಿದೆ

Karnataka Weather: ಹಾಸನ, ಮಂಡ್ಯ, ಮೈಸೂರಲ್ಲಿ ಬಿರು ಬಿಸಿಲು; ಬೀದರ್‌, ಹಾವೇರಿ ಉಷ್ಣಾಂಶ ಕುಸಿತದಿಂದ ಚಳಿ, ಬೆಂಗಳೂರಲ್ಲಿ ಹವಾಮಾನ ಹೇಗಿದೆ

Karnataka Weather ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಉಷ್ಣಾಂಶ ಕುಸಿತದಿಂದ ಚಳಿಯ ವಾತಾವರಣವಿದ್ದರೆ, ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಕಂಡು ಬಂದಿದೆ.

ಉತ್ತರ ಕರ್ನಾಟಕದ ಬೀದರ್‌, ಹಾವೇರಿ ಸಹಿತ ಹಲವು ಜಿಲ್ಲೆಗಳ ಉಷ್ಣಾಂಶದಲ್ಲಿ ಕುಸಿತ ಕಂಡಿದೆ.
ಉತ್ತರ ಕರ್ನಾಟಕದ ಬೀದರ್‌, ಹಾವೇರಿ ಸಹಿತ ಹಲವು ಜಿಲ್ಲೆಗಳ ಉಷ್ಣಾಂಶದಲ್ಲಿ ಕುಸಿತ ಕಂಡಿದೆ.

ಬೆಂಗಳೂರು: ಮಳೆಗಾಲದ ಅವಧಿ ಮುಗಿಯುತ್ತಾ ಬರುತ್ತಿರುವ ನಡುವೆ ಚಳಿಯ ವಾತಾವರಣವೂ( Karnataka Weather ) ಕೆಲ ದಿನಗಳಿಂದ ಅಲ್ಲಲ್ಲಿ ಶುರುವಾಗಿದೆ. ಅದರಲ್ಲೂಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶದ ಏರಿಳಿತ ಕಂಡು ಬಂದರೆ, ದಕ್ಷಿಣ ಕರ್ನಾಟಕದ ಕೆಲವೆಡೆ ಬಿರು ಬಿಸಿಲು ಕಂಡು ಬರುತ್ತಿದೆ. ಬೀದರ್‌, ಹಾವೇರಿ, ಕಲಬುರಗಿ ಸಹಿತ ಹಲವು ಕಡೆ ಉಷ್ಣಾಂಶದಲ್ಲಿ ಇಳಿಕೆ ಕಂಡು ಬಂದಿದೆ. ಹಾಸನ, ಮಂಡ್ಯ, ಮೈಸೂರು ಭಾಗದಲ್ಲಿ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದು ಬಿಸಿಲಿನ ವಾತಾವರಣವೇ ಇದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲೂ ಉಷ್ಣಾಂಶದಲ್ಲಿ ಭಾರೀ ಬದಲಾವಣೆಯೇನೂ ಕಂಡು ಬಂದಿಲ್ಲ. ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ಭಾನುವಾರವೂ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹೇಗಿದೆ ಹವಾಮಾನ

ಕರ್ನಾಟಕದ ಬೀದರ್‌ನಲ್ಲಿ ಉಷ್ಣಾಂಶ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಗರಿಷ್ಠ ಉಷ್ಣಾಂಶ 29.5 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು 20.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಹಾವೇರಿಯಲ್ಲಿ ಗರಿಷ್ಠ ಉಷ್ಣಾಂಶ 27.0 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ31.5 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು21.6 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ವಿಜಯಪುರದಲ್ಲಿ ಗರಿಷ್ಠ ಉಷ್ಣಾಂಶ 32.0 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು 16.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಬಾಗಲಕೋಟೆಯಲ್ಲಿ ಗರಿಷ್ಠ ಉಷ್ಣಾಂಶ 32.2 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು 19.8ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಧಾರವಾಡದಲ್ಲಿ ಗರಿಷ್ಠ ಉಷ್ಣಾಂಶ 29.2 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು 19.0 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಕರಾವಳಿ ಭಾಗದ ಹೊನ್ನಾವರದಲ್ಲಿ ಗರಿಷ್ಠ ಉಷ್ಣಾಂಶ30.9 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು 22.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಶಿರಾಲಿಯಲ್ಲಿ ಕನಿಷ್ಠ ಉಷ್ಣಾಂಶವು 17.8 ಡಿಗ್ರಿಗೆ ಕುಸಿತ ಕಂಡಿದೆ. ಮಂಗಳೂರಿನಲ್ಲಿ 30.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದ್ದರೆ, ಕನಿಷ್ಠ ಪ್ರಮಾಣವು 23.1 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ.

ಹಳೆ ಮೈಸೂರು ಭಾಗದ ಹಾಸನದಲ್ಲಿ ಗರಿಷ್ಠ ಉಷ್ಣಾಂಶ 33.6 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು 19.8ಡಿಗ್ರಿ ಸೆಲ್ಸಿಯಸ್‌ ಕಂಡು ಬಂದಿದೆ.

ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು 21.6 ಡಿಗ್ರಿ ಸೆಲ್ಸಿಯಸ್‌ ನಷ್ಟಿದೆ.

ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್‌ ಕಂಡು ಬಂದಿದೆ.

ಶಿವಮೊಗ್ಗದಲ್ಲಿ ಗರಿಷ್ಠ ಉಷ್ಣಾಂಶ 29.6ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಕನಿಷ್ಠ ಉಷ್ಣಾಂಶವು 18.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ಬೆಂಗಳೂರು ಹವಾಮಾನ

ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣವೇ ಇರಲಿದೆ. ಅಲ್ಲಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಗಳೂ ಇವೆ. ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್‌ ದಾಖಲಾಗಬಹುದು.

ಬೆಂಗಳೂರಿನಲ್ಲಿ ಶನಿವಾರದ ಉಷ್ಣಾಂಶದಲ್ಲಿ ಭಾರೀ ವ್ಯತ್ಯಾಸವೇನೂ ಇರಲಿಲ್ಲ. ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ ಉಷ್ಣಾಂಶ 20.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 29.8 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಮಳೆ ಹೇಗಿದೆ

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಭಾನುವಾರ ಹಗುರದಿಂದ ಸಾಧಾರಣ ಮಳೆಯಾಗಬಹುದು. ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಬಹುತೇಕ ಕಡೆಗಳಲ್ಲಿ ಮುಖ್ಯವಾಗಿ ಒಣಹವೆಯ ವಾತಾವರಣ ಕಂಡು ಬರಲಿದ್ದು. ಒಳನಾಡಿನ ಉಳಿದ ಜಿಲ್ಲೆಗಳ ಒಂದೆರಡು ಭಾಗಗಳಲ್ಲಿ ಹಗುರ ಮಳೆಯೂ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಮಳೆಯಾಗಿದೆ

ಶನಿವಾರವೂ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಶಿರಾಲಿ, ಕಾರವಾರ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಮಾನ ನಿಲ್ದಾಣ, ಪಣಂಬೂರು, ಮಂಗಳೂರು ನಗರ, ಬೆಳಗಾವಿ ಜಿಲ್ಲೆಯ ಲೋಂಡಾ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಡಗಿನ ಪೊನ್ನಂಪೇಟೆಯಲ್ಲಿ ಮಳೆಯಾದ ವರದಿಯಾಗಿದೆ.

Whats_app_banner