logo
ಕನ್ನಡ ಸುದ್ದಿ  /  ಜೀವನಶೈಲಿ  /  ಉದ್ಯೋಗಿಗಳು ಅಸ್ತಿತ್ವದಲ್ಲಿ ಇಲ್ಲದ ಹೊಸ ಹುದ್ದೆಯ ಹೆಸರುಗಳನ್ನು ಹೊಂದಿದ್ದಾರೆ; ಏನಿದು ಲಿಂಕ್ಡ್‌ ಇನ್‌ನ ವರ್ಕ್ ಚೇಂಜ್ ಸ್ನ್ಯಾಪ್‌ಶಾಟ್ ವರದಿ

ಉದ್ಯೋಗಿಗಳು ಅಸ್ತಿತ್ವದಲ್ಲಿ ಇಲ್ಲದ ಹೊಸ ಹುದ್ದೆಯ ಹೆಸರುಗಳನ್ನು ಹೊಂದಿದ್ದಾರೆ; ಏನಿದು ಲಿಂಕ್ಡ್‌ ಇನ್‌ನ ವರ್ಕ್ ಚೇಂಜ್ ಸ್ನ್ಯಾಪ್‌ಶಾಟ್ ವರದಿ

Raghavendra M Y HT Kannada

Oct 31, 2024 01:01 PM IST

google News

ಈ ವರ್ಷ ನೇಮಕಗೊಂಡ ಶೇ.10 ಉದ್ಯೋಗಿಗಳು 2000ರಲ್ಲಿ ಅಸ್ತಿತ್ವದಲ್ಲಿಯೇ ಇರದ ಹುದ್ದೆಯ ಹೆಸರುಗಳನ್ನು ಹೊಂದಿದ್ದಾರೆ ಎಂದು ಲಿಂಕ್ಡ್‌ ಇನ್‌ ನ ವರ್ಕ್ ಚೇಂಜ್ ಸ್ನ್ಯಾಪ್‌ಶಾಟ್ ವರದಿ ತಿಳಿಸಿದೆ

    • ಹೊಸ ಹುದ್ದೆಗಳು, ಕೌಶಲ್ಯಗಳು ಹಾಗೂ ತಂತ್ರಜ್ಞಾನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಕೆಲಸದ ಸ್ಥಳ ವೇಗವಾಗಿ ಬದಲಾವಣೆ ಹೊಂದುತ್ತಿದೆ ಎಂದು ಭಾರತದಲ್ಲಿನ ಶೇ.82 ಉದ್ಯಮ ನಾಯಕರು ತಿಳಿಸಿದ್ದಾರೆ. ಭಾರತದಲ್ಲಿ 10 ರಲ್ಲಿ 7 ಉದ್ಯಮ ನಾಯಕರು 2025ರಲ್ಲಿ ಎಐ ಸಾಧನಗಳನ್ನು ಅಳವಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡುತ್ತಿದ್ದಾರೆ.
ಈ ವರ್ಷ ನೇಮಕಗೊಂಡ ಶೇ.10 ಉದ್ಯೋಗಿಗಳು 2000ರಲ್ಲಿ ಅಸ್ತಿತ್ವದಲ್ಲಿಯೇ ಇರದ ಹುದ್ದೆಯ ಹೆಸರುಗಳನ್ನು ಹೊಂದಿದ್ದಾರೆ ಎಂದು ಲಿಂಕ್ಡ್‌ ಇನ್‌ ನ ವರ್ಕ್ ಚೇಂಜ್ ಸ್ನ್ಯಾಪ್‌ಶಾಟ್ ವರದಿ ತಿಳಿಸಿದೆ
ಈ ವರ್ಷ ನೇಮಕಗೊಂಡ ಶೇ.10 ಉದ್ಯೋಗಿಗಳು 2000ರಲ್ಲಿ ಅಸ್ತಿತ್ವದಲ್ಲಿಯೇ ಇರದ ಹುದ್ದೆಯ ಹೆಸರುಗಳನ್ನು ಹೊಂದಿದ್ದಾರೆ ಎಂದು ಲಿಂಕ್ಡ್‌ ಇನ್‌ ನ ವರ್ಕ್ ಚೇಂಜ್ ಸ್ನ್ಯಾಪ್‌ಶಾಟ್ ವರದಿ ತಿಳಿಸಿದೆ

ಲಿಂಕ್ಡ್‌ ಇನ್‌ನ ವರ್ಕ್ ಚೇಂಜ್ ಸ್ನ್ಯಾಪ್‌ಶಾಟ್ ವರದಿಯು 2024ರಲ್ಲಿ ಜಾಗತಿಕ ಮಟ್ಟದಲ್ಲಿ ನೇಮಕಗೊಂಡ ಶೇ.10 ರಷ್ಟು ಉದ್ಯೋಗಿಗಳು 2000ನೇ ಇಸವಿಯಲ್ಲಿ ಅಸ್ತಿತ್ವದಲ್ಲಿಯೇ ಇರದ ಹುದ್ದೆಯ ಹೆಸರುಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದು, ಈ ಮೂಲಕ ಕೆಲಸದ ಸ್ಥಳಗಳು ಭಾರಿ ವೇಗದಲ್ಲಿ ಪರಿವರ್ತನೆ ಹೊಂದುತ್ತಿದೆ ಎಂಬುದನ್ನು ಸಾರಿದೆ. ಸಸ್ಟೈನೆಬಿಲಿಟಿ ಮ್ಯಾನೇಜರ್, ಎಐ ಇಂಜಿನಿಯರ್, ಡೇಟಾ ಸೈಂಟಿಸ್ಟ್, ಸೋಷಿಯಲ್ ಮೀಡಿಯಾ ಮ್ಯಾನೇಜರ್ ಹಾಗೂ ಕಸ್ಟಮರ್ ಸಕ್ಸಸ್ ಮ್ಯಾನೇಜರ್ ಇತ್ಯಾದಿ ಹುದ್ದೆಗಳು ಈಗ ಎಲ್ಲಾ ಕಡೆ ಸಾಮಾನ್ಯವಾಗಿದೆ. ರಿಮೋಟ್ ವರ್ಕ್ ಆಯ್ಕೆ, ಹೊಸ ತಂತ್ರಜ್ಞಾನಗಳ ಸೃಷ್ಟಿ ಮತ್ತು ಸುಸ್ಥಿರತೆ ಕುರಿತು ಗಮನ ಹೆಚ್ಚಾಗಿರುವುದು ಇತ್ಯಾದಿಗಳ ಕಾರಣಗಳಿಂದ ಕೋವಿಡ್ ಬಳಿಕದ ಪಾಲಿಸಿಗಳಲ್ಲಿ ಬದಲಾವಣೆ ತರಲು ಕಂಪನಿಗಳು ಯೋಚಿಸುತ್ತಿವೆ, ಇಂಥ ಸಂದರ್ಭದಲ್ಲಿ ಲಿಂಕ್ಡ್‌ ಇನ್‌ ನ ವರ್ಕ್ ಚೇಂಜ್ ಸ್ನ್ಯಾಪ್‌ ಶಾಟ್ ವರದಿಯು ಕೆಲವೇ ವರ್ಷಗಳ ಹಿಂದಿನ ಆಫೀಸುಗಳಿಗೆ ಹೋಲಿಸಿದರೆ ಈ ಕಾಲದ ಆಧುನಿಕ ಕೆಲಸದ ಸ್ಥಳಗಳು ಹೇಗೆ ವಿಭಿನ್ನವಾಗಿವೆ ಎಂಬುದನ್ನು ತಿಳಿಸುತ್ತದೆ.

ಈ ಬದಲಾವಣೆಯ ವೇಗ ಮತ್ತಷ್ಟು ಹೆಚ್ಚಾಗಲಿದೆ. ಲಿಂಕ್ಡ್ ಇನ್ 5,000ಕ್ಕೂ ಹೆಚ್ಚು ಜಾಗತಿಕ ಉದ್ಯಮ ನಾಯಕರ ಅಧ್ಯಯನ ಮಾಡಿದ್ದು, ಲಿಂಕ್ಡ್‌ ಇನ್‌ ನ ಅಧ್ಯಯನವು ಭಾರತದಲ್ಲಿನ ಶೇ.82 ಉದ್ಯಮ ನಾಯಕರು ಕೆಲಸದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ವೇಗ ಹೆಚ್ಚಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದೆ. ಜಾಗತಿಕ ಉದ್ಯಮ ನಾಯಕರು ಜನರೇಟಿವ್ ಎಐಯ ಅದ್ಭುತ ಸಾಮರ್ಥ್ಯವನ್ನು ಗುರುತಿಸಿದ್ದಾರೆ. ಭಾರತದಲ್ಲಿ 10 ರಲ್ಲಿ 9 ಜನರು ಈ ತಂತ್ರಜ್ಞಾನವು ತಮ್ಮ ತಂಡಗಳಿಗೆ ಪ್ರಯೋಜನವನ್ನು ಒದಗಿಸುತ್ತದೆ ಎಂದು ತಿಳಿಸಿರುವುದಾಗಿ ವರದಿ ತಿಳಿಸಿದೆ. 10 ರಲ್ಲಿ 7 ಜನರು 2025 ರಲ್ಲಿ ಎಐ ಪರಿಕರಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಎಐ ಅನ್ನು ಅಳವಡಿಸಿಕೊಳ್ಳುವುದರಿಂದ ಸಿಗುವ ಪ್ರಯೋಜನಗಳು ಉತ್ಪಾದಕತೆ ಹೆಚ್ಚಿಸುವುದಕ್ಕಿಂತಲೂ ಮೀರಿದ್ದಾಗಿದೆ.

ಈ ಕಾಲದ ಸ್ಪರ್ಧಾತ್ಮಕ ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಸಾಧಿಸಲು ಅವಶ್ಯವಾದ ಪ್ರೊಫೆಷನಲ್ ನೆಟ್‌ವರ್ಕಿಂಗ್, ವೈಯಕ್ತಿಕ ಬ್ರ್ಯಾಂಡಿಂಗ್, ವಿನ್ಯಾಸ ಚಿಂತನೆ ಮತ್ತು ಸೃಜನಶೀಲತೆ ಹಾಗೂ ಎಮೋಷನಲ್ ಇಂಟೆಲಿಜೆನ್ಸ್ ನಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ಜನರೇಟಿವ್ ಎಐನಲ್ಲಿ ಪ್ರವೀಣರಾಗಿರುವ ಉದ್ಯೋಗಿಗಳು 20ಪಟ್ಟು ಹೆಚ್ಚು ಮುಂಚೂಣಿಯಲ್ಲಿರುತ್ತಾರೆ ಎಂದು ಲಿಂಕ್ಡ್‌ ಇನ್ ಡೇಟಾ ತಿಳಿಸಿದೆ. ವಾಸ್ತವವಾಗಿ ಭಾರತದಲ್ಲಿನ ಅಗ್ರ ಐದು ಲಿಂಕ್ಡ್‌ ಇನ್ ಕಲಿಕಾ ಕೋರ್ಸ್‌ಗಳು ಸಂವಹನ, ನಂಬಿಕೆ ಬೆಳೆಸಿಕೊಳ್ಳುವಿಕೆ ಸೇರಿದಂತೆ ಈ ಬಹುಮುಖ್ಯ ಕೌಶಲಗಳ ಕಡೆಗೆ ಹಮನ ಹರಿಸುತ್ತದೆ. ಕಮ್ಯುನಿಕೇಷನ್ ಸ್ಕಿಲ್ಸ್ ಫಾರ್ ಮಾಡರ್ನ್ ಮ್ಯಾನೇಜ್ಮೆಂಟ್ ಮತ್ತು ದಿ ಮ್ಯಾನೇಜರ್ಸ್ ಗೈಡ್ ಟು ಡಿಫಿಕಲ್ಟ್ ಕನ್ವರ್ಸೇಷನ್ ನಂತಹ ಕೋರ್ಸುಗಳ ಮೇಲೆ ಹೆಚ್ಚುತ್ತಿರುವ ಜನಪ್ರಿಯತೆಯು ಸೀನಿಯರ್ ಹಂತದಲ್ಲಿರುವ ಉದ್ಯೋಗಿಗಳಲ್ಲಿ ಈ ಕೌಶಲಗಳ ಮೇಲೆ ಹೆಚ್ಚುತ್ತಿರುವ ಬೇಡಿಕೆ ಅಥವಾ ಮಹತ್ವವನ್ನು ತೋರಿಸುತ್ತದೆ.

ಈ ಕುರಿತು ಲಿಂಕ್ಡ್‌ ಇನ್ ಟ್ಯಾಲೆಂಟ್ ಸೊಲ್ಯೂಷನ್ಸ್‌ ನ ಭಾರತದ ಮುಖ್ಯಸ್ಥರಾದ ರುಚಿ ಆನಂದ್ ಅವರು , “ಪ್ರತಿಯೊಂದು ಕೆಲಸದ ಸ್ಥಳವನ್ನು ಎಐ ಭಾರಿ ವೇಗದಲ್ಲಿ ಬದಲಾಯಿಸುತ್ತಿದೆ. ಭಾರತದಲ್ಲಿ ಸುಮಾರು ಶೇ.82ರಷ್ಟು ವೃತ್ತಿಪರರು ಈ ತ್ವರಿತ ಬದಲಾವಣೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಬಹುತೇಕ ಕಂಪನಿಗಳು ಈ ಹೊಸ ಬದಲಾವಣೆಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿರುವುದು ಉತ್ತೇಜನಕಾರಿಯಾಗಿದೆ. ನಾವು 2025ನೇ ಇಸವಿಯನ್ನು ಎದುರು ನೋಡುತ್ತಿರುವಂತೆ ಉದ್ದಿಮೆಗಳು ಎಐ ಅಳವಡಿಕೆಗೆ ಹೆಚ್ಚು ಆದ್ಯತೆ ನೀಡುತ್ತಿವೆ ಮತ್ತು ತಮ್ಮ ಉದ್ಯೇಗಿಗಳ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಹೊಸ ಕೌಶಲಗಳನ್ನು ಕಲಿಸಲು ಯೋಜನೆ ರೂಪಿಸಿಕೊಂಡಿವೆ.

ಎಐ ಅನ್ನು ಅಳವಡಿಸಿಕೊಳ್ಳುವುದರಿಂದ ವೇಗಕ್ಕೆ ತಕ್ಕಂತೆ ಬದಲಾವಣೆ ಹೊಂದಿದಂತೆ ಮಾತ್ರವೇ ಆಗುವುದಿಲ್ಲ, ಬದಲಿಗೆ ಅದರಿಂದ ತಂಡಗಳನ್ನು ಸಶಕ್ತಗೊಳಿಸುವುದು, ಹೊಸತನ ಉಂಟು ಮಾಡುವುದು ಮತ್ತು ಅಭಿವೃದ್ಧಿ ಹೊಂದಲು ಸಿದ್ಧವಾಗಿರುವ ಉತ್ಸಾಹಿ ಉದ್ಯೋಗಿಗಳನ್ನು ರಚಿಸುವುದು ಮುಂತಾದ ಕೆಲಸ ನಡೆಯಲಿದೆ. ಸಂಸ್ಥೆಗಳು ಎಐ ಚಾಂಪಿಯನ್ ಆಗಲು ಇದು ಸೂಕ್ತ ಸಮಯವಾಗಿದ್ದು, ಕೌಶಲ್ಯಾಭಿವೃದ್ಧಿಗೆ ಹಾಗೂ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಅದು ಅವಶ್ಯವಾಗಿದೆ” ಎಂದು ಹೇಳಿದರು.

ಲಿಂಕ್ಡ್‌ ಇನ್ ನಿಂದ ಹೊಸ ಎಐ ಚಾಲಿತ ಪರಿಕರಗಳ ಘೋಷಣೆ

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಅದೇ ವೇಗವನ್ನು ಕಾಯ್ದುಕೊಳ್ಳಲು ಉದ್ಯಮಗಳು ಈ ಬದಲಾವಣೆಗೆ ಹೊಂದಿಕೊಳ್ಳಲು ಮಾರ್ಗದರ್ಶನ ಮಾಡಲು ಹೆಚ್‌ಆರ್‌ ತಂಡಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಭಾರತದಲ್ಲಿ ಶೇ.69ರಷ್ಟು ಹೆಚ್‌ಆರ್‌ ವೃತ್ತಿಪರರು ಕೆಲಸದಲ್ಲಿ ತಮ್ಮ ಮೇಲೆ ಜಾಸ್ತಿ ನಿರೀಕ್ಷೆಗಳು ಯಾವಾಗಲೂ ಇರಲಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ 10 ರಲ್ಲಿ 6 ಜನರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯಲು ಕೇವಲ ಅನುಭವ ಮಾತ್ರ ಸಾಕಾಗುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅರ್ಧಕ್ಕೂ ಹೆಚ್ಚು ಮಂದಿ ವೃತ್ತಿಜೀವನದ ಬೆಳವಣಿಗೆಯು ಈಗ ಎಐ ಅಳವಡಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ರಿಕ್ರೂಟರ್ 2024 ಅನ್ನು ಪ್ರಾರಂಭಿಸಿದಾಗಿನಿಂದ ಅದರ ಮೊದಲ ಜನರೇಟಿವ್ ಎಐ ಮೂಲಕ ಲಿಂಕ್ಡ್‌ ಇನ್ ಅರ್ಹ ಉದ್ಯೋಗಿಗಳನ್ನು ವೇಗವಾಗಿ ಹುಡುಕಲು ಉದ್ಯೋಗದಾತರಿಗೆ ಸಹಾಯ ಮಾಡಿದೆ. ಹೆಚ್‌ಆರ್‌ ತಂಡಗಳು ತಮ್ಮ ಜನ ಕೇಂದ್ರೀತ ಕಾರ್ಯಗಳ ಮೇಲೆ ಗಮನ ಹರಿಸಲು ಸಹಾಯ ಮಾಡಲು ಲಿಂಕ್ಡ್‌ ಇನ್ ಹೊಸ ಎಐ ಉತ್ಪನ್ನಗಳು ಮತ್ತು ಪರಿಕರಗಳನ್ನು ಬಿಡುಗಡೆ ಮಾಡಿದೆ.

ಲಿಂಕ್ಡ್‌ ಇನ್‌ ನ ಮೊದಲ ಎಐ ಏಜೆಂಟ್ ಆದ ಹೈರಿಂಗ್ ಅಸಿಸ್ಟೆಂಟ್ ಅನ್ನು ಉದ್ಯೋಗಕ್ಕೆ ನೇಮಕಾತಿ ಮಾಡುವವರ ಆರಂಭಿಕ ಹಂತದ ಅತ್ಯಂತ ಪುನರಾವರ್ತಿತ ಕಾರ್ಯಗಳನ್ನು ಮಾಡಲು ವಿನ್ಯಾಸಗೊಳಿಸಲಾಗಿದೆ. ಅದನ್ನು ಬಳಸುವ ಮೂಲಕ ಅವರು ನೇಮಕಾತಿ ಮ್ಯಾನೇಜರ್‌ಗಳಿಗೆ ಸಲಹೆ ನೀಡುವುದು, ಅಭ್ಯರ್ಥಿಗಳೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಅಸಾಧಾರಣ ಅಭ್ಯರ್ಥಿ ಆಯ್ಕೆ ಕುರಿತು ಕಾರ್ಯ ನಿರ್ವಹಿಸುವುದು ಇತ್ಯಾದಿ ಹೆಚ್ಚು ಪ್ರಮುಖ ಕೆಲಸಗಳಿಗೆ ಹೆಚ್ಚು ಸಮಯವನ್ನು ನೀಡಬಹುದು. ಇಂದಿನಿಂದ ನೇಮಕಾತಿ ಮಾಡುವವರು ಅಭ್ಯರ್ಥಿಗಳನ್ನು ಹುಡುಕುವುದು ಮತ್ತು ಅರ್ಜಿ ಸಲ್ಲಿಸಿದವರ ವಿಮರ್ಶೆ ಮಾಡುವುದು ಸೇರಿದಂತೆ ಹೆಚ್ಚು ಸಮಯ ತೆಗೆದುಕೊಳ್ಳುವ ಕಾರ್ಯಗಳನ್ನು ಹೈರಿಂಗ್ ಅಸಿಸ್ಟೆಂಟ್ ಗೆ ನೀಡಬಹುದು.

ಈ ಕಾರ್ಯಗಳಲ್ಲಿ ಕಡಿಮೆ ಸಮಯವನ್ನು ಕಳೆಯುವುದರಿಂದ ನೇಮಕಾತಿದಾರರು ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಸಂಪೂರ್ಣ ಪ್ರಕ್ರಿಯೆಯ ಉದ್ದಕ್ಕೂ ಅಭ್ಯರ್ಥಿಗಳ ಕುರಿತು ಪ್ರತಿಕ್ರಿಯೆಯನ್ನು ನೀಡಲು ನೇಮಕಾತಿದಾರರಿಗೆ ಸಾಧ್ಯವಾಗುವುದರಿಂದ ಪ್ರತೀ ನೇಮಕಾತಿದಾರರ ಆದ್ಯತೆಗಳನ್ನು ನಿರಂತರವಾಗಿ ಕಲಿಯಲು ಮತ್ತು ಪ್ರತಿ ನೇಮಕಾತಿದಾರರಿಗೆ ಹೆಚ್ಚು ವೈಯಕ್ತೀಕರಿಸಿದ ಸೇವೆ ಒದಗಿಸಲು ಹೈರಿಂಗ್ ಅಸಿಸ್ಟೆಂಟ್ ಗೆ ಸಹಾಯ ಆಗುತ್ತದೆ. ಎಎಂಡಿ, ಕ್ಯಾನ್ವಾ, ಸಿಮೆನ್ಸ್ ಮತ್ತು ಜುರಿಚ್ ಇನ್ಶೂರೆನ್ಸ್ ನಂತಹ ಕಂಪನಿಗಳು ಲಿಂಕ್ಡ್‌ ಇನ್‌ ನ ಹೈರಿಂಗ್ ಅಸಿಸ್ಟೆಂಟ್ ಬಳಸುತ್ತಿದ್ದು, ಈ ಸಾಧನವನ್ನು ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಭಾರತ, ಮೆಕ್ಸಿಕೋ, ಫಿಲಿಪೈನ್ಸ್, ಸಿಂಗಾಪುರ್ ಮತ್ತು ಯುನೈಟೆಡ್ ಸ್ಟೇಟ್ಸ್‌ ನ ಆಯ್ದ ನೇಮಕಾತಿದಾರರು ಬಳಸುತ್ತಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಗ್ರಾಹಕರಿಗೆ ಈ ಪರಿಕರವನ್ನು ಒದಗಿಸಲಾಗುವುದು.

ಎಐ ಆಧಾರಿತ ಕೋಚಿಂಗ್ ಫೀಚರ್ ಬಿಡುಗಡೆ ಮಾಡಲಿರುವ ಲಿಂಕ್ಡ್ ಇನ್

ಲಿಂಕ್ಡ್ ಇನ್ ಲರ್ನಿಂಗ್ ನಲ್ಲಿ ಹೊಸತಾಗಿ ಎಐ ಆಧಾರಿತ ಕೋಚಿಂಗ್ ಫೀಚರ್ ಅನ್ನು ಬಿಡುಗಡೆ ಮಾಡಲಿದ್ದು, ಈ ಮೂಲಕ ಪಠ್ಯ ಅಥವಾ ಧ್ವನಿಯನ್ನು ಬಳಸಿಕೊಂಡು ಸಂವಾದಾತ್ಮಕ ಸನ್ನಿವೇಶಗಳ ಮೂಲಕ ವೃತ್ತಿಪರರು ಉನ್ನತ ಕೌಶಲ್ಯಗಳನ್ನು ಅಭ್ಯಾಸ ಮಾಡಬಹುದು. ಕಾರ್ಯನಿರ್ವಹಣೆಯ ವಿಮರ್ಶೆಗಳನ್ನು ಹೇಗೆ ನೀಡುವುದು, ಕೆಲಸ- ಜೀವನದ ಸಮತೋಲನ ನಡೆಸುವ ಕುರಿತು ಸಂವಹನ ನಡೆಸುವುದು ಮತ್ತು ಸಹೋದ್ಯೋಗಿಗೆ ಹೇಗೆ ಪ್ರತಿಕ್ರಿಯೆಯನ್ನು ನೀಡುವುದು ಇತ್ಯಾದಿ ಸನ್ನಿವೇಶಗಳು ಇದರಲ್ಲಿ ಇರುತ್ತವೆ. ಲಿಂಕ್ಡ್ ಇನ್ ಲರ್ನಿಂಗ್ ಹಬ್ ಖಾತೆಗಳನ್ನು ಹೊಂದಿರುವ ಜನರಿಗೆ ಈ ಫೀಚರ್ ಅನ್ನು ಲಿಂಕ್ಡ್‌ ಇನ್ ಒದಗಿಸುತ್ತಿದೆ. ಮುಂಬರುವ ವರ್ಷದಲ್ಲಿ ಲಿಂಕ್ಡ್‌ ಇನ್ ಲರ್ನಿಂಗ್ ಹಬ್ ಖಾತೆ ಅಥವಾ ಲಿಂಕ್ಡ್‌ ಇನ್ ಪ್ರೀಮಿಯಂ ಹೊಂದಿರುವ ಎಲ್ಲರಿಗೂ ಈ ಫೀಚರ್ ಲಭ್ಯವಾಗಲಿದೆ.

ಮುಂಬರುವ ತಿಂಗಳುಗಳಲ್ಲಿ ಲಿಂಕ್ಡ್‌ ಇನ್ ಜರ್ಮನ್, ಫ್ರೆಂಚ್ ಮತ್ತು ಜಪಾನೀಸ್ ಭಾಷೆಗಳಲ್ಲಿ ವಿಷಯ ಅನ್ವೇಷಣೆ ಮಾಡುವ ಆಯ್ಕೆ ಒದಗಿಸುವ ಮೂಲಕ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಎಐ ಆಧಾರಿತ ತರಬೇತಿಯನ್ನು ನೀಡಲಿದೆ. ಆ ಮೂಲಕ ಕಲಿಕಾರ್ಥಿಗಳು ತಮ್ಮ ಆದ್ಯತೆಯ ಭಾಷಾ ಲೈಬ್ರರಿಯಲ್ಲಿ ಉತ್ತಮ ಗುಣಮಟ್ಟದ ಕಂಟೆಂಟ್ ಅನ್ನು ವೇಗವಾಗಿ ಹುಡುಕಬಹುದು. ಲಿಂಕ್ಡ್‌ ಇನ್ ತನ್ನ ಲಿಂಕ್ಡ್‌ ಇನ್ ಲರ್ನಿಂಗ್ ಲೈಬ್ರರಿಯನ್ನು 1,000 ಕ್ಕೂ ಹೆಚ್ಚು ಎಐ ಕೋರ್ಸ್‌ಗಳಿಗೆ ವಿಸ್ತರಿಸಿದೆ ಮತ್ತು ಪ್ರತಿಭಾನ್ವಿತ ಉದ್ಯಮ ನಾಯಕರು ಈ ಮೂರು ಎಐ ಪ್ರೊಫೆಷನಲ್ ಸರ್ಟಿಫಿಕೇಟ್ ಕೋರ್ಸು ಗಳನ್ನು ವರ್ಷದ ಅಂತ್ಯದವರೆಗೆ ಲಿಂಕ್ಡ್‌ ಇನ್ ನಲ್ಲಿ ಉಚಿತವಾಗಿ ಕಲಿಕೆಯಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ