ಕೆಪಿಟಿಸಿಎಲ್ 2975 ಹುದ್ದೆಗಳಿಗೆ ಅರ್ಜಿ ಆಹ್ವಾನ; ವಿದ್ಯಾರ್ಹತೆ, ವೇತನ, ಕೊನೆಯ ದಿನಾಂಕ, ವೆಬ್ಸೈಟ್, ಶುಲ್ಕದ ವಿವರ
KPTCL Recruitment 2024: ಕೆಪಿಟಿಸಿಎಲ್ ಮತ್ತು ಅದರ ಅಂಗಸಂಸ್ಥೆಗಳಾದ ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಮತ್ತು ಸೆಸ್ಕ್ನಲ್ಲಿ ಖಾಲಿ ಇರುವ ಒಟ್ಟು 2975 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ (ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಮತ್ತು ಸೆಸ್ಕ್) ಖಾಲಿ ಇರುವ ಕಿರಿಯ ಸ್ಟೇಷನ್ ಪರಿಚಾರಕ ಹಾಗೂ ಕಿರಿಯ ಪವರ್‌ಮ್ಯಾನ್ ಸೇರಿದಂತೆ ಒಟ್ಟು 2975 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹೊಸ ಹುದ್ದೆಗಳ ಜೊತೆಗೆ ಬ್ಯಾಕ್ಲಾಗ್ ಹುದ್ದೆಗಳು ಸೇರಿರುವುದು ವಿಶೇಷ. ಎಸ್ಸೆಸ್ಸೆಲ್ಸಿ ಪಾಸಾದವರು ಸರ್ಕಾರಿ ಹುದ್ದೆಗೆ ಸೇರಬೇಕು ಎಂದುಕೊಂಡಿರುವ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗಳಿಗೆ ಆನ್‌ಲೈನ್ (kptcl.karnataka.gov.in) ಮೂಲಕ ಅರ್ಜಿ ಸಲ್ಲಿಸಬಹುದು. ಹಾಗಾದರೆ ವೇತನ ಎಷ್ಟಿದೆ? ಇಲ್ಲಿದೆ ವಿವರ.
ಕೆಪಿಟಿಸಿಎಲ್ ನೇಮಕಾತಿಗೆ ಅಕ್ಟೋಬರ್ 21ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಸಲ್ಲಿಸಲು ಗಡುವು ನವೆಂಬರ್ 20. ಅರ್ಹತಾ ಪರೀಕ್ಷೆ, ಕನ್ನಡ ಭಾಷಾ ಪರೀಕ್ಷೆ, ಸಾಮರ್ಥ್ಯ ಪರೀಕ್ಷೆ ಮತ್ತು ಸಹಿಷ್ಣುತೆ ಪರೀಕ್ಷೆಯ ಮೆರಿಟ್ ಮೂಲಕ ಅರ್ಜಿದಾರರ ಆಯ್ಕೆಯನ್ನು ಮಾಡಲಾಗುತ್ತದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ ಅಥವಾ ಪದವಿ ಓದಿರುವವರು ಅರ್ಜಿ ಸಲ್ಲಿಸಲು ಅರ್ಹರು. ಈ ಕುರಿತು ಅ.14ರಂದು ನೋಟಿಫಿಕೇಷನ್ ಬಿಡುಗಡೆ ಮಾಡಿದೆ. ಆದರೆ ಕೆಪಿಟಿಸಿಎಲ್ ಪರೀಕ್ಷೆಗೆ ಇನ್ನೂ ದಿನಾಂಕ ಘೋಷಿಸಿಲ್ಲ.
ಹುದ್ದೆಗಳು ಎಷ್ಟು?
ಜೂನಿಯರ್ ಸ್ಟೇಷನ್ ಅಟೆಂಡೆಂಟ್ (JSA) - 433
ಜೂನಿಯರ್ ಪವರ್‌ಮ್ಯಾನ್ (JPM) - 2542
ಯಾರೆಲ್ಲಾ ಅರ್ಹರು, ಯಾರೆಲ್ಲಾ ಅರ್ಹರಲ್ಲ?
ಎಸ್ಸೆಸ್ಸೆಲ್ಸಿ ಪಾಸ್ ಅಥವಾ ಸಿಬಿಎಸ್‌ಇ/ಐಸಿಎಸ್‌ಇ ಬೋರ್ಡ್ 10ನೇ ತರಗತಿ ಉತ್ತೀರ್ಣರಾದವರು ಅರ್ಹರು. ಅರ್ಜಿದಾರರು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ 10ನೇ/12ನೇ ತರಗತಿ ಅಥವಾ ಡಿಪ್ಲೊಮಾ/ಪದವಿ ಉತ್ತೀರ್ಣರಾಗಿರಬೇಕು. ಬಾಹ್ಯ ಅಥವಾ ಮುಕ್ತ ವಿವಿ, ಮುಕ್ತ ಶಾಲೆಯಲ್ಲಿ 10ನೇ ತರಗತಿ ಉತ್ತೀರ್ಣತೆ ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ವಿದ್ಯಾರ್ಹತೆ ಪಾಸಾಗಿ ಅಂಕಪಟ್ಟಿ ಹೊಂದಿರಬೇಕು. ಒಂದ್ವೇಳೆ ಸದರಿ ವಿದ್ಯಾರ್ಹತೆಗಳ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುವವರು ಅರ್ಜಿ ಸಲ್ಲಿಕೆಗೆ ಅರ್ಹರಲ್ಲ. ಕೆಪಿಟಿಸಿಎಲ್ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ವಯಸ್ಸಿನ ಅರ್ಹತೆ
ಹುದ್ದೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸು.
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ.
ಎಸ್ಸಿ, ಎಸ್ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.
ಅರ್ಜಿ ಶುಲ್ಕ ವಿವರ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 614 ರೂಪಾಯಿ.
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 614 ರೂಪಾಯಿ.
ಎಸ್ಸಿ, ಎಸ್ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 378 ರೂಪಾಯಿ
ವಿಶೇಷ ಚೇತನ ಉದ್ಯೋಗಾಕಾಂಕ್ಷಿಗಳಿಗೆ ಶುಲ್ಕ ವಿನಾಯಿತಿ
ಈ ವೆಬ್ಸೈಟ್ಗಳ ಪೈಕಿ ಯಾವುದರಲ್ಲಾದರೂ ಅರ್ಜಿ ಸಲ್ಲಿಸಬಹುದು
https://kptcl.karnataka.gov.in
https://bescom.karnataka.gov.in
https://cescmysor.karnataka.gov.in
https://mescom.karnataka.gov.in
https://hescom.karnataka.gov.in
https://gescom.karnataka.gov.in
ಮೊದಲ 3 ವರ್ಷಗಳ ವೇತನ ವಿವರ (ತಿಂಗಳಿಗೆ)
1 ನೇ ವರ್ಷ - 17,000
2 ನೇ ವರ್ಷ - 19,000
3 ನೇ ವರ್ಷ - 21,000
ಮೂರು ವರ್ಷ ತರಬೇತಿ ಪೂರೈಸಿದ ನಂತರ ಅಭ್ಯರ್ಥಿಗಳನ್ನು ವೇತನ ಶ್ರೇಣಿ ರೂಪಾಯಿ 28,550 ರಿಂದ 63,000ರಲ್ಲಿ ನಿಯೋಜನೆ ಮಾಡಲಾಗುವುದು.