ಈ ಶ್ವಾನ ತಳಿಗಳಿಗೆ ಆಯಸ್ಸು ಹೆಚ್ಚು, ದೀರ್ಘಾಯುಷ್ಯ ಹೊಂದಿರುವ ಜಗತ್ತಿನ 15 ನಾಯಿಗಳ ವಿವರ ತಿಳಿಯಿರಿ
Nov 13, 2024 07:30 AM IST
ಶ್ವಾನಗಳ ಜೀವಿತಾವಧಿ
- longest living dog breeds: ಚಿಹೋವಾ, ಡ್ಯಾಷ್ಹಂಡ್, ಟಾಯ್ ಪೂಡಲ್, ಜ್ಯಾಕ್ ರಸ್ಸೆಲ್ ಟೆರಿಯರ್, ಶಿಹ್ ತ್ಸು, ಮಾಲ್ಟೀಸ್, ಯಾರ್ಕ್‌ಷೈರ್ ಟೆರಿಯರ್, ಪೊಮೆರೇನಿಯನ್, ಬೀಗಲ್ ಸೇರಿದಂತೆ ವಿವಿಧ ಶ್ವಾನ ತಳಿಗಳ ಜೀವಿತಾವಧಿ ತಿಳಿಯೋಣ ಬನ್ನಿ.
ಜಗತ್ತಿನಲ್ಲಿ ಬಹುತೇಕರು ಸಾಕು ನಾಯಿ ಇಷ್ಟಪಡುತ್ತಾರೆ. ಮನೆಯಲ್ಲಿ ನಾಯಿಗಳನ್ನು ಮಕ್ಕಳಂತೆ ಪ್ರೀತಿಸಿ ಬೆಳೆಸುತ್ತಾರೆ. ಮನೆಯ ಸದಸ್ಯರಲ್ಲಿ ಒಬ್ಬರಂತೆ ಬೆಳೆಯುತ್ತವೆ. ಹೀಗೆ ಪ್ರೀತಿಯಿಂದ ಇರುವ ನಾಯಿಗಳು ತಮ್ಮ ಅಲ್ಪಾಯುಷ್ಯದ ಕಾರಣದಿಂದ ಸಾಯುತ್ತವೆ. ಈ ಸಮಯದಲ್ಲಿ ಆ ನಾಯಿ ಮಾಲೀಕರು ಅತೀವ ದುಃಖ ಪಡುತ್ತಾರೆ. ಇದೇ ಸಮಯದಕ್ಕೆ ಕೆಲವರು ದೀರ್ಘಾಯುಷ್ಯ ಹೊಂದಿರುವ ನಾಯಿಗಳನ್ನು ಸಾಕಲು ಬಯಸುತ್ತಾರೆ. ಕೆಲವು ದೀರ್ಘಾಯುಷ್ಯ ಹೊಂದಿರುವ ನಾಯಿಗ ವಿವರ ಪಡೆಯೋಣ.
ನಾಯಿಗಳು ಎಷ್ಟು ಕಾಲ ಬದುಕುತ್ತವೆ?
ಚಿಕ್ಕ ನಾಯಿ ತಳಿಗಳು ಸಾಮಾನ್ಯವಾಗಿ ಹೆಚ್ಚು ಕಾಲ ಬದುಕುತ್ತವೆ. ಇವು 16 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯನ್ನು ತಲುಪುತ್ತವೆ ಆದರೆ ಮಧ್ಯಮ ಅಥವಾ ದೊಡ್ಡ ನಾಯಿಯ ಸರಾಸರಿ ಜೀವಿತಾವಧಿಯು 10 ರಿಂದ 13 ವರ್ಷಗಳವರೆಗೆ ಇರುತ್ತದೆ. ದೈತ್ಯ ತಳಿಗಳು ಅಪರೂಪವಾಗಿ 8 ರಿಂದ 10 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ.
ದೀರ್ಘಾಯುಷ್ಯ ಹೊಂದಿರುವ 15 ನಾಯಿ ತಳಿಗಳು
- ಚಿಹೋವಾ: ಚಿಹೋವಾವು ದೀರ್ಘಕಾಲ ಬದುಕುವ ನಾಯಿ ತಳಿಗಳಲ್ಲಿ ಒಂದಾಗಿದೆ. ಕೆಲವು ನಾಯಿಗು 18 ರಿಂದ 20 ವರ್ಷಗಳವರೆಗೆ ಬದುಕುತ್ತವೆ.
- ಡ್ಯಾಷ್ಹಂಡ್: 15 ವರ್ಷಕ್ಕಿಂತ ಮೇಲ್ಪಟ್ಟ ಡ್ಯಾಷ್ಹಂಡ್ ನೋಡಲು ಸಿಗುವುದು ಅಪರೂಪ. ಚಾನೆಲ್ ಎಂಬ ಹೆಸರಿನ ಡ್ಯಾಷ್‌ಶಂಡ್ 21 ವರ್ಷಗಳ ಕಾಲ ಬದುಕಿ ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿತ್ತು.
- ಟಾಯ್ ಪೂಡಲ್: 16 ರಿಂದ 18 ವರ್ಷ ಬದುಕುತ್ತವೆ. ಇದು ದೀರ್ಘಾವಧಿಯ ನಾಯಿ ತಳಿಗಳಲ್ಲಿ ಒಂದಾಗಿದೆ.
- ಜ್ಯಾಕ್ ರಸ್ಸೆಲ್ ಟೆರಿಯರ್: ಜ್ಯಾಕ್ ರಸ್ಸೆಲ್ ಟೆರಿಯರ್ ಮತ್ತೊಂದು ಸಣ್ಣ ತಳಿಯಾಗಿದ್ದು ಅದು ಸಾಮಾನ್ಯವಾಗಿ 16 ವರ್ಷಗಳವರೆಗೆ ಬದುಕಬಹುದು. ಜ್ಯಾಕ್ ರಸ್ಸೆಲ್ ವಿಲ್ಲೀ ಎಂಬ ನಾಯಿ 20 ವರ್ಷ ಬದುಕಿ ಗಿನ್ನೆಸ್ ದಾಖಲೆ ಮಾಡಿತ್ತು.
- ಶಿಹ್ ತ್ಸು: ಸಾಮಾನ್ಯವಾಗಿ 14 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೆ ಬದುಕುತ್ತದೆ. ಇವು ಸ್ನೇಹಪರ ನಾಯಿಗಳೆಂದೇ ಖ್ಯಾತಿಪಡೆದಿವೆ.
- ಮಾಲ್ಟೀಸ್: ಮಾಲ್ಟೀಸ್ ವಿಶಿಷ್ಟ ಸಣ್ಣ ತಳಿಯಾಗಿದ್ದು ಸುಮಾರು 15 ವರ್ಷಗಳವರೆಗೆ ಬದುಕಬಲ್ಲದು.
- ಯಾರ್ಕ್‌ಷೈರ್ ಟೆರಿಯರ್: ಜನಪ್ರಿಯ ಮತ್ತು ಬುದ್ಧಿವಂತ ಶ್ವಾನ ತಳಿಯಾಗಿದೆ. 13 ರಿಂದ 15 ವರ್ಷಗಳವರೆಗೆ ಬದುಕುತ್ತವೆ.
- ಪೊಮೆರೇನಿಯನ್: ಸಾಮಾನ್ಯವಾಗಿ ತಮ್ಮ ಮಾಲೀಕರಿಗೆ ಅತ್ಯಂತ ನಿಷ್ಠಾವಂತವಾಗಿರುತ್ತವೆ. 14 ರಿಂದ 16 ವರ್ಷಗಳವರೆಗೆ ಬದುಕುತ್ತವೆ.
- ಶಿಬಾ ಇನು: ಮಧ್ಯಮ ಗಾತ್ರದ ತಳಿ. 14 ರಿಂದ 16 ವರ್ಷ ವಯಸ್ಸಿನವರೆಗೆ ಬದುಕುತ್ತವೆ.
- ಆಸ್ಟ್ರೇಲಿಯನ್ ಕ್ಯಾಟಲ್ ಡಾಗ್: 12 ರಿಂದ 16 ವರ್ಷಗಳ ಕಾಲ ಬದುಕುತ್ತವೆ. ಬ್ಲೂಯ್ ಎಂಬ ನಾಯಿ 29 ವರ್ಷ ಬದುಕಿತ್ತು.
- ಮಿನಿಯೇಚರ್ ಷ್ನಾಜರ್: ಸರಾಸರಿ 12 ರಿಂದ 15 ವರ್ಷಗಳವರೆಗೆ ಬದುಕಬಲ್ಲದು. ಇದು ಹಠಮಾರಿ. ಉತ್ತಮ ತರಬೇತಿ, ಪ್ರೀತಿಯಿಂದ ಸಾಕಿದರೆ ಉತ್ತಮ ಫ್ಯಾಮಿಲಿ ನಾಯಿಯಾಗುತ್ತದೆ.
- ಬೀಗಲ್: ಮಧ್ಯಮ ಗಾತ್ರದ ಈ ಬೀಗಲ್ 15 ವರ್ಷಗಳವರೆಗೆ ಬದುಕಬಲ್ಲದು.
- ಬಿಚನ್ ಫ್ರೈಜ್: ದುಂಡಗಿನ ತಲೆಯನ್ನು ಹೊಂದಿರುವ ಇವು ತುಂಬಾ ಕ್ಯೂಟ್. ತಮಾಷೆಯ ಜೀವಿಗಳಂತೆ ಕಾಣಿಸುವ ಇವು 15 ವರ್ಷಗಳವರೆಗೆ ಬದುಕಬಲ್ಲವು.
- ಪಾಪಿಲ್ಲನ್: ಸುಂದರವಾದ, ರೆಕ್ಕೆ-ಆಕಾರದ ಕಿವಿಗಳನ್ನು ಹೊಂದಿರುವ ಕ್ಯೂಟ್ ನಾಯಿಯಾಗಿದೆ. ಇವುಗಳ ಸರಾಸರಿ ಜೀವಿತಾವಧಿ 14 ರಿಂದ 16 ವರ್ಷಗಳು.
- ವಿಪ್ಪೆಟ್: ಇವು ವೇಗವಾಗಿ ಓಡುವ ನಾಯಿಗಳಾಗಿ ಜನಪ್ರಿಯತೆ ಪಡೆದಿವೆ. ಮನುಷ್ಯರು, ಬೆಕ್ಕುಗಳ ಜತೆ ತುಂಬಾ ಪ್ರೀತಿಯಿಂದ ಇರುತ್ತವೆ.
ಇದನ್ನೂ ಓದಿ: ನಿಮ್ಮ ಮನೆಗೆ ಹೊಸದಾಗಿ ನಾಯಿ ತಂದಿದ್ದೀರಾ? ಪ್ರೀತಿಯ ಶ್ವಾನದ ಆರೋಗ್ಯ ಜೋಪಾನವಾಗಿರಲು ಈ ಟಿಪ್ಸ್ ಅನುಸರಿಸಿ