logo
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದಲ್ಲ, ಎರಡಲ್ಲ ಮಾರುತಿ ಸುಜುಕಿಯಿಂದ ಬರುತ್ತಿದೆ ಬರೋಬ್ಬರಿ 5 ಹೊಸ ಕಾರುಗಳು- ವಿಶೇಷತೆ ಏನು, ಬಿಡುಗಡೆ ಯಾವಾಗ: ಇಲ್ಲಿದೆ ಮಾಹಿತಿ

ಒಂದಲ್ಲ, ಎರಡಲ್ಲ ಮಾರುತಿ ಸುಜುಕಿಯಿಂದ ಬರುತ್ತಿದೆ ಬರೋಬ್ಬರಿ 5 ಹೊಸ ಕಾರುಗಳು- ವಿಶೇಷತೆ ಏನು, ಬಿಡುಗಡೆ ಯಾವಾಗ: ಇಲ್ಲಿದೆ ಮಾಹಿತಿ

Priyanka Gowda HT Kannada

Sep 19, 2024 11:30 AM IST

google News

ಮಾರುತಿ ಸುಜುಕಿ ಕೆಲವೇ ತಿಂಗಳುಗಳಲ್ಲಿ ಹಲವು ಹೊಸ ವಾಹನಗಳೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಿದ್ಧವಾಗಿದೆ.

  • ಮುಂಬರುವ ಕಾರುಗಳ ಪಟ್ಟಿಯಲ್ಲಿ ನವೀಕರಿಸಿದ ಮುಂಭಾಗಗಳು, ಹೊಸ ತಲೆಮಾರಿನ ಡಿಜೈರ್, ಹೊಸ ತಲೆಮಾರಿನ ಬಲೆನೊ, ಹೊಸ ಮೈಕ್ರೋ ಎಸ್‍ಯುವಿಮತ್ತು ಹೊಸ ಕಾಂಪ್ಯಾಕ್ಟ್ ಎಂಪಿವಿಅನ್ನು ಒಳಗೊಂಡಿದೆ. ಈ ಹೊಸ ವಾಹನಗಳ ವಿಶೇಷತೆ ಏನೇನಿದೆ?, ಯಾವಾಗ ಬಿಡುಗಡೆ? ನೋಡೋಣ. (ಬರಹ: ವಿನಯ್ ಭಟ್)

ಮಾರುತಿ ಸುಜುಕಿ ಕೆಲವೇ ತಿಂಗಳುಗಳಲ್ಲಿ ಹಲವು ಹೊಸ ವಾಹನಗಳೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಿದ್ಧವಾಗಿದೆ.
ಮಾರುತಿ ಸುಜುಕಿ ಕೆಲವೇ ತಿಂಗಳುಗಳಲ್ಲಿ ಹಲವು ಹೊಸ ವಾಹನಗಳೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಿದ್ಧವಾಗಿದೆ.

ಮಾರುತಿ ಸುಜುಕಿ ಕೆಲವೇ ತಿಂಗಳುಗಳಲ್ಲಿ ಹಲವು ಹೊಸ ವಾಹನಗಳೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಿದ್ಧವಾಗಿದೆ. ಫ್ರಾಂಕ್ಸ್ ಮತ್ತು ಮಾರುತಿ ಸ್ವಿಫ್ಟ್​ನ ಯಶಸ್ಸಿನ ನಂತರ, ಈಗ ಕಂಪನಿಯು ಇನ್ನಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮುಂಬರುವ ದಿನಗಳಲ್ಲಿ ಮಾರುತಿ ಒಂದಲ್ಲ ಎರಡಲ್ಲ ಬರೋಬ್ಬರಿ 5 ನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ತಮ್ಮ ಬಲವಾದ ಮೈಲೇಜ್ ಕಾರಣದಿಂದಾಗಿ ಸದಾ ಬೇಡಿಕೆಯಲ್ಲಿರುವ ಮಾರುತಿ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಹೊಸ ಮಾಡೆಲ್‌ಗಳತ್ತ ಗಮನ ಹರಿಸುತ್ತಿದ್ದು, ಇದರ ಬೆಲೆ 10 ಲಕ್ಷಕ್ಕಿಂತ ಕಡಿಮೆ ಇರುವ ನಿರೀಕ್ಷೆಯಿದೆ.

ಮುಂಬರುವ ಕಾರುಗಳ ಪಟ್ಟಿಯಲ್ಲಿ ನವೀಕರಿಸಿದ ಮುಂಭಾಗಗಳು, ಹೊಸ ತಲೆಮಾರಿನ ಡಿಜೈರ್, ಹೊಸ ತಲೆಮಾರಿನ ಬಲೆನೊ, ಹೊಸ ಮೈಕ್ರೋ ಎಸ್‍ಯುವಿಮತ್ತು ಹೊಸ ಕಾಂಪ್ಯಾಕ್ಟ್ ಎಂಪಿವಿಅನ್ನು ಒಳಗೊಂಡಿದೆ. ಈ ಹೊಸ ವಾಹನಗಳ ವಿಶೇಷತೆ ಏನೇನಿದೆ? ಯಾವಾಗ ಬಿಡುಗಡೆ? ನೋಡೋಣ.

ಹೊಸ ಮಾರುತಿ ಡಿಜೈರ್

ಮುಂದಿನ ಕೆಲವು ತಿಂಗಳುಗಳಲ್ಲಿ ಹೊಸ ಮಾರುತಿ ಡಿಜೈರ್ ಮಾರಾಟ ಪ್ರಾರಂಭವಾಗಲಿದೆ. ಈ ಬಾರಿ ಈ ಕಾರಿನಲ್ಲಿ ನಯವಾದ ವಿನ್ಯಾಸ, ಹೊಸದಾದ ಒಳಾಂಗಣ ಮತ್ತು ಎಂಜಿನ್ ನೀಡಲಾಗುವುದು. ಈ ಸೆಡಾನ್ 1.2 ಲೀಟರ್, Z- ಸರಣಿಯ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದ್ದು, ಇದು 82 bhp ಪವರ್ ಮತ್ತು 112 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಇರುತ್ತದೆ. ಇದಲ್ಲದೆ, ಈ ಕಾರು ಸಿಎನ್‌ಜಿ ಇಂಧನ ಆಯ್ಕೆಯೊಂದಿಗೆ ಬರಲಿದೆ ಎಂದು ಹೇಳಲಾಗಿದೆ.

ಮಾರುತಿ ಫ್ರಂಟ್ ಫೇಸ್ ಲಿಫ್ಟ್

ಫ್ರಂಟ್ ಫೇಸ್‌ಲಿಫ್ಟ್ ಅನ್ನು 2025 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾರುತಿ ಹೇಳಿದೆ. ಇದು ಹೊಸ ಹೈಬ್ರಿಡ್ ವ್ಯವಸ್ಥೆಯೊಂದಿಗೆ ಬರಲಿದೆ, ಈ ಕಾರು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಕಾರಿನ ವಿನ್ಯಾಸ ಮತ್ತು ಒಳಾಂಗಣದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬಹುದು ಎಂಬ ನಿರೀಕ್ಷೆಯಿದೆ.

ಹೊಸ ಮಾರುತಿ ಕಾಂಪ್ಯಾಕ್ಟ್ ಎಂಪಿವಿ

ಮಾರುತಿ ಸುಜುಕಿ ಹೊಸ ಕಾಂಪ್ಯಾಕ್ಟ್ ಎಂಪಿವಿ ಅನ್ನು ತಯಾರು ಮಾಡುತ್ತಿದೆ. ಇದು 2026 ರ ವೇಳೆಗೆ ಬಿಡುಗಡೆಯಾಗಲಿದೆ. ಇದಕ್ಕೆ ವೈಡಿಬಿಎಂಬ ಸಂಕೇತನಾಮವನ್ನು ನೀಡಲಾಗಿದೆ. ಇದು ಮೂರು ಸಾಲುಗಳ ಆಸನ ವ್ಯವಸ್ಥೆಯನ್ನು ಹೊಂದಿರುತ್ತದೆ. ಈ ಕಾರು ಕಂಪನಿಯ ಶ್ರೇಣಿಯಲ್ಲಿ ಎರ್ಟಿಗಾ ಮತ್ತು XL6 ಗಿಂತ ಕಡಿಮೆ ಬೆಲೆಗೆ ಸಿಗಲಿದೆಯಂತೆ. ಇದನ್ನು 1.2 ಲೀಟರ್ ಝೆಡ್- ಸರಣಿಯ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಬಹುದು. ಈ ಎಂಜಿನ್ ಹೊಸ ಸ್ವಿಫ್ಟ್ ನಲ್ಲೂ ಲಭ್ಯವಿದೆ.

ಮಾರುತಿಯ ಹೊಸ ಮೈಕ್ರೋ ಎಸ್‌ಯುವಿ

ಮಾರುತಿ ಸುಜುಕಿಯ ಸಾಲಿಗೆ ಹೊಸ ಮೈಕ್ರೋ ಎಸ್‌ಯುವಿ ಕೂಡ ಸೇರ್ಪಡೆಯಾಗಲಿದೆ. ಈ ಮೂಲಕ ಗ್ರಾಹಕರನ್ನು ಮತ್ತಷ್ಟು ಖುಷಿ ಪಡಿಸಲು ಮುಂದಾಗಿದೆ. ಇದಕ್ಕೆ ವೈ43 ಎಂಬ ಸಂಕೇತನಾಮವನ್ನು ನೀಡಲಾಗಿದೆ. ಈ ಪ್ರವೇಶ ಮಟ್ಟದ ಎಸ್‍ಯುವಿ 2026 ಮತ್ತು 27ರ ನಡುವೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಿಡುಗಡೆಯ ನಂತರ, ಇದು ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸೆಟರ್‌ನಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ.

ಹೊಸ ತಲೆಮಾರಿನ ಬಲೆನೊ

ಹೊಸ ತಲೆಮಾರಿನ ಮಾರುತಿ ಬಲೆನೊ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಗಟ್ಟಿಮುಟ್ಟಾದ ಹೈಬ್ರಿಡ್ ವ್ಯವಸ್ಥೆಯೊಂದಿಗೆ ಬರುವ ಕಂಪನಿಯ ಕಾರುಗಳಲ್ಲಿ ಇದನ್ನು ಸೇರಿಸಲಾಗುತ್ತದೆ. 2026 ರ ವೇಳೆಗೆ ಹೊಸ ಬಲೆನೊ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ