ಕಾರು ಸ್ಟಾರ್ಟ್ ಮಾಡುವಾಗ 40 ಸೆಕೆಂಡ್ ಈ ಕೆಲಸ ಮಾಡಿ: ಇಂಜಿನ್ ಲೈಫ್ ದ್ವಿಗುಣಗೊಳ್ಳುತ್ತೆ-auto tips do this for 40 seconds while starting the car get maximum mileage car engine care vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಾರು ಸ್ಟಾರ್ಟ್ ಮಾಡುವಾಗ 40 ಸೆಕೆಂಡ್ ಈ ಕೆಲಸ ಮಾಡಿ: ಇಂಜಿನ್ ಲೈಫ್ ದ್ವಿಗುಣಗೊಳ್ಳುತ್ತೆ

ಕಾರು ಸ್ಟಾರ್ಟ್ ಮಾಡುವಾಗ 40 ಸೆಕೆಂಡ್ ಈ ಕೆಲಸ ಮಾಡಿ: ಇಂಜಿನ್ ಲೈಫ್ ದ್ವಿಗುಣಗೊಳ್ಳುತ್ತೆ

ಎಂಜಿನ್ ಪ್ರಾರಂಭಿಸುವ ಮೊದಲು ಕಾರಿನ ಇಗ್ನಿಷನ್ ಅನ್ನು ಆನ್ ಮಾಡಿ, ಆದರೆ ತಕ್ಷಣ ಸ್ಟಾರ್ಟ್ ಬಟನ್ ಅನ್ನು ಒತ್ತಬೇಡಿ. ಇಂಧನ ಪಂಪ್ ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳು ಸಕ್ರಿಯಗೊಳಿಸಲು ಕೆಲವು ಸೆಕೆಂಡುಗಳ ಕಾಲ ಕಾಯಿರಿ. (ಬರಹ: ವಿನಯ್ ಭಟ್)

ಕಾರನ್ನು ಸ್ಟಾರ್ಟ್ ಮಾಡುವಾಗ ನೀವು ಮಾಡುವ ಈ ಸಣ್ಣ ಅಭ್ಯಾಸಗಳು ಎಂಜಿನ್‌ನ ಜೀವಿತಾವಧಿಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು.
ಕಾರನ್ನು ಸ್ಟಾರ್ಟ್ ಮಾಡುವಾಗ ನೀವು ಮಾಡುವ ಈ ಸಣ್ಣ ಅಭ್ಯಾಸಗಳು ಎಂಜಿನ್‌ನ ಜೀವಿತಾವಧಿಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು.

ಕಾರನ್ನು ಸ್ಟಾರ್ಟ್ ಮಾಡುವಾಗ ನೀವು ಮಾಡುವ ಈ ಸಣ್ಣ ಅಭ್ಯಾಸಗಳು ಎಂಜಿನ್‌ನ ಜೀವಿತಾವಧಿಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಇದಕ್ಕೆ ಹೆಚ್ಚು ಸಮಯ ವ್ಯಹಿಸಬೇಕಾಗಿಲ್ಲ. ಕೇವಲ 40 ಸೆಕೆಂಡುಗಳಲ್ಲಿ ನೀವು ಮಾಡಬಹುದಾದ ಕೆಲವು ವಿಷಯಗಳು ನಿಮ್ಮ ಕಾರಿನ ಎಂಜಿನ್ ಅನ್ನು ಆರೋಗ್ಯಕರವಾಗಿಡುತ್ತದೆ.

ಎಂಜಿನ್ ಪ್ರಾರಂಭಿಸುವ ಮೊದಲು ಕಾರಿನ ಇಗ್ನಿಷನ್ ಅನ್ನು ಆನ್ ಮಾಡಿ, ಆದರೆ ತಕ್ಷಣ ಸ್ಟಾರ್ಟ್ ಬಟನ್ ಅನ್ನು ಒತ್ತಬೇಡಿ. ಇಂಧನ ಪಂಪ್ ಮತ್ತು ಎಲೆಕ್ಟ್ರಾನಿಕ್ ವ್ಯವಸ್ಥೆಗಳು ಸಕ್ರಿಯಗೊಳಿಸಲು ಕೆಲವು ಸೆಕೆಂಡುಗಳ ಕಾಲ ಕಾಯಿರಿ.

ಕಾರಿನ ಬಗ್ಗೆ ಏನೆಲ್ಲಾ ಕಾಳಜಿ ವಹಿಸಬೇಕು ಅನ್ನೋದು ಇಲ್ಲಿದೆ

ಆಯಿಲ್ ಲೀಕೆಜ್ ಬಗ್ಗೆ ಕಾಳಜಿ ವಹಿಸಿ: ಕಾರು ಸ್ಟಾರ್ಟ್ ಆದ ನಂತರ, ಸುಮಾರು 10-20 ಸೆಕೆಂಡುಗಳ ಕಾಲ ಮೂವ್ ಮಾಡದೆ ಹಾಗೆಯೆ ನಿಲ್ಲಿಸಿ. ಈ ಕಾರಣದಿಂದಾಗಿ, ಎಂಜಿನ್ ತೈಲವು ಎಂಜಿನ್​ನ ಎಲ್ಲಾ ಭಾಗಗಳಿಗೆ ಸರಿಯಾಗಿ ತಲುಪುತ್ತದೆ, ಇದು ಘರ್ಷಣೆಯನ್ನು ಕಡಿಮೆ ಮಾಡುತ್ತದೆ.

ಎಸಿ ಮತ್ತು ಬಿಡಿಭಾಗಗಳನ್ನು ಆಫ್ ಮಾಡಿ: ಕಾರನ್ನು ಪ್ರಾರಂಭಿಸುವಾಗ ಎಸಿ, ರೇಡಿಯೋ ಅಥವಾ ಇತರ ಪರಿಕರಗಳನ್ನು ಆಫ್ ಮಾಡಿ. ಇದು ಬ್ಯಾಟರಿ ಮತ್ತು ಎಂಜಿನ್ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುವುದಿಲ್ಲ.

ಆರ್ ಪಿಎಮ್ ಸ್ಥಿರಗೊಳಿಸಿ: ಎಂಜಿನ್ ಅನ್ನು ಪ್ರಾರಂಭಿಸಿದ ನಂತರ, ಆರ್ ಪಿಎಂಅನ್ನು ಸ್ಥಿರಗೊಳಿಸಲು ಅನುಮತಿಸಿ. ಇದ್ದಕ್ಕಿದ್ದಂತೆ ವೇಗವನ್ನು ಹೆಚ್ಚಿಸುವುದರಿಂದ ಎಂಜಿನ್ ಮೇಲೆ ಅನಗತ್ಯ ಹೊರೆ ಬೀಳಬಹುದು.

ಎಂಜಿನ್‌ ಸೌಂಡ್ ಕೇಳಿ: ಕಾರು ಸ್ಟಾರ್ಟ್ ಆದ ಬಳಿಕ, ಎಂಜಿನ್‌ನ ಸೌಂಡ್ ಅನ್ನು ಎಚ್ಚರಿಕೆಯಿಂದ ಆಲಿಸಿ. ಯಾವುದಾದರೂ ಅನಗತ್ಯ ಸೌಂಡ್ ಇದ್ದರೆ ಪರೀಕ್ಷಿಸಿ.

ಸುಗಮ ಚಾಲನೆ: ಎಂಜಿನ್ ತಾಪಮಾನವು ಸಾಮಾನ್ಯ ಸ್ಥಿತಿಗೆ ಬರುವವರೆಗೆ ನಿಧಾನವಾಗಿ ಕಾರನ್ನು ಚಾಲನೆ ಮಾಡುವುದು ಉತ್ತಮ. ಹೆಚ್ಚಿನ ವೇಗದಲ್ಲಿ ಇದ್ದಕ್ಕಿದ್ದಂತೆ ಕಾರನ್ನು ಮೂವ್ ಮಾಡುವುದರಿಂದ ಎಂಜಿನ್ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ.

ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್: ಕಾರು ಸ್ಟಾರ್ಟ್ ಆದ ತಕ್ಷಣ ಬ್ಯಾಟರಿ ಚಾರ್ಜ್ ಮಾಡಲು ಪ್ರಾರಂಭಿಸುತ್ತದೆ. ಆದ್ದರಿಂದ, ತಕ್ಷಣವೇ ಎಸಿ ಅಥವಾ ಹೈ-ಲೈಟ್‌ಗಳನ್ನು ಬಳಸುವುದನ್ನು ತಪ್ಪಿಸಿ.

ಸರಿಯಾದ ಗೇರ್‌ನಲ್ಲಿ ಓಡಿಸಿ: ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಕಾರಿನಲ್ಲಿ, ಸರಿಯಾದ ಗೇರ್‌ನಲ್ಲಿ ಕಾರು ಚಾಲನೆ ಮಾಡಿದರೆ ಎಂಜಿನ್ ಅನ್ನು ಹೆಚ್ಚಿನ ಒತ್ತಡದಿಂದ ರಕ್ಷಿಸಬಹುದು.

ಎಂಜಿನ್ ತಾಪಮಾನವನ್ನು ಪರಿಶೀಲಿಸಿ: ತಾಪಮಾನ ಗೇಜ್ ಅನ್ನು ಮೇಲ್ವಿಚಾರಣೆ ಮಾಡಿ. ಎಂಜಿನ್ ಕೊಲ್ಡ್ ಅಥವಾ ತುಂಬಾ ಬಿಸಿಯಾಗಿದ್ದರೂ ತೊಂದರೆಗಳು ಉಂಟಾಗಬಹುದು.

ಇಂಧನ ಮಟ್ಟ: ಕಾರನ್ನು ಪ್ರಾರಂಭಿಸುವ ಮೊದಲು ಇಂಧನ ಮಟ್ಟವನ್ನು ಪರಿಶೀಲಿಸಿ. ಕಡಿಮೆ ಇಂಧನದಲ್ಲಿ ಗಾಡಿಯನ್ನು ಓಡುವುದರಿಂದ ಎಂಜಿನ್ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ.

ಈ ಸಣ್ಣ ಮುನ್ನೆಚ್ಚರಿಕೆಗಳು ಎಂಜಿನ್ ಅನ್ನು ದೀರ್ಘಕಾಲದವರೆಗೆ ಸುಸ್ಥಿತಿಯಲ್ಲಿಡಬಹುದು ಮತ್ತು ಅದರ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

mysore-dasara_Entry_Point