logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಹೀಂದ್ರ ಥಾರ್‌ ರಾಕ್ಸ್‌ ಬುಕ್ಕಿಂಗ್‌ ಆರಂಭ; ದಸರಾ ಸಮಯದಲ್ಲೇ ಡೆಲಿವರಿ; ದರವೆಷ್ಟು, ಥಾರ್‌ ರಾಕ್ಸ್ ಸ್ಪೆಷಾಲಿಟಿ ಏನು?

ಮಹೀಂದ್ರ ಥಾರ್‌ ರಾಕ್ಸ್‌ ಬುಕ್ಕಿಂಗ್‌ ಆರಂಭ; ದಸರಾ ಸಮಯದಲ್ಲೇ ಡೆಲಿವರಿ; ದರವೆಷ್ಟು, ಥಾರ್‌ ರಾಕ್ಸ್ ಸ್ಪೆಷಾಲಿಟಿ ಏನು?

Praveen Chandra B HT Kannada

Oct 03, 2024 12:41 PM IST

google News

ಮಹೀಂದ್ರ ಥಾರ್‌ ರಾಕ್ಸ್‌ ಬುಕ್ಕಿಂಗ್‌ ಆರಂಭ; ದಸರಾ ಸಮಯದಲ್ಲೇ ಡೆಲಿವರಿ ಆರಂಭವಾಗಲಿದೆ.

    • ಮಹೀಂದ್ರ ಥಾರ್ ರಾಕ್ಸ್‌ ಬುಕ್ಕಿಂಗ್‌ ಆರಂಭವಾಗಿದೆ. ಇದನ್ನು ಥಾರ್‌ ರೋಕ್ಸ್‌ ಎಂದೂ ಕರೆಯಬಹುದು. ಈ ವಾಹನದ ಡೆಲಿವರಿ ಅಕ್ಟೋಬರ್ 12 ರಿಂದ ಪ್ರಾರಂಭವಾಗುತ್ತವೆ. ಥಾರ್‌ ರಾಕ್ಸ್‌ ದರ 12.99 ಲಕ್ಷ ರೂಪಾಯಿಯಿಂದ 22.49 ಲಕ್ಷದವರೆಗೆ ಇರುತ್ತದೆ.
ಮಹೀಂದ್ರ ಥಾರ್‌ ರಾಕ್ಸ್‌ ಬುಕ್ಕಿಂಗ್‌ ಆರಂಭ; ದಸರಾ ಸಮಯದಲ್ಲೇ ಡೆಲಿವರಿ ಆರಂಭವಾಗಲಿದೆ.
ಮಹೀಂದ್ರ ಥಾರ್‌ ರಾಕ್ಸ್‌ ಬುಕ್ಕಿಂಗ್‌ ಆರಂಭ; ದಸರಾ ಸಮಯದಲ್ಲೇ ಡೆಲಿವರಿ ಆರಂಭವಾಗಲಿದೆ.

ಮಹೀಂದ್ರ ಥಾರ್‌ ರಾಕ್ಸ್‌ (Mahindra Thar Roxx) ಖರೀದಿಸಲು ಬಯಸುವವರಿಗೆ ಕಂಪನಿಯು ಹೊಸ ಅಪ್ಡೇಟ್‌ ನೀಡಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ ಮತ್ತು ಡೀಲರ್‌ಶಿಪ್‌ಗಳಲ್ಲಿ ಮಹೀಂದ್ರ ಥಾರ್‌ ರಾಕ್ಸ್‌ ಬುಕ್ಕಿಂಗ್‌ ಆರಂಭವಾಗಿದೆ. ಅಕ್ಟೋಬರ್‌ 12ರಂದು ಈ ಥಾರ್‌ನ ಡೆಲಿವರಿ ಆರಂಭವಾಗುತ್ತದೆ. ದಸರಾ ಸಮಯದಲ್ಲಿ ಹೊಸ ಕಾರು(ಥಾರು) ಖರೀದಿಸಬೇಕೆಂದುಕೊಂಡವರಿಗೆ ಇದು ಸೂಕ್ತ ಆಯ್ಕೆಯಾಗಬಲ್ಲದು. ಥಾರ್‌ ರಾಕ್ಸ್‌ ದರ 12.99 ಲಕ್ಷ ರೂಪಾಯಿಯಿಂದ 22.49 ಲಕ್ಷದವರೆಗೆ ಇರುತ್ತದೆ. ಇದು ಎಕ್ಸ್‌ ಶೋರೂಂ ದರ. ರಸ್ತೆ ತೆರಿಗೆ, ನೋಂದಣಿ ಶುಲ್ಕ ಇತ್ಯಾದಿಗಳೆಲ್ಲ ಸೇರಿ ಆನ್‌ರೋಡ್‌ ದರ ಇನ್ನಷ್ಟು ಹೆಚ್ಚಿರಲಿದೆ.

ಮಹೀಂದ್ರ ಥಾರ್‌ ರಾಕ್ಸ್‌ ಬುಕ್ಕಿಂಗ್‌ ಹೇಗೆ?

ಮಹೀಂದ್ರ ಥಾರ್ ರೋಕ್ಸ್ (ಅಥವಾ ರಾಕ್ಸ್‌) ಬುಕ್ ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಗ್ರಾಹಕರು ಮಹೀಂದ್ರ ಥಾರ್ ರೋಕ್ಸ್‌ನ ವೆಬ್‌ಸೈಟ್‌ಗೆ ಹೋಗಿ ಅಲ್ಲಿರುವ ಕಾನ್ಗಿಗರ್‌ ನೌ ಕ್ಲಿಕ್‌ ಮಾಡಿ. ಖರೀದಿದಾರರುಫೋನ್ ಸಂಖ್ಯೆ, ಪೂರ್ಣ ಹೆಸರು, ಇಮೇಲ್ ವಿಳಾಸ, ಡೀಲರ್‌ಶಿಪ್ ಮಾಹಿತಿ ಒದಗಿಸುವ ಮೂಲಕ ಸೈನ್ ಅಪ್ ಮಾಡಬೇಕಾಗುತ್ತದೆ. ಮುಂದಿನ ಹಂತದಲ್ಲಿ ಪ್ಯಾನ್ ಕಾರ್ಡ್/ಟಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಬೇಕು. ಇಷ್ಟಾದ ಬಳಿಕ ಬುಕ್ಕಿಂಗ್‌ ಮೊತ್ತ ಪಾವತಿಸಬೇಕು.

ಹೊಸ ಇಂಟೀರಿಯರ್‌ ಬಣ್ಣ

ಥಾರ್‌ ರಾಕ್ಸ್‌ಗೆ ಮಹೀಂದ್ರ ಕಂಪನಿಯು ಹೊಸ ಇಂಟೀರಿಯರ್‌ ಬಣ್ಣವನ್ನು ಪರಿಚಯಿಸಿದೆ. ಇದರ ಹೆಸರು ಮೋಚ ಬ್ರೌನ್‌. ಐವೊರಿ ಬಣ್ಣದ ಆಯ್ಕೆಯ ಜತೆಗೆ ಈ ಬಣ್ಣ ಲಭ್ಯವಿದೆ. ಆಸಕ್ತರು ಮೋಚ ಬ್ರೌನ್‌ ಆಯ್ಕೆ ಮಾಡಿಕೊಳ್ಳಬಹುದು. ಗ್ರಾಹಕರು ಖರೀದಿಸುವ ಸಮಯದಲ್ಲಿ ಐವರಿ ಅಥವಾ ಮೋಚ ಇಂಟೀರಿಯರ್‌ ಆಯ್ಕೆ ಮಾಡಿಕೊಲ್ಳಬಹುದು. ಅಕ್ಟೋಬರ್‌ 3ರ ಬೆಳಗ್ಗೆ 11 ಗಂಟೆಯಿಂದ ಬುಕ್ಕಿಂಗ್‌ ಆರಂಭವಾಗಿದೆ. ಅಂದಹಾಗೆ, ಈ ಮೋಚ ಇಂಟೀರಿಯರ್‌ ಆಯ್ಕೆಯು 4x4 ಥಾರ್‌ ರಾಕ್ಸ್‌ಗೆ ಮಾತ್ರ ಲಭ್ಯ. ಇದು ಜನವರಿ 2025ಕ್ಕೆ ರೆಡಿಯಾಗಲಿದೆ.

ಮಹೀಂದ್ರ ಥಾರ್‌ ರಾಕ್ಸ್‌ ಆವೃತ್ತಿಗಳು

ನೂತನ ರಾಕ್ಸ್‌ ಹಲವು ವಿಶಿಷ್ಟ ಆವೃತ್ತಿಗಳಲ್ಲಿ ಲಭ್ಯವಿರಲಿದೆ. MX1, MX3, AX3L, MX5, AX5L ಮತ್ತು AX7L ವರ್ಷನ್‌ಗಳಲ್ಲಿ ಲಭ್ಯವಿರಲಿದೆ. ಇವುಗಳಲ್ಲಿ AX7L ಎನ್ನುವುದು ಡೀಸೆಲ್‌ ಥಾರ್‌ ಆಗಿದೆ. ಇದು ಮ್ಯಾನುಯಲ್‌ ಗಿಯರ್‌ ಬಾಕ್ಸ್‌ನಲ್ಲಿ ಮಾತ್ರ ಲಭ್ಯವಿರಲಿದೆ. AX5L ಆವೃತ್ತಿ ಕೂಡ ಡೀಸೆಲ್‌ ಆಯ್ಕೆಯಲ್ಲಿ ಲಭ್ಯವಿರಲಿದೆ. ಆದರೆ, ಇದರಲ್ಲಿ ಮಾತ್ರ ಆಟೋಮ್ಯಾಟಿಕ್‌ ಗಿಯರ್‌ಬಾಕ್ಸ್‌ ಇರಲಿದೆ. ಉಳಿದ ಆವೃತ್ತಿಗಳು ಪೆಟ್ರೋಲ್‌ ಎಂಜಿನ್‌ಹೊಂದಿರಲಿವೆ. MX5 ನಂತರದ ಆವೃತ್ತಿಗಳಿಗೆ ಮಾತ್ರ ಫೋರ್‌ ವೀಲ್‌ ಡ್ರೈವ್‌ ಆಯ್ಕೆ ಇರಲಿದೆ. ನೆನಪಿಡಿ, ಫೋರ್‌ವೀಲ್‌ ಆಯ್ಕೆಯು ಪೆಟ್ರೋಲ್‌ ಎಂಜಿನ್‌ನಲ್ಲಿ ದೊರಕುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ