ಆನಂದ್‌ ಮಹೀಂದ್ರ ಬೇರೆ ಕಂಪನಿಗಳ ಕಾರುಗಳನ್ನು ಹೊಂದಿದ್ದಾರೆಯೇ? ಹೃದಯಸ್ಪರ್ಶಿ ಉತ್ತರ ನೀಡಿದ ಮಹೀಂದ್ರ ಗ್ರೂಪ್‌ ಚೇರ್ಮನ್‌-automobile news does anand mahindra drive bmw mercedes instead of mahindra cars mahindra group chairman reply pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆನಂದ್‌ ಮಹೀಂದ್ರ ಬೇರೆ ಕಂಪನಿಗಳ ಕಾರುಗಳನ್ನು ಹೊಂದಿದ್ದಾರೆಯೇ? ಹೃದಯಸ್ಪರ್ಶಿ ಉತ್ತರ ನೀಡಿದ ಮಹೀಂದ್ರ ಗ್ರೂಪ್‌ ಚೇರ್ಮನ್‌

ಆನಂದ್‌ ಮಹೀಂದ್ರ ಬೇರೆ ಕಂಪನಿಗಳ ಕಾರುಗಳನ್ನು ಹೊಂದಿದ್ದಾರೆಯೇ? ಹೃದಯಸ್ಪರ್ಶಿ ಉತ್ತರ ನೀಡಿದ ಮಹೀಂದ್ರ ಗ್ರೂಪ್‌ ಚೇರ್ಮನ್‌

Anand Mahindra Owned Cars: ಆನಂದ್‌ ಮಹೀಂದ್ರ ಅವರು ತನ್ನ ಕಂಪನಿಯ ಮಹೀಂದ್ರ ಕಾರುಗಳನ್ನು ಹೊರತುಪಡಿಸಿ ಬಿಎಂಡಬ್ಲ್ಯು, ಮರ್ಸಿಡಿಸ್‌ ಬೆಂಝ್‌ ಕಾರುಗಳನ್ನು ಚಾಲನೆ ಮಾಡುತ್ತಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.ಇದಕ್ಕೆ ಸ್ವತಃ ಆನಂದ್‌ ಮಹೀಂದ್ರ ಮಾರುತ್ತರ ನೀಡಿದ್ದಾರೆ. ಮಹೀಂದ್ರ ಕಾರುಗಳ ಕುರಿತು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಮಹೀಂದ್ರ ಗ್ರೂಪ್‌ ಚೇರ್ಮನ್‌ ಆನಂದ್‌ ಮಹೀಂದ್ರ (PTI Photo)
ಮಹೀಂದ್ರ ಗ್ರೂಪ್‌ ಚೇರ್ಮನ್‌ ಆನಂದ್‌ ಮಹೀಂದ್ರ (PTI Photo)

Anand Mahindra Owned Cars: ಆನಂದ್‌ ಮಹೀಂದ್ರ ಅವರು ತನ್ನ ಕಂಪನಿಯ ಮಹೀಂದ್ರ ಕಾರುಗಳನ್ನು ಹೊರತುಪಡಿಸಿ ಬಿಎಂಡಬ್ಲ್ಯು, ಮರ್ಸಿಡಿಸ್‌ ಬೆಂಝ್‌ ಕಾರುಗಳನ್ನು ಚಾಲನೆ ಮಾಡಲು ಆದ್ಯತೆ ನೀಡುತ್ತಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಸ್ವತಃ ಆನಂದ್‌ ಮಹೀಂದ್ರ ಮಾರುತ್ತರ ನೀಡಿದ್ದಾರೆ. ಮಹೀಂದ್ರ ಕಾರುಗಳ ಕುರಿತು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ತಾನು ಯಾವ ಕಾರಿನಲ್ಲಿ ಕಾರು ಚಾಲನೆ ಕಲಿತೆ? ಯಾವೆಲ್ಲ ಕಾರುಗಳನ್ನು ಬಳಸಿದ್ದೇನೆ ಎಂದು ಉತ್ತರ ನೀಡಿದ್ದಾರೆ. ಇವರ ಮೇಡ್‌ ಇನ್‌ ಇಂಡಿಯಾ ಕಾರು ಪ್ರೀತಿಯನ್ನು ಕಂಡು ಸೋಷಿಯಲ್‌ ಮೀಡಿಯಾ ಬಳಕೆದಾರರು ಖುಷಿ ವ್ಯಕ್ತಪಡಿಸಿದ್ದಾರೆ.

ಏನಿದು ವೈರಲ್‌ ಪೋಸ್ಟ್‌?

ಈ ತಿಂಗಳ ಆರಂಭದಲ್ಲಿ ರತನ್‌ ದಿಲ್ಲೊನ್‌ ಎಂಬ ಸೋಷಿಯಲ್‌ ಮೀಡಿಯಾ ಬಳಕೆದಾರ ಎಕ್ಸ್‌ನಲ್ಲಿ ಒಂದು ಪೋಸ್ಟ್‌ ಮಾಡಿದ್ರು. "ಆನಂದ್‌ ಮಹೀಂದ್ರ ಅವರು ಮೇಡ್‌ ಇನ್‌ ಇಂಡಿಯಾ ಕುರಿತು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಆದರೆ, ಅವರು ತನ್ನ ಕಂಪನಿ ಮಹೀಂದ್ರ ಥಾರ್‌ ಬದಲು ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್‌ ಬೆಂಝ್‌ ಯಾಕೆ ಚಾಲನೆ ಮಾಡುತ್ತಿದ್ದಾರೆ" ಎಂದು ಫೋಟೋದ ಜತೆಗೆ ಪೋಸ್ಟ್‌ ಮಾಡಿದ್ದರು. ಎಕ್ಸ್‌ನಲ್ಲಿ ಈ ಪೋಸ್ಟ್‌ ವೈರಲ್‌ ಆಗಿತ್ತು. ಈ ಪೋಸ್ಟ್‌ 337.3K ವೀಕ್ಷಣೆ ಪಡೆದಿತ್ತು ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿದ್ದವು.

ಈ ವೈರಲ್‌ ಪೋಸ್ಟ್‌ಗೆ ಆಟೋಕಾರ್‌ ಇಂಡಿಯಾದ ಹೊರ್ಮಜಾದ್ ಸೊರಾಬ್ಜಿ ಪ್ರತಿಕ್ರಿಯೆ ನೀಡಿ "ಆನಂದ್‌ ಅವರ ಮಹೀಂದ್ರ ಕಾರು ಪ್ರೀತಿ" ಕುರಿತು ತಿಳಿಸಿದ್ದರು. ಆನಂದ್‌ ಮಹೀಂದ್ರ ಕಳೆದ 30 ವರ್ಷಗಳಿಂದ ಕೇವಲ ಮಹೀಂದ್ರ ವಾಹನಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದರು. ಇವರು ಹೆಚ್ಚಾಗಿ ಮಹೀಂದ್ರ ವಾಹನಗಳಲ್ಲಿಯೇ ಪ್ರಯಾಣಿಸಲು ಆದ್ಯತೆ ನೀಡುತ್ತಾರೆ ಎಂದು ಕಾಮೆಂಟ್‌ ಮಾಡಿದ್ದರು.

ಈ ವೈರಲ್‌ ಪೋಸ್ಟ್‌ಗೆ ಆನಂದ್‌ ಮಹೀಂದ್ರ ಪ್ರತಿಕ್ರಿಯೆ ಏನು?

ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಕಾರು ಬಳಕೆ ಕುರಿತು ಪೋಸ್ಟ್‌ ವೈರಲ್‌ ಆಗುತ್ತಿರುವ ಸುದ್ದಿ ಆನಂದ್‌ ಮಹೀಂದ್ರರಿಗೂ ತಲುಪಿದೆ. ಇದಕ್ಕೆ ಇವರು ಮಾರುತ್ತರ ನೀಡಿದ್ದಾರೆ. "ನನಗೆ ನನ್ನ ಅಮ್ಮ ಹಗುರ ನೀಲಿ ಬಣ್ಣದ ಪ್ರೀಮಿಯರ್‌ ಕಾರು (ನಿಕ್‌ ನೇಮ್‌: ಬ್ಲೂಬರ್ಡ್‌) ಚಲಾಯಿಸಲು ಕಲಿಸಿದ್ದರು. ಇದಾದ ಬಳಿಕ ನಾನು ಮಹೀಂದ್ರ ಸಿಜೆ3 ಯುವಿಯನ್ನು ನನ್ನ ಕೊಡಗಿನಲ್ಲಿರುವ ಮನೆಯಲ್ಲಿ ಬಳಸಲು ಆರಂಭಿಸಿದೆ. 1991ರಲ್ಲಿ ಮಹೀಂದ್ರ ಆಂಡ್‌ ಮಹೀಂದ್ರ ಕಂಪನಿಗೆ ಸೇರಿದ ಬಳಿಕ ನನಗೆ ಹಿಂದೂಸ್ತಾನ್‌ ಮೋಟಾರ್ಸ್‌ನ ಕಾಂಟೆಸ್ಸಾ ಕಾರನ್ನು ನೀಡಲಾಯಿತು. ಇದಾದ ಬಳಿಕ ನಾನು ಅರ್ಮದಾ ಬಳಸಲು ಆರಂಭಿಸಿದೆ. ಕೆಲವು ವರ್ಷಗಳ ಬಳಿಕ ಬೊಲೆರೊ, ಸ್ಕಾರ್ಪಿಯೊ ಕ್ಲಾಸಿಕ್‌, ಎಕ್ಸ್‌ಯುವಿ 500 ಮತ್ತು ಈಗ ಕೆಂಪು ಬಣ್ಣದ ಸ್ಕಾರ್ಪಿಯೊ ಎನ್‌ ಬಳಸುತ್ತಿದ್ದೇನೆ. ಒಮ್ಮೊಮ್ಮೆ ನಾನು ನನ್ನ ಪತ್ನಿಯ ಎಕ್ಸ್‌ಯುವಿ 700 ಬಳಸುತ್ತೇನೆ" ಎಂದು ಆನಂದ್‌ ಮಹೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ವೈರಲ್‌ ಪೋಸ್ಟ್‌ ಬಳಸಿದ್ದು ಫೇಕ್‌ ಫೋಟೋ

ರತನ್‌ ದಿಲ್ಲೊನ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋದ ಕುರಿತು ಆನಂದ್‌ ಮಹೀಂದ್ರ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಆಟೋ ಕಾರ್‌ ಮ್ಯಾಗಜಿನ್‌ನಲ್ಲಿ ವಿದೇಶಿ ಕಾರು ಬಳಸಿರುವಂತೆ ಕಾಣಿಸಿರುವ ಈ ಫೋಟೋ ನಿಜವಲ್ಲ. ಆ ಫೋಟೋವನ್ನು ಮಾಂಟೆರಿ ಕಾರ್‌ ವೀಕ್‌ನಲ್ಲಿ ಕಿಕ್ಕಿಸಲಾಗಿದೆ. ನಾವು ಬಟ್ಟಿಸ್ಟಾ ಎಲೆಕ್ಟ್ರಿಕ್‌ ಹೈಪರ್‌ ಕಾರು ಲಾಂಚ್‌ ಮಾಡುವ ಸಂದರ್ಭದ ಫೋಟೋ ಅದು. ಫೋಟೋದಲಿ ಹಿಂಬದಿಯಲ್ಲಿ ಕಾಣಿಸುತ್ತಿರುವುದೇ ಮಹೀಂದ್ರ ಕಂಪನಿಯ ವಿಂಟೆಂಜ್‌ ಕ್ಲಾಸಿಕ್‌ ಸಿಸಿಟಲಿಯಾ ಕಾರು " ಎಂದು ಆನಂದ್‌ ಮಹೀಂದ್ರ ಹೇಳಿದ್ದಾರೆ.