ಕನ್ನಡ ಸುದ್ದಿ  /  ಜೀವನಶೈಲಿ  /  Skoda Kodiaq: ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಬೆಲೆಯಲ್ಲಿ 2 ಲಕ್ಷ ರೂಪಾಯಿ ಕಡಿತ; ಡಿಸ್ಕೌಂಟ್ ಬಳಿಕ ಕಾರಿನ ಬೆಲೆ ಹೀಗಿದೆ

Skoda Kodiaq: ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಬೆಲೆಯಲ್ಲಿ 2 ಲಕ್ಷ ರೂಪಾಯಿ ಕಡಿತ; ಡಿಸ್ಕೌಂಟ್ ಬಳಿಕ ಕಾರಿನ ಬೆಲೆ ಹೀಗಿದೆ

Raghavendra M Y HT Kannada

Mar 24, 2024 09:16 AM IST

ಸ್ಕೋಡಾ ಕೊಡಿಯಾಕ್ ಬೆಲೆಯಲ್ಲಿ 2 ಲಕ್ಷ ರೂಪಾಯಿ ಕಡಿಮೆ ಮಾಡಲಾಗಿದೆ. ಪ್ರಸ್ತುತ ಬೆಲೆಯ ವಿವರ ಇಲ್ಲಿದೆ.

    • Skoda Kodiaq Price: ಸ್ಕೋಡಾ ಕೊಡಿಯಾಕ್ ಎನ್‌ ಅಂಡ್ ಕೆ ವೇರಿಯಂಟ್ ಬೆಲೆಯಲ್ಲಿ ಬರೋಬ್ಬರಿ 2 ಲಕ್ಷ ರೂಪಾಯಿ ಕಡಿಮೆ ಮಾಡಲಾಗಿದೆ. ಬೆಲೆ ಕಡಿತದ ಬಳಿಕ ಈ ಐಷಾರಾಮಿ ಕಾರು 39.99 ಲಕ್ಷ ರೂಪಾಯಿಗೆ (ಎಕ್ಸ್‌ ಶೋರೂಂ ಬೆಲೆ) ಇಳಿದಿದೆ.
ಸ್ಕೋಡಾ ಕೊಡಿಯಾಕ್ ಬೆಲೆಯಲ್ಲಿ 2 ಲಕ್ಷ ರೂಪಾಯಿ ಕಡಿಮೆ ಮಾಡಲಾಗಿದೆ. ಪ್ರಸ್ತುತ ಬೆಲೆಯ ವಿವರ ಇಲ್ಲಿದೆ.
ಸ್ಕೋಡಾ ಕೊಡಿಯಾಕ್ ಬೆಲೆಯಲ್ಲಿ 2 ಲಕ್ಷ ರೂಪಾಯಿ ಕಡಿಮೆ ಮಾಡಲಾಗಿದೆ. ಪ್ರಸ್ತುತ ಬೆಲೆಯ ವಿವರ ಇಲ್ಲಿದೆ.

ಸ್ಕೋಡಾ ಆಟೋ ಇಂಡಿಯಾ ಭಾರತದಲ್ಲಿನ ಕೊಡಿಯಾಕ್ ವೇರಿಯಂಟ್ ಸಿರೀಸ್‌ನ ಎರಡು ರೂಪಾಂತರಗಳನ್ನು ಸದ್ದಿಲ್ಲದೆ ಕೈಬಿಟ್ಟಿದೆ. ಆರಂಭದಲ್ಲಿ ಸ್ಕೋಡಾದಿಂದ ಪ್ರಮುಖ ಮಾಡೆಲ್ ಕೊಡಿಯಾಕ್‌ನಲ್ಲಿ ಮೂರು ವೇರಿಯಂಟ್‌ಗಳು ಲಭ್ಯ ಇದ್ದವು. ಸ್ಟೈಲ್, ಸ್ಪೋರ್ಟ್ ಲೈನ್ ಹಾಗೂ ಎಲ್‌ ಅಂಡ್‌ ಕೆ ರೂಪಾಂತರಗಳು. ಇವುಗಳಲ್ಲಿ ಸ್ಕೋಡಾ ಸ್ಟೈಲ್, ಸ್ಪೋರ್ಟ್ ಲೈನ್ ಕಾರುಗಳ ಉತ್ಪಾದನೆ ಹಾಗೂ ಮಾರಾಟವನ್ನು ನಿಲ್ಲಿಸಿದೆ. ಪ್ರಸ್ತುತ ಎಲ್‌ ಅಂಡ್ ಕೆ ವೇರಿಯಂಟ್‌ ಮಾತ್ರ ಲಭ್ಯವಿದ್ದು, ಇದು ಟಾಪ್-ಎಂಡ್ ವೇರಿಯಂಟ್ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಬೇಸಿಗೆಯಲ್ಲಿ ಗರ್ಭಿಣಿಯರನ್ನು ಕಾಡಬಹುದು ನೂರಾರು ಸಮಸ್ಯೆ; ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

Mango Recipe: ಮ್ಯಾಂಗೋ ಕೇಕ್‌ನಿಂದ ಕುಲ್ಫಿವರೆಗೆ; ಬೇಸಿಗೆಗೆ ಬೆಸ್ಟ್‌ ಎನ್ನಿಸುವ ಮಾವಿನಹಣ್ಣಿನ ರೆಸಿಪಿಗಳಿವು, ನೀವೂ ಟ್ರೈ ಮಾಡಿ

Maruti Suzuki Swift vs Tata Tiago: ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಟಿಯಾಗೊ ಎರಡರಲ್ಲಿ ಯಾವುದು ಬೆಸ್ಟ್?

Weight Loss: ವರ್ಕೌಟ್‌ ಮಾಡದೇ ವೈಟ್‌ಲಾಸ್‌ ಆಗ್ಬೇಕಾ; ಬೇಸಿಗೆಯಲ್ಲಿ ಬೆವರು ಹರಿಯದೇ ತೂಕ ಇಳಿಸಿಕೊಳ್ಳಲು ಇಲ್ಲಿದೆ 8 ಸರಳ ಸಲಹೆ

ಮತ್ತೊಂದೆಡೆ ಕಂಪನಿಯು ಸ್ಕೋಡಾ ಕೊಡಿಯಾಕ್ (Skoda Kodiaq) ಎಲ್‌ ಅಂಡ್ ಕೆ ರೂಪಾಂತರದ ಕಾರಿನ ಬೆಲೆಯಲ್ಲಿ 2 ಲಕ್ಷ ರೂಪಾಯಿ ಕಡಿಮೆ ಮಾಡಿದೆ. ಈ ರಿಯಾಯಿಯ ನಂತರ ಐಷಾರಾಮಿ ಕಾರಿನ ಎಕ್ಸ್‌ಶೋರೂಂ ಬೆಲೆ 39.99 ಲಕ್ಷ ರೂಪಾಯಿ ಇದೆ. ಆದರೆ ಬೆಲೆ ಕಡಿತದ ಹಿಂದಿನ ಕಾರಣವನ್ನು ಸ್ಕೋಡಾ ಬಹಿರಂಗಪಡಿಸಿಲ್ಲ. ಆದರೆ ಎರಡು ಲಕ್ಷ ರೂಪಾಯಿ ಡಿಸ್ಕೌಂಟ್ ಮಾತ್ರ ಐಷಾರಾಮಿ ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಖರೀದಿಸಬೇಕೆಂದುಕೊಂಡವರಿಗೆ ಸ್ವಲ್ಪ ಖುಷಿ ವಿಷಯವಾಗಿದೆ. ಅಲ್ಲದೆ, ಈ ಕಾರನ್ನು ಮನೆಗೆ ತರಲು ಅತ್ಯುತ್ತಮ ಸಮಯವಾಗಿದೆ. ಟಾಪ್-ನಾಚ್ ಬಿಲ್ಡ್ ಕ್ವಾಲಿಟಿ, ಫಿಚರ್-ರಿಚ್ ಕ್ಯಾಬಿನ್‌ಗೆ ಸ್ಕೋಡಾ ಕೊಡಿಯಾಕ್ ಎಂದು ಹೆಸರಿಟ್ಟಿದೆ.

ಆರಾಮದಾಯಕವಾದ ಎರಡು ಲೈನ್ ಸೀಟ್‌ಗಳ ಜೊತೆಗೆ ಸ್ಕೋಡಾ ಕೊಡಿಯಾಕ್ ಕಾರಿನಲ್ಲಿ ಮೂರನೇ ಸಾಲಿನಲ್ಲಿ ಸೀಟ್‌ಗಳನ್ನು ಸರಿಹೊಂದಿಸಲು ಡಿಸೈನ್ ಮಾಡಲಾಗಿದೆ. ಹಿಂದಿನ ಸೀಟುಗಳನ್ನು ಅಗತ್ಯವಿದ್ದರೆ ಬಳಸಬಹುದು. ಈ ಹಿಂದೆ ಸ್ಕೋಡಾ ಕೊಡಿಯಾಕ್ ಎಲ್&ಕೆ ವೇರಿಯಂಟ್ ಕಾರಿನ ಎಕ್ಸ್‌ ಶೋ ರೂಂ ಬೆಲೆ 41.99 ಲಕ್ಷ ರೂಪಾಯಿ ಇತ್ತು. ಎರಡು ಲಕ್ಷ ರೂಪಾಯಿ ಬೆಲೆ ಕಡಿತದ ಬಳಿಕ 39.99 ಲಕ್ಷ ರೂಪಾಯಿಗೆ ಇಳಿದಿದೆ. ಬೆಲೆ ಕಡಿತದ ಹೊರತಾಗಿಯೂ ಈ ಎಸ್‌ಯುವಿಯಲ್ಲಿ ಎಲ್ಲಾ ವೈಶಿಷ್ಟ್ಯಗಳನ್ನು ನಿರ್ವಹಿಸಲಾಗಿದೆ.

ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಕಾರಿನಲ್ಲಿರುವ ವೈಶಿಷ್ಟ್ಯಗಳಿವು

ಸ್ಕೋಡಾ ಕೊಡಿಯಾಕ್ ಎನ್‌ಅಂಡ್‌ಕೆ ರೂಪಾಂತರವು ಈ ಹಿಂದೆ ರೂ 41.99 ಲಕ್ಷ (ಎಕ್ಸ್ ಶೋ ರೂಂ) ಆಗಿತ್ತು. ಬೆಲೆ ಇಳಿಕೆಯ ನಂತರ ರೂ. 39.99 ಲಕ್ಷ ಲಭ್ಯವಿದೆ. ಬೆಲೆ ಕಡಿತದ ಹೊರತಾಗಿಯೂ, ಈ SUV ನಲ್ಲಿ ಎಲ್ಲಾ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲಾಗಿದೆ. ಇದು 2.0 ಲೀಟರ್ ಟಿಎಸ್‌ಐ ಪೆಟ್ರೋಲ್ ಇಂಜಿನ್ ನಿಂದ ಚಾಲಿತವಾಗಿದ್ದು, 188 ಬಿಎಚ್‌ಪಿ ಪವರ್ ಮತ್ತು 320 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 7-ವೇಗದ ಡಿಎಸ್ಜಿ ಆಟೋಮೆಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

ಸ್ಕೋಡಾ ಈ ವರ್ಷದ ಕೊನೆಯಲ್ಲಿ ಸ್ಕೋಡಾ ಸೂಪರ್ಬ್ ಮತ್ತು ಆಕ್ಟೇವಿಯಾ ಕಾರುಗಳ ಅಪ್ಡೇಟ್ ಮಾಡೆಲ್‌ಗಳನ್ನು ಭಾರತದ ಮಾರುಕಟ್ಟೆಗೆ ತರಲಿದೆ. ಸ್ಕೋಡಾ ಸೂಪರ್ಬ್ ಕಾರನ್ನು ಕಂಪ್ಲೀಟ್ಲಿ ಬಿಲ್ಡ್ ಯೂನಿಟ್ (ಸಿಬಿಯು)ನಲ್ಲಿ ಮತ್ತೆ ಪರಿಚಯಿಸುತ್ತದೆ ಎಂದು ವರದಿಗಳು ಹೇಳುತ್ತಿವೆ. ಮತ್ತೊಂದೆಡೆ ಸ್ಕೋಡಾ ಶೀಘ್ರದಲ್ಲೇ ಎನಾಕ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

    ಹಂಚಿಕೊಳ್ಳಲು ಲೇಖನಗಳು