Fastest Trains: ಜಗತ್ತಿನ ಅತಿವೇಗದ 10 ರೈಲುಗಳಿವು, ಗಂಟೆಗೆ ಎಷ್ಟು ಸ್ಪೀಡ್? ಯಾವ್ಯಾವ ದೇಶಗಳಲ್ಲಿದೆ? ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ
Sep 28, 2024 03:42 PM IST
Fastest Trains: ಜಗತ್ತಿನ ಅತಿವೇಗದ 10 ರೈಲುಗಳಿವು
- Fastest trains in the world: ಜಗತ್ತಿನ ಅತಿವೇಗದ ಮೂರು ರೈಲುಗಳು ಚೀನಾದಲ್ಲಿವೆ. ಶಾಂಘೈ ಮಾಗ್ಲಿವ್, ಸಿಆರ್ ಹಾರ್ಮೊನಿ, ಸಿಆರ್ ಫುಕ್ಷಿಂಗ್ ಮಾತ್ರವಲ್ಲದೆ ಜರ್ಮನ್, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಇಟಲಿಯಲ್ಲೂ ಅತಿವೇಗದ ರೈಲುಗಳಿವೆ. ಇವುಗಳು ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವಂತೆ ಹೈಸ್ಪೀಡ್‌ನಲ್ಲಿ ಓಡುತ್ತವೆ.
Fastest trains in the world: ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಎಂಬ ಹಾಡು ಜನಪ್ರಿಯ. ಆದರೆ, ರೈಲು ಪ್ರಯಾಣವೆಂದರೆ ಸಾಕಷ್ಟು ಜನರು ಹಿಂಜರಿಯುತ್ತಾರೆ. ರೈಲಲ್ಲಿ ಹೋಗಲು ಹನ್ನೆರಡು ಗಂಟೆ, ಬಸ್ಸಲ್ಲಾದ್ರೆ ಎಂಟು ಗಂಟೆಯಲ್ಲಿ ರೀಚ್ ಆಗಬಹುದಿತ್ತು ಅನ್ನುವವರು ಇದ್ದಾರೆ. ಆದರೆ, ಈಗ ಕೆಲವು ರೈಲುಗಳು ಹಳೆ ಕಾಲದ ರೈಲುಗಳಂತೆ ಇಲ್ಲ. ಭಾರತದಲ್ಲಿಯೂ ವಂದೇ ಮಾತರಂ ಸೇರಿದಂತೆ ಹಲವು ವೇಗದ ರೈಲುಗಳಿವೆ. ಭಾರತದ ಕಥೆ ಹೀಗಿದ್ದರೆ, ಜಗತ್ತಿನ ಕೆಲವು ದೇಶಗಳಲ್ಲಿ ಅತ್ಯಧಿಕ ವೇಗದ ರೈಲುಗಳಿವೆ. ಇವುಗಳಿಂದಾಗಿ ಅತ್ಯಧಿಕ ದೂರದ ಊರುಗಳನ್ನು ಹೆಚ್ಚು ವಿಳಂಬವಿಲ್ಲದೆ ತಲುಪಲು ಸಾಧ್ಯವಾಗುತ್ತಿದೆ. ಜಗತ್ತಿನ ಅತಿವೇಗದ ಮೂರು ರೈಲುಗಳು ಚೀನಾದಲ್ಲಿವೆ. ಜರ್ಮನ್, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಇಟಲಿಯಲ್ಲೂ ಅತಿವೇಗದ ರೈಲುಗಳಿವೆ. ಇವುಗಳು ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವಂತೆ ಹೈಸ್ಪೀಡ್‌ನಲ್ಲಿ ಓಡುತ್ತವೆ. ಬನ್ನಿ, ಯಾವ ದೇಶದಲ್ಲಿ ಅತ್ಯಧಿಕ ವೇಗದ ರೈಲುಗಳಿವೆ? ಅವುಗಳ ವೇಗ ಏನು? ಗಂಟೆಗೆ ಎಷ್ಟು ಕಿಲೋಮೀಟರ್ ವೇಗದಲ್ಲಿ ಸಾಗುತ್ತವೆ? ಇತ್ಯಾದಿ ವಿವರ ತಿಳಿಯೋಣ.
ರೈಲು ಎಂದರೆ ಟಾಯ್ಲೆಟ್ ವಾಸನೆ, ರೈಲು ಎಂದರೆ ಗಡಗಡ ಸದ್ದು, ರೈಲು ಎಂದರೆ ಹರಕುಮುರುಕು ಡಬ್ಬಗಳು ಎಂದು ಹೇಳುವಂತೆ ಇಲ್ಲ. ಈಗಿನ ಕೆಲವು ರೈಲುಗಳು ಐಷಾರಾಮಿ ಸೌಲಭ್ಯಗಳನ್ನು ಹೊಂದಿವೆ. ಐಷಾರಾಮಿ ಫೀಚರ್‌ಗಳನ್ನು ಹೊಂದಿವೆ. ರೈಲಿನೊಳಗೆ ಇದ್ದೇವೆಯೋ ಎಂಬ ಫೀಲ್ ನೀಡುವ ರೈಲುಗಳು ಇವೆ. ಕರ್ನಾಟಕದಲ್ಲಿ ಈಗಾಗಲೇ ವಿಸ್ಟಾಡೋಮ್ ಬೋಗಿಗಳಲ್ಲಿ ಪ್ರಯಾಣಿಸಿದವರಿಗೆ ವಾಹ್ ಎಣಿಸಿರಬಹುದು. ವಿಸ್ಟಾ ಡೋಮ್ ರೈಲಲ್ಲಿ ಮಂಗಳೂರು ಬೆಂಗಳೂರು ಪ್ರಯಾಣಿಸಿದಾಗ ಸಕಲೇಶಪುರ, ಸುಬ್ರಹ್ಮಣ್ಯದ ಸುಂದರ ಘಾಟ್ ಪ್ರದೇಶಗಳು ಕಣ್ಮನ ಸೆಳೆದಿರಬಹುದು. ವಂದೇ ಭಾರತ್ ರೈಲಿನ ಪ್ರಯಾಣವೂ ಖುಷಿ ನೀಡಿರಬಹುದು. ಆದರೆ, ಜಗತ್ತಿನ ಕೆಲವು ದೇಶಗಳ ರೈಲುಗಳು ಅತಿವೇಗದ ಜತೆಗೆ ಐಷಾರಾಮಿ ಲುಕ್‌ನಿಂದಲೂ ಜನರ ಪ್ರೀತಿಗೆ ಪಾತ್ರವಾಗಿದೆ.
ಜಗತ್ತಿನ ಅತ್ಯಂತ ವೇಗದ ರೈಲು ಯಾವುದು?
ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿಮಗೆ ಈ ಪ್ರಶ್ನೆ ಕೇಳಬಹುದು. ಚೀನಾದ ಶಾಂಘೈ ಮಾಗ್ಲಿವ್ (Shanghai Maglev) ಜಗತ್ತಿನ ಅತ್ಯಧಿಕ ವೇಗದ ರೈಲೆಂಬ ಹಿರಿಮೆಗೆ ಪಾತ್ರವಾಗಿದೆ. ಇದರ ಆಪರೇಷನಲ್ ಸ್ಪೀಡ್ ಗಂಟೆಗೆ ಗರಿಷ್ಠ 460 ಕಿ.ಮೀ. ಇದೆ. ಇದರ ದಾಖಲೆಯ ಸ್ಪೀಡ್ ಗಂಟೆಗೆ 501 ಕಿ.ಮೀ. ಇದೆ.
ಜಗತ್ತಿನ ಅತಿವೇಗದ 10 ರೈಲುಗಳು
- ಶಾಂಘೈ ಮಾಗ್ಲಿವ್: ಚೀನಾದಲ್ಲಿದೆ. ಆಪರೇಷನಲ್ ಗರಿಷ್ಠ ವೇಗ ಪ್ರತಿಗಂಟೆಗೆ 460 ಕಿ.ಮೀ. ಮತ್ತು ಗರಿಷ್ಠ ಸ್ಪೀಡ್ ರೆಕಾರ್ಟ್ ಪ್ರತಿಗಂಟೆಗೆ 501 ಕಿ.ಮೀ. ಆಗಿದೆ.
- ಸಿಆರ್ ಹಾರ್ಮೊನಿ: ಚೀನಾದಲ್ಲಿದೆ. ಆಪರೇಷನಲ್ ಗರಿಷ್ಠ ವೇಗ ಪ್ರತಿಗಂಟೆಗೆ 350 ಕಿ.ಮೀ. ಮತ್ತು ಗರಿಷ್ಠ ಸ್ಪೀಡ್ ರೆಕಾರ್ಟ್ ಪ್ರತಿಗಂಟೆಗೆ 486 ಕಿ.ಮೀ.
- ಸಿಆರ್ ಫುಕ್ಷಿಂಗ್: ಈ ರೈಲು ಕೂಡ ಚೀನಾದ್ದು. ಆಪರೇಷನಲ್ ಗರಿಷ್ಠ ವೇಗ ಪ್ರತಿಗಂಟೆಗೆ 350 ಕಿ.ಮೀ. ಮತ್ತು ಗರಿಷ್ಠ ಸ್ಪೀಡ್ ರೆಕಾರ್ಟ್ ಪ್ರತಿಗಂಟೆಗೆ 420 ಕಿ.ಮೀ.
- ಡಿಬಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ 3: ಜರ್ಮನಿಯಲ್ಲಿದೆ. ಆಪರೇಷನಲ್ ಗರಿಷ್ಠ ವೇಗ ಪ್ರತಿಗಂಟೆಗೆ 350 ಕಿ.ಮೀ. ಮತ್ತು ಗರಿಷ್ಠ ಸ್ಪೀಡ್ ರೆಕಾರ್ಟ್ ಪ್ರತಿಗಂಟೆಗೆ 368 ಕಿ.ಮೀ.
- ಎಸ್‌ಎನ್‌ಸಿಎಫ್ ಟಿಜಿವಿ (ಟ್ರೇನ್ ಎ ಗ್ರಾಂಡೆ ವಿಟೆಸೆ): ಫ್ರಾನ್ಸ್‌ನಲ್ಲಿದೆ. ಆಪರೇಷನಲ್ ಗರಿಷ್ಠ ವೇಗ ಪ್ರತಿಗಂಟೆಗೆ 320 ಕಿ.ಮೀ. ಮತ್ತು ಗರಿಷ್ಠ ಸ್ಪೀಡ್ ರೆಕಾರ್ಟ್ ಪ್ರತಿಗಂಟೆಗೆ 575 ಕಿ.ಮೀ.
- ಜೆಆರ್ ಶಿಂಕನ್ಸೆನ್: ಜಪಾನ್‌ನಲ್ಲಿದೆ. ಆಪರೇಷನಲ್ ಗರಿಷ್ಠ ವೇಗ ಪ್ರತಿಗಂಟೆಗೆ 320 ಕಿ.ಮೀ. ಮತ್ತು ಗರಿಷ್ಠ ಸ್ಪೀಡ್ ರೆಕಾರ್ಟ್ ಪ್ರತಿಗಂಟೆಗೆ 443 ಕಿ.ಮೀ.
- ಒಎನ್‌ಸಿಎಫ್ ಎಐ ಬೊರಾಕ್: ಮೊರಾಕೊದಲ್ಲಿದೆ. ಆಪರೇಷನಲ್ ಗರಿಷ್ಠ ವೇಗ ಪ್ರತಿಗಂಟೆಗೆ 320 ಕಿ.ಮೀ. ಮತ್ತು ಗರಿಷ್ಠ ಸ್ಪೀಡ್ ರೆಕಾರ್ಟ್ ಪ್ರತಿಗಂಟೆಗೆ 357 ಕಿ.ಮೀ.
- ರಿನ್ಫಿ ಎವಿಇ 103: ಸ್ಪೈನ್‌ನಲ್ಲಿದೆ. ಆಪರೇಷನಲ್ ಗರಿಷ್ಠ ವೇಗ ಪ್ರತಿಗಂಟೆಗೆ 310 ಕಿ.ಮೀ. ಮತ್ತು ಗರಿಷ್ಠ ಸ್ಪೀಡ್ ರೆಕಾರ್ಟ್ ಪ್ರತಿಗಂಟೆಗೆ 404 ಕಿ.ಮೀ.
- ಕೊರೈಲ್ ಕೆಟಿಎಕ್ಸ್ ಸಂಚಿಯನ್: ದಕ್ಷಿಣ ಕೊರಿಯಾ. ಆಪರೇಷನಲ್ ಗರಿಷ್ಠ ವೇಗ ಪ್ರತಿಗಂಟೆಗೆ 305 ಕಿ.ಮೀ. ಮತ್ತು ಗರಿಷ್ಠ ಸ್ಪೀಡ್ ರೆಕಾರ್ಟ್ ಪ್ರತಿಗಂಟೆಗೆ 421 ಕಿ.ಮೀ.
- ಟ್ರೆನಿಟಾಲಿಯಾ ಫ್ರೆಸಿಯರೊಸ್ಸಾ 1000: ಇಟಲಿಯಲ್ಲಿದೆ. ಆಪರೇಷನಲ್ ಗರಿಷ್ಠ ವೇಗ ಪ್ರತಿಗಂಟೆಗೆ 300 ಕಿ.ಮೀ. ಮತ್ತು ಗರಿಷ್ಠ ಸ್ಪೀಡ್ ರೆಕಾರ್ಟ್ ಪ್ರತಿಗಂಟೆಗೆ 389 ಕಿ.ಮೀ.