GK Today: ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು? ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  Gk Today: ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು? ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ

GK Today: ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು? ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ

GK Today: ಭಾರತ ಸರಕಾರದ ರೈಲ್ವೆ ಸಚಿವಾಲಯದ ಅಧೀನದಲ್ಲಿ ಬರುವ ಭಾರತೀಯ ರೈಲ್ವೆಯ ಕುರಿತು ವಿವಿಧ ಸ್ಮರ್ಧಾತ್ಮಕ ಪ್ರಶ್ನೆಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ರೈಲ್ವೆ, ಪೊಲೀಸ್‌, ಬ್ಯಾಂಕ್‌, ವಿವಿಧ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಭಾರತೀಯ ರೈಲ್ವೆಯ ಸಾಮಾನ್ಯ ಜ್ಞಾನ ಮಾಹಿತಿ ಇಲ್ಲಿದೆ.

GK Today: ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು? ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಇಲ್ಲಿ ನೀಡಲಾಗಿದೆ
GK Today: ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು? ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಇಲ್ಲಿ ನೀಡಲಾಗಿದೆ

GK Today: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವ ಪ್ರಶ್ನೆ ಕೇಳುತ್ತಾರೆ ಎಂದು ಊಹಿಸುವುದು ಕಷ್ಟ. ನಾಗರಿಕ ಸೇವಾ ಪರೀಕ್ಷೆಗಳಲ್ಲಿಯಂತೂ ಜಗತ್ತಿನ ಯಾವುದೇ ದೇಶದ ಯಾವುದೇ ಸಂಗತಿಯನ್ನೂ ಕೇಳಬಹುದು. ಇದೇ ಸಮಯದಲ್ಲಿ ಭಾರತೀಯ ರೈಲ್ವೆಯ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಗಳು ಇದ್ದೇ ಇರುತ್ತವೆ. ರೈಲ್ವೆ, ಪೊಲೀಸ್‌, ಬ್ಯಾಂಕ್‌, ಶಿಕ್ಷಕರ ಅರ್ಹತಾ ಪರೀಕ್ಷೆ, ಸೇನಾ ನೇಮಕಾತಿ ಪರೀಕ್ಷೆ, ವಿವಿಧ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು ಭಾರತೀಯ ರೈಲ್ವೆಯ ಕುರಿತು ಒಂದಿಷ್ಟು ಜ್ಞಾನ ಹೊಂದಿರಲೇಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಮಾತ್ರವಲ್ಲದೆ ಕ್ವಿಜ್‌ನಲ್ಲಿ ಭಾಗವಹಿಸುವವರೂ ರೈಲ್ವೆ ಕುರಿತು ಜ್ಞಾನ ಹೊಂದಿರಬೇಕು. ಭಾರತೀಯ ರೈಲ್ವೆಯ ಕುರಿತು ಒಂದಿಷ್ಟು ಪ್ರಶ್ನೋತ್ತರ ಇಲ್ಲಿದೆ.

ಭಾರತೀಯ ರೈಲ್ವೆಯಲ್ಲಿ ಪ್ರತಿನಿತ್ಯ ಎಷ್ಟು ಜನರು ಸಂಚರಿಸುತ್ತಾರೆ?

ಭಾರತೀಯ ರೈಲ್ವೆಯು ಜಗತ್ತಿನ ನಾಲ್ಕನೇ ಬೃಹತ್‌ ರೈಲ್ವೆ ಜಾಲವಾಗಿದೆ. ಅಮೆರಿಕ, ರಷ್ಯಾ, ಚೀನಾದ ಬಳಿಕ ಭಾರತ ಬೃಹತ್‌ ರೈಲ್ವೆಯಾಗಿದೆ. ಪ್ರತಿನಿತ್ಯ 2.3 ಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಾರೆ, 1060 ದಶಲಕ್ಷ ಟನ್‌ ಸರಕುಗಳು ಭಾರತೀಯ ರೈಲ್ವೆಯಲ್ಲಿ ಸಾಗಿಸಲಾಗುತ್ತದೆ.

ಇಂಡಿಯನ್‌ ರೈಲ್ವೆ ಹಳಿ ಎಷ್ಟು ಕಿಲೋಮೀಟರ್‌ ಉದ್ದ ಇದೆ?

1947ರಲ್ಲಿ ಭಾರತೀಯ ರೈಲ್ವೆಯು 54000 ಕಿಲೋಮೀಟರ್‌ ರೈಲ್ವೆ ಟ್ರ್ಯಾಕ್‌ ಹೊಂದಿತ್ತು. ಈಗ ಇದು 126,355 ಕಿಲೀಮೀಟರ್‌ ಹಳಿಗಳು ಮತ್ತು 7335 ಸ್ಟೇಷನ್‌ಗಳು ಇವೆ.

ಕರ್ನಾಟಕದ ರೈಲ್ವೆ ಮಾರ್ಗಗಳು ಎಷ್ಟು ಕಿಲೋಮೀಟರ್‌ ಇವೆ?

2022ರ ಲೆಕ್ಕದ ಪ್ರಕಾರ 3,596 ಕಿಲೋಮೀಟರ್‌ ರೈಲ್ವೆ ಟ್ರ್ಯಾಕ್‌ಗಳು ಕರ್ನಾಟಕದಲ್ಲಿ ಇವೆ. 2024ರಲ್ಲಿ ಇದು 3,836 ಕಿಲೋಮೀಟರ್‌ಗೆ ತಲುಪಿದೆ. 3,836 ಕಿ.ಮೀ.ಯಲ್ಲಿ 3,400 ಕಿ.ಮೀ. ವಿದ್ಯುತ್‌ ಸಂಪರ್ಕವಿದೆ.

ಭಾರತದ ಬೃಹತ್‌ ರೈಲ್ವೆ ಸೇತುವೆಗಳು ಎಲ್ಲಿವೆ?

ಬಾಂದ್ರಾ ವರ್ಲಿ ಸೀ ಲಿಂಕ್‌, ಮುಂಬೈ, ಪಾಟ್ನಾದ ಮಹಾತ್ಮ ಗಾಂಧಿ ಸೇತು, ಬಿಹಾರದ ವಿಕ್ರಮಶಿಲಾ ಸೇತು, ವೆಂಬನಂದ್‌ ರೈಲ್‌ ಬ್ರಿಡ್ಜ್‌ಗಳು ಬೃಹತ್‌ ರೈಲ್ವೆ ಸೇತುವೆಗಳಾಗಿವೆ.

ಭಾರತೀಯ ರೈಲ್ವೆಯ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳು ಯಾವುವು?

ಡಾರ್ಜಿಲಿಂಗ್‌ ಹಿಮಾಲಯನ್‌ ರೈಲ್ವೆ, ನೀಲಗಿರಿ ಮೌಂಟೇನ್‌ ರೈಲ್ವೆ, ಕಲ್ಕಾ ಶಿಮ್ಲಾ ರೈಲ್ವೆ, ಮಹಾರಾಜ ರೈಲ್ವೆ, ನೀರಲ್‌ ಮಾಥೆರನ್‌ ರೈಲ್ವೆಗಳು ಯುನೆಸ್ಕೊ ವಿಶ್ವ ಪಾರಂಪರಿಕ ಟ್ಯಾಗ್‌ ಪಡೆದಿವೆ.

ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು?

ಕರ್ನಾಟಕದಲ್ಲಿ ರೈಲು ಸಂಚಾರವು 1879ರಲ್ಲಿ ಆರಂಭವಾಯಿತು. ಬ್ರಿಟಿಷರ ಮದ್ರಾಸ್‌ ರೈಲ್ವೇಸ್‌ ಕಂಪನಿಯು ಮದ್ರಾಸ್‌ನ ರೋಯಾಪುರಂನಿಂದ ಬೆಂಗಳೂರಿನ ಕಂಟೋನ್ಮೆಂಟ್‌ಗೆ ರೈಲು ಆರಂಭಿಸಿದರು. ಇದಾದ ಬಳಿಕ ಮೈಸೂರು ಅರಸರು ಮೈಸೂರಿಗೆ ರೈಲು ವ್ಯವಸ್ಥೆ ಇದ್ದರೆ ಉತ್ತಮ ಎಂದು ಮೈಸೂರು ಸ್ಟೇಟ್‌ ರೈಲ್ವೇಸ್‌ ಕಂಪನಿಯನ್ನು ಸ್ಥಾಪಿಸಿದರು. 1882ರಲ್ಲಿ ಬೆಂಗಳೂರು ಮೈಸೂರು ರೈಲು ಮಾರ್ಗವು ಪ್ರಯಾಣಕ್ಕೆ ಮುಕ್ತವಾಯಿತು. ಆ ಸಮಯದಲ್ಲಿ ಬೆಂಗಳೂರು ನಗರ ಮೈಸೂರು ಸಂಸ್ಥಾನದಲ್ಲಿತ್ತು.  ಬೆಂಗಳೂರು ಕಂಟೋನ್ಮೆಂಟ್ ಬ್ರಿಟಿಷರ ಅಧೀನದಲ್ಲಿತ್ತು. ಹೀಗಾಗಿ ಬ್ರಿಟಿಷರು ರೈಲನ್ನು ಮದ್ರಾಸ್‌ನಿಂದ ಬೆಂಗಳೂರು ದಂಡು ಪ್ರದೇಶಕ್ಕೆ ಹಾಕಿದರು. ಮೈಸೂರು ರಾಜರು ರೈಲನ್ನು ಮೈಸೂರಿನಿಂದ ಬೆಂಗಳೂರು ನಗರ, ಅಂದರೆ ಈಗಿನ ಮೆಜೆಸ್ಟಿಕ್ ಬಳಿಯಿರುವ ರೈಲು ನಿಲ್ದಾಣದ ತನಕ ಹಾಕಿಸಿದರು. ಬೆಂಗಳೂರು ನಗರ ಮತ್ತು ಬೆಂಗಳೂರು ಕಂಟೋನ್ಮೆಂಟ್ ಮಧ್ಯೆ ರೈಲಿನ ಹಳಿ ಇರಲಿಲ್ಲ, ಸಂಪರ್ಕವೂ ಇರಲಿಲ್ಲ ಎಂದು ಕೋರಾದಲ್ಲಿ ಮಾಹಿತಿ ನೀಡಲಾಗಿದೆ.

Whats_app_banner