ಕನ್ನಡ ಸುದ್ದಿ  /  ಜೀವನಶೈಲಿ  /  Upcoming Suv Cars: ಹೊಸ ವರ್ಷಕ್ಕೆ ಭಾರತದಲ್ಲಿ ಲಾಂಚ್‌ ಆಗಲಿರುವ 5 ಟಾಪ್‌ Suv ಕಾರುಗಳಿವು

Upcoming SUV Cars: ಹೊಸ ವರ್ಷಕ್ಕೆ ಭಾರತದಲ್ಲಿ ಲಾಂಚ್‌ ಆಗಲಿರುವ 5 ಟಾಪ್‌ SUV ಕಾರುಗಳಿವು

HT Kannada Desk HT Kannada

Dec 29, 2023 02:58 PM IST

ಹೊಸ ವರ್ಷಕ್ಕೆ ಭಾರತದಲ್ಲಿ ಲಾಂಚ್‌ ಆಗಲಿರುವ 5 ಟಾಪ್‌ SUV ಕಾರುಗಳು

    • Top 5 Upcoming SUV Cars: 2024ರ ಆರಂಭದಲ್ಲೇ ಭಾರತದಲ್ಲಿ ಹೊಸ ಮತ್ತು ಫೇಸ್‌ಲಿಫ್ಟೆಡ್‌ SUV ಕಾರುಗಳು ಬಿಡುಗಡೆಯಾಗಲಿದೆ. ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್, ಕಿಯಾ ಸೊನೆಟ್ ಫೇಸ್‌ಲಿಫ್ಟ್, ಟಾಟಾ ಕರ್ವ್‌ವಿ, ಮಹೀಂದ್ರ ಥಾರ್ 5-ಡೋರ್ ಮತ್ತು ನಿಸ್ಸಾನ್ ಎಕ್ಸ್-ಟ್ರಯಲ್ ಕಾರುಗಳು ಟಾಪ್‌ 5 SUV ಕಾರುಗಳ ಪಟ್ಟಿಯಲ್ಲಿವೆ.
ಹೊಸ ವರ್ಷಕ್ಕೆ ಭಾರತದಲ್ಲಿ ಲಾಂಚ್‌ ಆಗಲಿರುವ 5 ಟಾಪ್‌ SUV ಕಾರುಗಳು
ಹೊಸ ವರ್ಷಕ್ಕೆ ಭಾರತದಲ್ಲಿ ಲಾಂಚ್‌ ಆಗಲಿರುವ 5 ಟಾಪ್‌ SUV ಕಾರುಗಳು (PC: Kia, Tata, Ht Auto)

ಭಾರತದ ಆಟೋಮೊಬೈಲ್‌ ಮಾರುಕಟ್ಟೆಯಲ್ಲೀಗ SUV ಕಾರುಗಳದ್ದೇ ಕಾರುಬಾರು. ದಿನೇ ದಿನೇ ಆಟೋಮೊಬೈಲ್‌ ಕ್ಷೇತ್ರ ಬೆಳೆಯುತ್ತಿದೆ. ಹಲವು ಕಂಪನಿಗಳ ವಿವಿಧ ಮಾದರಿಯ ಕಾರುಗಳು ಭಾರತದ ರಸ್ತೆಯ ಮೇಲೆ ಓಡಾಡುತ್ತಿವೆ. ಇನ್ನೇನು 2024ಕ್ಕೆ ಕಾಲಿಡುತ್ತಿದ್ದೇವೆ. ಹಲವು ಕಾರುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಹಾಗಾಗಿ ಹಲವಾರು ಕಾರು ತಯಾರಕ ಕಂಪನಿಗಳು ಬೇಡಿಕೆಯನ್ನು ಪೂರೈಸಲು ಹೊಸ ಮತ್ತು ಫೇಸ್‌ಲಿಫ್ಟೆಡ್‌ SUV ಮಾದರಿಯ ಕಾರುಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದ್ದಾರೆ. ಹೊಸ ವರ್ಷ 2024 ರಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡಲಿರುವ ಹಾಗೇ ನಿರೀಕ್ಷೆ ಹೆಚ್ಚಿಸಿದ 5 SUV ಗಳ ಪರಿಚಯ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

National Dengue Day: ಬಿಸಿಲು-ಮಳೆಯ ನಡುವೆ ಹೆಚ್ಚಬಹುದು ಡೆಂಗ್ಯೂ ಪ್ರಕರಣ; ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

ಸೈಲೆಂಟ್ ಕಿಲ್ಲರ್ ವಿರುದ್ಧ ಹೋರಾಡುವುದು: ಮೈಕ್ರೋ ಲ್ಯಾಬ್ಸ್ ರಾಷ್ಟ್ರವ್ಯಾಪಿ ಅಧಿಕ ರಕ್ತದೊತ್ತಡ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತದೆ

ಟೂರ್ ಎಂಜಾಯ್ ಮಾಡುವ ಆಸೆ ಇರುವವರಿಗೆ ಅರ್ಥ ಮಾಡಿಕೊಳ್ಳಲೇಬೇಕಾದ 10 ಅಂಶಗಳು: ಹೀಗೆ ಮಾಡಿದ್ರೆ ನಿಮಗೂ ಖುಷಿ, ಜೊತೆಗೆ ಬಂದವರಿಗೂ ನೆಮ್ಮದಿ

1. 2024 ಹುಂಡೈ ಕ್ರೆಟಾ ಫೇಸ್‌ಲಿಫ್ಟ್‌

ಹುಂಡೈ ತನ್ನ ಅತಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ SUV ಕಾರಾದ ಕ್ರೆಟಾದ ಫೇಸ್‌ಲಿಫ್ಟೆಡ್‌ ಆವೃತ್ತಿಯನ್ನು ಪರಿಚಯಿಸಲು ಸಿದ್ಧವಾಗಿದೆ. ಅದು ಜನವರಿ 16, 2024 ಕ್ಕೆ ಬಿಡುಗಡೆ ಮಾಡಲಿದೆ. ಹುಂಡೈನ ಕ್ರೆಟಾ, ಮಾರುತಿ ಸುಜುಕಿ ಗ್ರಾಂಡ್‌ ವಿಟಾರಾ ಮತ್ತು ಕಿಯಾ ಸೆಲ್ಟೋಸ್‌ನೊಂದಿಗೆ ಸ್ಪರ್ಧೆ ನಡೆಸುತ್ತಿದೆ. ಹಾಗಾಗಿ ಅದು ಕಾರಿನ ಒಳಗೆ ಮತ್ತು ಹೊರಗೆ ಗಮನಾರ್ಹ ರೀತಿಯಲ್ಲಿ ನವೀಕರಿಸಿಕೊಳ್ಳುತ್ತಿದೆ. ಇದು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಅದರಲ್ಲಿ ಚಾಲಕರಿಗೆ ಸಹಾಯವಾಗುವ ಸುಧಾರಿತ ವ್ಯವಸ್ಥೆಯಾದ ADAS (ಅಡ್ವಾನ್ಸ್‌ಡ್‌ ಡ್ರೈವರ್‌ ಅಸಿಸ್ಟೆಂಟ್‌ ಸಿಸ್ಟಮ್‌) ಅನ್ನು ಪರಿಚಯಿಸಲಿದೆ. ಕಿಯಾ ಸೆಲ್ಟೋಸ್‌ನ ಜೊತೆ ಸ್ಪರ್ಧಿಸುತ್ತಿರುವದರಿಂದ ಇದು 1.5 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಅನ್ನು ಅಳವಡಿಸಿಕೊಂಡಿದೆ.

ಇದನ್ನೂ ಓದಿ: Xiaomi SU7 : ಇಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಷಓಮಿ ಎಸ್‌ಯು7 ಪ್ರವೇಶ, 800 ಕಿಮೀ ರೇಂಜ್‌ನ ಚೊಚ್ಚಲ ಇ-ಕಾರು

2. 2024 ಕಿಯಾ ಸೊನೆಟ್‌ ಫೇಸ್‌ಲಿಫ್ಟ್‌

ಕಿಯಾ ತನ್ನ ಕ್ಯಾಂಪಾಕ್ಟ್‌ SUV ಯಾದ ಸೊನೆಟ್‌ ಅನ್ನು ನವೀಕರಿಸಿ ಜನವರಿ 2024ಕ್ಕೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ಇದರ ಬುಕಿಂಗ್‌ ಸಹ ಪ್ರಾರಂಭವಾಗಿದೆ. ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್‌, ಹುಂಡೈ ವೆನ್ಯೂ ಮತ್ತು ಮಹೀಂದ್ರಾ XUV 300 ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ನಿಂತಿದೆ. ಫೇಸ್‌ಲಿಫ್ಟೆಡ್‌ ಸೊನೆಟ್‌ನಲ್ಲಿ ಸುರಕ್ಷತೆಗಾಗಿ ಆರು ಬ್ಯಾಗ್‌ಗಳನ್ನು, ಎಲ್‌ಇಡಿ ಸೌಂಡ್‌ ಆಂಬಿಯಂಟ್‌ ಲೈಟಿಂಗ್‌, ನ್ಯಾವಿಗೇಷನ್‌ಗಾಗಿ 10.25 ಇಂಚಿನ ಎಚ್‌ಡು ಟಚ್‌ಸ್ಜ್ರೀನ್‌ ಮತ್ತು 10.25 ಇಂಚಿನ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಪ್ಯಾನೆಲ್‌ ಮುಂತಾದ ಸರಣಿ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸರೌಂಡ್‌ ವ್ಯೂ ಮಾನಿಟರ್‌ ಹೊಂದಿರುವುದು ಚಾಲಕರಿಗೆ ನೆರವಾಗಲಿದೆ. 70 ಕ್ಕೂ ಹೆಚ್ಚು ಸಂಪರ್ಕ ಸಾಧನ ಕಾರ್‌ ವೈಶಿಷ್ಟ್ಯಗಳನ್ನು ಹೊಂದಿದೆ. ಅದರಲ್ಲಿ 25 ಸುರಕ್ಷತಾ ವೈಶಿಷ್ಟ್ಯಗಳಿದ್ದು 10 ADAS ವೈಶಿಷ್ಟ್ಯಗಳು ಸೇರಿವೆ.

3. ಟಾಟಾ ಕರ್ವ್‌ವಿ

ಟಾಟಾ ಮೋಟಾರ್ಸ್‌ನ ಕರ್ವ್‌ವಿ 2024 ಕ್ಕೆ ಬಿಡುಗಡೆಯಾದ ನಂತರ ಗೇಮ್‌ ಚೇಂಜ್‌ ಆಗುವ ನಿರೀಕ್ಷೆಯಿದೆ. ಇದು ಹುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಕಿಯಾ ಸೆಲ್ಟೋಸ್‌ ಅನ್ನು ತನ್ನ ಪ್ರತಿಸ್ಪರ್ಧಿ ಎಂದು ಗುರುತಿಸಿಕೊಂಡಂತಿದೆ. ಟಾಟಾ ಕರ್ವ್‌ವಿ ICE ಮತ್ತು EV ಎರಡೂ ರೂಪಗಳಲ್ಲಿ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಈ ಕಾರಿನ ನಿರ್ದಿಷ್ಟ ವೈಶಿಷ್ಟ್ಯಗಳು ಇನ್ನೂ ಬಹಿರಂಗವಾಗಿಲ್ಲ. ಆದರೂ ಆಲ್‌ ಇಲೆಕ್ಟ್ರಿಕ್‌ ಆವೃತ್ತಿ ಕಾರು 400 ರಿಂದ 500 ಕಿಮೀ ವ್ಯಾಪ್ತಿ ಕ್ರಮಿಸುವ ನಿರೀಕ್ಷೆಯಿದೆ. ಈ ಪರಿಸರ ಪ್ರಜ್ಞೆ ಇರುವ ಚಾಲಕರ ನೆಚ್ಚಿನ ಆಯ್ಕೆಯಾಗಬಹುದು.

4. ಮಹೀಂದ್ರ ಥಾರ್‌ 5 ಡೋರ್‌

ಮಹೀಂದ್ರಾ ತನ್ನ ಥಾರ್‌ 5 ಡೋರ್‌ ಕಾರ್‌ ಅನ್ನು 2024 ಕ್ಕೆ ಬಿಡುಗಡೆ ಮಾಡುವುದನ್ನು ಧೃಡಪಡಿಸಿದೆ. ಇದು ಮಾರುತಿ ಸುಜುಕಿ ಜಿಮ್ನಿ ಮತ್ತು ಮುಂಬರುವ ಫೋರ್ಸ್‌ ಗುರ್ಖಾ 5 ಡೋರ್‌ ನ ಪ್ರತಿಸ್ಪರ್ಧಿಯಾಗಿ ಬರಲಿದೆ. ಮಹೀಂದ್ರಾ ಥಾರ್‌ 5 ಡೋರ್‌ ವೃತ್ತಾಕಾರದ ಎಲ್‌ಇಡಿ DRL ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು, ಹೊಸ ವಿನ್ಯಾಸದ ವಿಶ್ರಲೋಹದ ಚಕ್ರಗಳು (ಎಲಾಯ್‌ ವ್ಹೀಲ್‌) ಎಲೆಕ್ಟ್ರಿಕ್‌ ಸನ್‌ರೂಫ್‌, ಹೊಸ ಇನ್ಫೋಟೈನ್ಮೆಂಟ್‌ ವ್ಯವಸ್ಥೆ, ಆಧುನಿಕ ಉಪಕರಣಗಳ ಕ್ಲಸ್ಟರ್‌ ಮುಂತಾದ ಹೊಸ ನವೀಕರಣಗಳು ಇದರಲ್ಲಿರಲಿದೆ.

ಇದನ್ನೂ ಓದಿ: Celebrity Car: ಹೊಸ ಮರ್ಸಿಡಿಸ್‌ ಮೆಬಾಕ್‌ ಕಾರು ಖರೀದಿಸಿದ ಶಾಹಿದ್‌ ಕಪೂರ್‌- ಮೀರಾ ರಜಪೂತ್‌; 3.5 ಕೋಟಿ ದರದ ಕಾರಲ್ಲೇನಿದೆ ವಿಶೇಷ

5. ನಿಸ್ಸಾನ್ X–ಟ್ರಯಲ್

ನಿಸ್ಸಾನ್‌ನ ಕಾಂಪ್ಯಾಕ್ಟ್‌ SUV ಕಾರಾದ ಮ್ಯಾಗ್ನೈಟ್‌ನ ಯಶಸ್ಸಿನ ನಂತರ ನಿಸ್ಸಾನ್ ಎಕ್ಸ್-ಟ್ರಯಲ್ ಅನ್ನು ಮರುಪರಿಚಯಿಸುವ ನಿರೀಕ್ಷೆಯಿದೆ. ಅದು ಮಾರ್ಚ್ 2024 ರ ನಂತರ ಭಾರತದ ಮಾರುಕಟ್ಟೆ ಪ್ರವೇಶಿಸಬಹುದು. ಇದು ಸದ್ಯ ಭಾರತದಲ್ಲಿ ಫೋರ್ತ್‌ ಜೆನ್‌ ನಿಸ್ಸಾನ್‌ ಎಕ್ಸ್-ಟ್ರಯಲ್ ಪರೀಕ್ಷೆಗೆ ಒಳಪಡುತ್ತಿದೆ. ಅದು ಅಲೈಯನ್ಸ್ CMF-C ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಸ್ಟ್ರಾಂಗ್‌ ಹೈಬ್ರಿಡ್ ಮತ್ತು ಮೈಲ್ಡ್‌ ಹೈಬ್ರಿಡ್ ಸಿಸ್ಟಮ್‌ಗಳನ್ನು ನೀಡುತ್ತದೆ. 12.3-ಇಂಚಿನ ಡಿಜಿಟಲ್ ಕ್ಲಸ್ಟರ್‌ನ ಟಚ್‌ಸ್ಕ್ರೀನ್, ADAS ತಂತ್ರಜ್ಞಾನ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ನಿಸ್ಸಾನ್‌ ಎಕ್ಸ್-ಟ್ರಯಲ್ ಐಷಾರಾಮಿ ಅನುಭವ ಮತ್ತು ತಾಂತ್ರಿಕವಾಗಿ ಮುಂದುವರಿದ ಚಾಲನಾ ಅನುಭವವನ್ನು ಗ್ರಾಹಕರಿಗೆ ಒದಗಿಸುವ ಗುರಿಯನ್ನು ಹೊಂದಿದೆ.

    ಹಂಚಿಕೊಳ್ಳಲು ಲೇಖನಗಳು