ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಇದೆಯಾ? ಜನವರಿವರೆಗೆ ಕಾಯಿರಿ; ಶೀಘ್ರದಲ್ಲೇ ಬಿಡುಗಡೆ ಆಗಲಿವೆ ಈ 5 ಫೋನ್‌ಗಳು
Smartphones: ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕೆಂಬ ಪ್ಲಾನ್ ಇದೆಯಾ? ಹಾಗಾದರೆ ಜನವರಿಯವರೆಗೆ ಕಾಯಿರಿ. ವಿವೊ, ಒನ್‌ಪ್ಲಸ್, ಸ್ಯಾಮಸಂಗ್ ಮುಂತಾದ ಕಂಪನಿಗಳು ಹೊಸ ಫೋನ್‌ಗಳನ್ನು ಲಾಂಚ್ ಮಾಡಲು ವೇದಿಕೆ ಸಜ್ಜುಗೊಳಿಸಿಕೊಂಡಿವೆ.
ಗ್ಯಾಜೆಟ್ ಲೋಕವೇ ಹಾಗೆ. ಅಲ್ಲಿ ಹೊಸ ಹೊಸ ತಂತ್ರಜ್ಞಾನ, ಸಾಧನಗಳು ಪರಿಚಯವಾಗುತ್ತಲೇ ಇರುತ್ತವೆ. ಎಷ್ಟೋ ಸಾಧನಗಳು ಯಾವಾಗ ಬಿಡುಗಡೆ ಮಾಡಬೇಕೆಂದು ಮೊದಲೇ ನಿರ್ಧಾರಿತವಾಗಿರುತ್ತದೆ. ಕಂಪನಿಗಳು ತಮ್ಮ ಹೊಸ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮೊದಲೇ ಪ್ಲಾನ್ ಮಾಡಿರುತ್ತಾರೆ. ವಿವೋ, ಒನ್‌ಪ್ಲಸ್, ಸ್ಯಾಮಸಂಗ್, ಆಸಿಸ್‌ನಂತಹ ಟೆಕ್ ದೈತ್ಯ ಕಂಪನಿಗಳು ಸಹ ಹೊಸ ವರ್ಷಕ್ಕೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಸಿದ್ಧವಾಗಿವೆ. ನೀವು ಸ್ಮಾರ್ಟ್‌ಫೋನ್ ಖರೀದಿಸಬೇಕೆಂದಿದ್ದರೆ ಜನವರಿ 2024ರವರೆಗೆ ಕಾಯಿರಿ. ಕಂಪನಿಗಳು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಲು ಸಿದ್ದತೆ ನಡೆಸಿವೆ. ಕೆಲವು ಕಂಪನಿಗಳು ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿವೆ. ಹಾಗಾಗಿ ಹೊಸ ವರ್ಷಕ್ಕೆ ಹೊಸ ಸ್ಮಾರ್ಟ್‌ಫೋನ್ ಅನ್ನು ನೀವು ಖರೀದಿಸಬಹುದಾಗಿದೆ.
ಜನವರಿ 2024ಕ್ಕೆ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು
1. ರೆಡ್‌ಮಿ ನೋಟ್ 13 5ಜಿ ಸರಣಿ
* ಶಿಯೋಮಿ ತನ್ನ ಮಿಡ್ ರೇಂಜ್ ಸ್ಮಾರ್ಟ್‌ಫೋನ್ ಆದ ರೆಡ್‌ಮಿ ನೋಟ್ 13 5ಜಿ ಸರಣಿಯನ್ನು ಜನವರಿ 4 ರಂದು ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ರೆಡ್‌ಮಿ ನೋಟ್ 13 5ಜಿ ಸರಣಿ ಸ್ಮಾರ್ಟ್‌ಫೋನ್‌ನಲ್ಲಿ ಈ ಕೆಳಗಿನ ವೈಶಿಷ್ಟ್ಯಗಳು ಇರಬಹುದೆಂದು ಹೇಳಲಾಗುತ್ತಿದೆ.
* ರೆಡ್‌ಮಿ ನೋಟ್ 13 5ಜಿ ವೆನಿಲ್ಲಾ ರೂಪಾಂತರವು 2400X1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಇರುವ 6.67-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ.
* ಇದು 120Hz ವರೆಗಿನ ರಿಫ್ರೆಶ್ ದರ ಮತ್ತು 240Hz ವರೆಗಿನ ಸ್ಪರ್ಶ ಮಾದರಿ ದರವನ್ನು ಒಳಗೊಂಡಿದ್ದು ಬಳಕೆದಾದರಿಗೆ ಯಾವುದೇ ಅಡೆತಡೆಗಳಲ್ಲಿದ ಅನುಭವವನ್ನು ನೀಡಲಿದೆ ಎಂಬುದನ್ನು ಇದು ಖಾತ್ರಿಪಡಿಸುತ್ತದೆ.
* ಮಧ್ಯಮ ಶ್ರೇಣಿಯ ಫೋನ್ ಆದ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್‌ನೊಂದಿಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಗ್ರಾಫಿಕ್ಸ್ ಮತ್ತು ತೀವ್ರ ಕಾರ್ಯಗಳನ್ನು ನಿರ್ವಹಿಸಲು ಇದು Mali-G57 MC2 GPU ನ ಸಪೋರ್ಟ್ ಪಡೆದುಕೊಳ್ಳಲಿದೆ.
* 8GB ವರೆಗೆ LPDDR4X RAM ಮತ್ತು 256GB ವರೆಗಿನ UFS 2.2 ಸಂಗ್ರಹಣೆಯನ್ನು ಒಳಗೊಂಡಿರುತ್ತದೆ ಎಂದು ಊಹಿಸಲಾಗಿದೆ.
* ಇನ್ನು ಇದರ ಕ್ಯಾಮರಾ ವಿಶೇಷಣಗಳು 108MP ಮುಖ್ಯ ಕ್ಯಾಮರಾ, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸಂವೇದಕವನ್ನು ಒಳಗೊಂಡಿರುವ ಪ್ರಭಾವಶಾಲಿ ಸೆಟಪ್ ಹೊಂದಿದ್ದು, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಯಿದೆ.
2. ಆಸಸ್ ರೊಗ್ 8 ಸರಣಿ
ಆಸಸ್ ತನ್ನ ರೊಗ್ 8 ಸರಣಿ ಸ್ಮಾರ್ಟ್‌ಫೋನ್ ಅನ್ನು ಜನವರಿ 9, 2024 ಕ್ಕೆ ಜಾಗತಿಕವಾಗಿ ಬಿಡುಗಡೆ ಮಾಡಲಿದೆ ಎಂದು ದೃಢಪಡಿಸಿದೆ.
* ಇದು ಆಸಸ್ 7 ಸರಣಿಯ ನಂತರದ ಸರಣಿ ಆಗಿದೆ. ಬಾಕ್ಸಿ ವಿನ್ಯಾಸ ಮತ್ತು ಕನಿಷ್ಠ ಬೆಜೆಲ್‌ಗಳೊಂದಿಗೆ ಹೋಲ್ ಪಂಚ್ ಡಿಸ್‌ಪ್ಲೇ ಹೊಂದಿದೆ ಎಂಬುದು ಈಗಾಗಲೇ ಸೋರಿಕೆಯಾದ ಚಿತ್ರಗಳಿಂದ ತಿಳಿದುಬರುತ್ತಿದೆ.
* ಇದು ಹಿಂಭಾಗದಲ್ಲಿ ಲಂಬವಾಗಿ ಜೋಡಿಸಲಾದ ಚೌಕಾಕಾರದ ಕ್ಯಾಮೆರಾ ಸೆಟಪ್ ಜೊತೆಗೆ ಆರ್‌ಜಿಬಿ-ಲಿಟ್ ROG ಲೋಗೋ ಇರಲಿದೆ. ರೆಬೆಲ್ಲ ಗ್ರೇ ಎಂಬುದು ನಿರೀಕ್ಷಿತ ಬಣ್ಣವಾಗಿದೆ.
* ಗ್ಯಾಜೆಟ್‌ಗಳು 360 ರ ವರದಿಯ ಪ್ರಕಾರ, ಆಸಸ್ ರೊಗ್ ಫೋನ್ 8 ಸರಣಿಯು ROG UI ಜೊತೆಗೆ Android 14 ಅನ್ನು ಬೆಂಬಲಿಸುತ್ತದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿರುವ 6.78-ಇಂಚಿನ ಫುಲ್ HD+ AMOLED ಡಿಸ್‌ಪ್ಲೇಯನ್ನು ಹೊಂದಿದೆ.
* 165Hz ವರೆಗೆ ರಿಫ್ರೆಶ್ ದರ ಮತ್ತು HDR10 ಅನ್ನು ಬೆಂಬಲಿಸುತ್ತದೆ ಎಂಬ ವದಂತಿಗಳಿದ್ದು, ಇದು ಬಳಕೆದಾರರಿಗೆ ದೃಶ್ಯ ಅನುಭವವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: WhatsApp Scam: ವಾಟ್ಸ್‌ಆಪ್ ಸ್ಕ್ರೀನ್ ಶೇರ್ ಮಾಡುವ ಮೊದಲು ಯೋಚಿಸಿ; ನಿಮ್ಮ ಬ್ಯಾಂಕ್ ಖಾತೆಗಳು ಕ್ಷಣಾರ್ಧದಲ್ಲಿ ಬರಿದಾಗಬಹುದು
3. ಒನ್ ಪ್ಲಸ್ 12
* ಒನ್‌ಪ್ಲಸ್ ತನ್ನ ಹೊಸ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 12 ಅನ್ನು ಜನವರಿ 23ರಂದು ಜಾಗತಿಕವಾಗಿ ಬಿಡುಗಡೆ ಮಾಡಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ.
* ಈ ಸ್ಮಾರ್ಟ್‌ಫೋನ್ ಡಿಸೆಂಬರ್ 5 ರಂದು ಚೀನಾದಲ್ಲಿ ಬಿಡುಗಡೆಯಾಗಿತ್ತು. ಈಗ ಅದೇ ಫೋನ್ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.
* ಈ ಸ್ಮಾರ್ಟ್‌ಫೋನ್ ಮೂರು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ, 12 GB+256 GB, 16 GB+512 GB, ಮತ್ತು 16 GB+1 TB.
* ಒನ್‌ಪ್ಲಸ್ 12 ಚೀನಾದಲ್ಲಿ ಪೇಲ್ ಗ್ರೀನ್, ರಾಕ್ ಬ್ಲ್ಯಾಕ್ ಮತ್ತು ವೈಟ್ ಸೇರಿದಂತೆ ಹಲವಾರು ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.
* ಕ್ವಾಲ್ಕಂನ ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್ ಅನ್ನು ಮೊದಲ ಬಾರಿಗೆ ಒನ್‌ಪ್ಲಸ್‌ನಲ್ಲಿ ಬಳಸಲಾಗುತ್ತಿದೆ.
4. ವಿವೊ X100 ಸರಣಿ
* ವಿವೊ ಭಾರತದಲ್ಲಿ ವಿವೊ X100 ಸರಣಿ ಅದರ ಮುಂಬರುವ ಬಿಡುಗಡೆಯಾಗಿದೆ ಅಧಿಕೃತವಾಗಿ ಘೋಷಿಸಿದೆ. ಆದರೆ ನಿಖರವಾದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ.
* ಭಾರತದಲ್ಲಿನ ವಿವೊ X100 ಸರಣಿಯು ಮೀಡಿಯಾ ಟೆಕ್ ಡೈಮೆನ್ಸಿಟಿ 9300 SoC ಪ್ರೆಸೆಸ್ಸರ್ ಅನ್ನು ಹೊಂದಿರುತ್ತದೆ. ಇದು ಉತ್ತಮ ಕಾರ್ಯಕ್ಷಮತೆಯನ್ನು ನೀಡಲಿದೆ.
* ವಿವೊ X100 ಮತ್ತು ವಿವೊ X100 ಪ್ರೋ ಎರಡೂ ಹಿಂಬದಿಯಲ್ಲಿ ಜಿಯಾಸಿಸ್ ಬ್ರ್ಯಾಂಡಿಂಗ್‌ನ ಟ್ರಿಪಲ್ ಕ್ಯಾಮೆರಾಗಳನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಇಮೇಜಿಂಗ್ ಸಾಮರ್ಥ್ಯ ನೀಡುವ ಭರವಸೆಯಿದೆ.
* ಇದು ದೃಶ್ಯ ಸಂಸ್ಕರಣೆಯನ್ನು ಹೆಚ್ಚಿಸಿಕೊಳ್ಳಲು V3 ಇಮೇಜಿಂಗ್ ಚಿಪ್ ಅನ್ನು ಹೊಂದಿದೆ.
* ಬಳಕೆದಾರರಿಗೆ ಉತ್ತಮ ಗುಣಮಟ್ಟದ ವೀಕ್ಷಣೆಯ ಅನುಭವವನ್ನು ನೀಡಲು 8T LTPO ಡಿಸ್ಪ್ಲೇಯ ಹೊಂದಿರಲಿದೆ.
5. ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ
* ಸ್ಯಾಮ್‌ಸಂಗ್ ತನ್ನ ಮುಂಬರುವ ಗ್ಯಾಲಕ್ಸಿ S24 ಸರಣಿಯನ್ನು ಜನವರಿ 17 ರಂದು ಪರಿಚಯಿಸುವ ಸಾಧ್ಯತೆಯಿದೆ.
* ಇದು ಮೂರು ಮಾದರಿಗಳಾದ S24, S24 ಪ್ಲಸ್ ಮತ್ತು S24 ಅಲ್ಟ್ರಾ ಹೊಂದಿರಲಿದೆ. ಇವೆಲ್ಲವೂ ಕ್ವಾಲ್ಕಾಮ್‌ನ ಇತ್ತೀಚಿನ ಪ್ರಮುಖ ಪ್ರೊಸೆಸರ್ ಆದ ಸ್ನಾಪ್‌ಡ್ರಾಗನ್ 8 ಜೆನ್ 3 ಅನ್ನು ಒಳಗೊಂಡಿದೆ.
* ಇದರ ಕ್ಯಾಮೆರಾ ವಿಶೇಷಣಗಳು ಗಮನಾರ್ಹವಾಗಿದೆ. S24 ಅಲ್ಟ್ರಾವು 200MP ಮುಖ್ಯ ಸಂವೇದಕವನ್ನು ಒಳಗೊಂಡಿದೆ. ಆದರೆ S24 ಮತ್ತು S24 ಪ್ಲಸ್ 50MP ಮುಖ್ಯ ಸಂವೇದಕಗಳನ್ನು ಹೊಂದಿದೆ. S24 ಮತ್ತು S24 ಪ್ಲಸ್ ನಲ್ಲಿ 10MPಯ ಟೆಲಿಫೋಟೋ ಸಂವೇದಕಗಳನ್ನು ಹೊಂದಿದೆ. ಮತ್ತು S24 ಅಲ್ಟ್ರಾ ಒಂದು ಜೋಡಿ ಟೆಲಿಫೋಟೋ ಲೆನ್ಸ್‌ಗಳಿಂದ ಸಂಯೋಜಿಸಲ್ಪಟ್ಟಿರುತ್ತದೆ.
* ಎಲ್ಲಾ ಮೂರು ಮಾದರಿಗಳಲ್ಲಿ ಕ್ಯಾಮೆರಾ ಸೆಟಪ್, 12MP ಅಲ್ಟ್ರಾವೈಡ್ ಲೆನ್ಸ್‌ಗಳನ್ನು ಒಳಗೊಂಡಿದೆ. ಇದು ಬಹುಮುಖ ಛಾಯಾಗ್ರಹಣ ಅನುಭವವನ್ನು ನೀಡಲಿದೆ.
* S24 ಸರಣಿಯಲ್ಲಿನ ಪ್ರತಿಯೊಂದು ಸಾಧನವು 12MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎಂದು ಊಹಾಪೋಹಗಳಿವೆ.