logo
ಕನ್ನಡ ಸುದ್ದಿ  /  ಜೀವನಶೈಲಿ  /  Upcoming Cars: ಮುಂದಿನ ವರ್ಷ ಝೇಂಕರಿಸಲಿವೆ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಕಾರುಗಳು, ಟಾಟಾದಿಂದ ಟೊಯೊಟಾ ತನಕ ಇಲ್ಲಿದೆ ಪಟ್ಟಿ

Upcoming Cars: ಮುಂದಿನ ವರ್ಷ ಝೇಂಕರಿಸಲಿವೆ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಕಾರುಗಳು, ಟಾಟಾದಿಂದ ಟೊಯೊಟಾ ತನಕ ಇಲ್ಲಿದೆ ಪಟ್ಟಿ

Praveen Chandra B HT Kannada

Nov 26, 2024 02:18 PM IST

google News

Upcoming Cars: ಮುಂದಿನ ವರ್ಷ ಝೇಂಕರಿಸಲಿವೆ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಕಾರುಗಳು

    • Upcoming Cars in India: ಮುಂದಿನ ವರ್ಷಕ್ಕಾಗಿ ಜನರು ಕುತೂಹಲದಿಂದ ಕಾಯುತ್ತಿರುವ ಒಂದು ಎಲೆಕ್ಟ್ರಿಕ್ ಕಾರು ಹ್ಯುಂಡೈ ಕ್ರೆಟಾ EV ಆಗಿದೆ. ಹ್ಯುಂಡೈನ ಹೆಚ್ಚು ಮಾರಾಟವಾಗುವ SUV ಕ್ರೆಟಾದ ಎಲೆಕ್ಟ್ರಿಕ್ ರೂಪಾಂತರವನ್ನು ಜನವರಿಯಿಂದ ಮಾರ್ಚ್ ನಡುವೆ ಬಿಡುಗಡೆ ಮಾಡಬಹುದು.
Upcoming Cars: ಮುಂದಿನ ವರ್ಷ ಝೇಂಕರಿಸಲಿವೆ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಕಾರುಗಳು
Upcoming Cars: ಮುಂದಿನ ವರ್ಷ ಝೇಂಕರಿಸಲಿವೆ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಕಾರುಗಳು

Upcoming Cars in India: ಹೊಸ ಕಾರಿನ ಬಗ್ಗೆ ಜನರಲ್ಲಿ ಈಗೀಗ ಅಪಾರವಾದ ಉತ್ಸಾಹವಿದೆ. ದೇಶಾದ್ಯಂತ ಜನರ ಕಣ್ಣುಗಳು ಸದ್ಯ ಮುಂದಿನ ವರ್ಷ ಅಂದರೆ 2025 ರ ಮೇಲಿದೆ. ಈ ವರ್ಷ ಯಾವ ಕಾರುಗಳನ್ನು ಬಿಡುಗಡೆ ಮಾಡುತ್ತವೆ ಎಂಬುದನ್ನು ನೋಡಲು ಎಲ್ಲರೂ ಕಾದು ಕುಳಿತಿದ್ದಾರೆ. ನೀವೂ ಇದನ್ನೇ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, 2025 ರ ಜನವರಿಯಿಂದ ಡಿಸೆಂಬರ್ ವರೆಗೆ ಬಹಳಷ್ಟು ಹೊಸ ಕಾರುಗಳು ಮಾರುಕಟ್ಟೆಗೆ ಅಪ್ಪಳಿಸಲಿವೆ. ಅವುಗಳಲ್ಲಿ ಹೆಚ್ಚಿನವು ಎಲೆಕ್ಟ್ರಿಕ್ ಕಾರುಗಳಾಗಿವೆ. ಮುಂಬರುವ ಎಲೆಕ್ಟ್ರಿಕ್ ಕಾರುಗಳಲ್ಲಿ ಹುಂಡೈ ಕ್ರೆಟಾ EV ಮತ್ತು ಟಾಟಾ ಹ್ಯಾರಿಯರ್ EV ಮತ್ತು ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ SUV EVX ಸೇರಿವೆ.

ಯಾವ ಹೊಸ ಎಲೆಕ್ಟ್ರಿಕ್ ಕಾರುಗಳು ಬರಲಿವೆ?

ಮುಂದಿನ ವರ್ಷಕ್ಕಾಗಿ ಜನರು ಕುತೂಹಲದಿಂದ ಕಾಯುತ್ತಿರುವ ಒಂದು ಎಲೆಕ್ಟ್ರಿಕ್ ಕಾರು ಹ್ಯುಂಡೈ ಕ್ರೆಟಾ EV ಆಗಿದೆ. ಹ್ಯುಂಡೈನ ಹೆಚ್ಚು ಮಾರಾಟವಾಗುವ SUV ಕ್ರೆಟಾದ ಎಲೆಕ್ಟ್ರಿಕ್ ರೂಪಾಂತರವನ್ನು ಜನವರಿಯಿಂದ ಮಾರ್ಚ್ ನಡುವೆ ಬಿಡುಗಡೆ ಮಾಡಬಹುದು. ಟಾಟಾ ಮೋಟಾರ್ಸ್ ತನ್ನ ಅತ್ಯಂತ ಶಕ್ತಿಶಾಲಿ ಎಸ್‌ಯುವಿ ಹ್ಯಾರಿಯರ್‌ನ ಎಲೆಕ್ಟ್ರಿಕ್ ರೂಪಾಂತರವನ್ನು ಮುಂದಿನ ವರ್ಷ ಬಿಡುಗಡೆ ಮಾಡಬಹುದು.

ಈ ವಾರ ಎರಡು ಹೊಸ ಎಲೆಕ್ಟ್ರಿಕ್ SUVಗಳಾದ XEV 9e ಮತ್ತು BE 6e ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದ ನಂತರ, ಮುಂದಿನ ವರ್ಷ ಮಹೀಂದ್ರಾ & ಮಹೀಂದ್ರಾ ಅದರ ಬೆಲೆಯನ್ನು ಬಹಿರಂಗಪಡಿಸಬಹುದು. ಇದೆಲ್ಲದರ ನಡುವೆ, ಮಾರುತಿ ಸುಜುಕಿ ಇ-ವಿಟಾರಾ ಎಂಬ ವಿಶೇಷ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಸಹ ತರುತ್ತಿದೆ. ಮುಂಬರುವ ಈ ಎಲೆಕ್ಟ್ರಿಕ್ ಕಾರುಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂಬರುವ ಸಮಯದಲ್ಲಿ ಬಹಿರಂಗಪಡಿಸಲಾಗುವುದು.

ಮುಂದಿನ ವರ್ಷ ರೆನೊ ಡಸ್ಟರ್ ಭಾರತೀಯ ಮಾರುಕಟ್ಟೆಗೆ ಮರಳಬಹುದು. ಇದು ಐಕಾನಿಕ್ SUV ಆಗಿದ್ದು, ದೀರ್ಘಕಾಲದವರೆಗೆ ಭಾರತದಲ್ಲಿ ಜನಪ್ರಿಯವಾಗಿದೆ. ಆದರೆ, ಈ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಕಂಪನಿಗೆ ಇನ್ನೂ ನೀಡಿಲ್ಲ. ಅಂತೆಯೆ ಮುಂದಿನ ವರ್ಷ, ಕಿಯಾ ಇಂಡಿಯಾ ಸಿರೋಸ್ ಹೆಸರಿನ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಜೊತೆಗೆ ಕ್ಯಾರೆನ್ಸ್‌ನ ಫೇಸ್‌ಲಿಫ್ಟ್ ಮಾದರಿಯನ್ನು ಸಹ ಪರಿಚಯಿಸಬಹುದು.

JSW MG ಮೋಟಾರ್ ಇಂಡಿಯಾ ಮುಂದಿನ ವರ್ಷ ಭಾರತದಲ್ಲಿ ಹೊಸ ಸಬ್-4 ಮೀಟರ್ SUV ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಅಲ್ಲದೆ, ಗ್ಲೋಸ್ಟರ್‌ನ ಫೇಸ್‌ಲಿಫ್ಟ್ ಮಾದರಿಯನ್ನು ಸಹ ಬಿಡುಗಡೆ ಮಾಡಬಹುದು. ಇನ್ನು ಸ್ಕೋಡಾ ಕಂಪನಿಯ ಕೊಡಿಯಾಕ್ ಫೇಸ್‌ಲಿಫ್ಟ್ ಎರಡನೇ ತಲೆಮಾರಿನ ಮಾದರಿಯು 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ವಾಹನವು ಭಾರತೀಯ ರಸ್ತೆಗಳಲ್ಲಿ ಪರೀಕ್ಷೆಯ ಸಮಯದಲ್ಲಿ ಹಲವಾರು ಬಾರಿ ಗುರುತಿಸಲ್ಪಟ್ಟಿದೆ. ಹೊಸ ಮಾದರಿಯ ವಿನ್ಯಾಸದಲ್ಲಿ ಸುಧಾರಣೆ ಇರಬಹುದು.

ವರದಿ: ವಿನಯ್ ಭಟ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ