2024 Tata Punch: ಯಾವ ಪಂಚ್ ಖರೀದಿಸುವಿರಿ? ಹೊಸ ಟಾಟಾ ಪಂಚ್ ಆವೃತ್ತಿಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ
Sep 20, 2024 11:11 AM IST
2024 Tata Punch: ಯಾವ ಪಂಚ್ ಖರೀದಿಸುವಿರಿ? ಹೊಸ ಟಾಟಾ ಪಂಚ್ ಆವೃತ್ತಿಗಳ ಪರಿಚಯ
- 2024 Tata Punch: ತಾಂತ್ರಿಕವಾಗಿ ಹೊಸ ಟಾಟಾ ಪಂಚ್ ಈ ಹಿಂದಿನ ಪಂಚ್‌ನಂತೆಯೇ 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 5 ಸ್ಪೀಡ್‌ನ ಮ್ಯಾನುಯಲ್ ಅಥವಾ ಎಎಂಟಿ ಗಿಯರ್‌ಬಾಕ್ಸ್‌ನಲ್ಲಿ ದೊರಕುತ್ತದೆ. 2024ರ ಹೊಸ ಟಾಟಾ ಪಂಚ್‌ನ ವಿವಿಧ ಆವೃತ್ತಿಗಳನ್ನು ಪರಿಚಯ ಮಾಡಿಕೊಳ್ಳೋಣ ಬನ್ನಿ.
ಬೆಂಗಳೂರು: ಟಾಟಾ ಪಂಚ್ ಇತ್ತೀಚೆಗೆ ಪರಿಷ್ಕೃತ ಆವೃತ್ತಿಗಳನ್ನು ಪರಿಚಯಿಸಿದೆ. ಈ ಅಪ್‌ಡೇಟ್ ಸಮಯದಲ್ಲಿ ಹೊಸ ಆವೃತ್ತಿಗಳನ್ನು, ಹೆಚ್ಚುವರಿ ಫೀಚರ್‌ಗಳನ್ನೂ ಹೊಂದಿರುವ ಟಾಟಾ ಪಂಚ್ ಕಾರುಗಳನ್ನು ನೋಡಬಹುದು. ಈಗ ಟಾಟಾ ಪಂಚ್ ಆರಂಭಿಕ ದರ 6.13 ಲಕ್ಷ ರೂಪಾಯಿ ಇದೆ. ಕ್ರಿಯೆಟಿವ್, , ಅಕಾಂಪ್ಲಿಶ್ಡ್, ಅಕಾಂಪ್ಲಿಶ್ಡ್ ಎಸ್‌ಆರ್ ಮತ್ತು ಪ್ಯೂರ್ ರಿದಮ್ ಮುಂತಾದ ಆವೃತ್ತಿಗಳನ್ನು ಟಾಟಾ ಮೋಟಾರ್ಸ್ ತೆಗೆದುಹಾಕಿದೆ. ಇದರ ಬದಲು ಹೊಸ ಆವೃತ್ತಿಗಳನ್ನು ಪರಿಚಯಿಸಿದೆ. ಟಾಟಾ ಮೋಟಾರ್ಸ್ ಅಡ್ವೆಂಚರ್ ಎಸ್, ಅಡ್ವೆಂಚರ್ + ಎಸ್ ಮತ್ತು ಪ್ಯೂರ್ (ಒ) ಸೇರಿದಂತೆ ಮೂರು ಆವೃತ್ತಿಗಳನ್ನು ಪರಿಚಯಿಸಿದೆ. ಇದರಿಂದಾಗಿ ಈಗ ಟಾಟಾ ಪಂಚ್ ಹೊಸ ಹತ್ತು ರೂಪಾಂತರಗಳಲ್ಲಿ ಅಥವಾ ಆವೃತ್ತಿಗಳಲ್ಲಿ ಲಭ್ಯವಿದೆ. ಪ್ಯೂರ್, ಪ್ಯೂರ್ (ಆಪ್ಷನಲ್), ಅಡ್ವೆಂಚರ್, ಅಡ್ವೆಚಂರ್ ರಿದಮ್, ಅಡ್ವೆಂಚರ್ ಸನ್‌ರೂಫ್, ಅಡ್ವೆಂಚರ್ + ಸನ್‌ರೂಫ್, ಅಕಾಂಪ್ಲಿಶ್ಡ್ +, ಅಕಾಂಪ್ಲಿಶ್ಡ್ + ಸನ್‌ರೂಫ್, ಕ್ರಿಯೇಟಿವ್ +, ಮತ್ತು ಕ್ರಿಯೇಟಿವ್ + ಸನ್‌ರೂಫ್ ಆವೃತ್ತಿಗಳಲ್ಲಿ ಟಾಟಾ ಪಂಚ್ ದೊರಕುತ್ತದೆ.
ತಾಂತ್ರಿಕವಾಗಿ ಹೊಸ ಟಾಟಾ ಪಂಚ್ ಈ ಹಿಂದಿನ ಪಂಚ್‌ನಂತೆಯೇ 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 5 ಸ್ಪೀಡ್‌ನ ಮ್ಯಾನುಯಲ್ ಅಥವಾ ಎಎಂಟಿ ಗಿಯರ್‌ಬಾಕ್ಸ್‌ನಲ್ಲಿ ದೊರಕುತ್ತದೆ. ಇದೇ ಸಮಯದಲ್ಲಿ ಈ ಹಿಂದಿನಂತೆ ಸಿಎನ್‌ಜಿ ಆವೃತ್ತಿಯನ್ನೂ ಕಂಪನಿ ನೀಡುತ್ತದೆ. ಟಾಟಾ ಪಂಚ್‌ನ ವಿವಿಧ ಆವೃತ್ತಿಗಳ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ.
ಟಾಟಾ ಪಂಚ್ ಪ್ಯೂರ್ (2024 Tata Punch: Pure)
ಇದು ಟಾಟಾ ಪಂಚ್‌ನ ಆರಂಭಿಕ ಆವೃತ್ತಿ. ದರ 6.13 ಲಕ್ಷ ರೂಪಾಯಿ ಇದೆ. ಇದರಲ್ಲಿ ಸಾಕಷ್ಟು ಸುರಕ್ಷತೆ ಮತ್ತು ಆರಾಮದಾಯಕ ಫೀಚರ್‌ಗಳಿವೆ. ಡ್ಯೂಯೆಲ್ ಏರ್‌ಬ್ಯಾಗ್‌ಗಳು, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಮುಂತಾದವುಗಳಿವೆ. ಸ್ಟಾರ್ಟ್ ಸ್ಟಾಪ್ ಟೆಕ್ನಾಲಜಿ, 90 ಡಿಗ್ರಿ ಡೋರ್ ತೆರೆಯಲು ಈಸಿ ಇಂಗ್ರಿಸ್ ಮತ್ತು ಎಗ್ರೀಸ್, ಟಿಲ್ಟ್ ಹೊಂದಾಣಿಕೆ ಮಾಡಬಹುದಾದ ಸ್ಟಿಯರಿಂಗ್ ವೀಲ್ ಇದೆ.
ಟಾಟಾ ಪಂಚ್ ಪ್ಯೂರ್ ಆಪ್ಷನಲ್ (2024 Tata Punch: Pure (O))
ಮೇಲಿನ ಪ್ಯೂರ್‌ನಲ್ಲಿರುವ ಎಲ್ಲಾ ಫೀಚರ್‌ಗಳು ಇವೆ. ಆರಂಭಿಕ ದರ 6.70 ಲಕ್ಷ ರೂಪಾಯಿ ಇದೆ. ಹೆಚ್ಚುವರಿಯಾಗಿ ವೀಲ್ ಕವರ್‌ಗಳು, ಎಲೆಕ್ಟ್ರಿಕಲಿ ಹೊಂದಾಣಿಕೆ ಮಾಡಬಹುದಾದ ಒಆರ್‌ವಿಎಂಗಳು, ಸೆಂಟ್ರಲ್ ರಿಮೋಟ್ ಲಾಕಿಂಗ್ ವಿದ್ ಫ್ಲಿಪ್ ಕೀ ಮತ್ತು ಪವರ್ ವಿಂಡೋ ಫೀಚರ್‌ಗಳು ದೊರಕುತ್ತವೆ.
ಟಾಟಾ ಪಂಚ್ ಅಡ್ವೆಂಚರ್ (2024 Tata Punch Adventure)
ಇದರ ಆರಂಬಿಕ ದರ 7 ಲಕ್ಷ ರೂಪಾಯಿ ಇದೆ. ಪ್ಯೂರ್ (ಒ)ಗೆ ಹೋಲಿಸಿದರೆ ಇನ್ನಷ್ಟು ಫೀಚರ್‌ಗಳು ಸೇರಿವೆ. ಸ್ಟೋರೇಜ್‌ಗಾಗಿ ಪಾರ್ಸೆಲ್ ಟ್ರೇ, 4 ಸ್ಪೀಕರ್ನ ಆಡಿಯೋ ಸಿಸ್ಟಮ್, 3.5 ಇಂಚಿನ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ಬಾಡಿ ಬಣ್ಣದ ಒಆರ್‌ವಿಎಂಗಳು, ಆಂಟಿ ಗ್ಲೇರ್ ಐಆರ್‌ವಿಎಂ, ಫಾಲೋ ಮಿ ಹೋಮ್ ಹೆಡ್‌ಲ್ಯಾಂಪ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸ್ಟಿಯರಿಂಗ್ ಮೌಂಟೆಂಡ್ ಕಂಟ್ರೋಲ್‌ಗಳು ಇತ್ಯಾದಿಗಳಿವೆ.
ಟಾಟಾ ಪಂಚ್: ಅಡ್ವೆಂಚರ್ ರಿದಮ್
ಇದರ ದರ 7.35 ಲಕ್ಷ ರೂಪಾಯಿ ಇದೆ. ಪ್ರೀಮಿಯಂ ಆಡಿಯೋ ಅನುಭವಕ್ಕಾಗಿ ಎರಡು ಟ್ವೀಟ್ಟೀರ್ಸ್ ಅಳವಡಿಸಲಾಗಿದೆ. ಇನ್ನುಳಿದಂತೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, 7 ಇಂಚಿನ ಇನ್‌ಫೋಟೈನ್‌ಮೆಂಟ್ ಸ್ಕ್ರೀನ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಮುಂತಾದವುಗಳಿವೆ.
ಟಾಟಾ ಪಂಚ್: ಅಡ್ವೆಂಚರ್ ಎಸ್
ಇದರ ದರ 7.60 ಲಕ್ಷ ರೂಪಾಯಿ ಇದೆ. ಈ ಆವೃತಿಯು ರಿದಮ್ ಆವೃತ್ತಿಗಳಿಂತಲೂ ಹೆಚ್ಚು ವಿವಿಧ ಕಂಫರ್ಟ್ ಮತ್ತು ಕನ್ವೆನ್ಸಿಯನ್ಸ್ ಫೀಚರ್‌ಗಳನ್ನು ಹೊಂದಿದೆ. ಎತ್ತರ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು, ಎಲೆಕ್ಟ್ರಿಕ್ ಸನ್‌ರೂಫ್, ರಿಯರ್ ಸೆನ್ಸಿಂಗ್ ವೈಪರ್‌ಗಳು, ಶಾರ್ಕ್ ಫಿನ್ ಆಂಟೆನಾ, ರಿಯರ್ ಏಸಿ ವೆಂಟ್ ಇತ್ಯಾದಿಗಳಿವೆ. ಸನ್‌ರೂಪ್ ಜತೆಗೆ ಯುಎಸ್‌ಬಿ ಚಾರ್ಜರ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ರೂಪ್ ರೇಲ್ಸ್, ಫ್ರಂಟ್ ಆರ್ಮ್‌ರೆಸ್ಟ್‌ಗಳೂ ಇವೆ.
ಟಾಟಾ ಪಂಚ್: ಅಡ್ವೆಂಚರ್ ಪ್ಲಸ್ ಎಸ್
ಇದರ ದರ 8.10 ಲಕ್ಷ ರೂಪಾಯಿ ಇದೆ. ಅಡ್ವೆಂಚರ್ ಎಸ್‌ಗಿಂತ ಹೆಚ್ಚು ಫೀಚರ್‌ಗಳನ್ನು ಹೊಂದಿದೆ. ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಟೈಪ್ ಸಿ ಫಾಸದ್ಟ್ ಚಾರ್ಜರ್, 2 ಟ್ವೀಟೀರ್ಸ್, ಪುಷ್ ಬಟನ್ ಸ್ಟಾರಟ್ ಸ್ಟಾಪ್, 7 ಇಂಚಿನ ಇನ್‌ಫೋಟೈನ್‌ಮೆಮಟ್, ರಿಯರ್ ವೈಪರ್ ಮತ್ತು ವಾಷರ್ ಇತ್ಯಾದಿಗಳು ಹೆಚ್ಚುವರಿಯಾಗಿ ಇವೆ.
ಟಾಟಾ ಪಂಚ್: ಅಕಾಂಪ್ಲಿಶ್ಡ್ +
ಇದರ ದರ 8.30 ಲಕ್ಷ ರೂಪಾಯಿ ಇದೆ ಅಡ್ವೆಂಚರ್ ಆವೃತ್ತಿಗೆ ಹೋಲಿಸಿದರೆ ಸಾಕಷ್ಟು ಸುಧಾರಿತ ಫೀಚರ್‌ಗಳು ಇವೆ. ಕ್ರುಸ್ ಕಂಟ್ರೋಲ್, ಶಶಾರ್ಕ್ ಪಿನ್ ಆಂಟೆನ್, ಫ್ರಂಟ್ ಫಾಗ್ ಲ್ಯಾಂಪ್‌ಗಳು ಇವೆ. 10.25 ಇಂಚಿನ ಇನ್‌ಫೋಟೈನ್‌ಮೆಂಟ್ ಸ್ಕ್ರೀನ್ ಇದೆ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋಗೆ ಬೆಂಬಲ ನೀಡುತ್ತದೆ, ಆಟೋ ಕ್ಲೈಮೇಟ್ ಕಂಟ್ರೋಲ್ ಕೂಡ ಇದೆ. ಕೂಲ್ಡ್ ಗ್ಲೋವ್ ಬಾಕ್ಸ್, ಪ್ರಾಜೆಕ್ಟರ್ ಡಿಫಾಗರ್, ಎಲ್‌ಇಡಿ ಡಿಆರ್‌ಎಲ್‌ಗಳು, 12 ಇಂಚಿನ ಸ್ಟೀಲ್ ವೀಲ್‌ಗಳು, ಎತ್ತರ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ಹಿಂಬದಿಯಲ್ಲೂ ಯುಎಸ್‌ಬಿ ಚಾರ್ಜರ್ ಇತ್ಯಾದಿಗಳಿವೆ.
ಟಾಟಾ ಪಂಚ್ ಫಸ್ಟ್ ಡ್ರೈವ್ ವಿಮರ್ಶೆ
ಪಂಚ್: ಅಕಾಂಪ್ಲಿಶ್ಡ್ + ಎಸ್
ಇದರ ದರ 8.80 ಲಕ್ಷ ರೂಪಾಯಿ ಇದೆ. ಅಕಾಂಪ್ಲಿಶ್ಡ್ ಪ್ಲಸ್‌ಗಿಂತ ಹಲವು ಹೆಚ್ಚುವರಿ ಫೀಚರ್ ಇದೆ. ರೂಪ್ ಟೇಲ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಎಲೆಕ್ಟ್ರಿಕ್ ಸನ್‌ರೂಪ್, ಮಳೆ ಗ್ರಹಿಸುವ ವೈಪರ್‌ಗಳು ಇತ್ಯಾದಿಗಳಿವೆ.
ಪಂಚ್: ಕ್ರಿಯೆಟಿವ್ ಪ್ಲಸ್
ಇದರ ದರ 9 ಲಕ್ಷ ರೂಪಾಯ ಇದೆ. ಅಕಾಂಪ್ಲಿಶ್ಡ್ + ಗೆ ಹೋಲಿಸಿದರೆ ಹೆಚ್ಚುವರಿ ಫೀಚರ್‌ಗಳು ಸೇರ್ಪಡೆಯಾಗಿವೆ. ರಿಯರ್ ಆರ್ಮ್‌ರೆಸ್ಟ್, ಲೆದರ್ ಗಿಯರ್ ನಾಬ್, 16ಇಂಚಿನ ಡೈಮಾಂಡ್ ಕಟ್ ಅಲಾಯ್, ವೈರ್‌ಲೆಸ್ ಚಾರ್ಜರ್, ರೇನ್ ಸೆನ್ಸಿಂಗ್ ವೈಪರ್, ಒನ್ ಟಚ್ ಡ್ರೈರ್ ವಿಂಡೋ, ಟೈರ್ ಪ್ರೆಸರ್ ಮಾನಿಟರಿಂಗ್, ಲೆದರ್ ಸ್ಟಿಯರಿಂಗ ವೀಲ್, ಆಟೋ ಫೋಲ್ಡಿಂಗ್ ಒಆರ್‌ವಿಎಂ, ಪಡ್ಲ್ ಲ್ಯಾಂಪ್‌ಗಳು ಇವೆ.
ಕ್ರಿಯೆಟಿವ್ ಪ್ಲಸ್ ಎಸ್
ಇದರ ದರ 9.50 ಲಕಷ ರೂಪಾಯಿ ಇದೆ. ಕ್ರಿಯೆಟಿವ್ ಪ್ಲಸ್‌ಗಿಂತ 50 ಸಾವಿರ ರೂಪಾಯಿ ಇದೆ. ಇದರಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಇದೆ.
ಕನ್ನಡದಲ್ಲಿ ವಾಹನ ಸುದ್ದಿ, ವಿಮರ್ಶೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ