ಟಾಟಾ ಪಂಚ್‌ ಎಸ್‌ಯುವಿಯ ಪರಿಷ್ಕೃತ ಆವೃತ್ತಿ ಬಿಡುಗಡೆ; ಸನ್‌ರೂಫ್‌ನಿಂದ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ತನಕ ಭರ್ಜರಿ ಫೀಚರ್ಸ್‌ ಸೇರ್ಪಡೆ
ಕನ್ನಡ ಸುದ್ದಿ  /  ಜೀವನಶೈಲಿ  /  ಟಾಟಾ ಪಂಚ್‌ ಎಸ್‌ಯುವಿಯ ಪರಿಷ್ಕೃತ ಆವೃತ್ತಿ ಬಿಡುಗಡೆ; ಸನ್‌ರೂಫ್‌ನಿಂದ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ತನಕ ಭರ್ಜರಿ ಫೀಚರ್ಸ್‌ ಸೇರ್ಪಡೆ

ಟಾಟಾ ಪಂಚ್‌ ಎಸ್‌ಯುವಿಯ ಪರಿಷ್ಕೃತ ಆವೃತ್ತಿ ಬಿಡುಗಡೆ; ಸನ್‌ರೂಫ್‌ನಿಂದ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ತನಕ ಭರ್ಜರಿ ಫೀಚರ್ಸ್‌ ಸೇರ್ಪಡೆ

ಟಾಟಾ ಪಂಚ್‌ನ ಪರಿಷ್ಕೃತ ಆವೃತ್ತಿ ಬಿಡುಗಡೆಯಾಗಿದೆ. ಇದರಲ್ಲಿ ತನ್ನ ಸೆಗ್ಮೆಂಟ್‌ನಲ್ಲೇ ಆಕರ್ಷಕವೆನಿಸುವ ಪ್ರಮುಖ ಫೀಚರ್‌ಗಳು ಇರುವುದು ವಿಶೇಷ. ಕಾರಿನ ಮೇಲ್ಚಾವಣಿಯಿಂದ ಮುಖ ಹೊರಗೆ ಹಾಕಬೇಕೆನ್ನುವವರಿಗೆ ಸನ್‌ರೂಫ್‌ ಇರುವ ಪಂಚ್‌ ಕೂಡ ಆಗಮಿಸಿದೆ.

ಟಾಟಾ ಪಂಚ್‌ ಎಸ್‌ಯುವಿಯ ಪರಿಷ್ಕೃತ ಆವೃತ್ತಿ ಬಿಡುಗಡೆಯಾಗಿದೆ. ಪರಿಷ್ಕೃತ ಟಾಟಾ ಪಂಚ್‌ನಲ್ಲಿ ಸಾಕಷ್ಟು ಹೊಸ ಫೀಚರ್‌ಗಳಿವೆ. ಕೆಲವೊಂದು ಫೀಚರ್‌ಗಳು ಈ ಸೆಗ್ಮೆಂಟ್‌ನಲ್ಲಿಯೇ ಪ್ರಮುಖವಾದ ಫೀಚರ್‌ಗಳಾಗಿವೆ.
ಟಾಟಾ ಪಂಚ್‌ ಎಸ್‌ಯುವಿಯ ಪರಿಷ್ಕೃತ ಆವೃತ್ತಿ ಬಿಡುಗಡೆಯಾಗಿದೆ. ಪರಿಷ್ಕೃತ ಟಾಟಾ ಪಂಚ್‌ನಲ್ಲಿ ಸಾಕಷ್ಟು ಹೊಸ ಫೀಚರ್‌ಗಳಿವೆ. ಕೆಲವೊಂದು ಫೀಚರ್‌ಗಳು ಈ ಸೆಗ್ಮೆಂಟ್‌ನಲ್ಲಿಯೇ ಪ್ರಮುಖವಾದ ಫೀಚರ್‌ಗಳಾಗಿವೆ.

ಬೆಂಗಳೂರು: ಟಾಟಾ ಮೋಟಾರ್ಸ್‌ ಕಂಪನಿಯು ಪರಿಷ್ಕೃತ ಟಾಟಾ ಪಂಚ್‌ ಕಾರನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಶೋರೂಂ ಆರಂಭಿಕ ದರ 6.12 ಲಕ್ಷ ರೂಪಾಯಿ. ಟಾಪ್‌ ಎಂಡ್‌ ಟಾಟಾ ಪಂಚ್‌ನ ಎಕ್ಸ್‌ ಶೋರೂಂ ದರ 9.45 ಲಕ್ಷ ರೂಪಾಯಿ ಇದೆ. ಟಾಟಾ ಪಂಚ್‌ ಕಾರನ್ನು ತಕ್ಷಣ ಖರೀದಿಸಿದರೆ ಸುಮಾರು 18 ಸಾವಿರ ರೂಪಾಯಿಯಷ್ಟು ಪ್ರಯೋಜನವಿದೆ. ಟಾಟಾ ಪಂಚ್‌ ಅನ್ನು ಟಾಟಾ ಮೋಟಾರ್ಸ್‌ ಪಂಚ್‌ಗಾಗಿ ಮಾಡಿರುವ ಡೆಡಿಕೇಟೆಡ್‌ ವೆಬ್‌ಸೈಟ್‌ ಮೂಲಕ ಬುಕ್ಕಿಂಗ್‌ ಮಾಡಬಹುದು.

ಟಾಟಾ ಮೋಟಾರ್ಸ್‌ ಕಂಪನಿಯ ಪಂಚ್‌ ಕಾರು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ. ಆಗಸ್ಟ್‌ 2024ರಲ್ಲಿ ಕಂಪನಿಯ ಒಟ್ಟು ಪಂಚ್‌ ಎಸ್‌ಯುವಿಗಳ ಮಾರಾಟ 4 ಲಕ್ಷ ದಾಟಿತ್ತು. ಇದೀಗ ಹಬ್ಬದ ಋತುವಿನಲ್ಲಿ ಅಪ್‌ಗ್ರೇಡೆಡ್‌ ಪಂಚ್‌ ಪರಿಚಯಿಸಿರುವುದರಿಂದ ಮಾರಾಟದಲ್ಲಿ ಇನ್ನಷ್ಟು ಪ್ರಗತಿ ಕಾಣುವ ಸೂಚನೆಯಿದೆ. ಕಡಿಮೆ ದರದಲ್ಲಿ ಎಸ್‌ಯುವಿ ಖರೀದಿಸಲು ಬಯಸುವವರನ್ನು ಪಂಚ್‌ ಸೆಳೆಯುತ್ತಿದೆ.

ಪರಿಷ್ಕೃತ ಟಾಟಾ ಪಂಚ್‌ನಲ್ಲಿ ಸಾಕಷ್ಟು ಹೊಸ ಫೀಚರ್‌ಗಳಿವೆ. ಕೆಲವೊಂದು ಫೀಚರ್‌ಗಳು ಈ ಸೆಗ್ಮೆಂಟ್‌ನಲ್ಲಿಯೇ ಪ್ರಮುಖವಾದ ಫೀಚರ್‌ಗಳಾಗಿವೆ. 10.25 ಇಂಚಿನ ಟಚ್‌ಸ್ಕ್ರೀನ್‌ ಇನ್‌ಫೋಟೈನ್‌ಮೆಮಟ್‌ ಸಿಸ್ಟಮ್‌ ಇದರಲ್ಲಿದೆ. ಇದು ವೈರಲ್‌ಲೆಸ್‌ ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ಪ್ಲೇಗೆ ಸಪೋರ್ಟ್‌ ಮಾಡುತ್ತದೆ. ಇಷ್ಟು ಮಾತ್ರವಲ್ಲದೆ ವೈರ್‌ಲೆಸ್‌ ಫೋನ್‌ ಚಾರ್ಜ್‌, ಗ್ರ್ಯಾಂಡ್‌ ಕನ್ಸೋಲ್‌ ಜತೆ ಆರ್ಮ್‌ರೆಸ್ಟ್‌, ಹಿಂಭಾಗದ ಸೀಟುಗಳಿಗೂ ಏಸಿ ಕಿಂಡಿಗಳು, ಟೈಪ್‌ ಸಿ ಫಾಸ್ಟ್‌ ಯುಎಸ್‌ಬಿ ಚಾರ್ಜರ್‌ ಮುಂತಾದ ಫೀಚರ್‌ಗಳಿವೆ.

ಟಾಟಾ ಮೋಟಾರ್ಸ್‌ ಕಂಪನಿಯು ಇನ್ಮುಂದೆ ಎಲ್ಲಾ ಪಂಚ್‌ ಕಾರುಗಳನ್ನು ಈ ಅಪ್‌ಗ್ರೇಡೆಡ್‌ ವರ್ಷನ್‌ನಲ್ಲೇ ಮಾರಾಟ ಮಾಡಲಿದೆ. ಹಳೆಯ ಪಂಚ್‌ಗಳು ದೊರಕುವುದಿಲ್ಲ. ಸನ್‌ರೂಫ್‌ ಇರುವ ಪಂಚ್‌ ಕಾರು ಮಾರುಕಟ್ಟೆಯಲ್ಲಿಯೇ ಅತ್ಯಂತ ಕಡಿಮೆ ದರಕ್ಕೆ ದೊರಕುವ ಸನ್‌ರೂಫ್‌ ಎಸ್‌ಯುವಿಯಾಗಿದೆ ಎಂದು ಟಾಟಾ ತಿಳಿಸಿದೆ. ಅಡ್ವೆಂಚರ್‌ ಪರ್ಸೊನ ವೇರಿಯೆಂಟ್‌ನಲ್ಲಿ ಸನ್‌ರೂಫ್‌ ಇರಲಿದೆ.

ಟಾಟಾ ಪಂಚ್‌ ಫಸ್ಟ್‌ ಟೆಸ್ಟ್‌ ಡ್ರೈವ್‌

ಆಸಕ್ತಿದಾಯಕ ಸಂಗತಿಯೆಂದರೆ ನೂತನ ಪರಿಷ್ಕೃತ ಕಾರಿನಲ್ಲಿ ಯಾವುದೇ ಕಾಸ್ಮೆಟಿಕ್‌ ಬದಲಾವಣೆಗಳನ್ನು ಕಂಪನಿ ಮಾಡಿಲ್ಲ. ಕೇವಲ ಫೀಚರ್‌ಗಳನ್ನು ಅಪ್‌ಗ್ರೇಡ್‌ ಮಾಡಿದೆ. ಎಂಜಿನ್‌ ಮೊದಲಿನದ್ದೇ ಇದೆ. ಈ ಎಸ್‌ಯುವಿಯು ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ದೊರಕುತ್ತದೆ. 1.2 ಲೀಟರ್‌ನ ಎಂಜಿನ್‌ ಹೊಂದಿದೆ. ಟಾಟಾ ಪಂಚ್‌ ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗಿಯರ್‌ ಬಾಕ್ಸ್‌ ಆಯ್ಕೆಗಳಲ್ಲಿ ದೊರಕುತ್ತದೆ.

ಟಾಟಾ ಪಂಚ್‌ ಬೆಂಗಳೂರು ದರ

  • ಟಾಟಾ ಪಂಚ್‌ ಪ್ಯೂರ್‌: 6,12,900 ರೂಪಾಯಿ
  • ಟಾಟಾ ಪಂಚ್‌ ಅಡ್ವೆಂಚರ್‌: 6,99,900 ರೂಪಾಯಿ
  • ಟಾಟಾ ಪಂಚ್‌ ಅಡ್ವೆಂಚರ್‌ ರಿತಮ್‌: 7,34,900 ರೂಪಾಯಿ
  • ಟಾಟಾ ಪಂಚ್‌ ಪ್ಯೂರ್‌ (ಆಪ್ಷನಲ್‌): 6,69,900 ರೂಪಾಯಿ
  • ಅಡ್ವೆಂಚರ್‌ ಸನ್‌ರೂಫ್‌: 7,59,900 ರೂಪಾಯಿ
  • ಅಡ್ವೆಂಚರ್‌ ಪ್ಲಸ್‌ ಸನ್‌ರೂಫ್‌: 8,09,900 ರೂಪಾಯಿ
  • ಅಕೊಂಪ್ಲಿಶಿಡ್‌ ಪ್ಲಸ್‌: 8,29,900 ರೂಪಾಯಿ
  • ಅಕೊಂಪ್ಲಿಶಿಡ್‌ ಪ್ಲಸ್‌ ಸನ್‌ರೂಫ್‌: 8,79,900 ರೂಪಾಯಿ
  • ಕ್ರಿಯೆಟಿವ್‌ ಪ್ಲಸ್‌: 8,99,900 ರೂಪಾಯಿ
  • ಕ್ರಿಯೆಟಿವ್‌ ಪ್ಲಸ್‌ ಎಸ್‌: 9,44,900 ರೂ
  • ಅಡ್ವೆಂಚರ್‌ ಪ್ಲಸ್‌ ಎಸ್‌: 8,09,900 ರೂಪಾಯಿ

ಇವೆಲ್ಲ ಎಕ್ಸ್‌ ಶೋರೂಂ ದರ. ನಿರ್ದಿಷ್ಟ ದರ ಮಾಹಿತಿಯನ್ನು ಹತ್ತಿರದ ಟಾಟಾ ಶೋರೂಂನಿಂದ ಪಡೆದುಕೊಳ್ಳಬಹುದು ಅಥವಾ ಟಾಟಾ ಮೋಟಾರ್ಸ್‌ ವೆಬ್‌ಸೈಟ್‌ https://cars.tatamotors.com/punch/ಗೆ ಭೇಟಿ ನೀಡಬಹುದು.

Whats_app_banner