BA Scope: ಬಿಎ ಪದವಿಯಲ್ಲಿ ಯಾವೆಲ್ಲಾ ಕಾಂಬಿನೇಷನ್ ಲಭ್ಯ, ಯಾವುದು ಜನಪ್ರಿಯ; ಸರ್ಕಾರಿ ಕೆಲಸಕ್ಕೆ ಯಾವುದು ಒಳ್ಳೆಯದು?
Sep 01, 2024 03:15 PM IST
ವಿದ್ಯಾರ್ಥಿಗಳು
- BA Scope: ಬಿಎ ಪದವಿಯಲ್ಲಿ ಯಾವೆಲ್ಲಾ ಕಾಂಬಿನೇಷನ್ ಲಭ್ಯ, ಯಾವುದು ಜನಪ್ರಿಯ; ಸರ್ಕಾರಿ ಕೆಲಸಕ್ಕೆ ಯಾವುದು ಒಳ್ಳೆಯದು? ಯಾವ ಉದ್ದೇಶ ಇರುವವರು ಯಾವ ಕೋರ್ಸ್ ತೆಗೆದುಕೊಳ್ಳಬೇಕು? ಪಿಯುಸಿ ಬಳಿಕ ಬಿಎ ಪದವಿ ಆಯ್ಕೆ ಮಾಡುವವರಿಗೆ ಸಹಾಯವಾಗುವ ವಿವರ ಇಲ್ಲಿದೆ.
ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಯಾವಾಗಲೂ ಕಾಡುವ ಪ್ರಶ್ನೆ ಏನೆಂದರೆ ಮುಂದೇನು? ಅದರಲ್ಲೂ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದವರಿಗೇ ಹೆಚ್ಚು ಗೊಂದಲ. ಈ ಪೈಕಿ ಸಾಕಷ್ಟು ಮಂದಿ ಬಿಎ ಪದವಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಬಿಎ ಪೂರ್ಣ ರೂಪವು ಬ್ಯಾಚುಲರ್ ಆಫ್ ಆರ್ಟ್ಸ್. ಇದು ಭಾರತದಲ್ಲಿ ಬಹು ಬೇಡಿಕೆಯಿರುವ ಕೋರ್ಸ್‌ಗಳಲ್ಲಿ ಒಂದು. ಬಿಎ ಒಂದು ಕಲಾ ಪದವಿ ಆಗಿದ್ದು ಅದನ್ನು 3 ವರ್ಷಗಳ ಅಧ್ಯಯನ ಮಾಡಬೇಕು. ಬಿಎ ಪದವಿಯಲ್ಲಿ ಯಾವೆಲ್ಲಾ ಕಾಂಬಿನೇಷನ್ ಲಭ್ಯ, ಯಾವುದು ಜನಪ್ರಿಯ; ಸರ್ಕಾರಿ ಕೆಲಸಕ್ಕೆ ಯಾವುದು ಒಳ್ಳೆಯದು? ಇಲ್ಲಿದೆ ವಿವರ.
ಪಿಯುಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿ, ಇತಿಹಾಸ, ಪತ್ರಿಕೋದ್ಯಮ ಮತ್ತು ಮನೋವಿಜ್ಞಾನದಂತ ಯಾವುದೇ ವಿಷಯಗಳಲ್ಲಿ ಬಿಎ ಪದವಿ ವ್ಯಾಸಂಗ ಮಾಡಬಹುದು. ಬಿಎ (ಆನರ್ಸ್) ಅಥವಾ ಬಿಎ ಸಾಮಾನ್ಯ ಕೋರ್ಸನ್ನು ಪೂರ್ಣ ಸಮಯ, ಅರೆಕಾಲಿಕ, ದೂರ ಶಿಕ್ಷಣದಲ್ಲೂ ಅಧ್ಯಯನ ಮಾಡಬಹುದು. ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಹತೆ ಆಧಾರದ ಮೇಲೆ ಅಥವಾ ಪ್ರವೇಶ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಬಿಎ ಪದವಿಗೆ ಪ್ರವೇಶ ಪಡೆಯಬಹುದು. ಬಿಎ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಯುಇಟಿ, ಐಪಿಯು, ಸಿಇಟಿ, ಪಿಯುಬಿಡಿಇಟಿ (CUET, IPU CET, PUBDET) ಪರೀಕ್ಷೆ ಬರೆಯಬೇಕು.
ಪೂರ್ಣ ಸಮಯದ ಬಿಎ: ಇದು 3 ವರ್ಷದ (ಡಿಗ್ರಿ ಅಥವಾ ಪದವಿ) ನಿಯಮಿತ ತರಗತಿ ಆಧಾರಿತ ಬಿಎ ಕೋರ್ಸ್.
ಬಿಎ ದೂರಶಿಕ್ಷಣ: ಕಾಲೇಜಿಗೆ ಹೋಗದೆ ಡಿಸ್ಟೆನ್ಸ್ ಎಜುಕೇಶನ್ (ದೂರಶಿಕ್ಷಣ) ಮೂಲಕ ಪದವಿಯನ್ನು ಪಡೆಯುವುದು. (ಕರೆಸ್ಪಾಂಡೆಸ್-Correspondence)
ಬಿಎ ಆನ್‌ಲೈನ್: ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ವಿಡಿಯೋ ಉಪನ್ಯಾಸ ಮತ್ತು ಡಿಜಿಟಲ್ ಮೂಲಕದ ಪಡೆಯುವ ಅಧ್ಯಯನ.
ಅರೆಕಾಲಿಕ ಬಿಎ: ಸಂಜೆ ವೇಳೆ ನಡೆಯುವ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಯುವುದು. ಕೆಲವೊಂದು ಕಡೆ ವಾರಾಂತ್ಯದಲ್ಲಿ ಅಥವಾ ನಿರ್ದಿಷ್ಟ ದಿನಗಳಲ್ಲಿ ಸಂಜೆ ಕಾಲೇಜಿಗೆ ಹೋಗಬೇಕಾಗುತ್ತದೆ.
ಬಿಎಂ ಕೋರ್ಸ್‌ಗಳ ವಿಧಗಳು
ಕನ್ನಡ ವಿಭಾಗ
ಶಿಕ್ಷಣ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
ರಾಜಕೀಯ
ಮನೋವಿಜ್ಞಾನ (ಸೈಕಾಲಜಿ)
ಕಂಪ್ಯೂಟರ್ ಸೈನ್ಸ್
ಇಂಗ್ಲಿಷ್ ಭಾಷೆ
ಇಂಗ್ಲಿಷ್ ಸಾಹಿತ್ಯ
ಭಾಷಾಶಾಸ್ತ್ರ
ರಂಗಭೂಮಿ
ಕಲೆ
ಸರ್ಕಾರಿ ಕೆಲಸಕ್ಕೆ ಯಾವುದು ಉತ್ತಮ?
ಸರ್ಕಾರಿ ಕೆಲಸಕ್ಕೆ ಇಂತಹದ್ದೇ ಕೋರ್ಸ್ ಓದಬೇಕು ಎಂದೇನಿಲ್ಲ. ನೀವು ಸಾಮಾನ್ಯ ಜ್ಞಾನದ ಜೊತೆಗೆ ರಾಜಕೀಯ, ಇತಿಹಾಸ, ಭೋಗೋಳ, ವಿಜ್ಞಾನ.. ಹೀಗೆ ಎಲ್ಲಾ ವಿಷಯಗಳಲ್ಲೂ ಜ್ಞಾನವಂತರಾಗಬೇಕು. ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ನಿಮ್ಮ ಜ್ಞಾನವನ್ನು ಅಲ್ಲಿ ಪ್ರದರ್ಶಿಸಬೇಕು. ತಾವು ಪಡೆಯುವ ಅಂಕದ ಆಧಾರದ ಮೇಲೆ ಉದ್ಯೋಗ ಗಿಟ್ಟಸಿಕೊಳ್ಳಲಿದ್ದೀರಿ. ಆದರೆ ಸರ್ಕಾರದ ಒಂದೊಂದು ಹುದ್ದೆಗೂ ಒಂದೊಂದು ರೀತಿಯ ಅರ್ಹತಾ ಮಾನದಂಡ ಇರುತ್ತದೆ.
ಕೋರ್ಸ್ 2 ಭಾಗಗಳಾಗಿ ವಿಂಗಡಣೆ
ಬಿಎ - ಇದು ಸಾಮಾನ್ಯ ಬಿಎ ಕೋರ್ಸ್ ಆಗಿದೆ. ವಿದ್ಯಾರ್ಥಿಗಳ ಆಯ್ಕೆ ಪ್ರಕಾರ ಕನ್ನಡ, ಹಿಂದಿ, ಬಂಗಾಳಿ ಮತ್ತು ಉರ್ದು ಮುಂತಾದ 2ನೇ ಭಾಷೆ ಸೇರಿದಂತೆ ಇಂಗ್ಲಿಷ್, ರಾಜ್ಯಶಾಸ್ತ್ರ, ಇತಿಹಾಸ ಮತ್ತು ಸಮಾಜಶಾಸ್ತ್ರ ಇತ್ಯಾದಿ ವಿಷಯಗಳನ್ನು ಒಳಗೊಂಡಿರುತ್ತದೆ.
ಬಿಎ ಆನರ್ಸ್ - ಇದು ಒಬ್ಬರು ಆಯ್ಕೆ ಮಾಡಿದ ನಿರ್ದಿಷ್ಟ ವಿಷಯ. ಉದಾ- ಇಂಗ್ಲಿಷ್ ಆನರ್ಸ್, ಇತಿಹಾಸ ಆನರ್ಸ್, ಭೂಗೋಳಶಾಸ್ತ್ರ ಆನರ್ಸ್ ಇತ್ಯಾದಿ. ಇದು ಕೋರ್ಸ್ನ ಅಂತಿಮ ವರ್ಷದಲ್ಲಿ ಒಬ್ಬರು ಸಲ್ಲಿಸಬೇಕಾದ ಕಾಗದದ ಪ್ರಬಂಧ ಸಲ್ಲಿಕೆ ಪ್ರಕ್ರಿಯೆ.
ಬಿಎ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವುದು ಹೇಗೆ?
ಪಿಯುಸಿ ಪಾಸಾದ ಅಭ್ಯರ್ಥಿಗಳು ತಮ್ಮ ಅರ್ಹತೆ ಆಧಾರದ ಮೇಲೆ ಅಥವಾ ಅರ್ಹತಾ ಪರೀಕ್ಷೆಯ (Entrance Exam) ಮೂಲಕ ಅರ್ಹತೆ ಪಡೆಯಬಹುದು. ಕೆಲ ವಿಶ್ವವಿದ್ಯಾಲಯಗಳು ಬಿಎ ಕೋರ್ಸ್‌ಗೆ ತಮ್ಮದೇ ಆದ ಪ್ರವೇಶ ಪರೀಕ್ಷೆಯನ್ನು ನಡೆಸುತ್ತವೆ. ಕೆಲವು ಕಲಾ ಕಾಲೇಜುಗಳು ಮೆರಿಟ್ ಪಟ್ಟಿಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತವೆ. ಬಿಎ ಪದವಿಯನ್ನು ದೂರಶಿಕ್ಷಣ ವಿಧಾನದ ಮೂಲಕವೂ ಪಡೆಯಬಹುದು. ಆದರೆ ಬಿಎ ಪದವಿ ಆಯ್ಕೆ ಎಲ್ಲಾ ಕಾಲೇಜುಗಳಲ್ಲಿ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಸರ್ಕಾರಿ ಪದವಿ ಕಾಲೇಜುಗಳು ಅಥವಾ ಖಾಸಗಿ ಕಾಲೇಜುಗಳಲ್ಲಿ ಈ ಆಯ್ಕೆ ಇರುತ್ತದೆ.
ಬಿಎ ಕೋರ್ಸ್‌ಗಳ ನಂತರ ಏನು?
ಕಲಾ ಕೋರ್ಸ್‌ಗಳಲ್ಲಿ ಪದವಿ ನಂತರದ ಉದ್ಯೋಗದ ಆಯ್ಕೆಗಳು ವಿಶಾಲ ಮತ್ತು ಆಕರ್ಷಕವಾಗಿವೆ. ಒಬ್ಬರು ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಪುರಾತತ್ವಶಾಸ್ತ್ರಜ್ಞ, ಶಿಕ್ಷಣತಜ್ಞ, ತತ್ವಜ್ಞಾನಿ, ಬರಹಗಾರ.. ಹೀಗೆ ಆಗಬಹುದು. ಕಲೆಯಲ್ಲಿ ಯಾವುದೇ ಕೋರ್ಸ್ ಮಾಡಿದ ನಂತರ ಆರಂಭಿಕ ವೇತನ 15 ರಿಂದ 25 ಸಾವಿರದ ತನಕ ಪಡೆಯಬಹುದು. ನೀವು ನೀವು ಉನ್ನತ ವ್ಯಾಸಾಂಗ ಮಾಡುವುದಕ್ಕೆ ಬಯಸಿದರೆ ಅದಕ್ಕೂ ವಿಫುಲ ಅವಕಾಶಗಳಿವೆ. ಬಿಎ ಮುಗಿಸಿದ ನಂತರ ಎಂಎ (ಇದರಲ್ಲಿ ವಿವಿಧ ವಿಷಯಗಳಿವೆ), ಎಂಬಿಎ ವ್ಯಾಸಂಗ ಮಾಡಬಹುದು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳಿಗೆ ಬರವೇ ಇಲ್ಲ.
ಭಾರತದಲ್ಲಿ ಬಿಎ ಪದವೀಧರರ ಸರಾಸರಿ ವೇತನ ಶ್ರೇಣಿ 3 ಲಕ್ಷದಿಂದ 20 ಲಕ್ಷದವರೆಗೂ ಇರುತ್ತದೆ. ಆದರೆ ಈ ವೇತನ ಶ್ರೇಣಿಯು ಉದ್ಯೋಗದ ಪ್ರೊಫೈಲ್, ಸಂಸ್ಥೆ ಮತ್ತು ಬಿಎ ವಿಶೇಷತೆಯನ್ನು ಅವಲಂಬಿಸಿರುತ್ತದೆ. ಹಾಗಂತ ಎಲ್ಲರಿಗೂ ಒಂದೇ ರೀತಿಯ ವೇತನ ಶ್ರೇಣಿ ಲಭ್ಯವಾಗುತ್ತದೆ ಎಂದು ಹೇಳಲಾಗದು. ಕೆಲಸ ಯಾವುದೂ ಬೇಡವೆಂದು ನೀವೇ ಸ್ವಂತ ಬಿಸಿನೆಸ್ ಮಾಡಬಹುದು. ಬಿಎ ಪದವಿ ಮುಗಿಸಿದವರಿಗೆ ಯಾವೆಲ್ಲಾ ಉದ್ಯೋಗಗಳು ಸಿಗಲಿವೆ ಎಂಬುದರ ಪಟ್ಟಿ ಈ ಮುಂದಿನಂತಿದೆ.
ಬಿಎ ಮುಗಿಸಿದವರಿಗೆ ಸಿಗಬಹುದಾದ ಕೆಲಸಗಳ ಪಟ್ಟಿ ಇಲ್ಲಿದೆ
ಸರ್ಕಾರಿ ಕೆಲಸ
ಬ್ಯಾಂಕ್
ಆಡಳಿತ ಅಧಿಕಾರಿ
ಎಚ್‌ಆರ್ ಮ್ಯಾನೇಜರ್ಸ್
ಮಾರ್ಕೆಟಿಂಗ್ ಮ್ಯಾನೇಜರ್ಸ್/ಸೇಲ್ಸ್ ಡೈರೆಕ್ಟರ್ಸ್
ಸಂಶೋಧಕ
ಪತ್ರಕರ್ತ/ಕಾಪಿರೈಟರ್ಸ್
ಶಿಕ್ಷಕ/ಪ್ರಾಧ್ಯಾಪಕ
ಮನಃಶಾಸ್ತ್ರಜ್ಞ
ಆರ್ಕೈವಿಸ್ಟ್
ಮಾನವಶಾಸ್ತ್ರಜ್ಞ
ಇತಿಹಾಸಕಾರ
ರಾಜಕೀಯ ವ್ಯವಸ್ಥಾಪಕ
ನೀತಿ ವಿಶ್ಲೇಷಕ
ಬರಹಗಾರ
ಕಲೆಗಳಲ್ಲಿ ಪದವಿ ಪಡೆದ ಕೋರ್ಸ್‌ಗಳು ಕೇವಲ ಒಂದು ಕೋರ್ಸ್ ಅಲ್ಲ, ಸಂಸ್ಕೃತಿ, ಕಲೆ, ಕಾನೂನು ರಾಜಕಾರಣ ಇತ್ಯಾದಿಗಳ ವಿಷಯದಲ್ಲಿ ಸಮಾಜ ಮತ್ತು ಉಪವಿಭಾಗ ಅರ್ಥಮಾಡಿಕೊಳ್ಳುವ ವಿಷಯದಲ್ಲಿ ನಮಗಿದು ಸಮಗ್ರ ಅಭಿವೃದ್ಧಿ ನೀಡುತ್ತದೆ.