BCom Scope: ಬಿಕಾಂ ಪದವಿಯಲ್ಲಿ ಯಾವೆಲ್ಲ ಕಾಂಬಿನೇಷನ್‌ಗಳು ಇವೆ; ಪದವಿ ಪಡೆದವರಿಗೆ ಯಾವ ರೀತಿಯ ಕೆಲಸಗಳು ಸಿಗುತ್ತವೆ?-education news types of courses and combinations in bcom after 12th subjects job opportunities in commerce jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Bcom Scope: ಬಿಕಾಂ ಪದವಿಯಲ್ಲಿ ಯಾವೆಲ್ಲ ಕಾಂಬಿನೇಷನ್‌ಗಳು ಇವೆ; ಪದವಿ ಪಡೆದವರಿಗೆ ಯಾವ ರೀತಿಯ ಕೆಲಸಗಳು ಸಿಗುತ್ತವೆ?

BCom Scope: ಬಿಕಾಂ ಪದವಿಯಲ್ಲಿ ಯಾವೆಲ್ಲ ಕಾಂಬಿನೇಷನ್‌ಗಳು ಇವೆ; ಪದವಿ ಪಡೆದವರಿಗೆ ಯಾವ ರೀತಿಯ ಕೆಲಸಗಳು ಸಿಗುತ್ತವೆ?

ಬ್ಯಾಂಕಿಂಗ್‌, ಮಾರುಕಟ್ಟೆ, ಆರ್ಥಿಕತೆ… ಇವೆಲ್ಲಾ ಜನರ ನಿತ್ಯ ಬದುಕಿನ ಭಾಗ. ಈ ಕ್ಷೇತ್ರಗಳಲ್ಲಿ ಜ್ಞಾನ ವರ್ಧಿಸಲು ವಾಣಿಜ್ಯ ಶಿಕ್ಷಣ ಪಡೆಯಬೇಕು. ಹೆಚ್ಚು ವ್ಯಾಪ್ತಿ ಹೊಂದಿರುವ ಕಾಮರ್ಸ್‌ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಮುಂದಾಗುತ್ತಾರೆ. ಪಿಯುಸಿ ಬಳಿಕ ಬಿಕಾಂ ಪದವಿ ಆಯ್ಕೆ ಮಾಡುವವರಿಗೆ ನೆರವಾಗುವ ಮಾಹಿತಿ ಇಲ್ಲಿದೆ.

ಬಿಕಾಂ ಪದವಿಯಲ್ಲಿ ಯಾವೆಲ್ಲ ಕಾಂಬಿನೇಷನ್‌ಗಳು ಇವೆ; ಯಾವ ರೀತಿಯ ಕೆಲಸಗಳು ಸಿಗುತ್ತವೆ?
ಬಿಕಾಂ ಪದವಿಯಲ್ಲಿ ಯಾವೆಲ್ಲ ಕಾಂಬಿನೇಷನ್‌ಗಳು ಇವೆ; ಯಾವ ರೀತಿಯ ಕೆಲಸಗಳು ಸಿಗುತ್ತವೆ?

ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ಕೆಮಾಡಿಕೊಂಡವರು ಮುಂದೇನು ಎಂಬುದನ್ನು ಯೋಚಿಸುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳು ಬಿಕಾಂ ಅಥವಾ ಬಿಬಿಎಂ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಡಿಗ್ರಿಯಲ್ಲಿ ಬಿಕಾಂ ಮಾಡುವವರಿಗೆ ಹಲವು ಕಾಂಬಿನೇಷನ್‌ ಅಥವಾ ವಿಷಯಗಳ ಆಯ್ಕೆ ಮಾಡಿಕೊಳ್ಳವ ಅವಕಾಶವಿದೆ. ಪೂರ್ಣ ಸಮಯದ ಬಿಕಾಂ, ದೂರಶಿಕ್ಷಣ ಅಥವಾ ಡಿಸ್ಟೆನ್ಸ್ ಎಜುಕೇಶನ್‌, ಆನ್‌ಲೈನ್ ಬಿಕಾಂ, ಅರೆಕಾಲಿಕ ಬಿಕಾಂ ಮತ್ತು ಇಂಟಿಗ್ರೇಟೆಡ್ ಬಿಕಾಂ ಸೇರಿದಂತೆ ವಿವಿಧ ರೀತಿಯ ಬಿಕಾಂ ಕೋರ್ಸ್‌ಗಳಿವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಅನುಸಾರವಾಗಿ ಬೇಕಾದ ಕೋರ್ಸ್‌ ಆಯ್ಕೆ ಮಾಡಬಹುದು. ಪಿಯುಸಿ ಅಥವಾ 12ನೇ ತರಗತಿಯನ್ನು ವಾಣಿಜ್ಯ ವಿಭಾಗದಲ್ಲಿ ಪೂರ್ಣಗೊಳಿಸಿರುವವರು ಡಿಗ್ರಿಯಲ್ಲಿ ಬಿಕಾಂ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು. ಕರ್ನಾಟಕ ಹಾಗೂ ಭಾರತದದಾದ್ಯಂತ ಹಲವು ಕಾಲೇಜುಗಳಲ್ಲಿ ಈ ಕೋರ್ಸ್‌ಗಳಿವೆ.

ಬಿಕಾಂ ಕೋರ್ಸ್‌ಗಳ ವಿಧಗಳು

ಭಾರತದಲ್ಲಿ ಬಿಕಾಂ ಕೋರ್ಸ್‌ಗಳನ್ನು ಅಧ್ಯಯನದ ವಿಧಾನ, ವಿಷಯಗಳು ಮತ್ತು ವಿಶೇಷತೆಗಳ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಅಧ್ಯಯನದ ವಿಧಾನದಲ್ಲಿ ಪೂರ್ಣಕಾಲಿಕ ಕೋರ್ಸ್‌, ದೂರಶಿಕ್ಷಣ, ಆನ್‌ಲೈನ್ ಹಾಗೂ ಅರೆಕಾಲಿಕ ಕೋರ್ಸ್‌ಗಳಿವೆ. ಇನ್ನು ಪಠ್ಯಕ್ರಮದ ಆಧಾರದ ಮೇಲೆ, ಬಿಕಾಮ್ ಕೋರ್ಸ್‌ಗಳು ಬಿಕಾಂ ಜನರಲ್ ಮತ್ತು ಬಿಕಾಮ್ ಹಾನರ್ಸ್‌ ಕೋರ್ಸ್‌ ಇವೆ. ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದು ಜನರಲ್ ಕೋರ್ಸ್‌ಗಳು.

ಅಧ್ಯಯನ ವಿಧಾನ

  • ಪೂರ್ಣ ಸಮಯದ ಬಿಕಾಂ: ಇದು 3 ವರ್ಷದ (ಡಿಗ್ರಿ ಅಥವಾ ಪದವಿ) ನಿಯಮಿತ ತರಗತಿ ಆಧಾರಿತ ಬಿಕಾಂ ಕೋರ್ಸ್.
  • ಬಿಕಾಂ ದೂರಶಿಕ್ಷಣ: ಕಾಲೇಜಿಗೆ ಹೋಗದೆ ಡಿಸ್ಟೆನ್ಸ್‌ ಎಜುಕೇಶನ್‌ ಮೂಲಕ ಪದವಿಯನ್ನು ಪಡೆಯುವುದು.
  • ಬಿಕಾಮ್ ಆನ್‌ಲೈನ್: ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ವಿಡಿಯೊ ಉಪನ್ಯಾಸ ಮತ್ತು ಡಿಜಿಟಲ್ ಮೂಲಕವಾಗಿ ಆನ್‌ಲೈನ್ ಕೋರ್ಸ್‌.
  • ಅರೆಕಾಲಿಕ ಬಿಕಾಂ: ಇದು ಬಿಕಾಮ್ ದೂರಶಿಕ್ಷಣದಂತೆಯೇ ಇರುತ್ತದೆ. ಆದರೆ ವಿದ್ಯಾರ್ಥಿಗಳು ವಾರಾಂತ್ಯದಲ್ಲಿ ಅಥವಾ ನಿರ್ದಿಷ್ಟ ದಿನಗಳಲ್ಲಿ ಸಂಜೆ ಕಾಲೇಜಿಗೆ ಹಾಜರಾಗಬೇಕಾಗುತ್ತದೆ. (ಸಂಧ್ಯಾಕಾಲೇಜು ರೀತಿ)

ಬಿಕಾಂ ಕೋರ್ಸ್‌ಗಳ ವಿವಿಧ ಪ್ರಕಾರಗಳು

ಬಿಕಾಂನಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳು ಡಿಗ್ರಿ ಅಥವಾ ಪದವಿ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಹೆಚ್ಚಿನ ವಿದ್ಯಾರ್ಥಿಗಳ ಆಯ್ಕೆ. ಸಾಮಾನ್ಯವಾಗಿ ಸರ್ಕಾರಿ ಕಾಲೇಜುಗಳಲ್ಲಿ ಆಯಾ ವಿಶ್ವವಿದ್ಯಾನಿಲಯಗಳ ಸಿಲೆಬಸ್‌ ಅನುಸಾರವಾಗಿ ನಿಗದಿತ ವಿಷಯಗಳನ್ನು ಬೋಧನೆ ಮಾಡಲಾಗುತ್ತದೆ. ಇಲ್ಲಿ ಕೆಲವೊಂದು ಸಬ್ಜೆಕ್ಟ್‌ಗಳನ್ನು ಮಾತ್ರವೇ ವಿದ್ಯಾರ್ಥಿಗಳ ಆಯ್ಕೆಯ ಅನುಸಾರ ಸೆಲೆಕ್ಟ್‌ ಮಾಡಬಹುದು. ಉಳಿದ ವಿಷಯಗಳು ನಿಗದಿಯಂತೆಯೇ ಇರುತ್ತವೆ.

ವಿದ್ಯಾರ್ಥಿಗಳು ತಮ್ಮದೇ ಆಸಕ್ತಿಯ ಅನುಸಾರವಾಗಿ ಪ್ರತ್ಯೇಕ ವಿಷಯಗಳನ್ನು ಅಧ್ಯಯನ ಮಾಡುವ ಅವಕಾಶಗಳು ಕೂಡಾ ಇರುತ್ತವೆ. ಆದರೆ, ಈ ಆಯ್ಕೆ ಎಲ್ಲಾ ಕಾಲೇಜುಗಳಲ್ಲಿ ಇರುವುದಿಲ್ಲ. ಸೀಮಿತ ಸರ್ಕಾರಿ ಪದವಿ ಕಾಲೇಜುಗಳು ಅಥವಾ ಖಾಸಗಿ ಕಾಲೇಜುಗಳಲ್ಲಿ ಈ ಆಯ್ಕೆಗಳಿರುತ್ತವೆ.

ಬಿಕಾಮ್ ಕೋರ್ಸ್‌ಗಳ ವಿವಿಧ ಪ್ರಕಾರಗಳು ಹೀಗಿವೆ (ವಿಷಯವಾರು).

  • ಬಿಕಾಂ ಮಾರ್ಕೆಟಿಂಗ್
  • ಬಿಕಾಂ ಅಕೌಂಟಿಂಗ್ ಆಂಡ್ ಫಿನಾನ್ಸ್
  • ಬಿಕಾಂ ಬ್ಯಾಂಕಿಂಗ್ ಆಂಡ್ ಫಿನಾನ್ಸ್
  • ಬಿಕಾಂ ಅರ್ಥಶಾಸ್ತ್ರ (Economics)
  • ಬಿಕಾಂ ಅನ್ವಯಿಕ ಅರ್ಥಶಾಸ್ತ್ರ‌ (Applied Economics)
  • ಬಿಕಾಂ ಅಕೌಂಟೆನ್ಸಿ
  • ಬಿಕಾಂ ಹಣಕಾಸು (Finance)
  • ಬಿಕಾಂ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್
  • ಬಿಕಾಂ ಬ್ಯಾಂಕಿಂಗ್ ಮತ್ತು ವಿಮೆ
  • ಬಿಕಾಂ ಇನ್ಶುರೆನ್ಸ್ ಮ್ಯಾನೇಜ್‌ಮೆಂಟ್
  • ಬಿಕಾಂ ಟೂರಿಸಂ ಆಂಡ್‌ ಟ್ರಾವೆಲ್‌ ಮ್ಯಾನೇಜ್‌ಮೆಂಟ್‌

ಬಿಕಾಂ ಕೋರ್ಸ್‌ಗಳು ಇನ್ನಷ್ಟು ವೈವಿಧ್ಯ ರೀತಿಯಲ್ಲಿ ಇರುತ್ತವೆ. ಸಿಎ ಜೊತೆಗೆ ಬಿಕಾಂ, ಎಲ್‌ಎಲ್‌ಬಿಯೊಂದಿಗೆ ಬಿಕಾಂ, ಎಂಕಾಮ್ ಜೊತೆಗೆ ಬಿಕಾಮ್ ಹೀಗೆ ಸಂಯೋಜಿತ ಅಧ್ಯಯನವಾಗಿ ಲಭ್ಯವಿದೆ.

ಬಿಕಾಂ ಪದವೀಧರರು ಮಾಡಬಹುದಾದ ಕೆಲಸಗಳು

ಭಾರಿ ವ್ಯಾಪ್ತಿ ಹೊಂದಿರುವ ಕೋರ್ಸ್‌ ಬಿಕಾಂ. ಪದವಿ ಪೂರ್ಣಗೊಳಿಸಿದ ಬಳಿಕ ಹಲವು ಕೆಲಸಗಳನ್ನು ಪಡೆಯಬಹುದು. ಇದೇ ವೇಳೆ ಎಂಕಾಂ ಸೇರಿದಂತೆ ಉನ್ನತ ಶಿಕ್ಷಣವನ್ನೂ ಪಡೆಯಬಹುದು. ಸಾಮಾನ್ಯವಾಗಿ ಹೆಚ್ಚಿನ ವಿದ್ಯಾರ್ಥಿಗಳ ಆಯ್ಕೆಯಂತೆ, ಸಿಎ (ಚಾರ್ಟಡ್‌ ಅಕೌಂಟೆಂಟ್‌), ಎಚ್‌ಆರ್‌, ಬ್ಯಾಂಕಿಂಗ್‌ ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ಬ್ಯಾಂಕಿಂಗ್‌ ಮತ್ತು ಹಣಕಾಸು ಕ್ಷೇತ್ರದ ಹುದ್ದೆಗಳಲ್ಲಿಯೂ ಕೆಲಸ ಮಾಡಬಹುದು. ಕಂಪನಿಗಳ ಹ್ಯೂಮನ್‌ ರಿಸೋರ್ಸ್‌ ವಿಭಾಗ, ಅಕೌಂಟಿಂಗ್‌ ವಿಭಾಗ ಸೇರಿದಂತೆ ವಿವಿಧ ಹುದ್ದೆ ಮಾಡಬಹುದು. ತಮ್ಮದೇ ವ್ಯವಹಾರ ನಡೆಸುವ ಆಸಕ್ತಿಯಿದ್ದರೆ, ಬ್ಯುಸಿನೆಸ್‌ಗೆ ಕೈ ಹಾಕಬಹುದು.

ಬಿಕಾಂ ಮಾಡಿದ ನಂತರ ಪಡೆಯಬಹುದಾದ ಕೆಲಸಗಳು ಹೀಗಿವೆ

  • ಚಾರ್ಟರ್ಡ್ ಅಕೌಂಟೆಂಟ್/ಲೆಕ್ಕಪರಿಶೋಧಕ (CA)
  • ಕ್ಯಾಷಿಯರ್
  • ಲೆಕ್ಕಪತ್ರ ನಿರ್ವಹಣೆ (Accounting)
  • ಖಾತೆ ಕಾರ್ಯನಿರ್ವಾಹಕ (Account Executive)
  • ಅಕೌಂಟ್‌ ಅಸಿಸ್ಟೆಂಟ್
  • ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್
  • ಮಾರಾಟ ಅಧಿಕಾರಿ (Sales Officer)
  • ಸಹಾಯಕ ಶಾಖೆಯ ವ್ಯವಸ್ಥಾಪಕರು (Assitant Branch Manager)
  • ಬ್ಯಾಂಕಿಂಗ್ ಜಾಬ್ಸ್
  • ಕ್ರೆಡಿಟ್ ಸಪೋರ್ಟ್ ಮ್ಯಾನೇಜರ್ - ಅಸೋಸಿಯೇಟ್
  • ಡೇಟಾ ಎಂಟ್ರಿ
  • ಹೈರಿಂಗ್‌ ಆಫೀಸರ್‌ (ಹೊಸಬರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು)
  • ಎಚ್‌ಆರ್‌ ಫ್ರೆಶರ್ಸ್
  • ಅಂಗಡಿ ಮ್ಯಾನೇಜರ್‌
  • ಫೈನಾನ್ಸ್‌ ಹುದ್ದೆಗಳು‌

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಿತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ | ಸುಪ್ರೀಂ ಕೋರ್ಟ್ ಜೂನಿಯರ್ ಕೋರ್ಟ್ ಅಟೆಂಡೆಂಟ್ ನೇಮಕಾತಿ: 80 ಹುದ್ದೆಗಳಿಗೆ ಅರ್ಜಿ ಆಹ್ವಾನ; ಲಿಂಕ್ ಇಲ್ಲಿದೆ