40ರ ಹರೆಯದಲ್ಲೂ ತ್ವಚೆ ಕಾಂತಿಯುತವಾಗಿ ಹೊಳೆಯಬೇಕಾ: ಈ ಮನೆಮದ್ದನ್ನು ಪ್ರಯತ್ನಿಸಿ
Oct 03, 2024 05:54 PM IST
40ರ ಹರೆಯದಲ್ಲೂ ತ್ವಚೆ ಕಾಂತಿಯುತವಾಗಿ ಹೊಳೆಯಬೇಕಾ: ಈ ಮನೆಮದ್ದನ್ನು ಪ್ರಯತ್ನಿಸಿ
ನೀವು 40ರ ಹರೆಯದವರಾಗಿರಲಿ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಲಿ, ಈ ಸರಳ ಹಾಗೂ ಪರಿಣಾಮಕಾರಿ ಪರಿಹಾರವನ್ನು ತ್ವಚೆಯ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಯೌವನದ ಮೈಬಣ್ಣವನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ವಯಸ್ಸಾದಂತೆ ತ್ವಚೆಯು ತನ್ನ ಹೊಳಪನ್ನು ಕಳೆದುಕೊಳ್ಳಬಹುದು ಎಂಬ ಆತಂಕವೂ ನಿಮ್ಮಲ್ಲಿದ್ದರೆ, ಈ ಮನೆಮದ್ದನ್ನು ಪ್ರಯತ್ನಿಸಬಹುದು.
ವಯಸ್ಸಾದಂತೆ ಯೌವನದ ಹೊಳಪನ್ನು ಕಾಪಾಡಿಕೊಳ್ಳುವುದು ಅಂದ್ರೆ ಸವಾಲೇ ಸರಿ. ವಯಸ್ಸು 40 ದಾಟುತ್ತಿದ್ದಂತೆ ಚರ್ಮ ಸುಕ್ಕಾಗುವುದು, ಕಾಂತಿ ಕಳೆಗುಂದುವುದು ಸಾಮಾನ್ಯ. 40ರ ಹರೆಯದಲ್ಲೂ 20ರ ಯುವತಿಯಂತೆ ಕಾಣಬೇಕೆಂದರೆ ಅಕ್ಕಿ ನೀರನ್ನು ಪ್ರಯತ್ನಿಸಬಹುದು. ಶತಮಾನಗಳಿಂದಲೂ ಅಕ್ಕಿ ನೀರು ಒಂದು ಸೌಂದರ್ಯ ಪ್ರಯೋಜನವಾಗಿ ಹೊರಹೊಮ್ಮಿದೆ. ಕೊರಿಯನ್ನರ ತ್ವಚೆಯು ಬಿಳಿ-ಬಿಳಿಯಿದ್ದು, 40 ದಾಟಿದವರೂ 20ರ ಹರೆಯದವರಂತೆ ಕಾಣುತ್ತಾರೆ. ಇವರ ಸೌಂದರ್ಯದ ಗುಟ್ಟು ಅಕ್ಕಿ ನೀರಿನಲ್ಲಿ ಅಡಗಿದೆ. ಕೊರಿಯನ್ನರಿಗೆ ಸೌಂದರ್ಯ ಕಾಳಜಿ ತುಸು ಹೆಚ್ಚೇ ಇದೆ. ಪ್ರತಿ ನಿತ್ಯ ಅಕ್ಕಿ ನೀರನ್ನು ತಮ್ಮ ತ್ವಚೆಗೆ ಬಳಸುತ್ತಾರೆ. ಅದೇ ರೀತಿ ನೀವೂ ಕೂಡ ಅಕ್ಕಿ ನೀರನ್ನು ಸೌಂದರ್ಯಕ್ಕೆ ಬಳಸಬಹುದು. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಅಕ್ಕಿ ನೀರು ಕಾಂತಿಯುತ ಚರ್ಮವನ್ನು ಉತ್ತೇಜಿಸುತ್ತದೆ. ತ್ವಚೆ ಹೈಡ್ರೇಟ್ ಆಗಿರಿಸುವಲ್ಲೂ ಸಹಾಯಕ. ಇದು ಸೂಕ್ಷ್ಮರೇಖೆಗಳು, ಸುಕ್ಕುಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ನೀವು 40ರ ಹರೆಯದವರಾಗಿರಲಿ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಲಿ, ಈ ಸರಳ ಹಾಗೂ ಪರಿಣಾಮಕಾರಿ ಪರಿಹಾರವನ್ನು ತ್ವಚೆಯ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಯೌವನದ ಮೈಬಣ್ಣವನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ.
ಹಾಗಿದ್ದರೆ ಹೊಳೆಯುವ ಚರ್ಮಕ್ಕಾಗಿ ಅಕ್ಕಿ ನೀರಿನ ಪ್ರಯೋಜನಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು. ನಿಮ್ಮ ತ್ವಚೆಯನ್ನು ದೀರ್ಘಕಾಲ ಯೌವನವಾಗಿರಿಸಲು ಬಯಸುವಿರಾದರೆ ಅಕ್ಕಿ ನೀರನ್ನು ಚರ್ಮದ ಆರೈಕೆಯ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು. ಅಕ್ಕಿ ನೀರಿನಲ್ಲಿ ಕಂಡುಬರುವ ಎಲ್ಲಾ ಅಂಶಗಳು ನಿಮ್ಮ ಚರ್ಮದ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ವಯಸ್ಸಾದಂತೆ ತ್ವಚೆಯು ತನ್ನ ಹೊಳಪನ್ನು ಕಳೆದುಕೊಳ್ಳಬಹುದು ಎಂಬ ಆತಂಕವೂ ನಿಮ್ಮಲ್ಲಿದ್ದರೆ, ಅಕ್ಕಿ ನೀರನ್ನು ಬಳಸುವ ಸರಿಯಾದ ವಿಧಾನದ ಬಗ್ಗೆ ಇಲ್ಲಿ ತಿಳಿದುಕೊಳ್ಳಿ:
ತ್ವಚೆಗೆ ಅಕ್ಕಿ ನೀರಿನ ಪ್ರಯೋಜನಗಳು, ಬಳಸುವುದು ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ
ಮನೆಮದ್ದು: ಬಹುತೇಕ ಮಂದಿ ಅಕ್ಕಿಯನ್ನು ಸ್ವಚ್ಛಗೊಳಿಸುವಾಗ ಅದರ ನೀರನ್ನು ಎಸೆಯುತ್ತಾರೆ. ಆದರೆ, ನೀವು ನಿಷ್ಪ್ರಯೋಜಕ ಎಂದು ಪರಿಗಣಿಸುತ್ತಿರುವ ಇದೇ ಅಕ್ಕಿ ನೀರು ನಿಮ್ಮ ಚರ್ಮಕ್ಕೆ ವರದಾನವಾಗಿದೆ. ಚರ್ಮದ ಮೇಲೆ ಟೋನರ್ ಆಗಿ ಅಕ್ಕಿ ನೀರನ್ನು ಬಳಸಬಹುದು.
ಬಳಸುವ ವಿಧಾನ: ಅಕ್ಕಿಯನ್ನು ಸುಮಾರು ಅರ್ಧ ಘಂಟೆಯವರೆಗೆ ನೀರಿನಲ್ಲಿ ಒಂದು ಬಟ್ಟಲಿನಲ್ಲಿ ನೆನೆಸಿಡಿ. ನಂತರ ಈ ನೀರನ್ನು ಫಿಲ್ಟರ್ ಮಾಡಿ, ಹತ್ತಿ ಉಂಡೆಯ ಸಹಾಯದಿಂದ ನಿಮ್ಮ ಮುಖದ ಮೇಲೆ ಹಚ್ಚಬಹುದು. ಹಾಗೆಯೇ, ಅಕ್ಕಿಯನ್ನು ನೀರಿನಲ್ಲಿ ಕುದಿಸಿ, ಈ ನೀರನ್ನು ಕೂಡ ಫಿಲ್ಟರ್ ಮಾಡಿ ತಣ್ಣಗಾಗಲು ಬಿಡಬೇಕು. ನಂತರ ಅದನ್ನು ಮುಖಕ್ಕೆ ಅನ್ವಯಿಸಬಹುದು.
ತ್ವಚೆಗೆ ಪ್ರಯೋಜನಕಾರಿ: ಅಕ್ಕಿ ನೀರು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿಸಿಲಿನ ಸಮಸ್ಯೆಯಿಂದ ತ್ವಚೆ ಕಾಂತಿ ಕಳೆದುಕೊಳ್ಳುವುದು ಸಾಮಾನ್ಯ. ಹೀಗಾಗಿ ತ್ವಚೆಗೆ ಅಕ್ಕಿ ನೀರನ್ನು ಬಳಸುವುದರಿಂದ ಪ್ರಯೋಜನ ಪಡೆಯಬಹುದು. ಇದಲ್ಲದೆ, ಅಕ್ಕಿ ನೀರಿನಲ್ಲಿ ಕಂಡುಬರುವ ಎಲ್ಲಾ ಅಂಶಗಳು ನಿಮ್ಮ ಚರ್ಮದ ಬಣ್ಣವನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು.
ಅಕ್ಕಿ ನೀರಿನಲ್ಲಿ ಕಂಡುಬರುವ ಅಂಶಗಳು: ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಬಿ ಮತ್ತು ವಿಟಮಿನ್ ಸಿ ನಂತಹ ಉತ್ತಮ ಪ್ರಮಾಣದ ಪೋಷಕಾಂಶಗಳು ಅಕ್ಕಿ ನೀರಿನಲ್ಲಿವೆ. ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಚರ್ಮದ ತುರಿಕೆ, ಕಿರಿಕಿರಿ ಅಥವಾ ಊತವನ್ನು ತೆಗೆದುಹಾಕಲು ಅಕ್ಕಿ ನೀರನ್ನು ಸಹ ಬಳಸಬಹುದು.