Beauty Tips: ಚರ್ಮ ಕಳೆಗುಂದಿದೆಯಾ, ಕಾಂತಿಯುತ ತ್ವಚೆ ನಿಮ್ಮದಾಗಬೇಕಾ: ಹಾಗಿದ್ದರೆ ಈ ಐದು ಹಂತಗಳನ್ನು ಪರಿಶೀಲಿಸಿ
Beauty Tips:ತ್ವಚೆ ಕಳೆಗುಂದಿದೆ ಎಂಬ ಬೇಸರವೇ?ತ್ವಚೆಯಲ್ಲಿ ಮೊಡವೆಗಳಾಗಿದೆಯಾ?ಕಾಂತಿಯುತ ತ್ವಚೆ ನಿಮ್ಮದಾಗಬೇಕಾ. ಆರೋಗ್ಯಕರ ಚರ್ಮವನ್ನು ಪಡೆಯಬೇಕೆಂಬ ಮಹದಾಸೆ ನಿಮಗಿದ್ದಲ್ಲಿ, ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.ಈ ಐದು ಹಂತಗಳನ್ನು ಇಲ್ಲಿ ಪರಿಶೀಲಿಸಿ.
ಕಾಂತಿಯುತ, ಹೊಳೆಯುವ ತ್ವಚೆಯನ್ನು ಪಡೆಯುವುದು ಪ್ರತಿಯೊಂದು ಹೆಣ್ಮಕ್ಕಳ ಕನಸು. ಇದಕ್ಕಾಗಿ ಕೆಲವರು ಮನೆಯ ಅಡುಗೆ ಮನೆಯಲ್ಲಿ ಇರುವ ಕೆಲವೊಂದು ಪದಾರ್ಥಗಳನ್ನು ಬಳಸಿ ತಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಲು ಮುಂದಾಗುತ್ತಾರೆ. ಇನ್ನೂ ಕೆಲವರು ಬ್ಯೂಟಿಪಾರ್ಲರ್ ಗಳ ಮೊರೆ ಹೋಗುತ್ತಾರೆ. ನೀವು ಕೂಡ ಕಾಂತಿಯುತ, ಆರೋಗ್ಯಕರ ತ್ವಚೆಗಾಗಿ ಹಂಬಲಿಸುತ್ತಿದ್ದೀರಾ? ಈ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ಬಿಡಿ. ನೀವು ಚಿಂತಿಸುವುದಕ್ಕಿಂತ ಸುಲಭವಾಗಿ ಕಾಂತಿಯುತ ತ್ವಚೆಯನ್ನು ಪಡೆಯಬಹುದು. ಇದಕ್ಕಾಗಿ ಪ್ರತಿದಿನ ತ್ವಚೆಯ ಆರೈಕೆಯನ್ನು ಮಾಡಬೇಕು. ತ್ವಚೆಯ ದಿನಚರಿ ಪಾಲಿಸುವುದರಿಂದ ಸೂಕ್ಷ್ಮ ರೇಖೆಗಳು, ಸುಕ್ಕುಗಳು ಮುಂತಾದವುಗಳನ್ನು ದೂರ ಮಾಡಬಹುದು. ತ್ವಚೆಯನ್ನು ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡಲು ಈ ಐದು ಹಂತದ ತ್ವಚೆಯ ದಿನಚರಿಯನ್ನು ನೀವು ಅನುಸರಿಸಬಹುದು. ಇದರಿಂದ ತ್ವಚೆಯು ಹೊಳೆಯು ಹೊಳಪು ಪಡೆಯುತ್ತದೆ ಹಾಗೂ ಆರೋಗ್ಯಕರವಾಗಿ ಇರಲು ಸಹಾಯಕವಾಗಿದೆ. ಹಾಗಿದ್ದರೆ ಆ ಐದು ರಹಸ್ಯಗಳು ಯಾವ್ಯಾವು ಇಲ್ಲಿ ತಿಳಿಯಿರಿ.
ತ್ವಚೆಯ ಕಾಂತಿಯ ಪರಿಹಾರಕ್ಕಾಗಿ ಈ ಐದು ಹಂತಗಳನ್ನು ಪರಿಶೀಲಿಸಿ
ಶುದ್ಧೀಕರಣ: ತ್ವಚೆಗೆ ಹೊಂದಿಕೆಯಾಗುವ ಕ್ಲೆನ್ಸರ್‌ನಿಂದ ದಿನಕ್ಕೆ ಎರಡು ಬಾರಿ ನಿಮ್ಮ ಮುಖವನ್ನು ತೊಳೆಯಿರಿ. ಸ್ಕ್ರಬ್‌ಗಳು ಮತ್ತು ಮೇಕ್ಅಪ್ ರಿಮೂವರ್‌ಗಳ ಬಳಕೆಯನ್ನು ಆದಷ್ಟು ಮಿತಗೊಳಿಸಿ. ಏಕೆಂದರೆ ಇದು ಚರ್ಮದ ರಕ್ಷಣಾತ್ಮಕ ತಡೆಗೋಡೆಗೆ ಹಾನಿ ಮಾಡುತ್ತದೆ. ಅಲ್ಲದೆ ಇದು ಮೊಡವೆ ಮತ್ತು ಸೋಂಕುಗಳಿಗೆ ಕಾರಣವಾಗುತ್ತದೆ.
ಮಾಯಿಶ್ಚರೈಸಿಂಗ್: ಯಾವುದೇ ತ್ವಚೆಯ ಆರೈಕೆಯಲ್ಲಿ ಮಾಯಿಶ್ಚರೈಸಿಂಗ್ ಮಾಡುವುದು ಒಂದು ಪ್ರಮುಖ ಹಂತವಾಗಿದೆ. ಇದಕ್ಕಾಗಿ ದಿನಕ್ಕೆ ಎರಡು ಬಾರಿ ಪರಿಮಳಯುಕ್ತ-ಮುಕ್ತ ಮಾಯಿಶ್ಚರೈಸರ್ ಅನ್ನು ಬಳಸಿ. ಇದು ತ್ವಚೆಯನ್ನು ಹೈಡ್ರೇಟ್ ಮಾಡುವುದಲ್ಲದೆ, ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೆ, ಶುಷ್ಕತೆಯ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ.
ಬಿಸಿಲಿನಿಂದ ರಕ್ಷಣೆ ಮತ್ತು ಮೇಕಪ್ ಆಯ್ಕೆ: ಪ್ರತಿದಿನ ಫೌಂಡೇಶನ್ಸ್ ಮತ್ತು ಕಾಂಪ್ಯಾಕ್ಟ್ ಪೌಡರ್‌ಗಳನ್ನು ಬಳಸದಿರುವುದು ಒಳಿತು. ಇದರಿಂದ ಚರ್ಮವು ಮತ್ತಷ್ಟು ಸುಕ್ಕಾಗಬಹುದು. ಇದರ ಬದಲು ನಾನ್-ಕಾಮೆಡೋಜೆನಿಕ್ ಫಿಸಿಕಲ್ ಸನ್‌ಸ್ಕ್ರೀನ್ ಅನ್ನು ಆಯ್ಕೆಮಾಡಿ. ಹೊರಗೆ ಹೋದಾಗ ಮಾತ್ರವಲ್ಲ ಒಳಾಂಗಣದಲ್ಲಿರುವಾಗಲೂ ಸನ್‌ಸ್ಕ್ರೀನ್ ಅನ್ನು ಬಳಸುವುದು ಉತ್ತಮ.
ಆಹಾರ ಮತ್ತು ಜೀವನಶೈಲಿ: ಪ್ರತಿದಿನ ಕನಿಷ್ಠ 2 ಲೀಟರ್ ದ್ರವವನ್ನು ಸೇವಿಸಬೇಕು. ದಾಳಿಂಬೆ, ಕರ್ಬೂಜಗಳು, ಸ್ಟ್ರಾಬೆರಿಗಳು ಮುಂತಾದ ಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇವು ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಒತ್ತಡದಿಂದಲೂ ಚರ್ಮ ಕಳೆಗುಂದುತ್ತದೆ. ಒತ್ತಡ ನಿವಾರಣೆಗಾಗಿ ವ್ಯಾಯಾಮ, ಯೋಗ, ಇತ್ಯಾದಿಗಳನ್ನು ಪ್ರಯತ್ನಿಸುವುದರಿಂದ ತ್ವಚೆಯ ಕಾಂತಿಗೆ ಪ್ರಯೋಜನಕಾರಿಯಾಗಿದೆ.
ಎಕ್ಸ್‌ಫೋಲಿಯೇಶನ್: ಎಕ್ಸ್‌ಫೋಲಿಯೇಶನ್ ಎನ್ನುವುದು ಚರ್ಮದ ಮೇಲ್ಮೈಯಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಪ್ರಕ್ರಿಯೆಯಾಗಿದೆ. ಇದು ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಂದರೆ ತ್ವಚೆಯನ್ನು ಟ್ಯಾನ್‍ನಿಂದ ರಕ್ಷಿಸಲು, ಮೊಡವೆಗಳನ್ನು ಕಡಿಮೆ ಮಾಡಲು ಮತ್ತು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಇದು ಸಹಾಯ ಮಾಡುತ್ತದೆ.
ವಿಭಾಗ