logo
ಕನ್ನಡ ಸುದ್ದಿ  /  ಜೀವನಶೈಲಿ  /  Naanu Nandini: ಬೆಳ್‌ ಬೆಳಗ್ಗೆ ಬಾಗಿಲ ಬಳಿ ಕಾಯೋ ಹಾಗೆ ಮಾಡುವ ನಾನು ನಂದಿನಿ Packet ಅಲ್ಲಿ ಬರ್ತೀನಿ

Naanu Nandini: ಬೆಳ್‌ ಬೆಳಗ್ಗೆ ಬಾಗಿಲ ಬಳಿ ಕಾಯೋ ಹಾಗೆ ಮಾಡುವ ನಾನು ನಂದಿನಿ Packet ಅಲ್ಲಿ ಬರ್ತೀನಿ

HT Kannada Desk HT Kannada

Sep 27, 2023 06:10 AM IST

google News

ನಾನು ನಂದಿನಿ...

  • ಕರ್ನಾಟಕದ ಬಹುತೇಕ ನಗರಗಳಲ್ಲಿ ಹಾಲು ಎಂದರೆ ಅದು ನಂದಿನಿ. ಕೆಎಂಎಫ್‌ನವರ ನಂದಿನಿ ಹಾಲಿನ ಬ್ರ್ಯಾಂಡ್‌ಗೂ ‘ನಾನು ನಂದಿನಿ…’ ಸಾಹಿತ್ಯ ರಚನೆ ಮಾಡಿ ಬಾರ್ಬಿ ಸಾಂಗ್‌ ಮಾದರಿಯಲ್ಲಿ ಪ್ರಸ್ತುತಪಡಿಸಿದ್ದಾರೆ ವಿಕಿಪೀಡಿಯಾ ವಿಕಾಸ್. ಈ ವೈರಲ್ ವಿಡಿಯೋ ಇಲ್ಲಿದೆ.  

ನಾನು ನಂದಿನಿ...
ನಾನು ನಂದಿನಿ...

"ನಂದಿನಿ ಬಂತಾ ಅಂತ ನೋಡು ಕಂದಾ" ಅಂತ ಅಡುಗೆ ಮನೆಯಿಂದ ಅಮ್ಮ ಕೂಗುವ ಧ್ವನಿ ಬೆಳ್ ಬೆಳಗ್ಗೆ ಕಾಮನ್. ಹೌದು, ಬೆಳ್‌ ಬೆಳಗ್ಗೆ ಬೀದಿಯಲ್ಲಿ ನಡ್ಕೊಂಡು ಹೋಗುತ್ತಿರುವಾಗ ಒಂದಿಲ್ಲೊಂದು ಮನೆಯಿಂದ ಕೇಳುವ ಕಾಮನ್ ಡೈಲಾಗ್ ಇದು.

ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಕೇಳುತ್ತಿರುವ ಕಾಮನ್ ಸಾಂಗ್ "ನಾನು ನಂದಿನಿ..." ಹೌದು ಈ ಹಾಡು ಬಹಳ ಕ್ರೇಜ್ ಹುಟ್ಟಿಸಿದೆ. ಇದು ವಿಕಿಪೀಡಿಯಾ ಕನ್ನಡ (VickyPedia Kannada)ದ ವಿಕಾಸ್‌ ಅವರ ಯೂಟ್ಯೂಬ್ ಚಾನೆಲ್‌ನ ಶಾರ್ಟ್ಸ್ ಹಾಡಿನ ವಿಡಿಯೋ. ಬಾರ್ಬಿ ಕನ್ನಡ ಸಾಂಗ್ ಇದು. ಇದರ ಕ್ರೇಜ್ ಎಷ್ಟರ ಮಟ್ಟಿಗೆ ಎಂದರೆ ಈಗಾಗಲೇ 40 ಲಕ್ಷ ವ್ಯೂವ್ಸ್ ಅನ್ನು ಪಡೆದುಕೊಂಡಿದೆ.

ಈ ಹಾಡಿನ ಲಿರಿಕ್ಸ್‌ನ ಪ್ರೇರಣೆ ಪಡೆದುಕೊಂಡವರು ಅನೇಕರು ತಮ್ಮದೇ ಆದ ಹಾಡಿನ ಸಾಹಿತ್ಯ ರಚಿಸಿ, ಬಾರ್ಬಿ ಸಾಂಗ್‌ ಧಾಟಿಯಲ್ಲಿ ಇನ್ನಷ್ಟು ಶಾರ್ಟ್ಸ್, ರೀಲ್ಸ್‌ ಅನ್ನು ಅಪ್ಲೋಡ್ ಮಾಡಿದ್ದಾರೆ. ಬಹುತೇಕ ಶಾರ್ಟ್ಸ್ ಇದ್ದರೂ ಮೊದಲ ಶಾರ್ಟ್ಸ್‌ನ ಕ್ರೇಜ್‌ ಕಡಿಮೆಯಾಗಿಲ್ಲ.

ಇದನ್ನೂ ಓದಿ| ಸಾಮಾಜಿಕ ಜಾಲತಾಣದಲ್ಲಿ ಕ್ರೇಜ್‌ ಸೃಷ್ಟಿಸಿದ ‘ನಾನು ನಂದಿನಿ’, ಒಂದೂವರೆ ಕೋಟಿಗೂ ಅಧಿಕ ವೀಕ್ಷಣೆ ಪಡೆದ ಈ ಹಾಡು ವೈರಲ್‌ ಆಗಲು ಕಾರಣ ಇಲ್ಲಿದೆ

ನಂದಿನಿ ಎಂದ ಕೂಡಲೇ ನೆನಪಾಗುವುದು ಕರ್ನಾಟಕದಲ್ಲಿ ನಿತ್ಯ ಬಳಕೆಯಾಗುವ ಹಾಲಿನ ಪ್ಯಾಕೆಟ್. ಬಾರ್ಬಿ ಕನ್ನಡ ಸಾಂಗ್ ಸಾಹಿತ್ಯ ರಚಿಸಿ ಶಾರ್ಟ್ಸ್‌ ತಯಾರಿಸಿದ ವಿಕಿಪೀಡಿಯಾ ಕನ್ನಡ (VickyPedia Kannada) ಎಕ್ಸ್‌ನಲ್ಲಿ ಮತ್ತೊಂದು ಕಿರು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ನಂದಿನ ಹಾಲನ್ನೇ ಮುಖ್ಯಭೂಮಿಕೆಯಲ್ಲಿ ತೋರಿಸಲಾಗಿದೆ.

ನಾನು ನಂದಿನಿ.. Packet ಅಲ್ಲಿ ಬರ್ತೀನಿ…

ನಾನು ನಂದಿನಿ

Packet ಅಲ್ಲಿ ಬರ್ತೀನಿ

Dairyಲಿ ಇರ್ತೀನಿ

ಬೆಳಿಗ್ಗೆ Coffee ಆಗ್ತೀನಿ

Coffee ಕುಡಿಯಲ್ವಾ?

Curd ಆಗಿ ಸಿಗ್ತೀನಿ

Costly ಆಗಲ್ಲ

Affordable ಇರ್ತೀನಿ

ಬಾರೆ ನಂದಿನಿ

ನೀರು ಸೇರಿಸ್ತಿನಿ

ಬೆ.. ಬೆ.. ಬೇಡ..

ಬಾರೆ ನಂದಿನಿ

Mixing ಮಾಡ್ತಿನಿ

ಓಹ್ ಬೇಡ

ಓಹ್ ಬೇಡ

ಬಾರೆ ನಂದಿನಿ

ನೀರು ಸೇರಿಸ್ತಿನಿ

ಬೆ.. ಬೆ.. ಬೇಡ..

ಬಾರೆ ನಂದಿನಿ

Mixing ಮಾಡ್ತಿನಿ

ಓಹ್ ಬೇಡ

ಓಹ್ ಬೇಡ

ಈ ಆಕರ್ಷಕ ಕಿರು ವಿಡಿಯೋ ಸಾಂಗ್‌ನ ಸಾಹಿತ್ಯವನ್ನು ವಿಕಿಪೀಡಿಯಾ ಅವರದ್ದಾದರೆ, ಸಂಗೀತ ಸಚಿತ್ ಕ್ಲಾರೆ, ಆರ್ಟ್‌ ವರ್ಕ್‌ ಬೆಂಗಳೂರು ಡೂಡ್ಲರ್ ಎಂಬ ಷರಾ ಕೊನೆಗಿದೆ. ಒಟ್ಟಿನಲ್ಲಿ ಸೃಜನಶೀಲ ಕಾರ್ಯಕ್ಕೆ ಇದೊಂದು ಪ್ರೇರಣೆ ಎನ್ನಬಹುದು ಎನ್ನುತ್ತಿದ್ದಾರೆ ಹಲವರು.

ಕೆಲವರು ಸಾಹಿತ್ಯದಲ್ಲಿರುವ ಅಫೋರ್ಡಬಲ್ ಆಗಿ ಇರ್ತಿನಿ ಎಂಬುದನ್ನು ಪ್ರಶ್ನಿಸಿದ್ದಾರೆ. ಚೀಪ್ ಅಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಕಾಸ್ಟ್ಲಿ ಅಲ್ವಾ ಎಂದು ಕೇಳಿದ್ದಾರೆ.

ಈ ವಿಡಿಯೋವನ್ನು ಎಕ್ಸ್‌ನಲ್ಲಿ ಸೆಪ್ಟೆಂಬರ್ 24ರಂದು ಅಪ್ಲೋಡ್ ಮಾಡಗಲಾಗಿದ್ದು 83 ಸಾವಿರಕ್ಕೂ ಹೆಚ್ಚು ವ್ಯೂವ್ಸ್‌ ಪಡೆದಿದೆ. ಮೂರೂವರೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ