logo
ಕನ್ನಡ ಸುದ್ದಿ  /  ಜೀವನಶೈಲಿ  /  Biryani Leaves Tea: ಸಂಧಿವಾತ, ಮಧುಮೇಹಕ್ಕೆ ಒಳ್ಳೆಯದು ಬಿರಿಯಾನಿ ಎಲೆ ಟೀ: ರೆಸಿಪಿ ಮತ್ತು ಆರೋಗ್ಯ ಪ್ರಯೋಜನಗಳು ಇಲ್ಲಿದೆ

Biryani Leaves Tea: ಸಂಧಿವಾತ, ಮಧುಮೇಹಕ್ಕೆ ಒಳ್ಳೆಯದು ಬಿರಿಯಾನಿ ಎಲೆ ಟೀ: ರೆಸಿಪಿ ಮತ್ತು ಆರೋಗ್ಯ ಪ್ರಯೋಜನಗಳು ಇಲ್ಲಿದೆ

Meghana B HT Kannada

Mar 03, 2024 04:23 PM IST

google News

ಬಿರಿಯಾನಿ ಎಲೆ ಚಹಾ

    • Biryani Leaves Tea Recipe in Kannada: ಬಿರಿಯಾನಿ ಎಲೆ ಚಹಾ ಬಗ್ಗೆ ಕೇಳಿದ್ದೀರಾ? ಇದನ್ನು ಕುಡಿಯುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು. ಬಿರಿಯಾನಿ ಎಲೆ ಟೀ ಮಾಡುವ ವಿಧಾನ ಹಾಗೂ ಅದರ ಆರೋಗ್ಯ ಪ್ರಯೋಜನಗಳು ಇಲ್ಲಿದೆ ನೋಡಿ.
ಬಿರಿಯಾನಿ ಎಲೆ ಚಹಾ
ಬಿರಿಯಾನಿ ಎಲೆ ಚಹಾ

ಗ್ರೀನ್​​ ಟೀ, ಶುಂಠಿ ಟೀ, ಪುದೀನಾ ಟೀ.. ಹೀಗೆ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುವ ಗಿಡಮೂಲಿಕೆ ಚಹಾಗಳ ಹೆಸರು ಕೇಳಿರುತ್ತೀರಿ ಅಲ್ವಾ? ಪ್ರತಿದಿನ ಕುಡಿಯುವವರೂ ಬಹುತೇಕ ಮಂದಿ ಇದ್ದಾರೆ. ಆದರೆ ಬಿರಿಯಾನಿ ಎಲೆ ಚಹಾ ಬಗ್ಗೆ ಕೇಳಿದ್ದೀರಾ? ಇದನ್ನು ಕುಡಿಯುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು. ಬಿರಿಯಾನಿ ಎಲೆ ಟೀ ರೆಸಿಪಿ ಹಾಗೂ ಅದರ ಆರೋಗ್ಯ ಪ್ರಯೋಜನಗಳು ಇಲ್ಲಿದೆ ನೋಡಿ.

ಬಿರಿಯಾನಿ ಎಲೆ ಟೀ ಮಾಡುವ ವಿಧಾನ: ಪಾತ್ರೆಗೆ ಒಂದೂವರೆ ಕಪ್​ ನೀರು ಹಾಕಿ ಗ್ಯಾಸ್​ ಮೇಲೆ ಕುದಿಯಲು ಇಡಬೇಕು. ಕುದಿಯುತ್ತಿರುವ ನೀರಿಗೆ 4 ಬಿರಿಯಾನಿ ಎಲೆಗಳನ್ನು ಹಾಕಬೇಕು. ಸಣ್ಣ ತುಂಡು ಶುಂಠಿಯನ್ನು ಹಾಕಬೇಕು. ಚೆನ್ನಾಗಿ ಕುದ್ದ ಬಳಿಕ ಪಾತ್ರೆ ಕೆಳಗೆ ಇಳಿಸಿ. ಇದನ್ನು ಒಂದು ಲೋಟಕ್ಕೆ ಸೋಸಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಒಂದು ಚಮಚ ಬಳಸಿ ಚೆನ್ನಾಗಿ ಕಲಸಿ. ಈಗ ಬಿರಿಯಾನಿ ಎಲೆಯ ಚಹಾ ಕುಡಿಯಲು ಸಿದ್ಧ.

ಬಿರಿಯಾನಿ ಎಲೆ ಟೀ ಆರೋಗ್ಯ ಪ್ರಯೋಜನಗಳು

ಬಿರಿಯಾನಿ ಎಲೆ ಟೀನಲ್ಲಿ ಫೋಲಿಕ್ ಆಮ್ಲ, ತಾಮ್ರ, ಸೆಲೆನಿಯಂ, ಕಬ್ಬಿಣ, ಸತು, ಮ್ಯಾಂಗನೀಸ್, ಮೆಗ್ನೀಷಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ ಇದ್ದು, ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಯುಕ್ತ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. ಹೀಗಾಗಿ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ನೈಸರ್ಗಿಕ ಇನ್ಸುಲಿನ್ ಉತ್ಪಾದನೆಗೆ ಸಹಾಯ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

ಬಿರಿಯಾನಿ ಎಲೆಯಲ್ಲಿರುವ ಪೋಷಕಾಂಶಗಳು ಹೃದಯದ ದಕ್ಷತೆಯನ್ನು ಹೆಚ್ಚಿಸಿ ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಕೆಫೀಕ್ ಆಸಿಡ್ ನಂತಹ ಫೈಟೊನ್ಯೂಟ್ರಿಯೆಂಟ್​​ಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಸಂಧಿವಾತ, ಉಳುಕು ಇತ್ಯಾದಿಗಳಿಂದ ಬಂದ ಮೂಳೆ, ಕೀಲುಗಳಲ್ಲಿನ ನೋವನ್ನು ಕಡಿಮೆ ಮಾಡಲು ಬಿರಿಯಾನಿ ಎಲೆಗಳ ಚಹಾ ಸಹಾಯ ಮಾಡುತ್ತದೆ. ಈ ಎಲೆಗಳ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ಕೂಡ ನೋವು ಕಡಿಮೆಯಾಗುತ್ತದೆ. ಪ್ರತಿದಿನ ಈ ಟೀ ಕುಡಿಯುವುದರಿಂದ ನೋವು ಬೇಗ ಕಡಿಮೆಯಾಗುತ್ತದೆ.

ಬಿರಿಯಾನಿ ಎಲೆಗಳ ಚಹಾವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಉಸಿರಾಟದ ಸೋಂಕುಗಳನ್ನು ನಿವಾರಿಸಬಹುದು. ಪರಿಣಾಮವಾಗಿ, ಶೀತ ಮತ್ತು ಜ್ವರ ಕೂಡ ಕಡಿಮೆಯಾಗುತ್ತದೆ.

ನೀವು ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದರೆ ಈ ಚಹಾ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ವೈದ್ಯರನ್ನು ಸಂಪರ್ಕಿಸಿದ ನಂತರವೇ ಈ ಪ್ರಯತ್ನ ಮಾಡಿ . ಈ ಟೀ ಅನ್ನು ದಿನಕ್ಕೆರಡು ಬಾರಿ ಕುಡಿಯುವುದರಿಂದ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ ಮತ್ತು ಇದರಿಂದ ಉಂಟಾಗುವ ತೊಂದರೆಗಳು ದೂರವಾಗುತ್ತವೆ.

ಮಲಬದ್ಧತೆ ಸಮಸ್ಯೆ ಇದ್ದಲ್ಲಿ ಬಿರಿಯಾನಿ ಎಲೆಗಳ ಟೀ ಕುಡಿಯುವುದರಿಂದ ಉತ್ತಮ ಪರಿಹಾರ ಸಿಗುತ್ತದೆ. ದಿನಕ್ಕೆ ಎರಡು ಗ್ಲಾಸ್ ಟೀ ಕುಡಿಯುವುದು ಇದಕ್ಕೆ ಪರಿಣಾಮಕಾರಿ. ಈ ಚಹಾವನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ಸಾಮಾನ್ಯ ಮಟ್ಟಕ್ಕೆ ತರಬಹುದು. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತದೆ.

ಬಿರಿಯಾನಿ ಎಲೆ ಕುದಿಸಿದ ನೀರಿನಿಂದ ಕೂದಲಿನ ಬುಡವನ್ನು ಸ್ವಚ್ಛಗೊಳಿಸುವುದರಿಂದ ಕೂದಲು ಉದುರುವಿಕೆ, ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.

ಗಮನಿಸಿ: ಕೆಲವರಿಗೆ ಬಿರಿಯಾನಿ ಎಲೆಯ ಚಹಾ ಅಲರ್ಜಿಯಾಗಿರಬಹುದು. ಅಂತವರು ತಜ್ಞರ ಸಲಹೆಯನ್ನು ತೆಗೆದುಕೊಳ್ಳಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ