Brain Teaser: ಮೆದುಳಿಗೊಂದು ಸವಾಲು; ನೀವು ಗಣಿತದಲ್ಲಿ ತುಂಬಾ ಬ್ರಿಲಿಯಂಟ್ ಆಗಿದ್ದರೆ 30 ಸೆಕೆಂಡ್ ಗಳಲ್ಲಿ ಈ ಸರಳ ಪ್ರಶ್ನೆಗೆ ಉತ್ತರ ಹೇಳಿ
Dec 21, 2024 12:14 PM IST
ನೀವು ಗಣಿತದಲ್ಲಿ ತುಂಬಾ ಸ್ಮಾರ್ಟ್ ಇದ್ದರೆ 30 ಸೆಕೆಂಡ್ ಗಳಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಿ
- ಸಾಮಾಜಿಕ ಜಾಲಾತಣ ಥ್ರೆಡ್ಸ್ ನಲ್ಲಿ ಬ್ರೈನ್ ಟೀಸರ್ ಒಂದು ವೈರಲ್ ಆಗಿದೆ. ನೋಡೋಕೆ ಸ್ವಲ್ಪ ಕ್ಲಿಷ್ಟಕರ ಎನಿಸಿದರೂ ಸ್ವಲ್ಪ ತಲೆ ಉಪಯೋಗಿಸಿದರೆ ಸಾಕು ತುಂಬಾ ಸಿಂಪಲ್ ಆಗಿ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು. ನೀವು ಗಣಿತದಲ್ಲಿ ತುಂಬಾ ಸ್ಮಾರ್ಟ್ ಇದ್ದೀರಿ ಎಂದಾದರೆ 30 ಸೆಕೆಂಡ್ ಗಳಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಿ.
ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣಗಳನ್ನು ತೆರೆದರೆ ಸಾಕು ವಿವಿಧ ರೀತಿಯ ಬ್ರೈನ್ ಟೀಸರ್ ಗಳು ಗಮನ ಸೆಳೆಯುತ್ತವೆ. ಇವುಗಳಿಗೆ ಉತ್ತರ ಹೇಳದೆ ಮುಂದೆ ಸಾಗಲು ಮನಸ್ಸು ಒಪ್ಪೋದಿಲ್ಲ. ಯಾಕೆಂದರೆ ಇವು ಕಣ್ಣು ಮತ್ತು ಮೆದುಳಿಗೆ ಸವಾಲು ಹಾಕುವಂತೆ ಇರುತ್ತವೆ. ಈ ಬ್ರೈನ್ ಟೀಸರ್ ಗಳಿಗೆ ಉತ್ತರ ಹೇಳಿದರೆ ಸಮಾಧಾನ, ಆ ನಂತರ ಬೇರೆಂದು ಪೋಸ್ಟ್ ವೀಕ್ಷಣೆಗೆ ಮುಂದೆ ಹೋಗಲು ಸಾಧ್ಯವಾಗುತ್ತೆ. ಈ ಬ್ರೈನ್ ಟೀಸರ್ ಗಳು ಯಾವಾಗಲ ಕಣ್ಣು ಮತ್ತು ಮೆದುಳಿಗೆ ಕೆಲಸ ಕೊಡುವಂತೆ ಇರುತ್ತವೆ. ಇವುಗಳಿಗೆ ಉತ್ತರ ಹೇಳುವುದರಲ್ಲೂ ಒಂದು ರೀತಿಯ ಮನರಂಜನೆ ಸಿಗುತ್ತದೆ.
ಸಾಮಾಜಿಕ ಜಾಲತಾಣ ಥ್ರೆಡ್ಸ್ ನಲ್ಲಿ ಬ್ರೈನ್ ಟೀಸರ್ ವೈರಲ್ ಆಗಿದೆ. ಈ ಬ್ರೈನ್ ಟೀಸರ್ ಗೆ 130ಕ್ಕೂ ಅಧಿಕ ಮಂದಿ ಕೇವಲ 7 ಸೆಕೆಂಡ್ ಗಳಲ್ಲಿ ಸರಿಯಾದ ಉತ್ತರವನ್ನು ನೀಡಿದ್ದಾರೆ. ಈ ಟೀಸರ್ ನಲ್ಲಿರುವ ಪ್ರಶ್ನೆಯನ್ನು ನೋಡುವುದಾದರೆ "212 = 25, 213 = 36, 214 = 47, 215 = ??" 212ಕ್ಕೆ ಉತ್ತರ 25, 213ಕ್ಕೆ ಉತ್ತರ 36, 214ಕ್ಕೆ ಉತ್ತರ 47 ಆದರೆ 215ಕ್ಕೆ ಎಷ್ಟು ಅಂಕಿಗಳ ಉತ್ತರ ಬರುತ್ತೆ ಎಂಬುದನ್ನು ಪತ್ತೆ ಹಚ್ಚಬೇಕು. ನೀವು ಬ್ರೈನ್ ಟೀಸರ್ ಗಳ ಅಭಿಮಾನಿಗಳಾಗಿದ್ದರೆ ಈ ಪ್ರಶ್ನೆಗೆ 30 ಸೆಕೆಂಡ್ ಗಳೊಳಗೆ ಉತ್ತರವನ್ನು ಕಂಡುಕೊಳ್ಳಿ.
ಈ ಗಣಿತದ ಒಗಟು ಅನೇಕರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಗಣಿತದಲ್ಲಿ ಸಖತ್ ಸ್ಮಾರ್ಟ್ ಇದ್ದರೆ ಮೆದುಳಿಗೆ ಸ್ವಲ್ಪ ಕೆಲಸ ಕೊಟ್ಟರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು. ನೋಡೊಕೆ ತುಂಬಾ ಕ್ಲಿಷ್ಟಕರ ಎನಿಸಿದರೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ತುಂಬಾ ಸರಳವಾಗಿದೆ.
ಥ್ರೆಡ್ಸ್ ನಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್ ಇಲ್ಲಿದೆ ನೋಡಿ
ಹಿಂದಿನ ಬ್ರೈನ್ ಟೀಸರ್
ಗಣಿತದ ಮೆದುಳಿನ ಟೀಸರ್ ಸಾಮಾಜಿಕ ಜಾಲಾತಣಗಳಲ್ಲಿ ವೈರಲ್ ಆಗಿರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಬ್ರೈನಿ ಬಿಟ್ಸ್ ಹಬ್ ಎಂಬ ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಒಗಟು ಇದೇ ರೀತಿಯ ಕುತೂಹಲವನ್ನು ಹುಟ್ಟುಹಾಕಿತು. ಇದು ಈ ಕೆಳಗಿನ ಸಮಸ್ಯೆಯನ್ನು ಪ್ರಸ್ತುತಪಡಿಸಿತು:
"9 = 72, 8 = 56, 7 = 42, 6 = 30, 5 = 20, 3 = ??"
ಈ ಒಗಟು ಕೂಡ ಸಂಚಲನವನ್ನು ಸೃಷ್ಟಿಸಿದೆ. ಬಳಕೆದಾರರು ಉತ್ಸಾಹದಿಂದ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಕೆಲವರು ಕಡಿಮೆ ಸಮಯದಲ್ಲೇ ಸರಿಯಾದ ಉತ್ತರಗಳನ್ನು ಕಂಡುಕೊಂಡಿದ್ದಾರೆ. ಇನ್ನೂ ಕೆಲವರು ಉತ್ತರಕ್ಕಾಗಿ ತಲೆ ಕೆರೆದುಕೊಂಡಿದ್ದಾರೆ.
ಗಣಿತದ ಮೆದುಳಿನ ಟೀಸರ್ ಗಳು ಏಕೆ ಗಮನ ಸೆಳೆಯುತ್ತವೆ?
ಗಣಿತದ ಮೆದುಳಿನ ಟೀಸರ್ ಗಳು ಮನಸ್ಸನ್ನು ತೊಡಗಿಸಿಕೊಳ್ಳುವ ಮತ್ತು ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವ ಸಾಮರ್ಥ್ಯಕ್ಕಾಗಿ ಎದ್ದು ಕಾಣುತ್ತವೆ. ಡಿಜಿಟಲ್ ಯುಗದಲ್ಲಿ, ಮೆದುಳಿನ ಟೀಸರ್ ಗಳು ಥ್ರೆಡ್ಸ್ ಮತ್ತು ಎಕ್ಸ್ ನಂತಹ ಪ್ಲಾಟ್ ಫಾರ್ಮ್ ಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ನೆಟ್ಟಿಗರ ಗಮನ ಸೆಳೆದು ಅದರಲ್ಲಿ ಭಾಗವಹಿಸುವಂತೆ ಮಾಡುತ್ತದೆ. ಮನರಂಜನೆಯ ಜೊತೆಗೆ ಸಮಯ ಕಳೆಯಲು ಇವು ನೆರವಾಗುತ್ತವೆ.