logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 25ರ ನಂತರ ಬರುವ ಸಂಖ್ಯೆ ಯಾವುದು, ನೀವು ಬುದ್ಧಿವಂತರಾದ್ರೆ ಈ ಪ್ರಶ್ನೆಗೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: 25ರ ನಂತರ ಬರುವ ಸಂಖ್ಯೆ ಯಾವುದು, ನೀವು ಬುದ್ಧಿವಂತರಾದ್ರೆ ಈ ಪ್ರಶ್ನೆಗೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Reshma HT Kannada

Dec 19, 2024 09:14 AM IST

google News

ಬ್ರೈನ್ ಟೀಸರ್

    • ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಗಣಿತದಲ್ಲಿಎಕ್ಸ್‌ಪರ್ಟ್ ಆದ್ರೆ ನೀವು ಈ ಬ್ರೈನ್ ಟೀಸರ್‌ಗೆ ಸುಲಭವಾಗಿ ಉತ್ತರ ಹೇಳಲು ಸಾಧ್ಯವಿದೆ. ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಮುಂದಿನ ಸಂಖ್ಯೆ ಯಾವುದು ಕಂಡುಹಿಡಿಯಿರಿ.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಇತ್ತೀಚಿನ ದಿನಗಳಲ್ಲಿ ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಹಲವರು ಬ್ರೈನ್ ಟೀಸರ್‌ಗಳಿಗೆ ಫ್ಯಾನ್ಸ್ ಆಗಿದ್ದಾರೆ. ಟೈಮ್‌ಪಾಸ್ ಮಾಡಲು ಇದಕ್ಕಿಂತ ಉತ್ತಮ ವೇದಿಕೆ ಇನ್ನೊಂದಿಲ್ಲ ಎನ್ನಬಹುದು. ಬ್ರೈನ್ ಟೀಸರ್‌ಗಳು ನಮ್ಮ ಮನಸ್ಸಿಗೆ ಖುಷಿ ಕೊಡುತ್ತವೆ, ಮೆದುಳಿಗೆ ಚಾಲೆಂಜ್ ಹಾಕುತ್ತವೆ. ನಮ್ಮ ಗಣಿತ ಜ್ಞಾನವನ್ನು ಪರೀಕ್ಷೆ ಮಾಡುತ್ತವೆ.

ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದಿಷ್ಟು ಸಂಖ್ಯೆಗಳಿವೆ. ಈ ಸಂಖ್ಯೆಗಳಲ್ಲಿ ಮುಂದೆ ಬರುವ ಸಂಖ್ಯೆ ಯಾವುದು ಎಂದು ನೀವು ಕಂಡುಹಿಡಿಯಬೇಕು. ನೀವು ಗಣಿತದಲ್ಲಿ ಶಾರ್ಪ್ ಇದ್ರೆ ಇದಕ್ಕೆ ಥಟ್ಟಂತ ಉತ್ತರ ಹೇಳಬಹುದು. ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳಲು ನಿಮ್ಮ ಮೆದುಳು ಚುರುಕಾಗಿರಬೇಕು. ಹಾಗಾದರೆ ಸರಿ ಈ ಬ್ರೈನ್ ಟೀಸರ್‌ಗೆ ಉತ್ತರವೇನು ಕಂಡುಹಿಡಿಯಲು ಪ್ರಯತ್ನ ಮಾಡಿ.

5,2,7, 9, 16, 25 ನಂಬರ್‌ಗಳನ್ನು ಈ ಬ್ರೈನ್ ಟೀಸರ್‌ ಚಿತ್ರದಲ್ಲಿ ಬರೆಯಲಾಗಿದೆ. 25ರ ಮುಂದಿನ ಸಂಖ್ಯೆ ಯಾವುದು ಎಂದು ನೀವು ಕಂಡುಹಿಡಿಯಬೇಕು. ನಿಮಗಿರೋದು ಕೇವಲ 20 ಸೆಕೆಂಡ್ ಸಮಯ, ಅಷ್ಟರಲ್ಲಿ ನೀವು ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಬೇಕು.

Brainy Bits Hub ಎನ್ನುವ ಎಕ್ಸ್‌ಪುಟದಲ್ಲಿ ಈ ಬ್ರೈನ್ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಡಿಸೆಂಬರ್ 15 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 5 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 16ಕ್ಕೂ ಹೆಚ್ಚು ಜನ ಈ ಪೋಸ್ಟ್ ಅನ್ನು ರೀಪೋಸ್ಟ್ ಮಾಡಿದ್ದಾರೆ. 350ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ.

ಹಲವರು ಈ ಬ್ರೈನ್ ಟೀಸರ್‌ ಉತ್ತರ ಕಂಡುಕೊಳ್ಳಲು ತಮ್ಮಿಂದ ಸಾಧ್ಯವಾಗಿಲ್ಲ ಎಂದೇ ಕಾಮೆಂಟ್ ಮಾಡಿದ್ದಾರೆ. ಬ್ರೈನ್ ಟೀಸರ್‌ಗಳು ಟ್ರಿಕ್ಕಿಯಾಗಿರುತ್ತವೆ ನಿಜ, ಆದರೆ ಈ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಇಂದಿನ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: A+A=2, A+b=3 ಆದ್ರೆ A+B+C*4= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ 30 ಸೆಕೆಂಡ್ ಒಳಗೆ ಉತ್ತರ ಹೇಳಿ 

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆದ ಬ್ರೈನ್ ಟೀಸರ್‌ವೊಂದು ಮೆದುಳಿಗೆ ಹುಳ ಬಿಡೋದು ಸುಳ್ಳಲ್ಲ. ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಸಾಧ್ಯವಾಗುತ್ತದೆ. A+B+C*4= ಎಷ್ಟು? 30 ಸೆಕೆಂಡ್‌ ಒಳಗೆ ನೀವು ಉತ್ತರ ಹೇಳಬೇಕು.

Brain Teaser: ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ನಿಮ್ಮ ಮೆದುಳು ಚುರುಕಾಗಿದ್ರೆ ಥಟ್ಟಂತ ಉತ್ತರ ಹೇಳಿ

ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು ಎಂದು ನೀವು ಹೇಳಬೇಕು. ನಿಮಗಿರೋದು 10 ಸೆಕೆಂಡ್ ಸಮಯ, ಟ್ರೈ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ