logo
ಕನ್ನಡ ಸುದ್ದಿ  /  ಜೀವನಶೈಲಿ  /  ನನ್‌ ಕೈಯಲ್ಲಿ 25 ಲಕ್ಷ ರೂ ಬೇಕು ಅನ್ನೋದಾದ್ರೆ ದಿನಕ್ಕೆ 45 ರೂ ಉಳಿಸಿದ್ರೆ ಸಾಕು; ಹೇಗಂತೀರಾ, ಎಲ್‌ಐಸಿ ಜೀವನ್ ಆನಂದ್ ಪಾಲಿಸಿ ಲೆಕ್ಕ ನೋಡಿ

ನನ್‌ ಕೈಯಲ್ಲಿ 25 ಲಕ್ಷ ರೂ ಬೇಕು ಅನ್ನೋದಾದ್ರೆ ದಿನಕ್ಕೆ 45 ರೂ ಉಳಿಸಿದ್ರೆ ಸಾಕು; ಹೇಗಂತೀರಾ, ಎಲ್‌ಐಸಿ ಜೀವನ್ ಆನಂದ್ ಪಾಲಿಸಿ ಲೆಕ್ಕ ನೋಡಿ

Umesh Kumar S HT Kannada

Oct 12, 2024 05:00 PM IST

google News

25 ಲಕ್ಷ ರೂಪಾಯಿ ಫಂಡ್ ರಚಿಸುವುದಕ್ಕೆ ನೆರವಾಗುವ ಎಲ್‌ಐಸಿ ಜೀವನ್ ಆನಂದ್ ಪಾಲಿಸಿಯ ಸರಳ ಲೆಕ್ಕಾಚಾರವನ್ನು ಉಳಿತಾಯದ ಮಹತ್ವವನ್ನು ಅರ್ಥಮಾಡಿಸುವ ಸಲುವಾಗಿ ವಿವರಿಸಲಾಗಿದೆ. (ಸಾಂಕೇತಿಕ ಚಿತ್ರ)

  • ಸಣ್ಣ ಉಳಿತಾಯವೂ ದೊಡ್ಡ ಮೊತ್ತದ ನಿಧಿ ಸಂಗ್ರಹಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ ನನ್‌ ಕೈಯಲ್ಲಿ 25 ಲಕ್ಷ ರೂ ಬೇಕು ಅನ್ನೋದಾದ್ರೆ ದಿನಕ್ಕೆ 45 ರೂ ಉಳಿಸಿದ್ರೆ ಸಾಕು; ಹೇಗಂತೀರಾ, ಎಲ್‌ಐಸಿ ಜೀವನ್ ಆನಂದ್ ಪಾಲಿಸಿ ಲೆಕ್ಕ ನೋಡಿ. ಸರಳವಾಗಿ ಅರ್ಥಮಾಡಿಕೊಳ್ಳಬಹುದಾದ ವಿವರ ಇಲ್ಲಿದೆ.

25 ಲಕ್ಷ ರೂಪಾಯಿ ಫಂಡ್ ರಚಿಸುವುದಕ್ಕೆ ನೆರವಾಗುವ ಎಲ್‌ಐಸಿ ಜೀವನ್ ಆನಂದ್ ಪಾಲಿಸಿಯ ಸರಳ ಲೆಕ್ಕಾಚಾರವನ್ನು ಉಳಿತಾಯದ ಮಹತ್ವವನ್ನು ಅರ್ಥಮಾಡಿಸುವ ಸಲುವಾಗಿ ವಿವರಿಸಲಾಗಿದೆ. (ಸಾಂಕೇತಿಕ ಚಿತ್ರ)
25 ಲಕ್ಷ ರೂಪಾಯಿ ಫಂಡ್ ರಚಿಸುವುದಕ್ಕೆ ನೆರವಾಗುವ ಎಲ್‌ಐಸಿ ಜೀವನ್ ಆನಂದ್ ಪಾಲಿಸಿಯ ಸರಳ ಲೆಕ್ಕಾಚಾರವನ್ನು ಉಳಿತಾಯದ ಮಹತ್ವವನ್ನು ಅರ್ಥಮಾಡಿಸುವ ಸಲುವಾಗಿ ವಿವರಿಸಲಾಗಿದೆ. (ಸಾಂಕೇತಿಕ ಚಿತ್ರ) (LH)

ಬಹುಪಾಲು ಜನರು ತಮ್ಮ ಗಳಿಕೆಯಲ್ಲಿ ಸಣ್ಣ ಮೊತ್ತವನ್ನಾದರೂ ಉಳಿತಾಯ ಮಾಡಲು, ದೀರ್ಘಾವಧಿಯಲ್ಲಿ ದೊಡ್ಡ ಮೊತ್ತ ಒಟ್ಟುಗೂಡಿಸಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಬೇರೆ ಬೇರೆ ಹಣಕಾಸಿನ ಉತ್ಪನ್ನಗಳ ಕಡೆಗೆ ಗಮನಹರಿಸುತ್ತಿರುತ್ತಾರೆ. ಬಹುತೇಕ ಸುರಕ್ಷಿತ ಮತ್ತು ಹೆಚ್ಚಿನ ರಿಟರ್ನ್ಸ್‌ ಒದಗಿಸುವ ಉತ್ಪನಗಳನ್ನೇ ಆಯ್ಕೆ ಮಾಡುತ್ತಾರೆ. ಹಾಗೆ ನೋಡಿದರೆ, ದೇಶದ ಅತಿದೊಡ್ಡ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಉಳಿತಾಯ ಯೋಜನೆಗಳು ಭದ್ರತೆ ಮತ್ತು ಆದಾಯ ಎರಡರಲ್ಲೂ ಸಾಕಷ್ಟು ಜನಪ್ರಿಯವಾಗಿವೆ. ಎಲ್‌ಐಸಿಯು ಎಲ್ಲ ವಯಸ್ಸಿನ ಜನರಿಗೆ ಹೊಂದುವಂತಹ ಯೋಜನೆಗಳನ್ನು ಒದಗಿಸುತ್ತಿದೆ. ಇದರಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕವೂ ದೊಡ್ಡ ನಿಧಿಯನ್ನು ಸಂಗ್ರಹಿಸಬಹುದು. ಅಂತಹ ಒಂದು ಜನಪ್ರಿಯ ಯೋಜನೆ ಎಲ್‌ಐಸಿಯ ಜೀವನ್ ಆನಂದ್ ಪಾಲಿಸಿ. ಇದರಲ್ಲಿ ನೀವು ದಿನಕ್ಕೆ ಕೇವಲ 45 ರೂಪಾಯಿ ಹೂಡಿಕೆ ಮಾಡುವ ಮೂಲಕ 25 ಲಕ್ಷ ರೂಪಾಯಿಯನ್ನು ವಾಪಸ್‌ ಪಡೆಯಬಹುದು. ಅದರ ಸಂಪೂರ್ಣ ವಿವರ ಇಲ್ಲಿದೆ..

ಸಣ್ಣ ಉಳಿತಾಯ, ದೊಡ್ಡ ರಿಟರ್ನ್ಸ್‌

ಸಣ್ಣ ಮೊತ್ತದ ಪ್ರೀಮಿಯಂ ಮೂಲಕ ದೊಡ್ಡ ಮೊತ್ತದ ನಿಧಿ ಸಂಗ್ರಹಿಸಲು ನೀವು ಬಯಸುವುದಾದರೆ, ಜೀವನ್ ಆನಂದ್ ಪಾಲಿಸಿಯ ಈ ಲೆಕ್ಕಾಚಾರ ನಿಮ್ಮ ಗಮನಸೆಳೆಯಬಹುದು. ಒಂದು ರೀತಿಯಲ್ಲಿ ಇದು ಟರ್ಮ್ ಪ್ಲಾನ್ ಇದ್ದಂತೆ. ನಿಮ್ಮ ಪಾಲಿಸಿಯು ಜಾರಿಯಲ್ಲಿರುವವರೆಗೆ ನೀವು ಪ್ರೀಮಿಯಂ ಅನ್ನು ಪಾವತಿಸಬಹುದು. ಈ ಯೋಜನೆಯಲ್ಲಿ, ಪಾಲಿಸಿದಾರರಿಗೆ ಹೆಚ್ಚಿನ ಮೆಚ್ಯುರಿಟಿ ಪ್ರಯೋಜನಗಳು ಸಿಗುತ್ತವೆ. ಎಲ್‌ಐಸಿಯ ಈ ಪಾಲಿಸಿಯಲ್ಲಿ, ಕನಿಷ್ಠ 1 ಲಕ್ಷ ರೂ ಮೊತ್ತದ ವಿಮೆಯನ್ನು ಖಾತರಿಪಡಿಸಲಾಗಿದೆ, ಆದರೆ ಯಾವುದೇ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ವಿಮೆಯ ಮೊತ್ತ ಪ್ರೀಮಿಯಂ ಮೊತ್ತಕ್ಕೆ ಅನುಗುಣವಾಗಿ ನಿರ್ಧರಿಸಲ್ಪಡುತ್ತದೆ.

ದಿನಕ್ಕೆ 45 ರೂ ಉಳಿತಾಯ ಮಾಡಿ 25 ಲಕ್ಷ ಗಳಿಸುವುದು ಹೇಗೆ

ಎಲ್‌ಐಸಿಯ ಜೀವನ್ ಆನಂದ್ ಪಾಲಿಸಿಯಲ್ಲಿ, ಪ್ರತಿ ತಿಂಗಳು ಸುಮಾರು 1358 ರೂಪಾಯಿಗಳನ್ನು (ಅಂದರೆ ಪ್ರತಿ ದಿನ ಹೆಚ್ಚು ಕಡಿಮೆ 45 ರೂಪಾಯಿಯನ್ನು) ಪ್ರೀಮಿಯಂ ಆಗಿ ಪಾವತಿಸುವ ಮೂಲಕ 25 ಲಕ್ಷ ರೂಪಾಯಿ ಫಂಡ್ ರಚಿಸಬಹುದು. ಇದು ಸ್ವಲ್ಪ ದೀರ್ಘಾವಧಿ ಯೋಜನೆ. ವರ್ಷಕ್ಕೆ ನೀವು ಪಾವತಿಸಬೇಕಾದ ಪ್ರೀಮಿಯಂ 16,296 ರೂಪಾಯಿ. 35 ವರ್ಷ ನೀವು ಉಳಿತಾಯ ಮಾಡುವ ಹಣದ ಮೊತ್ತ 5,70,360 ರೂಪಾಯಿ. ಇದು ಹೇಗೆ 25 ಲಕ್ಷ ರೂಪಾಯಿ ಆಗುತ್ತೆ ಎಂಬುದು ನಿಮ್ಮ ಪ್ರಶ್ನೆ ಅಲ್ವ.

ಎಲ್‌ಐಸಿ ಜೀವನ್ ಆನಂದ್ ಪಾಲಿಸಿಯಲ್ಲಿ 35 ವರ್ಷದ ಮೆಚ್ಯುರಿಟಿ ಅವಧಿ ಬಳಿಕ ಅದು ಪಾಲಿಸಿದಾರರಿಗೆ ಒದಗಿಸುವ ಮೊತ್ತದ ಪ್ರಕಾರ ಮೂಲ ವಿಮೆ ಮೊತ್ತ 5 ಲಕ್ಷ ರೂಪಾಯಿ. ಇನ್ನು ಪರಿಷ್ಕರಣೆ ಬೋನಸ್‌ ಎಂದು 8.60 ಲಕ್ಷ ರೂಪಾಯಿ ಮತ್ತು ಅಂತಿಮ ಬೋನಸ್ ಎಂದು 11.50 ಲಕ್ಷ ರೂಪಾಯಿಯನ್ನು ಒದಗಿಸುತ್ತದೆ. ಹೀಗೆ ಒಟ್ಟು 25,80,360 ರೂಪಾಯಿ ನೀಡುತ್ತದೆ. ಇದಕ್ಕೆ ಪಾಲಿಸಿ ಗರಿಷ್ಠ 15 ವರ್ಷವಾದರೂ ಚಾಲ್ತಿಯಲ್ಲಿರಬೇಕು. ಉಳಿತಾಯದ ಲೆಕ್ಕಾಚಾರವನ್ನು ಅರ್ಥಮಾಡಿಸುವುದಕ್ಕೋಸ್ಕರ ಈ ಮಾಹಿತಿಯನ್ನು ನೀಡಲಾಗಿದೆ. ಪಾಲಿಸಿ ಖರೀದಿಸುವುದಾದರೆ ಅದರ ಸಾಧಕ ಬಾಧಕಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಮುಂದುವರಿಯಿರಿ.

ಇನ್ನು, ಭಾರತೀಯ ಜೀವ ವಿಮಾ ನಿಗಮದ ಜೀವನ್ ಆನಂದ್ ಪಾಲಿಸಿಯನ್ನು ಖರೀದಿಸುವ ಪಾಲಿಸಿದಾರರಿಗೆ ಯಾವುದೇ ತೆರಿಗೆ ವಿನಾಯಿತಿಯ ಲಾಭ ಈ ಪಾಲಿಸಿಯಲ್ಲಿ ಸಿಗುವುದಿಲ್ಲ. ಈ ಪಾಲಿಸಿಯಲ್ಲಿ ಹೆಚ್ಚುವರಿ ವಿಮಾ ರಕ್ಷಣೆಗಳನ್ನು ಪಡೆಯವುದಕ್ಕೆ ಅವಕಾಶವಿದೆ. ಹೆಚ್ಚಿನ ಮಾಹಿತಿ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್ ಅಥವಾ ಎಲ್‌ಐಸಿಯ ಶಾಖೆಯನ್ನು ಸಂಪರ್ಕಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ