logo
ಕನ್ನಡ ಸುದ್ದಿ  /  ಜೀವನಶೈಲಿ  /  ರಾತ್ರಿ ಊಟದ ಬದಲು ಬರೀ ಹಣ್ಣುಗಳನ್ನು ತಿನ್ನಬಹುದೇ? ಈ ಪ್ರಶ್ನೆ ನಿಮಗೂ ಇದ್ದರೆ, ಇಲ್ಲಿದೆ ನೋಡಿ ಪೌಷ್ಟಿಕ ಆಹಾರ ತಜ್ಞರು ನೀಡಿದ ಉತ್ತರ

ರಾತ್ರಿ ಊಟದ ಬದಲು ಬರೀ ಹಣ್ಣುಗಳನ್ನು ತಿನ್ನಬಹುದೇ? ಈ ಪ್ರಶ್ನೆ ನಿಮಗೂ ಇದ್ದರೆ, ಇಲ್ಲಿದೆ ನೋಡಿ ಪೌಷ್ಟಿಕ ಆಹಾರ ತಜ್ಞರು ನೀಡಿದ ಉತ್ತರ

Suma Gaonkar HT Kannada

Oct 02, 2024 06:16 PM IST

google News

ರಾತ್ರಿ ಊಟದ ಬದಲು ಬರೀ ಹಣ್ಣುಗಳನ್ನು ತಿನ್ನಬಹುದೇ?

    • ರಾತ್ರಿಯ ಊಟದಲ್ಲಿ ಹಣ್ಣನ್ನು ಮಾತ್ರ ತಿಂದರೆ ಏನಾಗುತ್ತದೆ ಎಂದು ಹಲವರಿಗೆ ಅನುಮಾನ ಇರುತ್ತದೆ. ಯಾಕೆಂದರೆ ಹೆಚ್ಚಿನ ಜನ ರಾತ್ರಿ ಊಟವನ್ನು ಸ್ಕಿಪ್ ಮಾಡಲು ಬಯಸುತ್ತಾರೆ. ಊಟದ ಬದಲು ಬೇರೆ ಏನಾದರೂ ತಿನ್ನಲು ಬಯಸುತ್ತಾರೆ. ಪೌಷ್ಟಿಕಾಂಶ ತಜ್ಞರು ಏನು ಹೇಳುತ್ತಾರೆಂಬ ಮಾಹಿತಿ ಇಲ್ಲಿದೆ.
ರಾತ್ರಿ ಊಟದ ಬದಲು ಬರೀ ಹಣ್ಣುಗಳನ್ನು ತಿನ್ನಬಹುದೇ?
ರಾತ್ರಿ ಊಟದ ಬದಲು ಬರೀ ಹಣ್ಣುಗಳನ್ನು ತಿನ್ನಬಹುದೇ?

ಫೈಬರ್ ಮತ್ತು ವಿಟಮಿನ್‌ಗಳಿರುವ ಹಣ್ಣುಗಳನ್ನು ನೀವು ತಿನ್ನಬಹುದು. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಣ್ಣು ಒಂದು ಉತ್ತಮ ಆಯ್ಕೆ. ಬೇಯಿಸಿದ ತರಕಾರಿಗಳು, ರೊಟ್ಟಿ ಅಥವಾ ಅನ್ನವನ್ನು ಊಟ ಮಾಡುವ ಬದಲು ನೀವು ಬರೀ ಹಣ್ಣುಗಳನ್ನೇ ತಿಂದರೆ ಏನಾಗುತ್ತದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ತೂಕ ಕಡಿಮೆ ಮಾಡಿಕೊಳ್ಳಲು ಆಸಕ್ತಿ ಇರುವ ಕೆಲವು ಜನರು ರಾತ್ರಿ ಊಟವನ್ನು ಮಾಡದೇ ಇದ್ದರೆ ತಾವು ಸಣ್ಣ ಆಗುತ್ತೇವೆ ಎಂದು ಅಂದುಕೊಳ್ಳುತ್ತಾರೆ. ವಿಶೇಷವಾಗಿ ರಾತ್ರಿ ಹಣ್ಣುಗಳನ್ನು ಮಾತ್ರ ತಿನ್ನಲು ಬಯಸುತ್ತಾರೆ. ಆದರೆ ಕೇವಲ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ.

ಇನ್ನೊಬ್ಬರ ಮಾತು ಕೇಳಬೇಡಿ

ಯಾರೇ ಆಗಲಿ ಇನ್ನೊಬ್ಬರ ಮಾತನ್ನು ನಂಬಿ ನಿರ್ಧಾರ ತೆಗೆದುಕೊಳ್ಳುವುದು ಸರಿ ಅಲ್ಲ. ಒಬ್ಬೊಬ್ಬರ ದೇಹ ಒಂದೊಂದು ರೀತಿಯಲ್ಲಿ ಇರುತ್ತದೆ. ಒಬ್ಬೊಬ್ಬರ ಆರೋಗ್ಯ ಸ್ಥಿತಿ ಒಂದೊಂದು ರೀತಿ ಇರುತ್ತದೆ. ರಾತ್ರಿಯ ಊಟವು ಹಗುರವಾಗಿರಬೇಕು ಅಂದರೆ ಲೈಟ್‌ ಫುಡ್‌ ಆಗಿರಬೇಕು. ಆದರೆ ಸಾಂಪ್ರದಾಯಿಕವಾಗಿ ವಿಧಾನದಲ್ಲಿ ತುಪ್ಪವನ್ನು ಹಾಕಿ ಪಲಾವ್, ಬಿಸಿಬೇಳೆ ಬಾತ್, ಖಿಚಡಿ ಮತ್ತು ರಾಗಿ ದೋಸೆಗಳನ್ನು ಮಾಡಿಕೊಂಡು ತಿನ್ನುತ್ತಾರೆ. ಇದರಿಂದಾಗಿ ಸಮಸ್ಯೆ ಆಗುತ್ತದೆ.

ಇನ್ನು ಪ್ರತಿದಿನ ಈ ರೀತಿ ಆಹಾರ ಸೇವನೆ ಮಾಡುತ್ತಾ ಇರುವವರು, ಒಂದೇ ಬಾರಿಗೆ ಬೇರೆ ರೀತಿ ಆಹಾರ ಸೇವನೆ ಮಾಡಲು ಆರಂಭಿಸಿದಾಗ ತೊಂದರೆ ಆಗುತ್ತದೆ. ಹೆಚ್ಚಿನ ಹಸಿವು ನಿಮ್ಮನ್ನು ಕಾಡುತ್ತದೆ ಎಂದು ನ್ಯೂಟ್ರಿಷನಿಸ್ಟ್ ಜೂಹಿ ಕಪೂರ್ ಹೇಳಿದ್ದಾರೆ.

ರಾತ್ರಿ ಊಟಕ್ಕೆ ಒಳ್ಳೆಯದಲ್ಲ

ರಾತ್ರಿಯ ಊಟದಲ್ಲಿ ಹಣ್ಣುಗಳನ್ನು ಮಾತ್ರ ತಿನ್ನುವುದು ಒಳ್ಳೆಯದಲ್ಲ. ಅದರಲ್ಲೂ ಎಲ್ಲಾ ಹಣ್ಣುಗಳನ್ನು ಕತ್ತರಿಸಿ ತಿನ್ನುವುದು ಆರೋಗ್ಯಕ್ಕೆ ಇನ್ನೂ ಒಳ್ಳೆಯದಲ್ಲ. ಗೋಧಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಗಳಿವೆ ಎಂದು ನಾವು ಭಾವಿಸುತ್ತೇವೆ. ಆದರೆ ಹಣ್ಣುಗಳು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ ಮತ್ತು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಹಣ್ಣುಗಳನ್ನು ಬೆಳಗಿನ ಉಪಾಹಾರದಲ್ಲಿ ಅಥವಾ ಸಂಜೆಯ ಲಘು ಉಪಹಾರವಾಗಿ ಸೇವನೆ ಮಾಡಬಹುದು.

ಊಟದಲ್ಲಿ ಸ್ವಲ್ಪ ಪ್ರಮಾಣದ ಹಣ್ಣುಗಳನ್ನು ಸೇವಿಸುವುದು ಉತ್ತಮ

ಊಟದಲ್ಲಿ ಸ್ವಲ್ಪ ಪ್ರಮಾಣದ ಹಣ್ಣುಗಳನ್ನು ಸೇವಿಸುವುದು ಉತ್ತಮ. ಆದರೆ ನಿಮ್ಮ ಊಟವೇ ಹಣ್ಣುಗಳಿಂದ ಕೂಡಿರಬಾರದು. ಸಮತೋಲಿತ ಆಹಾರದಿಂದ ಮಾತ್ರ ನಾವು ನಮ್ಮ ದೈನಂದಿನ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸಬಹುದು, ಧಾನ್ಯಗಳು, ದ್ವಿದಳ ಧಾನ್ಯಗಳು, ಹಾಲು ಮತ್ತು ಹಾಲಿನ ಉತ್ಪನ್ನದ ಅವಶ್ಯಕತೆ ದೇಹಕ್ಕೆ ಇರುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ