ಮುಖದ ಮೇಲೆ ಬೆಳೆಯುವ ಕೂದಲು ಸೌಂದರ್ಯಕ್ಕೆ ಅಡ್ಡಿಯಾಗುತ್ತಾ; ಪಾರ್ಲರ್‌ಗೆ ಹೋಗೋದೇ ಬೇಡ, ಈ ಮನೆಮದ್ದು ಮಾಡಿ ನೋಡಿ
Beauty Tips: ಕೆಲವು ಮಹಿಳೆಯರಲ್ಲಿ ತುಟಿಯ ಮೇಲ್ಭಾಗ, ಗಲ್ಲದ ಮೇಲೆ ಅನಗತ್ಯವಾಗಿ ಕೂದಲುಗಳು ಬೆಳೆಯುವುದನ್ನು ಕಾಣಬಹುದು. ಅದಕ್ಕೆ ಹಾರ್ಮೋನ್ ವ್ಯತ್ಯಾಸವೇ ಕಾರಣವಾಗಿದೆ. ನೈಸರ್ಗಿಕವಾಗಿಯೇ ಆ ಕೂದಲುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ಓದಿ.
ಅಂದದ ಮುಖದಲ್ಲಿ ಅನಗತ್ಯ ಕೂದಲುಗಳಿದ್ದರೆ ಅದು ಸೌಂದರ್ಯಕ್ಕೆ ಧಕ್ಕೆ ತರುತ್ತದೆ. ಹಾಗಾಗಿ ಮಹಿಳೆಯರು ಆಗಾಗ ಬ್ಯೂಟಿಪಾರ್ಲರ್‌ಗೆ ಭೇಟಿ ನೀಡುವ ಸಂದರ್ಭ ಬರುತ್ತದೆ. ಆದರೆ ಅದು ತಾತ್ಕಾಲಿಕ ಪರಿಹಾರ. ಸಮಸ್ಯೆಯ ಮೂಲ ಇರುವುದು ಹಾರ್ಮೋನ್‌ಗಳಲ್ಲಾಗುವ ವ್ಯತ್ಯಾಸದಿಂದ. ಮುಖದ ಮೇಲೆ ಬರುವ ಅನಗತ್ಯ ಕೂದಲುಗಳು ಸೌಂದರ್ಯಕ್ಕಷ್ಟೇ ಸಮಸ್ಯೆ ತೊಂದೊಡ್ಡುವುದಿಲ್ಲ, ಬದಲಿಗೆ ಅದು ದೇಹದಲ್ಲಿರುವ ಸಮಸ್ಯೆಯನ್ನು ಹೇಳುತ್ತದೆ. ಹಾರ್ಮೋನ್‌ಗಳ ವ್ಯತ್ಯಾಸದಿಂದ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅವುಗಳಲ್ಲಿ ಡೈಹೈಡ್ರೊಟೆಸ್ಟೋಸ್ಟೆರಾನ್ (DHT) ಹಾರ್ಮೋನ್ ಕೂಡಾ ಒಂದು. ಈ ಹಾರ್ಮೋನ್ ದೇಹದಲ್ಲಿ ಜಾಸ್ತಿಯಾದರೆ, ಮಹಿಳೆಯರಿಗೂ ಪುರುಷರಂತೆ ಕೂದಲುಗಳು ಬರಲು ಪ್ರಾರಂಭವಾಗುತ್ತದೆ. ಮುಖ, ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ಕೂದಲು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಹಿರ್ಸುಟಿಸಮ್ ಎಂದು ಕರೆಯುತ್ತಾರೆ. ಹಾಗಾಗಿ ಪಾರ್ಲರ್‌ಗೆ ಅದೆಷ್ಟೇ ಭೇಟಿ ನೀಡಿದರೂ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಏಕೆಂದರೆ ಇದು ದೇಹದ ಒಳಗಿರುವ ಸಮಸ್ಯೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆಗ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಅನಗತ್ಯ ಕೂದಲ ಸಮಸ್ಯೆಗೆ ಮನೆಮದ್ದು
ಮೆಂತ್ಯ ನೀರು: ದೇಹದಲ್ಲಿ DHT ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಲು ಮೆಂತ್ಯ ನೀರು ಉತ್ತಮವಾಗಿದೆ. ಮೆಂತ್ಯದ ನೀರನ್ನು ಕುಡಿಯುವುದರ ಮೂಲಕ ದಿನವನ್ನು ಪ್ರಾರಂಭಿಸಿ. ಹೀಗೆ ಮಾಡುವುದರಿಂದ ಮುಖದ ಮೇಲೆ ಬರುವ ಕೂದಲು ಕಡಿಮೆಯಾಗುತ್ತದೆ.
ಪುದೀನಾ ಟೀ: ಪುದೀನಾ ಟೀಯನ್ನು ದಿನಕ್ಕೆರಡು ಬಾರಿ ಸೇವಿಸಿ. ಇದು ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಮಹಿಳೆಯರಲ್ಲಿ ಕಂಡುಬರುವ ಪಿಸಿಓಎಸ್ ಹಾಗೂ ಹಿರ್ಸುಟಿಸಮ್ ಎರಡನ್ನೂ ನಿವಾರಿಸುತ್ತದೆ. ಇದಲ್ಲದೇ ಅನಗತ್ಯ ಕೂದಲು ಹುಟ್ಟುವ ಮುಖದ ಭಾಗದಲ್ಲಿ ಪುದೀನಾ ಎಣ್ಣೆಯನ್ನು ಹಚ್ಚಿ. ಈ ಎಣ್ಣೆಯು ಆಂಡ್ರೊಜೆನ್ ಮಟ್ಟವನ್ನು ಕಡಿಮೆ ಮಾಡುವುದರ ಮೂಲಕ ಮುಖದ ಮೇಲಿನ ಕೂದಲು ಬೆಳವಣಿಗೆಯನ್ನು ತಡೆಯುತ್ತದೆ.
ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರ ಸೇವಿಸಿ: ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ತಿನ್ನಲು ಪ್ರಯತ್ನಿಸಿ. ಇದು ಬಾದಾಮಿ ಮತ್ತು ಹಸಿರು ಸೊಪ್ಪಿನಲ್ಲಿ ಅಧಿಕವಾಗಿರುತ್ತದೆ. ಅವುಗಳು ಮೂಲಕ ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ ಮುಖದ ಮೇಲೆ ಕೂದಲು ಬೆಳೆಯುವುದು ನಿಲ್ಲುತ್ತದೆ.
ದಾಲ್ಚಿನ್ನಿ ನೀರು ಕುಡಿಯಿರಿ: ಊಟದ ನಂತರ ದಾಲ್ಚಿನ್ನಿ ನೀರನ್ನು ಕುಡಿಯಿರಿ . ಈ ನೀರನ್ನು ಕುಡಿಯುವುದರಿಂದ ಇನ್ಸುಲಿನ್ ಸೆನ್ಸಿಟಿವಿಟಿ ಕಡಿಮೆಯಾಗುತ್ತದೆ ಮತ್ತು ಆಂಡ್ರೊಜೆನ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಡಯಟ್‌ನಲ್ಲಿ ಸತು ಅಂಶ ಹೆಚ್ಚಿರುವ ಆಹಾರ ಸೇವಿಸಿ: ಕುಂಬಳಕಾಯಿ ಬೀಜಗಳು ಮತ್ತು ವೈಟ್ ಬೀನ್ಸ್‌ನಂತಹವುಗಳು ಜಿಂಕ್ (ಸತು) ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಹಾಗಾಗಿ ಅಂತಹ ಜಿಂಕ್ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ. ಜಿಂಕ್ ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಡೈಹೈಡ್ರೊಟೆಸ್ಟೋಸ್ಟೆರಾನ್ ಆಗಿ ಪರಿವರ್ತಿಸುವ ಕಿಣ್ವದ ರಚನೆಯನ್ನು ತಡೆಯುತ್ತದೆ. ಇದು ಮುಖದ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ರೋಟೀನ್ ಆಹಾರ ಸೇವಿಸಿ: ಮೆಂತ್ಯ ಬೀಜಗಳು ಮತ್ತು ಕಡಲೆ ಬೇಳೆ ಸೇರಿಸಿ ತಯಾರಿಸಿದ ಸಲಾಡ್‌ಗಳನ್ನು ಸೇವಿಸಿ. ಪ್ರೋಟೀನ್-ಭರಿತ ಆಹಾರಗಳನ್ನು ತಿನ್ನುವುದರಿಂದ ಇನ್ಸುಲಿನ್ ಸೆನ್ಸಿಟಿವಿಟಿ ತಡೆಯಬಹುದಾಗಿದೆ. ಅದು ಮುಖದ ಕೂದಲಿನ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.