logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಮಹಿಳೆಯರು ಆಕಸ್ಮಿಕವಾಗಿಯೂ ಈ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಗೌರವಕ್ಕೆ ಧಕ್ಕೆಯಾಗುತ್ತೆ

Chanakya Niti: ಚಾಣಕ್ಯರ ಪ್ರಕಾರ ಮಹಿಳೆಯರು ಆಕಸ್ಮಿಕವಾಗಿಯೂ ಈ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಗೌರವಕ್ಕೆ ಧಕ್ಕೆಯಾಗುತ್ತೆ

Reshma HT Kannada

Dec 04, 2024 10:42 AM IST

google News

ಚಾಣಕ್ಯ ನೀತಿ

    • ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಜೀವನದ ಹಲವು ಅಂಶಗಳ ಬಗ್ಗೆ ಮಾತನಾಡಿದ್ದಾರೆ. ಜೀವನದಲ್ಲಿ ನಾವು ಅನುಸರಿಸಬೇಕಾದ ಹಾಗೂ ಅನುಸರಿಸಬಾರದಂತಹ ವಿಚಾರಗಳ ಬಗ್ಗೆ ಚಾಣಕ್ಯರು ಸ್ವಷ್ಟವಾಗಿ ವಿವರಿಸಿದ್ದಾರೆ. ಅವರ ಪ್ರಕಾರ ಹೆಣ್ಣುಮಕ್ಕಳ ತಪ್ಪಿಯೂ ಈ ವಿಚಾರಗಳನ್ನ ಯಾರೊಂದಿಗೂ ಹಂಚಿಕೊಳ್ಳಬಾರದು. ಇದರಿಂದ ಅವರ ಗೌರವ, ಘನತೆಗೆ ಹಾನಿಯಾಗುವ ಸಾಧ್ಯತೆ ಇದೆ.
ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ಪ್ರಸಿದ್ಧ ವಿದ್ವಾಂಸ ಹಾಗೂ ರಾಜತಾಂತ್ರಿಕ. ಅವರು ತಮ್ಮ ಜೀವಿತಾವಧಿಯಲ್ಲಿ ಹಲವು ರೀತಿಯ ನೀತಿಗಳನ್ನು ರೂಪಿಸಿದ್ದಾರೆ. ಅವರ ನೀತಿಗಳನ್ನು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ಸದಾ ಸಂತೋಷದಿಂದಿರುತ್ತಾನೆ. ಯಶಸ್ಸು ಅವನನ್ನು ಯಾವಾಗಲೂ ಹಿಂಬಾಲಿಸುತ್ತದೆ ಎಂಬ ನಂಬಿಕೆ ಇದೆ.

ಚಾಣಕ್ಯರ ಪ್ರಕಾರ ನಾವು ಕೆಲವು ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅದರಲ್ಲೂ ಮಹಿಳೆಯರು ಈ ಕೆಲವು ವಿಚಾರಗಳನ್ನ ತಪ್ಪಿಯೂ ಇನ್ನೊಬ್ಬರ ಜೊತೆ ಹಂಚಿಕೊಳ್ಳಬಾರದು. ಈ ವಿಚಾರಗಳನ್ನ ಬೇರೆಯವರ ಜೊತೆ ಹಂಚಿಕೊಂಡರೆ ಅವರ ಗೌರವ, ಘನತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹಾಗಾದರೆ ಚಾಣಕ್ಯರು ಯಾವ ವಿಚಾರಗಳನ್ನು ಹಂಚಿಕೊಳ್ಳಬಾರದು ಎಂದು ಹೇಳಿದ್ದಾರೆ ನೋಡಿ.

ಹಣಕಾಸಿನ ಸಮಸ್ಯೆಗಳು

ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ತಮ್ಮ ಆದಾಯ, ಹೂಡಿಕೆ ಮತ್ತು ಸಾಲದ ಬಗ್ಗೆ ಯಾವುದೇ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಹಾಗೆ ಮಾಡಿದರೆ ಕೆಲವೊಮ್ಮೆ ಇತರ ವ್ಯಕ್ತಿಗಳು ಅವರನ್ನು ಅವಮಾನಿಸಬಹುದು. ಈ ವಿಷಯಗಳನ್ನು ನಿಮ್ಮ ಪತಿಯಿಂದಲೂ ಮರೆ ಮಾಡಲು ಪ್ರಯತ್ನಿಸಿ. ಕೆಲವೊಮ್ಮೆ ಹಣಕಾಸಿನ ವಿಚಾರವನ್ನು ಬೇರೆಯವರೊಂದಿಗೆ ಹೇಳಿಕೊಳ್ಳುವುದು ನಿಮ್ಮನ್ನು ಆಮಿಷಗಳಿಗೆ ಒಡ್ಡುವಂತೆ ಕೂಡ ಮಾಡಬಹುದು. ಹಾಗಾಗಿ ನಿಮ್ಮ ಹಣಕಾಸಿನ ಸಮಸ್ಯೆ ನಿಮ್ಮಲ್ಲೇ ಇರಲಿ.

ಸಂಬಂಧದ ವಿಚಾರ

ನೀವು ಯಾವುದೇ ರೀತಿಯ ಸಂಬಂಧದಲ್ಲಿದ್ದರೆ ಈ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಪ್ರೀತಿ–ಪ್ರೇಮ ಸಂಬಂಧವಾದರೂ ಸರಿ, ಆ ವಿಚಾರವನ್ನ ನಿಮ್ಮಲ್ಲೇ ಇರಿಸಿಕೊಳ್ಳಬೇಕು. ಬೇರೆಯವರೊಂದಿಗೆ ಹಂಚಿಕೊಂಡರೆ ನಿಮ್ಮ ಗೌರವ, ಘನತೆಗೆ ಧಕ್ಕೆ ಬರುವುದು ಖಂಡಿತ. ಇದು ನಿಮ್ಮ ಸ್ವಾಭಿಮಾನವನ್ನೂ ಕುಗ್ಗಿಸಬಹುದು.

ವೈಯಕ್ತಿಕ ಸಮಸ್ಯೆಗಳು

ಆಚಾರ್ಯ ಚಾಣಕ್ಯರ ಪ್ರಕಾರ ಮಹಿಳೆ ತನ್ನ ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅವರು ಈ ವಿಷಯಗಳನ್ನು ತಮ್ಮ ಅಥವಾ ಕುಟುಂಬಕ್ಕೆ ಮಾತ್ರ ಸಿಮೀತವಾಗಿ ಇಟ್ಟುಕೊಳ್ಳಬೇಕು. ಈ ವಿಷಯಗಳನ್ನು ಎಂದಿಗೂ ಹೊರಗಿನವರೊಂದಿಗೆ ಹಂಚಿಕೊಳ್ಳಬಾರದು.

ಭವಿಷ್ಯದ ಯೋಜನೆ

ಚಾಣಕ್ಯ ನೀತಿಯ ಪ್ರಕಾರ ಮಹಿಳೆ ಯಾವಾಗಲೂ ತನ್ನ ಭವಿಷ್ಯದ ಯೋಜನೆಗಳನ್ನು ಅಥವಾ ವೃತ್ತಿಜೀವನದ ಗುರಿಗಳನ್ನು ಇತರರಿಂದ ಮರೆಮಾಡಬೇಕು. ಈ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದು ಕೂಡ ಬೇರೆಯವರಿಂದ ಅವರ ಘನತೆ ಹಾಳು ಮಾಡಲು ಕಾರಣವಾಗಬಹುದು.

ಆರೋಗ್ಯ ಸಮಸ್ಯೆಗಳು

ಮಹಿಳೆ ತನ್ನ ಆರೋಗ್ಯ ಸಮಸ್ಯೆಗಳ ಬಗ್ಗೆ ಯಾರಿಗೂ ಹೇಳಬಾರದು. ನಿಮ್ಮ ಸಮಸ್ಯೆಗಳನ್ನು ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಜನರೊಂದಿಗೆ ಮಾತ್ರ ನೀವು ಹಂಚಿಕೊಳ್ಳಬೇಕು. ಇದನ್ನು ಕೂಡ ದುರಪಯೋಗ ಮಾಡಿಕೊಳ್ಳುವವರು ಸಂಖ್ಯೆ ಹೆಚ್ಚು.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ