logo
ಕನ್ನಡ ಸುದ್ದಿ  /  ಜೀವನಶೈಲಿ  /  Baby Food: ಮನೆಯಲ್ಲೇ ತಯಾರಿಸಿ ರಾಗಿ ಸೆರಿಲ್ಯಾಕ್‌, ನಿಮ್ಮ ಕಂದಮ್ಮನ ಆರೋಗ್ಯಕ್ಕೆ ಸಿರಿಧಾನ್ಯಗಳ ಈ ಆಹಾರವೇ ಬೆಸ್ಟ್‌; ರೆಸಿಪಿ ಹೀಗಿದೆ

Baby Food: ಮನೆಯಲ್ಲೇ ತಯಾರಿಸಿ ರಾಗಿ ಸೆರಿಲ್ಯಾಕ್‌, ನಿಮ್ಮ ಕಂದಮ್ಮನ ಆರೋಗ್ಯಕ್ಕೆ ಸಿರಿಧಾನ್ಯಗಳ ಈ ಆಹಾರವೇ ಬೆಸ್ಟ್‌; ರೆಸಿಪಿ ಹೀಗಿದೆ

Reshma HT Kannada

Oct 07, 2024 10:49 AM IST

google News

ಮನೆಯಲ್ಲೇ ರಾಗಿ ಸೆರಿಲ್ಯಾಕ್‌ ಮಾಡುವ ವಿಧಾನ

    • ಕಳೆದ ಕೆಲವು ದಿನಗಳಿಂದ ಮಕ್ಕಳ ಆಹಾರದಲ್ಲಿ ಹಲವು ರೀತಿಯ ರಾಸಾಯನಿಕಗಳನ್ನು ಸೇರಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸೆರಿಲ್ಯಾಕ್‌ನಂತಹ ಶಿಶು ಆಹಾರದಲ್ಲಿ ಅತ್ಯಧಿಕ ಸಕ್ಕರೆ ಅಂಶ ಪತ್ತೆಯಾಗಿದೆ. ಆ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಹೊಂದುವ ಆಹಾರವನ್ನು ಮನೆಯಲ್ಲೇ ತಯಾರಿಸುವುದು ಉತ್ತಮ. ಸಿರಿಧಾನ್ಯಗಳ ಸೆರಿಲ್ಯಾಕ್‌ ಅನ್ನು ಮನೆಯಲ್ಲಿ ತಯಾರಿಸಿ, ರೆಸಿಪಿ ಇಲ್ಲಿದೆ
ಮನೆಯಲ್ಲೇ ರಾಗಿ ಸೆರಿಲ್ಯಾಕ್‌ ಮಾಡುವ ವಿಧಾನ
ಮನೆಯಲ್ಲೇ ರಾಗಿ ಸೆರಿಲ್ಯಾಕ್‌ ಮಾಡುವ ವಿಧಾನ

ಶಿಶುಗಳಿಗೆ ನೀಡುವ ಆಹಾರದ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಮಕ್ಕಳಿಗೆ ನೀಡುವ ಆಹಾರದಲ್ಲಿ ಕೊಂಚ ವ್ಯತ್ಯಯವಾದ್ರೂ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಮಾತ್ರವಲ್ಲ ಇದು ಅವುಗಳಲ್ಲಿ ದೀರ್ಘಕಾಲದ ಸಮಸ್ಯೆಗಳು ಉದ್ಭವವಾಗಲು ಕಾರಣವಾಗಬಹುದು. ಇತ್ತೀಚಿನ ವರದಿಯ ಪ್ರಕಾರ ನೆಸ್ಲೆ ಕಂಪನಿಯ ಸೆರಿಲ್ಯಾಕ್‌ನಲ್ಲಿ ಸಕ್ಕರೆ ಅಂಶ ಅಧಿಕವಾಗಿರುವುದು ಬೆಳಕಿಗೆ ಬಂದಿದೆ. ಇನ್ನೂ ಕೆಲವು ಶಿಶು ಆಹಾರಗಳಲ್ಲಿ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಹೀಗಾಗಿ ಮನೆಯಲ್ಲೇ ಶಿಶು ಆಹಾರಗಳನ್ನು ತಯಾರಿಸುವುದು ಉತ್ತಮ. ಸಿರಿಧಾನ್ಯಗಳಿಂದ ಮಕ್ಕಳ ಮಕ್ಕಳ ಆಹಾರವನ್ನು ಮನೆಯಲ್ಲೇ ತಯಾರಿಸಬಹುದು. ಅದರಲ್ಲೂ ರಾಗಿ ಬೆಸ್ಟ್‌ ಎನ್ನಬಹುದು. ರಾಗಿಯಿಂದ ತಯಾರಿಸಿದ ಶಿಶು ಆಹಾರವು ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಹಿಟ್ಟಿನಿಂದ ಬೇಬಿ ಫುಡ್ ಮಾಡಿ ಶೇಖರಿಸಿಟ್ಟರೆ ಮೂರು ತಿಂಗಳು ಬಳಸಬಹುದು. ಇದನ್ನು ಮಾಡುವುದು ಕೂಡ ತುಂಬಾ ಸುಲಭ.

ರಾಗಿ ಸೆರಿಲ್ಯಾಕ್‌ ಮಾಡುವ ವಿಧಾನ 

ರಾಗಿ ಸೆರಿಲ್ಯಾಕ್‌ಗೆ ಬೇಕಾಗುವ ಸಾಮಗ್ರಿಗಳು: ರಾಗಿಹಿಟ್ಟು - ಒಂದು ಕಪ್, ಅಕ್ಕಿ - ಅರ್ಧ ಕಪ್, ಬಾದಾಮಿ - ಒಂದು ಮುಷ್ಟಿ, ಹೆಸರುಬೇಳೆ - ಕಾಲು ಕಪ್

ರಾಗಿ ಸೆರಿಲ್ಯಾಕ್‌ ತಯಾರಿಸುವ ವಿಧಾನ: ರಾಗಿ, ಅಕ್ಕಿ ಮತ್ತು ಬೇಳೆಯನ್ನು ತೊಳೆದು ನೆರಳಿನಲ್ಲಿ ಒಣಗಿಸಿ, ಬದಿಗಿಟ್ಟುಕೊಳ್ಳಿ. ಒಲೆಯ ಮೇಲೆ ಪಾತ್ರೆ ಇಟ್ಟು ರಾಗಿ, ಅಕ್ಕಿ, ಹೆಸರು, ಬಾದಾಮಿ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಈ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ರುಣ್ಣಗೆ ಪುಡಿ ಮಾಡಿಕೊಳ್ಳಿ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ ಇಡಿ. ಮಗುವಿಗೆ ಹಾಲುಣಿಸುವ ಮೊದಲು ಎರಡು ಚಮಚ ಪುಡಿಗೆ ಬಿಸಿನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಒಲೆಯ ಮೇಲಿರಿಸಿ ಸಣ್ಣ ಉರಿಯಲ್ಲಿ ಕುದಿಸಿ, ಇದಕ್ಕೆ ಚಿಟಿಕೆ ಉಪ್ಪು ಸೇರಿಸಿ. ಒಲೆಯ ಮೇಲಿರುವಾಗ ಉಂಡೆಯಾಗದಂತೆ ಚಮಚದಿಂದ ಚೆನ್ನಾಗಿ ಕಲೆಸಿ. ಈ ಮಿಶ್ರಣ ಸ್ವಲ್ಪ ದಪ್ಪವಾದಾಗ ಸ್ಟೌ ಆಫ್‌ ಮಾಡಿ. ಮಿಶ್ರಣಕ್ಕೆ ಕಾಲು ಚಮಚ ತುಪ್ಪ ಹಾಕಿ ತಣ್ಣಗಾದ ನಂತರ ಮಕ್ಕಳಿಗೆ ತಿನ್ನಿಸಿ.

ಈ ಮಗುವಿನ ಆಹಾರದಲ್ಲಿ ನಾವು ಯಾವುದೇ ಸಂರಕ್ಷಕಗಳನ್ನು ಸೇರಿಸುವುದಿಲ್ಲ. ಸಾವಯವವಾಗಿ ತಯಾರಿಸಲಾಗುತ್ತದೆ. ಹಾಗಾಗಿ ಮಕ್ಕಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮಕ್ಕಳಿಗೆ ತಯಾರಿಸುವ ಆಹಾರಗಳಿಗೆ ಸಕ್ಕರೆ ಹಾಕಬೇಡಿ. ಸಾಧ್ಯವಾದರೆ ಬೆಲ್ಲ ಸೇರಿಸಿ. ಬಿಳಿ ಬೆಲ್ಲಕ್ಕಿಂತ ಸ್ವಲ್ಪ ಕಪ್ಪು ಬೆಲ್ಲ ಉತ್ತಮ. ಬಿಳಿ ಬೆಲ್ಲದಲ್ಲಿ ಹೆಚ್ಚಿನ ಸಕ್ಕರೆ ಅಂಶವಿರುವ ಸಾಧ್ಯತೆ ಇದೆ. ಬೆಲ್ಲ ಹಾಕಿದರೆ ತುಂಬಾ ಒಳ್ಳೆಯದು. ಸಾವಯವ ಬೆಲ್ಲವೂ ಲಭ್ಯವಿದೆ. ಒಂದೆಡೆ ಹಾಕಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಸಿಹಿ ಬೇಡ ಎಂದಾದರೆ ಚಿಟಿಕೆ ಉಪ್ಪು, ತುಪ್ಪ ಹಾಕಿ ತಿನ್ನಿಸಿ, ಮಕ್ಕಳು ಖುಷಿಯಿಂದ ತಿನ್ನುತ್ತಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ