logo
ಕನ್ನಡ ಸುದ್ದಿ  /  ಜೀವನಶೈಲಿ  /  ಆಭರಣ ಪ್ರಿಯರು ಗಮನಿಸಿ; ಬೆಳ್ಳಿ ಆಭರಣಗಳನ್ನು ತೊಳೆಯುವ, ಕಪ್ಪಾಗದಂತೆ ಜೋಪಾನ ಮಾಡುವ ಸರಿಯಾದ ಕ್ರಮ ಇಲ್ಲಿದೆ ನೋಡಿ

ಆಭರಣ ಪ್ರಿಯರು ಗಮನಿಸಿ; ಬೆಳ್ಳಿ ಆಭರಣಗಳನ್ನು ತೊಳೆಯುವ, ಕಪ್ಪಾಗದಂತೆ ಜೋಪಾನ ಮಾಡುವ ಸರಿಯಾದ ಕ್ರಮ ಇಲ್ಲಿದೆ ನೋಡಿ

Reshma HT Kannada

Nov 06, 2024 12:05 PM IST

google News

ಬೆಳ್ಳಿ ಆಭರಣ

    • ಭಾರತೀಯರು ಚಿನ್ನದ ಆಭರಣ ಪ್ರಿಯರಾದ್ರೂ ಬೆಳ್ಳಿ ಆಭರಣಗಳೂ ಅವರಿಗೆ ಇಷ್ಟ. ಆದರೆ ಚಿನ್ನಕ್ಕಿಂತ ಬೆಳ್ಳಿ ಆಭರಣ ಬೇಗ ಮಸುಕಾಗುತ್ತದೆ. ಇದನ್ನು ಸರಿಯಾಗಿ ಜೋಪಾನ ಮಾಡಿಲ್ಲ ಅಂದ್ರೆ ಬೇಗನೆ ಕಪ್ಪಾಗುತ್ತದೆ. ಹಾಗಾದರೆ ಬೆಳ್ಳಿ ಆಭರಣವನ್ನ ಸ್ವಚ್ಛ ಮಾಡುವ ಹಾಗೂ ಜೋಪಾನ ಮಾಡುವ ಸರಿಯಾದ ಕ್ರಮ ಯಾವುದು ನೋಡಿ.
ಬೆಳ್ಳಿ ಆಭರಣ
ಬೆಳ್ಳಿ ಆಭರಣ (PC: Canva)

ಚಿನ್ನಕ್ಕಿಂತ ಬೆಳ್ಳಿಯಲ್ಲೇ ಅತ್ಯುದ್ಭುತ ಡಿಸೈನ್‌ನ ಆಭರಣಗಳು ಸಿಗುವುದನ್ನು ನೀವೂ ಗಮನಿಸಿ ಇರಬಹುದು. ಕೆಲವರಿಗೆ ಚಿನ್ನದ ಆಭರಣಕ್ಕಿಂತ ಬೆಳ್ಳಿ ಆಭರಣವೇ ತುಂಬಾ ಇಷ್ಟ. ಆದರೆ ಸುಂದರವಾಗಿರುವ ಬೆಳ್ಳಿ ಆಭರಣ ಬಹಳ ಬೇಗ ಮಸುಕಾಗುತ್ತದೆ ಅಥವಾ ಬಣ್ಣ ಕಳೆದುಕೊಂಡಂತೆ ಕಪ್ಪಾಗುತ್ತದೆ.

ಕಾಲ್ಲೆಜ್ಜೆ, ಸೊಂಟದ ದಾರ, ನೆಕ್ಲೇಸ್‌, ಕಿವಿಯೋಲೆ ಇಂತಹ ಯಾವುದೇ ಚಿನ್ನದ ಆಭರಣವಾದ್ರೂ ಸರಿಯಾಗಿ ಜೋಪಾನ ಮಾಡಿಲ್ಲ ಅಂದ್ರೆ ಬಹಳ ಬೇಗ ತನ್ನ ಹೊಳಪನ್ನ ಕಳೆದುಕೊಳ್ಳುತ್ತದೆ. ವಿಶೇಷವಾಗಿ ಸ್ಟರ್ಲಿಂಗ್ ಬೆಳ್ಳಿ ಮತ್ತು ಬೆಳ್ಳಿ-ಲೇಪಿತ ತುಣುಕುಗಳಲ್ಲಿ ಡಾರ್ನಿಶಿಂಗ್ ಸಾಮಾನ್ಯವಾಗಿದೆ. ಆದರೆ ಸರಿಯಾದ ರೀತಿಯಲ್ಲಿ ಸ್ವಚ್ಛ ಮಾಡುವುದು ಹಾಗೂ ಸರಿಯಾದ ಕಾಳಜಿ ವಹಿಸುವುದರಿಂದ ಬೆಳ್ಳಿ ಆಭರಣಗಳು ಬಣ್ಣ ಕಳೆದುಕೊಳ್ಳದಂತೆ ಜೋಪಾನ ಮಾಡಬಹುದು.

ಗೃಹೋಪಯೋಗಿ ವಸ್ತು ಬಳಸಿ ಬೆಳ್ಳಿ ಸ್ವಚ್ಛ ಮಾಡುವುದು

ಡಿಶ್ ವಾಶರ್‌

ಮನೆಯಲ್ಲಿ ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಸುಲಭ ಹಾಗೂ ನಾಜೂಕಿನ ವಿಧಾನದ ಎಂದರೆ ಡಿಶ್ ವಾಶರ್‌. ಈ ವಿಧಾನವು ದೈನಂದಿನ ನಿರ್ವಹಣೆಗೆ ಸೂಕ್ತವಾಗಿದೆ ಮತ್ತು ಬೆಳ್ಳಿ ವಸ್ತುಗಳನ್ನು ಹೊಳೆಯುವಂತೆ ಮಾಡಲು ಇದು ಸಹಾಯ ಮಾಡುತ್ತದೆ. ಒಂದು ಬೌಲ್‌ನಲ್ಲಿ ಬಿಸಿನೀರು ಹಾಕಿ. ಇದರಲ್ಲಿ ಒಂದೆರಡು ಹನಿ ಡಿಶ್ ವಾಶರ್ ಹಾಕಿ. ಇದನ್ನು ಮಿಶ್ರಣ ಮಾಡಿ ಆ ನೀರಿನಲ್ಲಿ ಬೆಳ್ಳಿ ಆಭರಣ ಹಾಕಿ, ಕೆಲವು ನಿಮಿಷ ನೆನೆಯಲು ಬಿಡಿ. ನಂತರ ಬೆಳ್ಳಿ ಆಭರಣಗಳನ್ನು ಬ್ರಷ್‌ನಿಂದ ಉಜ್ಜಿ. ಕೊನೆಯಲ್ಲಿ ಶುದ್ಧ ನೀರಿನಿಂದ ತೊಳೆಯಿರಿ.

ಅಡುಗೆ ಸೋಡಾ

ಬೆಳ್ಳಿ ಆಭರಣಗಳನ್ನು ನೀಟಾಗಿ ಸ್ವಚ್ಛ ಮಾಡಲು ಮತ್ತು ಮೊಂಡುತನದ ಕಪ್ಪು ಕಲೆಗಳನ್ನು ನೈಸರ್ಗಿಕವಾಗಿ ನಿವಾರಿಸಲು ಅಡಿಗೆ ಸೋಡಾ ಬಹಳ ಪರಿಣಾಮಕಾರಿಯಾಗಿದೆ. ಸ್ಟರ್ಲಿಂಗ್ ಬೆಳ್ಳಿಗೆ ಇದು ಉತ್ತಮವಾಗಿದೆ. ಸ್ಟರ್ಲಿಂಗ್ ಬೆಳ್ಳಿ ಶುದ್ಧ ಬೆಳ್ಳಿಗಿಂತ ಬೇಗ ಹಾಳಾಗುತ್ತದೆ. ಅಡಿಗೆ ಸೋಡಾ ಮತ್ತು ನೀರು ಬೆರೆಸಿ ದಪ್ಪ ಪೇಸ್ಟ್ ಮಾಡಿ. ನಿಮ್ಮ ಬೆರಳುಗಳು ಅಥವಾ ಮೃದುವಾದ ಬಟ್ಟೆಯನ್ನು ಬಳಸಿ ಆಭರಣದ ಕಪ್ಪಾದ ಭಾಗಕ್ಕೆ ಉಜ್ಜಿ. ಆದರೆ ಆಭರಣಕ್ಕೆ ಸ್ಕ್ರ್ಯಾಚ್ ಆಗದಂತೆ ನೋಡಿಕೊಳ್ಳಿ. ಕೊನೆಯಲ್ಲಿ ಇದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಬಹಳ ಕಪ್ಪಾಗಿದ್ದರೆ ಮೊದಲು ಡಿಶ್‌ವಾಶರ್‌ ನೀರಿನಲ್ಲಿ ನೆನೆಸಿ ನಂತರ ಅಡುಗೆಸೋಡಾ ಪೇಸ್ಟ್ ಹಚ್ಚಿ ತೊಳೆಯಬಹುದು. ಇದರಿಂದ ನಿಮ್ಮ ಹಳೆಯದ ಬೆಳ್ಳಿ ಆಭರಣ ಹೊಸರಂತೆ ಕಾಣುತ್ತದೆ.

ಬೆಳ್ಳಿ ಆಭರಣ ಜೋಪಾನವಾಗಿ ಇಡುವುದು ಹೇಗೆ?

ಬೆಳ್ಳಿಯ ಆಭರಣಗಳನ್ನು ನಿಯಮಿತವಾಗಿ ಶುಚಿಗೊಳಿಸುವುದು ಅದರ ಹೊಳಪನ್ನು ಕಾಪಾಡಿಕೊಳ್ಳಲು ಅತ್ಯಗತ್ಯವಾದರೂ, ಆಭರಣ ಮಜ್ಜಾಗುವುದು ಅಥವಾ ಕಪ್ಪಾಗುವುದನ್ನು ತಡೆಗಟ್ಟಲು ಸರಿಯಾದ ಕ್ರಮದಲ್ಲಿ ಇರಿಸುವುದು ಅಷ್ಟೇ ಮುಖ್ಯವಾಗಿದೆ. ಬೆಳ್ಳಿ ಆಭರಣಗಳನ್ನು ತಂಪಾದ, ಶುಷ್ಕ ಸ್ಥಳದಲ್ಲಿ, ನೇರ ಸೂರ್ಯನ ಬೆಳಕು ಬೀಳುವ ಪ್ರದೇಶ ಅಥವಾ ತೇವಾಂಶದಿಂದ ದೂರವಿಡಿ. ಆಭರಣ ಪೆಟ್ಟಿಗೆ ಅಥವಾ ಮೃದುವಾದ ಬಟ್ಟೆಯ ಚೀಲವು ಬೆಳ್ಳಿ ಆಭರಣಗಳನ್ನು ಇಡಲು ಸರಿಯಾದ ಮಾರ್ಗವಾಗಿದೆ. ನೀವು ವಸ್ತುಗಳನ್ನು ಕಠಿಣ ರಾಸಾಯನಿಕಗಳಿಂದ ದೂರವಿಡುವುದು ಕೂಡ ಮುಖ್ಯವಾಗಿದೆ. ಸುಗಂಧ ದ್ರವ್ಯಗಳು, ಲೋಷನ್ಗಳು ಮತ್ತು ಶುಚಿಗೊಳಿಸುವ ಉತ್ಪನ್ನಗಳು ಬೆಳ್ಳಿಯನ್ನು ಹಾನಿಗೊಳಿಸಬಹುದು. ಆ ಕಾರಣಕ್ಕೆ ನೀವು ಲೋಷನ್‌ ಹಚ್ಚಿದ ನಂತರ ಹಾಗೂ ಪರ್ಫ್ಯೂಮ್ ಹಾಕಿಕೊಂಡ ನಂತರ ಬೆಳ್ಳಿ ಆಭರಣಗಳನ್ನ ಧರಿಸುವುದು ಉತ್ತಮ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ