ಹಳೇ ಆಭರಣ ಎಕ್ಸ್‌ಚೇಂಜ್ ಮಾಡಿಸೋಕೆ ಹೊರಟಿದ್ರೆ ಈ ವಿಷಯ ನಿಮಗೆ ಗೊತ್ತಿರಲೇಬೇಕು, ಈ ಹಂತ ದಾಟದೆ ಹಳೇ ಒಡವೆ ಯಾರೂ ತಗೊಳ್ಳಲ್ಲ-business news important things to remember when exchanging old gold everything need to know about exchanging jewelry rs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹಳೇ ಆಭರಣ ಎಕ್ಸ್‌ಚೇಂಜ್ ಮಾಡಿಸೋಕೆ ಹೊರಟಿದ್ರೆ ಈ ವಿಷಯ ನಿಮಗೆ ಗೊತ್ತಿರಲೇಬೇಕು, ಈ ಹಂತ ದಾಟದೆ ಹಳೇ ಒಡವೆ ಯಾರೂ ತಗೊಳ್ಳಲ್ಲ

ಹಳೇ ಆಭರಣ ಎಕ್ಸ್‌ಚೇಂಜ್ ಮಾಡಿಸೋಕೆ ಹೊರಟಿದ್ರೆ ಈ ವಿಷಯ ನಿಮಗೆ ಗೊತ್ತಿರಲೇಬೇಕು, ಈ ಹಂತ ದಾಟದೆ ಹಳೇ ಒಡವೆ ಯಾರೂ ತಗೊಳ್ಳಲ್ಲ

ಭಾರತದಲ್ಲಿ ಚಿನ್ನ ಎಂದರೆ ಕೇವಲ ಅಲಂಕಾರಿಕ ವಸ್ತು ಮಾತ್ರವಲ್ಲ, ಇದು ನಮ್ಮ ಆಸ್ತಿ-ಹೂಡಿಕೆಯ ಭಾಗವೂ ಹೌದು. ಹೊಸ ಚಿನ್ನ ಖರೀದಿ ಮಾಡುವಾಗ ಹಳೆ ಚಿನ್ನವನ್ನು ಎಕ್ಸ್‌ಚೇಂಜ್‌ ಮಾಡುವುದು ಸಹಜ. ಆದರೆ ಚಿನ್ನವನ್ನು ಎಕ್ಸ್‌ಚೇಂಜ್‌ ಮಾಡುವ ಮುನ್ನ ನಮಗೆ ಕೆಲವು ವಿಚಾರಗಳು ತಿಳಿದಿರಲೇಬೇಕು. ಅಂತಹ ಒಂದಿಷ್ಟು ವಿಚಾರಗಳು ಇಲ್ಲಿವೆ ನೋಡಿ.

ಹಳೇ ಆಭರಣ ಎಕ್ಸ್‌ಚೇಂಜ್ ಮಾಡಿಸೋಕೆ ಹೊರಟಿದ್ರೆ ಈ ವಿಷಯ ನಿಮಗೆ ಗೊತ್ತಿರಲೇಬೇಕು, ಈ ಹಂತ ದಾಟದೆ ಹಳೇ ಒಡವೆ ಯಾರೂ ತಗೊಳ್ಳಲ್ಲ
ಹಳೇ ಆಭರಣ ಎಕ್ಸ್‌ಚೇಂಜ್ ಮಾಡಿಸೋಕೆ ಹೊರಟಿದ್ರೆ ಈ ವಿಷಯ ನಿಮಗೆ ಗೊತ್ತಿರಲೇಬೇಕು, ಈ ಹಂತ ದಾಟದೆ ಹಳೇ ಒಡವೆ ಯಾರೂ ತಗೊಳ್ಳಲ್ಲ

ಭಾರತೀಯರು ಆಭರಣ ಪ್ರಿಯರು. ನಮ್ಮ ದೇಶದಲ್ಲಿ ಆಭರಣಗಳ ಮೇಲಿನ ಬಯಕೆ ಎಂದಿಗೂ ಕಡಿಮೆಯಾಗುವುದಿಲ್ಲ. ಚಿನ್ನ ಕೇವಲ ಅಲಂಕಾರಕ್ಕೆ ಮಾತ್ರವಲ್ಲ, ಇದು ನಮ್ಮ ಸಂಸ್ಕೃತಿಯ ಭಾಗವೂ ಆಗಿದೆ. ಹಿಂದಿನ ಕಾಲದಲ್ಲಿ ಚಿನ್ನವನ್ನು ಆಸ್ತಿ ಎಂದು ಪರಿಗಣಿಸುತ್ತಿದ್ದರು. ಚಿನ್ನವೂ ಹೂಡಿಕೆಯ ಭಾಗವೂ ಆಗಿದೆ. ಅಗತ್ಯ ಸಮಯದಲ್ಲಿ ಚಿನ್ನವನ್ನು ವಿನಿಮಯ ಕೂಡ ಮಾಡಲಾಗುತ್ತದೆ. ವರ್ಷಗಳು ಕಳೆದಂತೆ ಹೂಡಿಕೆ, ಹಣಕ್ಕಾಗಿ ಮಾತ್ರವಲ್ಲ ಹೊಸ ಆಭರಣ ಖರೀದಿಸುವ ಸಲುವಾಗಿ ಕೂಡ ಚಿನ್ನವನ್ನು ಎಕ್ಸ್‌ಚೇಂಜ್‌ ಮಾಡುವ ಟ್ರೆಂಡ್‌ ಸೃಷ್ಟಿಯಾಯ್ತು.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇತ್ತೀಚಿನ ವರ್ಷಗಳಲ್ಲಿ ಗೋಲ್ಡ್‌ ಎಕ್ಸ್‌ಚೇಂಜ್‌ ಗ್ರಾಹಕರಿಗೆ ಲಾಭವನ್ನು ನೀಡುತ್ತಿದೆ. ಹಳೆ ಚಿನ್ನಕ್ಕೆ ಇಂದಿನ ದರವನ್ನೇ ನೀಡುವ ಮೂಲಕ ಆಭರಣ ಮಳಿಗೆಗಳು ಚಿನ್ನವನ್ನು ಖರೀದಿ ಮಾಡುತ್ತಿವೆ. ಆದರೂ ಗೋಲ್ಡ್‌ ಎಕ್ಸ್‌ಚೇಂಜ್‌ ಮಾಡುವ ಮುನ್ನ ಈ ಕೆಲವು ವಿಚಾರಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ಹಳೆಯ ಚಿನ್ನ ವಿನಿಮಯ ಮಾಡಿಕೊಳ್ಳುವಾಗ ನೆನಪಿಡಬೇಕಾದ ವಿಷಯಗಳು

ನಂಬಲಾರ್ಹ ಆಭರಣ ಮಳಿಗೆ ಮತ್ತು ಖರೀದಿದಾರರನ್ನು ಆಯ್ಕೆ ಮಾಡಿ:

* ಹಳೆಯ ಚಿನ್ನವನ್ನು ಎಕ್ಸ್‌ಚೇಂಜ್‌ ಮಾಡುವ ಮುನ್ನ ಪ್ರತಿಷ್ಠಿತ ಆಭರಣ ಮಳಿಗೆಗೆ ಭೇಟಿ ನೀಡುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಅವರ ವಿನಿಮಯ ನೀತಿಗಳು ಮತ್ತು ಬೆಲೆ ರಚನೆಗಳನ್ನು ಅರ್ಥಮಾಡಿಕೊಳ್ಳಿ.

* ಹೂಡಿಕೆಯ ವಿಶ್ವಾಸಾರ್ಹತೆಗಾಗಿ ಹೆಚ್ಚು ಖ್ಯಾತಿ ಹೊಂದಿರುವ ಆಭರಣ ಬ್ರ್ಯಾಂಡ್‌ ಅನ್ನು ಸಂಪರ್ಕಿಸಿ. 

* ಹೆಚ್ಚಿನ ಮರುಮಾರಾಟದ ಮೌಲ್ಯಕ್ಕಾಗಿ ಹಾಲ್‌ಮಾರ್ಕ್ ಮಾಡಿದ ಆಭರಣಗಳನ್ನು ಆಯ್ಕೆ ಮಾಡಿ, ಅದು ಆರ್ಥಿಕ ಭದ್ರತೆಯ ದೃಷ್ಟಿಯಿಂದಲೂ ಉತ್ತಮ.  

* ವಿವಿಧ ಆಭರಣ ಮಳಿಗೆಯವರು ಚಿನ್ನ ಅಥವಾ ವಜ್ರದ ಆಭರಣಗಳನ್ನು ವಿನಿಮಯ ಮಾಡಿಕೊಳ್ಳುವ ವಿಚಾರದಲ್ಲಿ ಬೇರೆ ಬೇರೆ ನಿಯಮಗಳನ್ನು ಹೊಂದಿರಬಹುದು. ಆದ್ದರಿಂದ ಈ ವಿಚಾರದಲ್ಲಿ ನೀವು ಸಮಗ್ರ ತಿಳುವಳಿಕೆಯನ್ನು ಹೊಂದಿರುವುದು ಮುಖ್ಯವಾಗುತ್ತದೆ. 

* ವಿನಿಮಯ ನಡೆಯುವಾಗ ಕಾರ್ಯಸಾಧ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಸ್ತುತ ಚಿನ್ನದ ಬೆಲೆಗಳ ಬಗ್ಗೆ ನಿಮಗೆ ತಿಳಿದಿರಬೇಕು.

ತೂಕ ಮಾಪಕದಲ್ಲಿ ಆಭರಣದ ಒಟ್ಟು ತೂಕ ಮತ್ತು ನಿವ್ವಳ ತೂಕವನ್ನು ಪರಿಶೀಲಿಸಿ

ಚಿನ್ನ ಎಕ್ಸ್‌ಚೇಂಜ್‌ ಮಾಡಲು ಯೋಚಿಸುವಾಗ ನಿಮ್ಮಲ್ಲಿರುವ ಎಲ್ಲಾ ಚಿನ್ನವನ್ನು ಒಮ್ಮೆ ಪರಿಶೀಲನೆ ಮಾಡಿ. ಹವಳ, ಹರಳುಗಳಿಲ್ಲದ ಸಾಧಾರಣ ಚಿನ್ನವನ್ನು ಆಯ್ಕೆ ಮಾಡಿಕೊಳ್ಳಿ. ಯಾಕೆಂದರೆ ಹವಳ, ಹರಳುಗಳಿಗೆ ಎಕ್ಸ್‌ಚೇಂಜ್‌ ಮಾಡುವಾಗ ಬೆಲೆ ಇರುವುದಿಲ್ಲ. ವಿನಿಮಯದ ಮೊದಲು ಚಿನ್ನವನ್ನು ಪ್ರತ್ಯೇಕವಾಗಿ ವ್ಯಾಪಾರ ಮಾಡುವುದು ಅಥವಾ ಯಾವುದೇ ಬೆಲೆಬಾಳುವ ಹರಳುಗಳಿದ್ದರೆ ಅದನ್ನು ತೆಗೆದು ಇರಿಸಿಕೊಳ್ಳುವುದು ಉತ್ತಮ. ಈ ವಿಧಾನವು ವಿನಿಮಯದ ಸಮಯದಲ್ಲಿ ನಿಮ್ಮ ಚಿನ್ನಕ್ಕೆ ಉತ್ತಮ ಮೌಲ್ಯವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.  

ಹಾಲ್‌ಮಾರ್ಕ್ ಪರಿಶೀಲಿಸಿ

ನೀವು ಹೊಸ ಚಿನ್ನವನ್ನು ಖರೀದಿಸುತ್ತಿರಲಿ ಅಥವಾ ಚಿನ್ನವನ್ನು ಎಕ್ಸ್‌ಚೇಂಜ್‌ ಮಾಡಲು ಯೋಜಿಸುತ್ತಿರಲಿ, ಲೋಹದ ಶುದ್ಧತೆಯನ್ನು ಸೂಚಿಸುವ ಹಾಲ್‌ಮಾರ್ಕ್ ಅನ್ನು ಯಾವಾಗಲೂ ಪರಿಶೀಲಿಸಿ. ಖರೀದಿ ಮತ್ತು ಮಾರಾಟದ ಅನುಭವಗಳನ್ನು ಸರಳೀಕರಿಸಲು ಭಾರತೀಯ ನಿಯಮಗಳು ಈಗ ಪ್ರತಿ ಚಿನ್ನದ ಆಭರಣಕ್ಕೆ ವಿಶಿಷ್ಟವಾದ HUID ಸಂಖ್ಯೆಯನ್ನು ಹೊಂದಿರಬೇಕು ಎಂಬ ನಿಯಮ ತಂದಿದೆ. ಆಭರಣದ ದೃಢೀಕರಣವನ್ನು ಪರಿಶೀಲಿಸಲು ಈ ಸಂಖ್ಯೆಯು ವಿಶ್ವಾಸಾರ್ಹ ಮಾರ್ಗವಾಗಿದೆ.

ನಿಮ್ಮ ಹಳೆಯ ಚಿನ್ನವನ್ನು ಹೊಸದಕ್ಕೆ ಬದಲಿಸಿ 

ಹಿಂದೆಲ್ಲಾ ಹಳೆಯ ಚಿನ್ನಕ್ಕೆ ಹಳೆಯ ದರವನ್ನೇ ನಿಗದಿ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಈಗ ಹಾಗಿಲ್ಲ. ಹಳೆಯ ಹಾಲ್‌ಮಾರ್ಕ್‌ ಇರುವ ಚಿನ್ನಕ್ಕೆ ಇಂದಿನ ದರವನ್ನೇ ನಿಗದಿ ಪಡಿಸಿಲಾಗಿದೆ. ನೀವು ಖರೀದಿಸಿದ ಮಳಿಗೆಯಲ್ಲೇ ಚಿನ್ನವನ್ನು ಎಕ್ಸ್‌ಚೇಂಜ್‌ ಮಾಡಿದರೆ ಇಂದಿನ ದರವನ್ನೇ ನೀಡಬೇಕು ಎಂಬ ನಿಯಮವಿದೆ. 

ಹಳೆಯ ಚಿನ್ನ ಖರೀದಿಸಿದ ರಶೀದಿ / ಬಿಲ್ ತೆಗೆದುಕೊಂಡು ಹೋಗಲು ಮರೆಯದಿರಿ 

ಹಳೆದ ಚಿನ್ನ ಖರೀದಿಸಿದಾಗಿ ನೀಡಿದ್ದ ರಶೀದಿ ಅಥವಾ ಆ ಚಿನ್ನಕ್ಕೆ ಸಂಬಂಧಿಸಿದ ಯಾವುದೇ ಬಿಲ್‌ ಅಥವಾ ಪ್ರಮಾಣಪತ್ರವನ್ನು ತೆಗೆದುಕೊಂಡು ಹೋಗಲು ಮರೆಯದಿರಿ. ಇವು ನಿಮ್ಮ ಚಿನ್ನದ ತೂಕ ಎಷ್ಟು ಮತ್ತು ಎಷ್ಟು ಶುದ್ಧವಾಗಿದೆ ಎಂಬುದನ್ನು ತೋರಿಸುತ್ತದೆ. ನಿಮ್ಮ ಚಿನ್ನದ ತೂಕವನ್ನು ನಂತರ ಪರಿಶೀಲಿಸಬೇಕಾದರೆ ಈ ದಾಖಲೆಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು.