logo
ಕನ್ನಡ ಸುದ್ದಿ  /  ಜೀವನಶೈಲಿ  /   5 Fruits To Reduce Cholesterol: ಪ್ರತಿದಿನ ಈ 5 ಹಣ್ಣುಗಳನ್ನು ಸೇವಿಸಿದರೆ ಕೊಲೆಸ್ಟ್ರಾಲ್‌ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ

5 Fruits To Reduce Cholesterol: ಪ್ರತಿದಿನ ಈ 5 ಹಣ್ಣುಗಳನ್ನು ಸೇವಿಸಿದರೆ ಕೊಲೆಸ್ಟ್ರಾಲ್‌ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ

HT Kannada Desk HT Kannada

Sep 14, 2022 09:39 PM IST

google News

ಕೊಲೆಸ್ಟ್ರಾಲ್‌ ನಿಯಂತ್ರಣ ಮಾಡಲು ಸಹಾಯಕವಾಗುವ ಹಣ್ಣುಗಳಿವು

    • ಕೊಲೆಸ್ಟ್ರಾಲನ್ನು ನಿಯಂತ್ರಿಸುವಲ್ಲಿ ಆಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಸಮತೋಲಿತ ಆಹಾರದ ಜೊತೆಗೆ ಪ್ರತಿ ದಿನ ಐದು ಬಗೆಯ ಹಣ್ಣುಗಳನ್ನು ಸೇವಿಸಿದರೆ ಅಧಿಕ ಕೊಬ್ಬನ್ನು ನಿಯಂತ್ರಣದಲ್ಲಿಡಬಹುದು ಎನ್ನುತ್ತಾರೆ ತಜ್ಞರು.
ಕೊಲೆಸ್ಟ್ರಾಲ್‌ ನಿಯಂತ್ರಣ ಮಾಡಲು ಸಹಾಯಕವಾಗುವ ಹಣ್ಣುಗಳಿವು
ಕೊಲೆಸ್ಟ್ರಾಲ್‌ ನಿಯಂತ್ರಣ ಮಾಡಲು ಸಹಾಯಕವಾಗುವ ಹಣ್ಣುಗಳಿವು (PC: Unsplash, Freepik)

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕರಿಗೆ ಹೊಟ್ಟೆ, ಪೃಷ್ಠ ಮತ್ತು ಸೊಂಟದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆದರೆ ದೇಹದ ಆಕಾರ ಬದಲಾಗುವವರೆಗೆ ಅಥವಾ ತೂಕ ಹೆಚ್ಚಾಗುವವರೆಗೆ ಈ ಸಮಸ್ಯೆ ನಮ್ಮ ಗಮನಕ್ಕೆ ಬರುವುದಿಲ್ಲ. ಈ ಸಮಸ್ಯೆಯು ಮುಖ್ಯವಾಗಿ ಆಹಾರ ಮತ್ತು ಜಡ ಜೀವನಶೈಲಿಯಿಂದ ಉಂಟಾಗುತ್ತದೆ.

ಈ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸದಿದ್ದರೆ ಅದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಹೃದ್ರೋಗ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ನಾವು ಕೆಲವು ರೋಗಲಕ್ಷಣಗಳನ್ನು ಅನುಭವಿಸುತ್ತೇವೆ. ಆಗಾಗ್ಗೆ ವಾಕರಿಕೆ, ಅಧಿಕ ರಕ್ತದೊತ್ತಡ, ಎದೆಯಲ್ಲಿ ಭಾರ, ತೂಕ ಹೆಚ್ಚಾಗುವುದು, ಉಸಿರಾಟದ ತೊಂದರೆ, ವಿಪರೀತ ಆಯಾಸ... ಇವೆಲ್ಲವೂ ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳಾಗಿವೆ. ಇವು ನಿಮ್ಮ ಗಮನಕ್ಕೆ ಬಂದರೆ ನೀವು ತಪ್ಪದೆ ಫಿಟ್ನೆಸ್‌ನತ್ತ ಗಮನ ಹರಿಸಬೇಕು.

ಕೊಲೆಸ್ಟ್ರಾಲನ್ನು ನಿಯಂತ್ರಿಸುವಲ್ಲಿ ಆಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಸಮತೋಲಿತ ಆಹಾರದ ಜೊತೆಗೆ ಪ್ರತಿ ದಿನ ಐದು ಬಗೆಯ ಹಣ್ಣುಗಳನ್ನು ಸೇವಿಸಿದರೆ ಅಧಿಕ ಕೊಬ್ಬನ್ನು ನಿಯಂತ್ರಣದಲ್ಲಿಡಬಹುದು ಎನ್ನುತ್ತಾರೆ ತಜ್ಞರು.

ಟೊಮ್ಯಾಟೋ

ನಾವು ಟೊಮ್ಯಾಟೋವನ್ನು ತರಕಾರಿ ಎಂದು ಪರಿಗಣಿಸಿದರೂ, ಇದು ಹಣ್ಣಿನ ಗುಂಪಿಗೆ ಸೇರಿದೆ. ಟೊಮ್ಯಾಟೋದಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಕೆ ಇದೆ. ಅದು ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಟೊಮ್ಯಾಟೋ ತಿನ್ನುವುದು ಹೃದಯಕ್ಕೂ ಒಳ್ಳೆಯದು.

ಪರಂಗಿ ಹಣ್ಣು

ಪರಂಗಿ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಠಾತ್ ಹೃದಯಾಘಾತವನ್ನು ತಡೆಗಟ್ಟಲು ಹಸಿ ಪಪ್ಪಾಯಿಯನ್ನು ಪ್ರತಿದಿನ ಸೇವಿಸಬೇಕು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಪಪ್ಪಾಯಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಅನೇಕ ವಿಟಮಿನ್ ಮತ್ತು ಮಿನರಲ್‌ ಅಂಶಗಳಿವೆ. ಪಪ್ಪಾಯಿ ತಿನ್ನುವುದರಿಂದ ವಿಟಮಿನ್ ಬಿ, ಸಿ ಮತ್ತು ಇ ದೊರೆಯುತ್ತದೆ. ಅಲ್ಲದೆ, ಪೊಟ್ಯಾಸಿಯಮ್, ಫೈಬರ್ ಮತ್ತು ಮೆಗ್ನೀಸಿಯಮ್‌ನಂತಹ ಪ್ರಮುಖ ಅಂಶಗಳು ದೇಹಕ್ಕೆ ಸೇರುತ್ತದೆ.

ಅವಕಾಡೊ

ಕೊಲೆಸ್ಟ್ರಾಲನ್ನು ನಿಯಂತ್ರಣದಲ್ಲಿಡಲು ಹೆಚ್ಚಾಗಿ ಆವಕಾಡೊ ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ. ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಒಂದು ಮಧ್ಯಮ ಗಾತ್ರದ ಅವಕಾಡೊ 96 ಕ್ಯಾಲೋರಿಗಳು, 6 ಗ್ರಾಂ ಮೊನೊಸಾಚುರೇಟೆಡ್ ಕೊಬ್ಬು ಮತ್ತು 4 ಗ್ರಾಂ ಫೈಬರ್ ಅಂಶವನ್ನು ಹೊಂದಿರುತ್ತದೆ.

ಸಿಟ್ರಸ್ ಹಣ್ಣುಗಳು

ಕಿತ್ತಳೆ, ನಿಂಬೆ, ಮೂಸಂಬಿ, ಗ್ರೇಪ್‌ ಫ್ರೂಟ್‌ (ದ್ರಾಕ್ಷಿ ಅಲ್ಲ) ಮುಂತಾದ ಹಣ್ಣುಗಳು ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರುತ್ತದೆ. ಅವುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿವೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಇವು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತ. ಇಂತಹ ಹಣ್ಣುಗಳನ್ನು ತಿನ್ನುವುದು ಚರ್ಮ ಮತ್ತು ಕೂದಲಿನ ಆರೈಕೆಗೆ ಒಳ್ಳೆಯದು.

ಕಲ್ಲಂಗಡಿ

ಕಲ್ಲಂಗಡಿ, ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಲೈಕೋಪೀನ್, ಕ್ಯಾರೊಟಿನಾಯ್ಡ್ ನಂತಹ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಫ್ರೀ ರಾಡಿಕಲ್‌ಗಳನ್ನು ನಿವಾರಿಸುತ್ತದೆ, ಇದರಿಂದಾಗಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಅಧಿಕ ಕೊಲೆಸ್ಟ್ರಾಲ್ ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕೊಬ್ಬನ್ನು ಕರಗಿಸುವುದು ಬಹಳ ಮುಖ್ಯ. ಹಣ್ಣುಗಳೊಂದಿಗೆ ಕ್ಯಾರೆಟ್‌ನಂತ ತರಕಾರಿ ತಿನ್ನುವುದು ಹೃದಯಕ್ಕೆ ಬಹಳ ಒಳ್ಳೆಯದು. ಕ್ಯಾರೆಟ್ ತಿನ್ನುವುದರಿಂದ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ. ಇದು ಕಣ್ಣಿನ ದೃಷ್ಟಿಯನ್ನು ಕೂಡಾ ಸುಧಾರಿಸುತ್ತದೆ. ಕ್ಯಾರೆಟ್ ಜ್ಯೂಸ್ ಅಥವಾ ಹಸಿ ಕ್ಯಾರೆಟನ್ನು ಬೆಳಗ್ಗೆ ಮತ್ತು ಸಂಜೆ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ