logo
ಕನ್ನಡ ಸುದ್ದಿ  /  ಜೀವನಶೈಲಿ  /  Curry Leaves: ಅಡುಗೆಗೆ ಮಾತ್ರವಲ್ಲ ತೂಕ ಇಳಿಸಲೂ ಬೇಕು ಕರಿಬೇವಿನ ಎಲೆಗಳು; ಮಧುಮೇಹಿಗಳಿಗೂ ಸೂಪರ್‌ ಫುಡ್‌ ಇದು

Curry Leaves: ಅಡುಗೆಗೆ ಮಾತ್ರವಲ್ಲ ತೂಕ ಇಳಿಸಲೂ ಬೇಕು ಕರಿಬೇವಿನ ಎಲೆಗಳು; ಮಧುಮೇಹಿಗಳಿಗೂ ಸೂಪರ್‌ ಫುಡ್‌ ಇದು

HT Kannada Desk HT Kannada

Feb 14, 2024 12:00 PM IST

google News

ಅಡುಗೆಗೆ ಮಾತ್ರವಲ್ಲ ತೂಕ ಇಳಿಸಲೂ ಬೇಕು ಕರಿಬೇವಿನ ಎಲೆಗಳು

  • Weight Loss Tips: ಅಡುಗೆಯಲ್ಲಿ ಬಳಸುವ ಕರಿ ಬೇವಿನ ಎಲೆಗಳು ಕೇವಲ ಅಡುಗೆಯ ಸುವಾಸನೆಯನ್ನು ಹೆಚ್ಚಿಸುವುದು ಮಾತ್ರವಲ್ಲ, ಅದರ ಜೊತೆ ತೂಕ ಇಳಿಕೆಗೂ ಸಹಕಾರಿಯಾಗಿದೆ. ಕರಿಬೇವಿನ ಸೇವನೆಯಿಂದ ನಾವು ಯಾವೆಲ್ಲಾ ರೀತಿ ತೂಕ ಇಳಿಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ

ಅಡುಗೆಗೆ ಮಾತ್ರವಲ್ಲ ತೂಕ ಇಳಿಸಲೂ ಬೇಕು ಕರಿಬೇವಿನ ಎಲೆಗಳು
ಅಡುಗೆಗೆ ಮಾತ್ರವಲ್ಲ ತೂಕ ಇಳಿಸಲೂ ಬೇಕು ಕರಿಬೇವಿನ ಎಲೆಗಳು (PC: Pixabay)

Weight Loss Tips: ಅಡುಗೆ ಮಾಡುವಾಗ ಅದರ ಸುವಾಸನೆ ಹೆಚ್ಚಲೆಂದು ನಾವು ಕರಿಬೇವಿನ ಎಲೆಯ ಒಗ್ಗರಣೆ ನೀಡುತ್ತೇವೆ. ಆದರೆ ಕರಿಬೇವಿನ ಕೆಲಸ ಕೇವಲ ಅಡುಗೆಯ ಸುವಾಸನೆ ಹೆಚ್ಚಿಸುವುದು ಮಾತ್ರ ಎಂದು ನೀವು ತಿಳಿದುಕೊಂಡಿದ್ದರೆ ಖಂಡಿತ ನಿಮ್ಮ ಆಲೋಚನೆ ತಪ್ಪು. ಇದಕ್ಕೂ ಮೀರಿದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಈ ಕರಿಬೇವಿನ ಎಲೆಗಳು ಹೊಂದಿರುತ್ತವೆ.

ಪ್ರತಿದಿನ ಬೆಳಗ್ಗೆ ನೀವು ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ನೀರನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನಾಂಶವನ್ನು ಕರಗಿಸಬಹುದಾಗಿದೆ. ತೂಕ ಇಳಿಸುವ ಪ್ರಯತ್ನದಲ್ಲಿ ಇರುವವರು ಖಂಡಿತವಾಗಿ ಈ ಪಾನೀಯವನ್ನು ಕುಡಿಯಬಹುದಾಗಿದೆ. ಸಣ್ಣ ಆಗಬೇಕು ಎಂದುಕೊಂಡವರಿಗೆ ಕರಿಬೇವಿನ ಪಾನೀಯ ಯಾವೆಲ್ಲ ರೀತಿಯಲ್ಲಿ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ

ಕಡಿಮೆ ಕ್ಯಾಲೋರಿ: ಕರಿ ಬೇವಿನ ಎಲೆಗಳು ಅತ್ಯಲ್ಪ ಕ್ಯಾಲೋರಿಯನ್ನು ಹೊಂದಿರುತ್ತವೆ. ಹೀಗಾಗಿ ನೀವು ಕರಿಬೇವಿನ ಪಾನೀಯ ಸೇವನೆ ಮಾಡುವುದರಿಂದ ನಿಮ್ಮ ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ. ಚಹಾ, ಕಾಫಿ ಸೇವನೆಯ ಬದಲು ನೀವು ಆ ಜಾಗದಲ್ಲಿ ಕರಿಬೇವಿನ ನೀರನ್ನು ಸೇವಿಸುವ ಮೂಲಕ ನಿಮ್ಮ ಕ್ಯಾಲೋರಿ ಪ್ರಮಾಣವನ್ನು ಕಡಿಮೆ ಮಾಡಕೊಳ್ಳಬಹುದು. ಇದರಿಂದ ನಿಮಗೆ ತೂಕ ನಷ್ಟವಾಗಲಿದೆ.

ಫೈಬರ್​ ಅಂಶ: ಕರಿಬೇವಿನ ಎಲೆಗಳಲ್ಲಿ ಫೈಬರ್​ ಅಂಶ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ನಿಮಗೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಹೀಗಾಗಿ ಊಟದ ನಡುವೆ ನೀವು ಕರಿಬೇವನ್ನು ಸೇವನೆ ಮಾಡಿದರೆ ನಿಮಗೆ ಮಧ್ಯದಲ್ಲಿ ಲಘು ಆಹಾರ ತಿನ್ನಬೇಕು ಎಂದು ಎನಿಸುವುದೇ ಇಲ್ಲ. ಇದರಿಂದಲೂ ನೀವು ಕ್ಯಾಲೋರಿ ಸೇವನೆ ಕಡಿಮೆ ಮಾಡಿಕೊಳ್ಳಬಹುದು.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಕರಿಬೇವಿನ ಎಲೆಗಳಲ್ಲಿ ಇರುವ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಪರೋಕ್ಷವಾಗಿ ತೂಕ ನಿರ್ವಹಣೆಗೆ ಸಹಕರಿಸುತ್ತದೆ.

ಆಂಟಿ ಆಕ್ಸಿಡಂಟ್​ : ಕರಿಬೇವಿನ ಎಲೆಗಳಲ್ಲಿ ಆಂಟಿ ಆಕ್ಸಿಡಂಟ್​ ಪ್ರಮಾಣ ಅಗಾಧವಾಗಿ ಇರುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಕೂಡ ತೂಕ ನಿರ್ವಹಣೆಯ ಮೇಲೆ ಒಳ್ಳೆಯ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ವಿವಿಧ ಸಂಶೋಧನೆಗಳು ಹೇಳಿವೆ.

ಮಧುಮೇಹ ನಿಯಂತ್ರಣ : ಕರಿಬೇವಿನ ಸೇವನೆಯಿಂದ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣಗೊಳ್ಳುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣವಾದಾಗ ಕೂಡಾ ನಿಮ್ಮ ತೂಕ ಇಳಿಕೆಯ ಪ್ರಕ್ರಿಯೆ ಇನ್ನಷ್ಟು ಸರಾಗಗೊಳ್ಳುತ್ತದೆ .

ಕರಿಬೇವು ತೂಕ ಇಳಿಕೆಗೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುತ್ತವೆ. ಹಾಗೆಂದ ಮಾತ್ರ ಕೇವಲ ಕರಿಬೇವಿನ ಸೇವನೆಯೊಂದರಿಂದಲೇ ತೂಕ ಇಳಿಕೆಯಾಗಬೇಕು ಎಂದರೆ ಸಾಧ್ಯವಿಲ್ಲ. ಆರೋಗ್ಯಕರ ಜೀವನಶೈಲಿಯನ್ನೂ ನಿಮ್ಮದಾಗಿಸಿಕೊಂಡು ಜೊತೆಯಲ್ಲಿ ಕರಿಬೇವು ಸೇವಿಸುವ ಮಾಡುವ ಮೂಲಕ ನೀವು ತೂಕ ಇಳಿಕೆ ಮಾಡಿಕೊಳ್ಳಬಹುದಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ