ಕನ್ನಡ ಸುದ್ದಿ  /  ಜೀವನಶೈಲಿ  /  Heart Health: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನದ ಆಹಾರ ಕ್ರಮದಲ್ಲಿರಲಿ ಈ ಪದಾರ್ಥಗಳು

Heart Health: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನದ ಆಹಾರ ಕ್ರಮದಲ್ಲಿರಲಿ ಈ ಪದಾರ್ಥಗಳು

Heart Health: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದೆ . ಹೀಗಾಗಿ ಹೃದಯದ ಆರೋಗ್ಯದ ಕಡೆಗೆ ತುಸು ಹೆಚ್ಚೇ ಗಮನ ನೀಡಬೇಕಿದೆ. ನೈಸರ್ಗಿಕವಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಯಾವೆಲ್ಲ ಆಹಾರವನ್ನು ಹೆಚ್ಚು ಸೇವಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.

ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನದ ಆಹಾರ ಕ್ರಮದಲ್ಲಿರಲಿ ಈ ಪದಾರ್ಥಗಳು
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನದ ಆಹಾರ ಕ್ರಮದಲ್ಲಿರಲಿ ಈ ಪದಾರ್ಥಗಳು (PC: Unsplash)

Heart Health: ದೇಹದ ಒಟ್ಟಾರೆ ಆರೋಗ್ಯ ಸೌಖ್ಯವಾಗಿ ಇರಬೇಕು ಎಂದರೆ ನಮ್ಮ ನಿತ್ಯದ ಆಹಾರದಲ್ಲಿ ವಿವಿಧ ತರಕಾರಿಗಳು, ಧಾನ್ಯಗಳು ಹಾಗೂ ಹಣ್ಣುಗಳನ್ನು ಸೇವನೆ ಮಾಡುವುದು ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಸಮತೋಲಿತ ಆಹಾರ ಮಾತ್ರ ಆರೋಗ್ಯದಲ್ಲಿ ಸುಧಾರಣೆಯನ್ನು ತರಲು ಸಹಾಯ ಮಾಡುತ್ತದೆ. ದೇಹದ ಆರೋಗ್ಯ ಚೆನ್ನಾಗಿ ಇರಬೇಕು ಎಂದು ಸಸ್ಯಾಹಾರಿ ಆಹಾರ ಸೇವನೆಯು ತುಂಬಾನೇ ಮುಖ್ಯವಾಗಿದೆ. ಅದರಲ್ಲೂ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಲು , ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸಲು ನೀವು ಈ ಕೆಳಗಿನ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ ಎಂದು ಹೇಳಬಹುದು.

ಡ್ರೈಫ್ರೂಟ್ಸ್​ ಮತ್ತು ವಿವಿಧ ಬೀಜಗಳು : ಉತ್ತಮ ಕೊಬ್ಬು, ಫೈಬರ್​ ಹಾಗೂ ಆಂಟಿ ಆಕ್ಸಿಡೆಂಟ್‌​ ಗುಣಗಳನ್ನು ಹೊಂದಿರುವದರಿಂದ ದೇಹದಲ್ಲಿ ಎಲ್​ಡಿಎಲ್​ ಅಂದರೆ ಕೆಟ್ಟ ಕೊಲೆಸ್ಟ್ರಾಲ್​​ನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿವೆ. ಹಾಗಂತ ಇವುಗಳನ್ನು ತುಂಬಾ ಸೇವನೆ ಮಾಡಬಾರದು. ಬೆರಳೆಣಿಕೆಯಷ್ಟು ಸೇವಿಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ. ನೀವು ಸಲಾಡ್​​ಗಳನ್ನು ಸೇವಿಸುವ ಅಭ್ಯಾಸ ಹೊಂದಿದ್ದರೆ ಅವುಗಳ ಮೇಲೆ ಕೂಡಾ ಇವುಗಳನ್ನು ಗಾರ್ನಿಶ್‌ ಆಗಿ ಬಳಸಿ ತಿನ್ನಬಹುದು.

ಟ್ರೆಂಡಿಂಗ್​ ಸುದ್ದಿ

ಏಕದಳ ಧಾನ್ಯಗಳು: ಗೋಧಿ, ಓಟ್ಸ್​, ಕುಚಲಕ್ಕಿಯಂತಹ ಧಾನ್ಯಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇವುಗಳಲ್ಲಿ ಇರುವ ಫೈಬರ್​ ಅಂಶವು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಕರಿಸುತ್ತದೆ. ಅಲ್ಲದೇ ದೇಹದಲ್ಲಿ ಕೊಲೆಸ್ಟ್ರಾಲ್​ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವಲ್ಲಿಯೂ ಇವುಗಳು ಸಹಕಾರಿಯಾಗಿವೆ.

ದ್ವಿದಳ ಧಾನ್ಯಗಳು : ಬೀನ್ಸ್​, ಹುರುಳಿ , ಕಡಲೆ ಸೇರಿದಂತೆ ಇತರೆ ದ್ವಿದಳ ಧಾನ್ಯಗಳು ಪ್ರೋಟಿನ್​, ಫೈಬರ್​ ಹಾಗೂ ಖನಿಜಾಂಶಗಳನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುತ್ತವೆ. ಇವುಗಳು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್​ ಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿಯಾಗಿವೆ. ಇವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಹಣ್ಣುಗಳು: ಹಣ್ಣುಗಳಲ್ಲಿ ಜೀವಸತ್ವಗಳು, ಖನಿಜಗಳು, ಫೈಬರ್​ ಹಾಗೂ ಆಂಟಿ ಆಕ್ಸಿಡಂಟ್​ ಪ್ರಮಾಣ ಅಗಾಧವಾಗಿರುತ್ತದೆ. ಇವುಗಳು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮ ಮಾಡುತ್ತವೆ. ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಣ್ಣುಗಳನ್ನು ನೀವು ತಾಜಾವಾಗಿ ಸೇವಿಸಬಹುದು. ಅಥವಾ ಸಲಾಡ್​ಗಳು, ಜ್ಯೂಸ್​ ರೂಪದಲ್ಲಿ ಕೂಡಾ ಸೇವಿಸಬಹುದು. ಆದರೆ ಹಣ್ಣುಗಳಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ನೀವು ಹಣ್ಣುಗಳನ್ನು ಜ್ಯೂಸ್​ ಮಾಡದೆಯೇ ಹಾಗೆಯೇ ಸೇವಿಸುವುದು ಉತ್ತಮ.

ತರಕಾರಿಗಳು : ಹಸಿರು ಬಣ್ಣದ ತರಕಾರಿಗಳಾದ ಪಾಲಕ್​, ಮೆಂತ್ಯ ಹಾಗೂ ವಿವಿದ ಕೋಸುಗಡ್ಡೆಗಳು ಸೇರಿದಂತೆ ಇತರೆ ಬಣ್ಣ ಬಣ್ಣದ ತರಕಾರಿಗಳಲ್ಲಿ ಫೈಬರ್​, ವಿಟಮಿನ್​ಗಳು, ಖನಿಜಗಳು ಹಾಗೂ ಆಂಟಿ ಆಕ್ಸಿಡಂಟ್​ಗಳು ಅಗಾಧ ಪ್ರಮಾಣದಲ್ಲಿ ಇರುತ್ತದೆ. ಇವುಗಳು ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ, ತರಕಾರಿಗಳನ್ನೂ ನೀವು ಬೇಯಿಸಿ ಅಥವಾ ಬೇಯಿಸದೆಯೂ ಸೇವಿಸಬಹುದು. ತರಕಾರಿ ಸಲಾಡ್​ಗಳಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಅವಕಾಡೋ: ಇದನ್ನು ಬಟರ್‌ ಫ್ರೂಟ್‌ ಎಂದೂ ಕರೆಯುತ್ತಾರೆ ಹೃದಯದ ಆರೋಗ್ಯಕ್ಕೆ ಮೊನೊಸಾಚುರೇಟೆಡ್ ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಆವಕಾಡೊವನ್ನು ಸ್ಲೈಸ್ ಮಾಡಬಹುದು ಮತ್ತು ಸ್ಯಾಂಡ್‌ವಿಚ್‌ಗಳು ಅಥವಾ ಸಲಾಡ್‌ಗಳಿಗೆ ಸೇರಿಸಬಹುದು. ಇದನ್ನು ಮಿಲ್ಕ್‌ ಶೇಕ್‌ ಆಗಿಯೂ ಸೇವಿಸಬಹುದು.