logo
ಕನ್ನಡ ಸುದ್ದಿ  /  ಜೀವನಶೈಲಿ  /  Beard Oil: ಗಡ್ಡ ತೈಲ ಬಳಕೆಯ ಪ್ರಯೋಜನ, ಅಡ್ಡಪರಿಣಾಮ ತಿಳಿಯಿರಿ; ಸೊಂಪದ ಗಡ್ಡಕ್ಕೆ ಗಡ್ಡದ್ದೆಣ್ಣೆ ಆರೈಕೆ

Beard Oil: ಗಡ್ಡ ತೈಲ ಬಳಕೆಯ ಪ್ರಯೋಜನ, ಅಡ್ಡಪರಿಣಾಮ ತಿಳಿಯಿರಿ; ಸೊಂಪದ ಗಡ್ಡಕ್ಕೆ ಗಡ್ಡದ್ದೆಣ್ಣೆ ಆರೈಕೆ

Praveen Chandra B HT Kannada

Oct 13, 2024 11:12 AM IST

google News

ಕೆಜಿಎಫ್‌ ನಟ ಯಶ್‌ ಬಿಯರ್ಡ್‌ ಆಯಿಲ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡದ್ದು ಹೀಗೆ

    • ಸೊಂಪಾಗಿ ಗಡ್ಡ ಬೆಳೆಸುವವರು ಬಿಯರ್ಡ್‌ ಆಯಿಲ್‌ (ಗಡ್ಡದ ಎಣ್ಣೆ) ಬಳಸಲು ಆದ್ಯತೆ ನೀಡುತ್ತಾರೆ. ವಿಟಮಿನ್‌ ಸಿ ಹೊಂದಿರುವ ಗಡ್ಡದ ತೈಲಗಳಿಂದ ಸಾಕಷ್ಟು ಪ್ರಯೋಜನಗಳಿವೆ. ಕೆಲವೊಂದು ಅಡ್ಡಪರಿಣಾಮಗಳೂ ಇವೆ.
ಕೆಜಿಎಫ್‌ ನಟ ಯಶ್‌ ಬಿಯರ್ಡ್‌ ಆಯಿಲ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡದ್ದು ಹೀಗೆ
ಕೆಜಿಎಫ್‌ ನಟ ಯಶ್‌ ಬಿಯರ್ಡ್‌ ಆಯಿಲ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡದ್ದು ಹೀಗೆ

ನಟರಾದ ಯಶ್‌, ರಣವೀರ್‌ ಸಿಂಗ್‌, ಶಾಹೀದ್‌ ಕಪೂರ್‌, ಹೃತೀಕ್‌ ರೋಷನ್‌, ಸೈಫ್‌ ಆಲಿ ಖಾನ್‌, ಅಕ್ಷಯ್‌ ಕುಮಾರ್‌, ವಿಕ್ಕಿ ಕೌಶಲ್‌, ಸಲ್ಮಾನ್‌ ಖಾನ್‌, ರಣಬೀರ್‌ ಕಪೂರ್‌, ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ಇರ್ಫಾನ್‌ ಪಠಾನ್‌, ದಿನೇಶ್‌ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಇಶಾಂತ್‌ ಶರ್ಮಾ, ಕೆಎಲ್‌ ರಾಹುಲ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳ ಗಡ್ಡದಂತೆ ನೀವೂ ಮುಖದ ತುಂಬ ಸೊಗಸಾಗಿ ಗಡ್ಡದ ಸ್ಟೈಲ್‌ ಮಾಡಲು ಬಯಸಿರಬಹುದು. ಈಗ ಸಾಕಷ್ಟು ಯುವಕರು ಕೆಜಿಎಫ್‌ನ ಗರುಡನಂತೆ ಗಡ್ಡ ಬಿಡುತ್ತಿದ್ದಾರೆ. ಗಡ್ಡ ಬಿಡೋದು ಅಂದುಕೊಂಡಷ್ಟು ಸುಲಭವಲ್ಲ. ಅದರ ಆರೈಕೆ ಇದ್ದರೆ ಹಿತವಾಗಿರುತ್ತದೆ. ಇಲ್ಲವಾದರೆ, ಮೊಡವೆ, ತುರಿಕೆ, ಹೊಟ್ಟುಗಳಿಂದ ತಲೆಕೆಟ್ಟು ಅಲ್ಲಲ್ಲ ಗಡ್ಡ ಕೆಟ್ಟು ಹೋಗಬಹುದು.

ಗಡ್ಡ ಸಾಕಷ್ಟು ಬೆಳೆಸಿದ್ದೀರಿ. ಆದರೆ, ಮೊಡವೆ, ತುರಿಕೆ, ಹೊಟ್ಟು ಕಿರಿಕಿರಿ ಮಾಡುವುದೇ? ಹಾಗಾದರೆ, ನೀವು ಗಡ್ಡದ ನಿರ್ವಹಣೆಗೆ ಬಿಯರ್ಡ್‌ ಆಯಿಲ್‌ಬಳಸುವುದು ಸೂಕ್ತ. ಇದು ಮುಖದ ಕೂದಲು ಮತ್ತು ಚರ್ಮವನ್ನು ತೇವಗೊಳಿಸುತ್ತದೆ. ಗಡ್ಡದ ಬೆಳವಣಿಗೆಗೂ ಉತ್ತೇಜನ ನೀಡುತ್ತದೆ.

ಗಡ್ಡದ ಎಣ್ಣೆಯ (ಬಿಯರ್ಡ್‌ ಆಯಿಲ್‌) ಪ್ರಯೋಜನಗಳು

ಕೆಲವೊಂದು ಪ್ರಯೋಜನಗಳನ್ನು ಈ ಮುಂದಿನಂತೆ ಪಟ್ಟಿ ಮಾಡಬಹುದು.

1. ಗಡ್ಡದ ಪೋಷಣೆ, ತೇವ

ಗಡ್ಡದ ಎಣ್ಣೆಯು ಗಡ್ಡಕ್ಕೆ ಆಳವಾದ ಪೋಷಣೆ ಮತ್ತು ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ಗಡ್ಡ ಮೃದುವಾಗುತ್ತದೆ. ಮುಖಕ್ಕೂ ಹಿತವಾಗಿರುತ್ತದೆ. ಗಡ್ಡ ಮತ್ತು ಅದರ ಕೆಳಗಿನ ಚರ್ಮಕ್ಕೂ ಪೋಷಣೆ ಒದಗಿಸುತ್ತದೆ. ಚರ್ಮವು ಒಣಗುವ ಬದಲು ಆದ್ರವಾಗಿರುತ್ತದೆ. ಪುರುಷರಲ್ಲಿ ಒಣಚರ್ಮ ತಡೆಯಲು ಗಡ್ಡದ ಎಣ್ಣೆ ನೆರವಾಗುತ್ತದೆ.

2. ಇನ್ನಷ್ಟು ಚಂದ ಕಾಣುವಿರಿ

ಗಡ್ಡದ ಎಣ್ಣೆಯು ಮುಖದ ಗಡ್ಡವನ್ನು ಹೊಳೆಯುವಂತೆ ಮಾಡುತ್ತದೆ. ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ.

3. ಗಡ್ಡವನ್ನು ಬಲಪಡಿಸುತ್ತದೆ, ದೃಢಗೊಳಿಸುತ್ತದೆ

ಬಿಯರ್ಡ್‌ ಆಯಿಲ್‌ನಲ್ಲಿರುವ ವಿಟಮಿನ್‌ಗಳು (ವಿಟಮಿನ್‌ ಇ) ಮತ್ತು ಖನಿಜಗಲೂ ಚರ್ಮದ ಪೋಷಣೆಗೆ ಸಹಕಾರಿ. ಕೂದಲು ಬುಡದಿಂದಲೇ ಬೆಳೆಯಲು ನರವಾಗುತ್ತದೆ. ಗಮನಿಸಿ, ಗಡ್ಡದ ಎಣ್ಣೆ ಬಳಸುವ ಮೊದಲು ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಪೇಸ್‌ವಾಶ್‌, ಫೇಸ್‌ ಮಾಸ್ಕ್‌ಗಳು, ಮಾಯಿಶ್ವರೈಸರ್‌ನಂತಹ ಉತ್ಪನ್ನ ಬಳಸಿದ ಬಳಿಕ ಗಡ್ಡದ ಎಣ್ಣೆ ಬಳಸಬಹುದು.

4. ಮೊಡವೆ ಮತ್ತು ಕಿರಿಕಿರಿಯನ್ನು ತಡೆಯುತ್ತದೆ

ಗಡ್ಡ ಬಿಟ್ಟಮೇಲೆ ಗಡ್ಡದೊಳಗೆ ಮೊಡವೆ, ಕಿರಿಕಿರಿ ಹೆಚ್ಚಿರುತ್ತದೆ. ಇಂತಹ ಸಮಸ್ಯೆ ನಿಮಗಿದ್ದರೆ ಗಡ್ಡದ ಎಣ್ಣೆ ಬಳಸಲು ಆರಂಭಿಸಬಹುದು. ಗಡ್ಡದ ಎಣ್ಣೆಯು ವಿಟಮಿನ್ ಇ ಯಂತಹ ಜೀವಸತ್ವಗಳನ್ನು ಹೊಂದಿರುತ್ತದೆ, ಇದು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಆಳವಾದ ಪರಿಣಾಮವನ್ನು ಬೀರುತ್ತದೆ. ಗಡ್ಡದ ಎಣ್ಣೆಯಲ್ಲಿರುವ ವಿಟಮಿನ್ ಇ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯಂತಹ ಪರಿಸರದ ತೊಂದರೆಗಳ ವಿರುದ್ಧ ಹೋರಾಡಲು ಮತ್ತು ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಹೀಗಾಗಿ, ನೀವು ಕೂದಲಿನ ಬೆಳವಣಿಗೆಗೆ ವಿಟಮಿನ್ ಇ ಹೊಂದಿರುವ ಗಡ್ಡ ಎಣ್ಣೆಯನ್ನು ಬಳಸಬಹುದು. ಮೊಡವೆ ಮುಕ್ತ ಚರ್ಮವನ್ನು ಪಡೆಯಬಹುದು.

5. ಡ್ಯಾಂಡ್ರಫ್ ಮತ್ತು ತುರಿಕೆ ನಿವಾರಣೆ

ಮುಖದ ಮೇಲಿನ ಗಡ್ಡದ ಆರೈಕೆ ಮರೆತರೆ ಚರ್ಮದಲ್ಲಿ ತುರಿಕೆ ಆರಂಬವಾಗಬಹುದು. ಒಣ ಚರ್ಮ ಆರಂಭವಾಗಬಹುದು. ಇದರಿಂದ ಡ್ಯಾಂಡ್ರಫ್‌ ಆರಂಬವಾಗಬಹುದು. ಧೂಳು ಮತ್ತು ಪರಿಸರದ ಕಣಗಳು ಸೇರಿ ಚರ್ಮದ ಆರೋಗ್ಯವೂ ಹಾಳಾಗಬಹುದು. ಇಂತಹ ಸಮಸ್ಯೆ ಹೋಗಲಾಡಿಸಲು ಬಿಯರ್ಡ್‌ ಆಯಿಲ್‌ ಬಳಸಬಹುದು.

6. ಗಡ್ಡವನ್ನು ಪಳಗಿಸಲು ನೆರವು

ಪಳಗಿಸಲು ಇದು ಹುಲಿಯೋ ಸಿಂಹವೋ ಎಂದು ಕೇಳಬೇಡಿ. ಕೆಲವೊಮ್ಮೆ ಗಡ್ಡ ಹೇಳಿದಂತೆ ಕೇಳೋದಿಲ್ಲ. ಎಷ್ಟು ಬಾಚಿದರೂ ಸೊಟ್ಟಗೆ ಅಡ್ಡದಿಡ್ಡಿ ಇರುತ್ತದೆ. ಒಣಪೊದೆ ರೀತಿ ವರ್ತಿಸಬಹುದು. ಗಡ್ಡದ್ದೆಣ್ಣೆ ಬಳಸಿದರೆ ಗಡ್ಡವನ್ನು ಬೇಕಾದಂತೆ ತಿದ್ದಿತೀಡಿ ಬಾಚಬಹುದು.

ಬಿಯರ್ಡ್‌ ಆಯಿಲ್‌ ಅಡ್ಡಪರಿಣಾಮ, ಅವಗುಣಗಳು

ನೀವು ಬಳಸುವ ಬಿಯರ್ಡ್‌ ಆಯಿಲ್‌ ಗುಣಮಟ್ಟಕ್ಕೆ ತಕ್ಕಂತೆ ಅಡ್ಡಪರಿಣಾಮವೂ ಉಂಟಾಗಬಹುದು. ಕೆಲವರಿಗೆ ಇದು ಹಿಡಿಸದೆ ಹೋಗಬಹುದು. ಅಡ್ಡಪರಿಣಾಮ ಕಂಡುಬಂದರೆ ಬಿಯರ್ಡ್‌ ಆಯಿಲ್‌ ಹಚ್ಚುವುದನ್ನು ನಿಲ್ಲಿಸುವುದು ಉತ್ತಮ.

  1. ಅತಿಯಾಗಿ ಗಡ್ಡದ್ದೆಣ್ಣೆ ಬಳಸಿದರೆ ಗಡ್ಡ ಒದ್ದೆಮುದ್ದೆಯಾಗಿ ಕಾಣಿಸಬಹುದು.
  2. ಗಡ್ಡದ್ದೆಣ್ಣೆಯಿಂದಲೂ ತುರಿಕೆ, ಮೊಡವೆ, ಡೆಂಡ್ರಫ್‌ ಆರಂಭವಾಗಬಹುದು.
  3. ಅಲರ್ಜಿ ರಿಯಕ್ಷನ್‌ ಉಂಟಾಗಬಹುದು.
  4. ಹೇರ್‌ ಆಯಿಲ್‌ಗಳಿಗೆ ಹೋಲಿಸಿದರೆ ಗಡ್ಡದ್ದೆಣ್ಣೆ ದುಬಾರಿ.
  5. ಕೆಲವು ಎಣ್ಣೆಗಳು ಸೂರ್ಯನ ಬೆಳಕಿಗೆ ಅಡ್ಡಪರಿಣಾಮ ಉಂಟುಮಾಡಬಹುದು. ಗಡ್ಡಕ್ಕೆ ಹಾನಿ ಉಂಟುಮಾಡಬಲ್ಲದು.

ಇದನ್ನೂ ಓದಿ: ಮೋದಿ ಗಡ್ಡ ಎಳೆದ ಚಿನ್ನಾರಿಗೆ ಸಿಕ್ತಾ ಮಿಠಾಯಿ?

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ