ನೀವು ವೇಟ್‌ಲಾಸ್ ಮಾಡಲು ವಾಕಿಂಗ್ ಮಾಡ್ತೀರಾ? ಹಾಗಾದ್ರೆ ಮೊದಲು ಈ ಸೀಕ್ರೆಟ್ ಟಿಪ್ಸ್ ತಿಳಿದುಕೊಳ್ಳಿ, ನಂತರ ವಾಕಿಂಗ್ ಮಾಡಿ
Oct 04, 2024 05:09 PM IST
ತೂಕ ಇಳಿಸಿಕೊಳ್ಳಲು ವಾಕಿಂಗ್ ಮಾಡುತ್ತಿದ್ದರೆ ಈ ನಿಯಮ ತಿಳಿದುಕೊಳ್ಳಿ
- ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಹಲವರಿದ್ದಾರೆ. ಆದರೆ ಅದಕ್ಕಾಗಿ ವ್ಯಾಯಾಮ, ವಾಕಿಂಗ್, ಯೋಗ ಹೀಗೆ ಹಲವಾರು ಆಯ್ಕೆಗಳನ್ನು ಇಟ್ಟುಕೊಂಡಿರುತ್ತಾರೆ. ನೀವೂ ಸಣ್ಣ ಆಗಲು ವಾಕಿಂಗ್ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದರೆ ಮೊದಲು ಈ ವಿಷಯ ನಿಮ್ಮ ಗಮನದಲ್ಲಿರಲಿ.
ಹಲವರು ತಮ್ಮ ತೂಕ ಇಳಿಸಿಕೊಳ್ಳಲು ವಾಕಿಂಗ್ ಮಾಡಿತ್ತಾರೆ. ಆದರೆ ನಡೆಯುವಾಗ ನೀವು ಯಾವ ರೀತಿ ನಡೆಯಬೇಕು ಎನ್ನುವುದು ತುಂಬಾ ಮುಖ್ಯ. ನಿಮ್ಮ ಬೆನ್ನನ್ನು ನೇರವಾಗಿ ಇಟ್ಟುಕೊಂಡು ನಡೆಯುವುದು ತುಂಬಾ ಮುಖ್ಯ. ನೀವೂ ಸಣ್ಣ ಆಗಲು ವಾಕಿಂಗ್ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದರೆ ಮೊದಲು ಈ ವಿಷಯ ನಿಮ್ಮ ಗಮನದಲ್ಲಿರಲಿ. ನಡೆಯುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಈ ನಿಯಮಗಳನ್ನು ಅನುಸರಿಸಿದರೆ ನೀವು ಬೇಗ ತೆಳ್ಳಗಾಗುತ್ತೀರಿ.
ತೋಳಿನ ಚಲನೆ ಮಾಡಿ:
ನೀವು ನಡೆಯುವಾಗ ನಿಮ್ಮ ತೋಳನ್ನು ಹಿಂದುಕ್ಕು, ಮುಂದಕ್ಕೂ ಚಲಿಸುತ್ತಾ ನಡೆಯಿರಿ. ಇದು ನಿಮ್ಮ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ. ಬಹಳಷ್ಟು ಕ್ಯಾಲೋರಿಗಳನ್ನು ನೀವು ಬರ್ನ್ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದರೆ, ಈ ರೀತಿ ನಿಮ್ಮ ಎರಡು ತೋಳುಗಳನ್ನು ಜೋರಾಗಿ ಬೀಸುತ್ತಾ ನಡೆಯುವುದು ಉತ್ತಮ. ನೀವು ಎಷ್ಟು ಜೋರಾಗಿ ತೋಳುಗಳನ್ನು ಬೀಸುತ್ತಾ ನಡೆಯುತ್ತೀರೋ ಅಷ್ಟು ವೇಗದ ನಡಿಗೆ ನಿಮ್ಮದಾಗುತ್ತದೆ.
ಲಯಬದ್ಧವಾಗಿ ನಡೆಯಿರಿ:
ನಿಮ್ಮ ನಡಿಗೆ ಲಯಬದ್ಧವಾಗಿರಲಿ. ಯಾಕೆಂದರೆ ಒಮ್ಮೆ ಜೋರಾಗಿ ಓಡುವುದು, ಇನ್ನೊಮ್ಮೆ ನಿಧಾನವಾಗಿ ಓಡುವುದು/ ನಡೆಯುವುದು ಮಾಡಿದರೆ ಬೇಗ ಸುಸ್ತಾಗುತ್ತದೆ. ಬೇಗ ಸುಸ್ತಾದರೇ ನೀವು ಅರ್ಧಕ್ಕೆ ವಾಕಿಂಗ್ ನಿಲ್ಲಿಸಿ, ಮತ್ತೆ ಮನೆಗೆ ಬರಬೇಕಾದ ಪ್ರಸಂಗ ಬರಬಹುದು. ಇದು ಸಂಪೂರ್ಣವಾಗಿ ತೂಕ ಇಳಿಸಿಕೊಳ್ಳಲು ಪರಿಣಾಮ ಬೀರುವುದಿಲ್ಲ. ಹಾಗಾಗಿ ಲಯಬದ್ಧವಾದ ನಡೆಯನ್ನು ಇಟ್ಟುಕೊಳ್ಳಿ. ನಿಧಾನವಾಗಿ ನಡೆಯುತ್ತಿದ್ದರೆ ಅದೇ ವೇಗವನ್ನು ಕಾಪಾಡಿಕೊಳ್ಳಿ. ವೇಗವಾಗಿ ನಡೆಯುತ್ತಿದ್ದರೆ ಅದೇ ವೇಗವನ್ನು ಕಾಪಾಡಿಕೊಳ್ಳಿ. ಯಾವುದಾದರೂ ಒಂದು ಮಾರ್ಗವನ್ನು ಮಾತ್ರ ಅನುಸರಿಸಿ.
ಏರು ಜಾಗದಲ್ಲಿ ನಡೆಯಿರಿ
ಏರು ಪ್ರದೇಶದಲ್ಲಿ ನಡೆಯುವುದು ಉತ್ತಮ. ಇಳಿಜಾರು ಪ್ರದೇಶದಲ್ಲಿ ನಡೆದರೆ ನಿಮ್ಮನ್ನು ನೀವು ಕಂಟ್ರೋಲ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಏರು ಪ್ರದೇಶದಲ್ಲಿ ನೀವು ನಿಮ್ಮ ಶಕ್ತಿಯ ಪ್ರಯೋಗ ಮಾಡಿ ಹತ್ತುವ ಕೆಲಸ ಮಾಡುತ್ತೀರಿ. ಹೀಗಾದಾಗ ನಿಮ್ಮಲ್ಲಿರುವ ಕ್ಯಾಲೋರಿ ಹೆಚ್ಚು ಬರ್ನ್ ಆಗಿ, ನೀವು ಬೇಗ ತೆಳ್ಳಗಾಗುತ್ತೀರಾ.
ಡೆಂಬಲ್ಸ್ ಅಥವಾ ನೀರಿನ ಬಾಟಲಿ
ಇನ್ನೂ ನಡೆಯುವಾಗ ನೀರಿನ ಬಾಟಲ್ ಅಥವಾ ಡೆಂಬಲ್ಸ್ ಏನಾದರೂ ಅದನ್ನು ಕೈಯಲ್ಲಿ ಹಿಡಿದುಕೊಳ್ಳುವುದು ಉತ್ತಮ. ಈ ರೀತಿ ಹಿಡಿದುಕೊಂಡು ನಡೆದಾಗ ನೀವು ಬೇಗ ಬೆವರುತ್ತೀರಿ. ನಿಮ್ಮ ಸ್ನಾಯುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಉತ್ತಮ ಆರೋಗ್ಯಕ್ಕೂ ಇದು ಕಾರಣವಾಗುತ್ತದೆ.
ಆರೋಗ್ಯಕರ ಆಹಾರ ಮುಖ್ಯ
ಆರೋಗ್ಯಕರ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಯಾಕೆಂದರೆ ನೀವು ನಿಮ್ಮ ದೇಹವನ್ನು ಎಷ್ಟು ದಂಡಿಸುತ್ತಿರೋ ನಿಮ್ಮ ಶರೀರಕ್ಕೆ ಅಷ್ಟೇ ಆಹಾರವನ್ನು ನೀಡಬೇಕಾಗುತ್ತದೆ. ಇಲ್ಲವಾದರೆ ನೀವು ನಿಶಕ್ತಿಯಿಂದ ಬಳಲುತ್ತಿರಿ. ಕಾಣಲು ತೆಳ್ಳಗಾದರೂ ನಿಮ್ಮಲ್ಲಿ ಶಕ್ತಿ ಇರುವುದಿಲ್ಲ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ನೀವು ವಾಕಿಂಗ್ ಮಾಡುವಾಗ ಈ ಮೇಲಿನ ಎಲ್ಲಾ ನಿಯಮಗಳನ್ನು ಸರಿಯಾಗಿ ನೆನಪಿನಲ್ಲಿಟ್ಟುಕೊಂಡು ಇದನ್ನು ಅನುಸರಿಸಿ ನಡೆದರೆ ಮಾತ್ರ ಬೇಗ ತೂಕ ಕಳೆದುಕೊಳ್ಳಲು ಸಾಧ್ಯ
ವಿಭಾಗ