logo
ಕನ್ನಡ ಸುದ್ದಿ  /  ಜೀವನಶೈಲಿ  /  ಸರ್ಕಾರಿ ಶಾಲೆ Vs ಖಾಸಗಿ ಶಾಲೆ; ಮಕ್ಕಳ ವಿದ್ಯಾರ್ಜನೆಗೆ ನಿಮ್ಮ ಆಯ್ಕೆ ಯಾವುದು, ಈ ಸಾಧಕ-ಬಾಧಕಗಳ ಅರಿವಿರಲಿ

ಸರ್ಕಾರಿ ಶಾಲೆ vs ಖಾಸಗಿ ಶಾಲೆ; ಮಕ್ಕಳ ವಿದ್ಯಾರ್ಜನೆಗೆ ನಿಮ್ಮ ಆಯ್ಕೆ ಯಾವುದು, ಈ ಸಾಧಕ-ಬಾಧಕಗಳ ಅರಿವಿರಲಿ

Prasanna Kumar P N HT Kannada

Sep 26, 2024 01:14 PM IST

google News

ಸರ್ಕಾರಿ ಶಾಲೆ vs ಖಾಸಗಿ ಶಾಲೆ

    • Government Schools vs Private Schools: ಖಾಸಗಿ ಶಾಲೆಗಳ ಹಾವಳಿಯ ನಡುವೆ ಸರ್ಕಾರಿ ಶಾಲೆಗಳು ಬಡವಾಗುತ್ತಿವೆ ಎನ್ನುವ ವಾಸ್ತವದ ಮಧ್ಯೆಯೂ ಎಷ್ಟೋ ಗವರ್ನಮೆಂಟ್ ಶಾಲೆಗಳು ಮಾದರಿಯಾಗಿವೆ. ಶಿಕ್ಷಣ, ಬೋಧನೆ, ಸೌಲಭ್ಯಗಳು ಸೇರಿದಂತೆ ಹಲವು ವಿಚಾರಗಳಲ್ಲಿ ಪ್ರತಿಯೊಂದು ಶಾಲೆಯು ತನ್ನದೇ ಆದ ಅನುಕೂಲಗಳು, ಅನಾನುಕೂಲಗಳನ್ನು ಹೊಂದಿವೆ. ಅವುಗಳ ವ್ಯತ್ಯಾಸ ಇಲ್ಲಿದೆ.
ಸರ್ಕಾರಿ ಶಾಲೆ vs ಖಾಸಗಿ ಶಾಲೆ
ಸರ್ಕಾರಿ ಶಾಲೆ vs ಖಾಸಗಿ ಶಾಲೆ

Government Schools vs Private Schools: ಸರ್ಕಾರಿ ಶಾಲೆ vs ಖಾಸಗಿ ಶಾಲೆ... ಇದು ಈ ಹಿಂದೆ ಚರ್ಚೆಯಾಗಿರುವ, ಪ್ರಸ್ತುತ ಚರ್ಚೆಯಾಗುತ್ತಿರುವ, ಮುಂದೆಯೂ ಚರ್ಚೆಯಾಗಲಿರುವ ವಿಷಯ. ಖಾಸಗಿ ಶಾಲೆಗಳಿಗೆ ಬೇಡಿಕೆ ಹೆಚ್ಚಾದಂತೆ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿ ಕಡಿಮೆಯಾಗಿದೆ ಎನ್ನುವುದು ವಾಸ್ತವ. ನಗರ, ಪಟ್ಟಣಗಳಲ್ಲಿ ಮಾತ್ರ ತಲೆ ಎತ್ತಿದ್ದ ಖಾಸಗಿ ಶಾಲೆಗಳು, ಹಳ್ಳಿಗಳಿಗೂ ವಿಸ್ತರಣೆಯಾಗಿದ್ದು, ಗ್ರಾಮೀಣ ಮಕ್ಕಳನ್ನು ಸೆಳೆಯುತ್ತಿವೆ. ಇದರಿಂದಗಿ ಸರ್ಕಾರಿ ಶಾಲೆಗೆ ಮಕ್ಕಳ ಪ್ರವೇಶ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಕುಸಿಯುತ್ತಿದೆ. ಹಾಗಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂತಹ ಪರಿಸ್ಥಿತಿ ಇಲ್ಲ ಎಂಬುದು ತಿಳಿಯಬೇಕು. ಅನೇಕ ಸರ್ಕಾರಿ ಶಾಲೆಗಳಲ್ಲೂ ಅತ್ಯುತ್ತಮ ಶಿಕ್ಷಣ ದೊರೆಯುತ್ತಿದೆ. ಆದರೂ ಪೋಷಕರ ವ್ಯಾಮೋಹ ಖಾಸಗಿ ಶಾಲೆಗಳ ಕಡೆಗೆ ವಾಲಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಂದ ಅನುಕೂಲ ಮತ್ತು ಅನಾನುಕೂಲತೆ ಏನಿದೆ? ಇಲ್ಲಿದೆ ವಿವರ.

ಖಾಸಗಿ ಶಾಲೆಗಳ ವ್ಯಾಮೋಹ ಹೆಚ್ಚಾಗುತ್ತಿರುವುದೇಕೆ?

ಸರ್ಕಾರಿ ಶಾಲೆಗಳ ಗುಣಮಟ್ಟತೆ ಕಡಿಮೆಯಾಗಿದೆ ಎಂಬ ಆರೋಪವೇ ಇದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗಲ್ಲ. ಮತ್ತೊಂದು ಇಂಗ್ಲೀಷ್ ಶಿಕ್ಷಣ. ತಮ್ಮ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಮತ್ತು ಇಂಗ್ಲೀಷ್ ಶಿಕ್ಷಣ ದೊರೆತು, ಅವರ ಭವಿಷ್ಯ ಪ್ರಜ್ವಲಿಸಲಿ ಎನ್ನುವ ಆಸೆಯಿಂದ ಪ್ರೈವೇಟ್ ಸ್ಕೂಲ್​ಗಳ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಅತ್ಯುತ್ತಮ ಸೌಲಭ್ಯಗಳು, ತರಗತಿಯ ಗಾತ್ರದ ಸಂಖ್ಯೆ, ಆಧುನಿಕ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳು, ಹೆಚ್ಚು ಅರ್ಹ ಶಿಕ್ಷಕರು, ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚು ನೀಡುವ ಕಾರಣ ಪೋಷಕರು ಪ್ರೈವೇಟ್ ಸ್ಕೂಲ್​​​ಗಳತ್ತ ವಾಲುತ್ತಿದ್ದಾರೆ. ಅದಕ್ಕಾಗಿ ಎಷ್ಟೇ ಫೀಸ್ ಇದ್ದರೂ ಪಾವತಿಸಲು ರೆಡಿ ಎನ್ನುತ್ತಿದ್ದಾರೆ. ಹಾಗಂತ, ಎಲ್ಲಾ ಖಾಸಗಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ದೊರೆಯುತ್ತದೆ ಎನ್ನುವುದು ತಪ್ಪು ಎಂಬುದನ್ನು ಮರೆಯಬಾರದು.

ಖಾಸಗಿ ಶಾಲೆಗಳ ಅನುಕೂಲಗಳು

1. ಅತ್ಯುತ್ತಮ ಬೋಧನೆ

2. ಪಠ್ಯೇತರ ಚಟುವಟಿಕೆಗಳು

3. ಸಣ್ಣ ವರ್ಗ ಗಾತ್ರಗಳು

4. ಅತ್ಯುತ್ತಮ ಸೌಲಭ್ಯಗಳು

5. ಮಕ್ಕಳ ಆರೈಕೆ

6. ಶಿಕ್ಷಣ ತಜ್ಞರು

7. ಇಂಗ್ಲಿಷ್ ಜ್ಞಾನ

8. ಸುರಕ್ಷಿತ ಕಲಿಕೆಯ ಪರಿಸರ

9. ಮಕ್ಕಳ ರಕ್ಷಣೆಗೆ ಒತ್ತು

10. ಮಕ್ಕಳು ಶಿಸ್ತು ಕಲಿಕೆ

ಖಾಸಗಿ ಶಾಲೆಗಳ ಅನಾನುಕೂಲಗಳು

1. ದುಬಾರಿ ಫೀಸ್/ವಾಹನ ಫೀಸ್/ನಿಮ್ಮದೇ ಊಟದ ಬಾಕ್ಸ್, ಸ್ಯಾಕ್ಸ್

2. ಶ್ರೀಮಂತ ಕುಟುಂಬಗಳಿಗೆ ಉತ್ತಮ

3. ಶಿಕ್ಷಣವನ್ನು ವಾಣಿಜ್ಯಮಯನ್ನಾಗಿಸಿವೆ

4. ಒತ್ತಡ ಮತ್ತು ಸ್ಪರ್ಧೆ ಹೆಚ್ಚಳ

5. ಪ್ರಮಾಣೀಕರಣದ ಕೊರತೆ

6. ಮಾನಸಿಕ ಆರೋಗ್ಯದ ಕಾಳಜಿಯ ಕೊರತೆ

7. ರಾಜ್ಯ ಸರ್ಕಾರದಿಂದ ಅನುದಾನ ಸಿಗಲ್ಲ.

8. ಶಾಲಾ-ಕಾಲೇಜುಗಳ ನಡುವೆ ಪೈಪೋಟಿಗೆ ಮಕ್ಕಳು ಬಲಿಪಶು

9. ಮಕ್ಕಳಿಗೆ ಸ್ವಾತಂತ್ರ್ಯ ಇರುವುದಿಲ್ಲ.

10. ಮಕ್ಕಳಿಗೆ ಉಚಿತವಾಗಿ ಏನು ಸಿಗುವುದಿಲ್ಲ.

ಸರ್ಕಾರಿ ಶಾಲೆಗಳ ಮೇಲಿನ ವ್ಯಾಮೋಹ ಕುಸಿಯುತ್ತಿದ್ಯಾ?

ನಿಜ ಹೇಳಬೇಕೆಂದರೆ ಸರ್ಕಾರಿ ಶಾಲೆಗಳದ್ದೇ ದರ್ಬಾರ್ ಹೆಚ್ಚಾಗಿಯೇ ಇದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ತುಸು ಜಾಸ್ತಿಯೇ ಅನ್ನಿ. ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಗಲ್ಲಿಗೊಂದು ತಲೆ ಎತ್ತಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಇವತ್ತಿಗೂ ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬ ಆರೋಪಗಳು ಶುದ್ಧ ಸುಳ್ಳು. ನಿಜವಾಗಲೂ ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಣ ದೊರೆಯುತ್ತಿದೆ. ಖಾಸಗಿ ಶಾಲೆಗಳನ್ನೇ ನಾಚಿಸುವಂತೆ ಫಲಿತಾಂಶ ತೆಗೆಯುತ್ತಿವೆ. ಆದರೆ, ಉತ್ತಮ ಕಲಿಕಾ ವ್ಯವಸ್ಥೆ, ಪಠ್ಯೇತರ ಚಟುವಟಿಕೆ, ಸ್ವಾತಂತ್ರ್ಯ, ಉಚಿತ ಶಿಕ್ಷಣವಿದ್ದರೂ ಸರ್ಕಾರಿ ಶಾಲೆಗಳ ಕಡೆ ಒಲವು ತೋರದಿರುವುದು ಬೇಸರದ ಸಂಗತಿ. ಎಷ್ಟೋ ಕಡೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದು, ಅದ್ಭುತವಾಗಿ ಅಭಿವೃದ್ಡಿ ಮಾಡಿದ್ದಾರೆ. ಮಕ್ಕಳನ್ನು ಸೆಳೆಯುತ್ತಿವೆ. ಇಂತಹ ಕಾರ್ಯಗಳು ಇನ್ನೂ ಆಗಬೇಕಿದೆ.

ಸರ್ಕಾರಿ ಶಾಲೆಗಳ ಅನುಕೂಲಗಳು

1. ಉಚಿತ ಶಿಕ್ಷಣ/ಹಣ ಉಳಿತಾಯ

2. ಮಕ್ಕಳಿಗೆ ಪೌಷ್ಠಿಕ ಆಹಾರ/ಸಮವಸ್ತ್ರ ವಿತರಣೆ

3. ಸ್ವಾತಂತ್ರ್ಯ/ಒತ್ತಡ ರಹಿತ ಶಿಕ್ಷಣ

4. ಗುಣಮಟ್ಟದ ಶಿಕ್ಷಣ

5. ಸಾಮಾಜಿಕ ಅರಿವು ಹೆಚ್ಚಳ

6. ದೈಹಿಕ ಶಿಕ್ಷಣ

7. ತರಬೇತಿ ಪಡೆದ ಮತ್ತು ಅರ್ಹ ಶಿಕ್ಷಕರು

8. ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿಗೆ ಒತ್ತು

9. ಸರ್ಕಾರಿ ಪರೀಕ್ಷೆಗಳು ಮತ್ತು ವೃತ್ತಿಗಳಿಗೆ ತಯಾರಿ

10. ನಾಗರಿಕ ಪ್ರಜ್ಞೆ ಮತ್ತು ದೇಶಭಕ್ತಿಯ ಬೆಳವಣಿಗೆ

ಸರ್ಕಾರಿ ಶಾಲೆಗಳ ಅನಾನುಕೂಲಗಳು

1. ಮೂಲಸೌಕರ್ಯ ಕೊರತೆಗಳು (ಕಟ್ಟಡಗಳು, ಫರ್ನಿಚರ್ಸ್...)

2. ಶಿಕ್ಷಕರ ಕೊರತೆ ಮತ್ತು ತರಬೇತಿ

3. ಇಂಗ್ಲಿಷ್ ಜ್ಞಾನದ ಕೊರತೆ

4. ತರಗತಿಗಳ ಗಾತ್ರ ದೊಡ್ಡು

5. ತಂತ್ರಜ್ಞಾನ ಕೊರತೆ (ಕಂಪ್ಯೂಟರ್ಸ್, ಇಂಟರ್ನೆಟ್..)

6. ಶಿಸ್ತಿನ ಸಮಸ್ಯೆ/ಮಾನಸಿಕ ಆರೋಗ್ಯಕ್ಕೆ ಅಸಮರ್ಪಕ ಒತ್ತು

7. ಶಿಕ್ಷಕರ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ

8. ಸುರಕ್ಷಿತ ವಾತಾವರಣ ನಿರ್ಮಿಸುವಲ್ಲಿ ಬೇಜವಾಬ್ದಾರಿ

9. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ

10. ಅಸಮರ್ಥ ಶಾಲಾ ನಿರ್ವಹಣಾ ಸಮಿತಿಗಳು/ಶಾಲೆಯ ಹಣಕಾಸಿನಲ್ಲಿ ಪಾರದರ್ಶಕತೆಯ ಕೊರತೆ

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ