ಪದವಿ vs ಕೌಶಲ್ಯ: ಭಾರತದಲ್ಲಿ ಪದವಿ ಪಡೆದವರಿಗೆ ಉದ್ಯೋಗಾವಕಾಶ ಕಡಿಮೆ; ಜಾಬ್‌ಗೆ ಬೇಕಾದ ಕೌಶಲ್ಯ ಕೊರತೆಯೇ ಕಾರಣ
Nov 13, 2024 01:30 PM IST
ಭಾರತದಲ್ಲಿ ಪದವಿ ಪಡೆದವರಿಗೆ ಉದ್ಯೋಗಾವಕಾಶ ಕಡಿಮೆ; ಜಾಬ್‌ಗೆ ಬೇಕಾದ ಕೌಶಲ್ಯ ಕೊರತೆಯೇ ಕಾರಣ
- Education: ಉದ್ಯೋಗ ಬಯಸುವ ಭಾರತೀಯ ಪದವೀಧರರಲ್ಲಿ ಕೇವಲ 45 ಪ್ರತಿಶತ ಅಭ್ಯರ್ಥಿಗಳು ಮಾತ್ರ ಉದ್ಯಮದ ಬೇಡಿಕೆಗಳನ್ನು ಪೂರೈಸಲು ಅಗತ್ಯವಿರುವ ಕೌಶಲ್ಯಗಳನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ಹೇಳಿದೆ. ಹೀಗಾಗಿ ಅವರಿಗೆ ಉದ್ಯೋಗಾವಕಾಶ ಕಡಿಮೆ. ಇದಕ್ಕೆ ಕಾರಣಗಳೇನು ಎಂಬುದನ್ನು ನೋಡೋಣ.
ಆನ್‌ಲೈನ್ ಪ್ರತಿಭೆ ಮೌಲ್ಯಮಾಪನ ಕಂಪನಿಯಾದ ಮರ್ಸರ್ 2023 ರಲ್ಲಿ ಒಂದು ಅಧ್ಯಯನ ನಡೆಸಿತು. 'ಭಾರತದ ಗ್ರಾಜುಯೇಟ್ ಸ್ಕಿಲ್ ಇಂಡೆಕ್ಸ್ 2023ʼ ಎಂಬ ಶೀರ್ಷಿಕೆಯ ಅಧ್ಯಯನದ ಪ್ರಕಾರ, ಉದ್ಯೋಗಕ್ಕೆ ಬೇಕಾದ ಸೂಕ್ತ ಕೌಶಲ್ಯವು ಅಭ್ಯರ್ಥಿಗಳಲ್ಲಿ ಇರುವುದು ಕಡಿಮೆ ಎಂಬುದನ್ನು ಉಲ್ಲೇಖಿಸಿದೆ. ಪದವಿ ಪಡೆದರೂ, ಅವರು ಅರ್ಜಿ ಸಲ್ಲಿಸುವ ಉದ್ಯೋಗಕ್ಕೆ ಬೇಕಾದ ಕೌಶಲ್ಯದ ಕೊರತೆಯನ್ನು ಎತ್ತಿ ತೋರಿಸಿದೆ. ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ 45 ಪ್ರತಿಶತ ಭಾರತೀಯ ಪದವೀಧರರು ಮಾತ್ರ, ಆ ಉದ್ಯಮದಲ್ಲಿ ವೇಗವಾಗಿ ಬದಲಾಗುತ್ತಿರುವ ಬೇಡಿಕೆಗಳನ್ನು ಪೂರೈಸಲು ಅಗತ್ಯ ಕೌಶಲ್ಯಗಳನ್ನು ಹೊಂದಿರುತ್ತಾರೆ ಎಂದು ಸೂಚಿಸಿದೆ.
ಈ ಅಧ್ಯಯನಕ್ಕೆ 2500 ಕ್ಯಾಂಪಸ್‌ಗಳ 4,40,000 ಅಭ್ಯರ್ಥಿಗಳ ಡೇಟಾ ಮೌಲ್ಯಮಾಪನ ಮಾಡಲಾಗಿದೆ. ತಾಂತ್ರಿಕ ಕೌಶಲ್ಯದ ಅಗತ್ಯವಿರುವ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಹುಡುಕುವುದಕ್ಕಿಂತ, ತಾಂತ್ರಿಕೇತರ ಕೌಶಲ್ಯಗಳಲ್ಲಿ ಇರುವ ಉದ್ಯೋಗಾವಕಾಶಗಳಿಗೆ ಅಭ್ಯರ್ಥಿಗಳನ್ನು ಹುಡುಕುವುದು ಸುಲಭ ಎಂದು ವರದಿ ಸೂಚಿಸುತ್ತದೆ. ಭಾರತೀಯ ಪದವೀಧರರಲ್ಲಿ ಸುಮಾರು 53 ಪ್ರತಿಶತ ಅಭ್ಯರ್ಥಿಗಳು ಉನ್ನತ ತಾಂತ್ರಿಕ ಕೌಶಲ್ಯದ ಅಗತ್ಯವಿಲ್ಲದ ಉದ್ಯೋಗಗಳಿಗೆ ಸೂಕ್ತ ಎಂದು ವರದಿಯ ದತ್ತಾಂಶ ಹೇಳಿದೆ. ಇದೇ ವೇಳೆ, ಉನ್ನತ ತಾಂತ್ರಿಕ ಕೌಶಲ್ಯದ ಅಗತ್ಯ ಇರುವ ಹುದ್ದೆಗಳಿಗೆ ಕೇವಲ 44 ಪ್ರತಿಶತ ಅಭ್ಯರ್ಥಿಗಳು ಮಾತ್ರ ಸೂಕ್ತವಾಗಿರುತ್ತಾರೆ.
ತಾಂತ್ರಿಕ ಕೌಶಲ್ಯಗಳ ಅಗತ್ಯವಿರುವ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಪದವೀಧರರಿಗಿಂತ ತಾಂತ್ರಿಕ ಕೌಶಲ್ಯಗಳಿಲ್ಲದ ಉದ್ಯೋಗ ಪಡೆಯುವವರ ಸಂಖ್ಯೆ ಹೆಚ್ಚು.
ಭಾರತೀಯ ಪದವೀಧರರಿಗೆ ಕಡಿಮೆ ಉದ್ಯೋಗಾವಕಾಶಕ್ಕೆ ಕಾರಣಗಳೇನು?
ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಭಾರತೀಯ ಪದವೀಧರರಲ್ಲಿ ಕೇವಲ 45 ಪ್ರತಿಶತ ಅಭ್ಯರ್ಥಿಗಳು ಮಾತ್ರ ಉದ್ಯಮದ ವೇಗವಾಗಿ ಬದಲಾಗುತ್ತಿರುವ ಬೇಡಿಕೆಗಳನ್ನು ಪೂರೈಸಲು ಅಗತ್ಯವಿರುವ ಸೂಕ್ತ ಕೌಶಲ್ಯಗಳನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ಹೇಳಿದೆ. ಇದಕ್ಕೆ ಪುಷ್ಠಿ ನೀಡುವ ಅಂಶಗಳಿವು.
ಪಠ್ಯಕ್ರಮ ಮತ್ತು ಉದ್ಯಮದ ಅಗತ್ಯಗಳ ನಡುವಿನ ಹೊಂದಾಣಿಕೆ
ಭಾರತೀಯ ವಿಶ್ವವಿದ್ಯಾನಿಲಯಗಳು ಉದ್ಯಮದ ಅಗತ್ಯತೆಗಳಿಗೆ ಹೊಂದಿಕೆಯಾಗುವ ಪ್ರಾಯೋಗಿಕ ಕೌಶಲ್ಯಗಳಿಗಿಂತ ಹೆಚ್ಚಾಗಿ ಸೈದ್ಧಾಂತಿಕ ಜ್ಞಾನದ ಮೇಲೆ ಕೇಂದ್ರೀಕರಿಸುತ್ತವೆ. ಹೀಗಾಗಿ ಶೈಕ್ಷಣಿಕವಾಗಿ ಉನ್ನತ ಜ್ಞಾನ ಬಂದರೂ ಪ್ರಾಯೋಗಿಕ ಅನುಭವ ಅಥವಾ ಉದ್ಯೋಗ ನೀಡುವ ಕಂಪನಿಗಳು ಬಯಸುವ ತಾಂತ್ರಿಕ ಸಾಮರ್ಥ್ಯ ಅವರಲ್ಲಿ ಇರುವುದಿಲ್ಲ.
ಸಾಫ್ಟ್ ಸ್ಕಿಲ್ಸ್ ಅಭಿವೃದ್ಧಿಗೆ ಸಿಗದ ಒತ್ತು
ಕೆಲಸಗಳಿಗೆ ತಾಂತ್ರಿಕ ಕೌಶಲ್ಯ ನಿರ್ಣಾಯಕವಾಗಿದ್ದರೂ, ಅದರೊಂದಿಗೆ ಸಂವಹನ, ಟೀಮ್‌ವರ್ಕ್ ಮತ್ತು ವಿಮರ್ಶಾತ್ಮಕ ಚಿಂತನೆ ಸೇರಿದಂತೆ ಕೆಲವೊಂದು ಮೃದು ಕೌಶಲ್ಯಗಳು ಅಗತ್ಯ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಇವುಗಗಳಿಗೆ ಹೆಚ್ಚು ಮೌಲ್ಯ ಕೊಡುವುದಿಲ್ಲ. ಹೀಗಾಗಿ ಪದವೀಧರರು ಕೆಲಸದ ಸ್ಥಳದಲ್ಲಿ ಯಶಸ್ಸಿಗೆ ಅಗತ್ಯವಾದ ಪರಸ್ಪರ ಕೌಶಲ್ಯಗಳನ್ನು ಹೊಂದಿರುವುದಿಲ್ಲ.
ತಾಂತ್ರಿಕ ಪಾತ್ರಗಳಿಗೆ ಅಗತ್ಯ ಸಿದ್ಧತೆ ಇಲ್ಲದಿರುವುದು
AI ಮತ್ತು ಡೇಟಾ ಸೈನ್ಸ್‌ನಂತಹ ಹೆಚ್ಚಿನ ಬೇಡಿಕೆ ಇರುವ ಕ್ಷೇತ್ರಗಳಲ್ಲಿಯೂ ಪದವೀಧರರು ತಾಂತ್ರಿಕ ಪಾತ್ರಗಳಿಗೆ ಬೇಕಾದ ಸಾಮರ್ಥ್ಯ ಹೊಂದಿರುವುದಿಲ್ಲ. ಭಾರತೀಯ ವಿಶ್ವವಿದ್ಯಾನಿಲಯಗಳು ವಿಮರ್ಶಾತ್ಮಕ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಲಯಗಳಲ್ಲಿ ವೃತ್ತಿಜೀವನಕ್ಕಾಗಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತರಬೇತಿ ನೀಡುತ್ತಿವೆಯೇ ಎಂಬ ಪ್ರಶ್ನೆಗಳನ್ನು ಇದು ಹುಟ್ಟುಹಾಕುತ್ತದೆ.