logo
ಕನ್ನಡ ಸುದ್ದಿ  /  ಜೀವನಶೈಲಿ  /  ವಿಜ್ಞಾನಿಗಳ ನೇಮಕಾತಿಗೆ ಮುಂದಾಗ ಐಸಿಎಂಆರ್; ಫೆ 16ರೊಳಗೆ ಅರ್ಜಿ ಸಲ್ಲಿಸಿ -Icmr Recruitment 2024

ವಿಜ್ಞಾನಿಗಳ ನೇಮಕಾತಿಗೆ ಮುಂದಾಗ ಐಸಿಎಂಆರ್; ಫೆ 16ರೊಳಗೆ ಅರ್ಜಿ ಸಲ್ಲಿಸಿ -ICMR Recruitment 2024

Raghavendra M Y HT Kannada

Feb 05, 2024 06:45 PM IST

google News

ಐಸಿಎಂಆರ್‌ನಲ್ಲಿ ಖಾಲಿ ಇರುವ 31 ವಿಜ್ಞಾನಿಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ

  • ICMR Recruitment 2024: ಐಸಿಎಂಆರ್ ವಿಜ್ಞಾನಿ-ಬಿ ಮತ್ತು ವಿಜ್ಞಾನಿ-ಸಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 16ರೊಳಗೆ ಅರ್ಜಿ ಸಲ್ಲಿಸಬಹುದು.

ಐಸಿಎಂಆರ್‌ನಲ್ಲಿ ಖಾಲಿ ಇರುವ 31 ವಿಜ್ಞಾನಿಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ
ಐಸಿಎಂಆರ್‌ನಲ್ಲಿ ಖಾಲಿ ಇರುವ 31 ವಿಜ್ಞಾನಿಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ

ICMR Recruitment 2024: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿಜ್ಞಾನಿ-ಬಿ ಮತ್ತು ವಿಜ್ಞಾನಿ-ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 16 (ಶುಕ್ರವಾರ) ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಐಸಿಎಂಆರ್‌ನ ಅಧಿಕೃತ ವೆಬ್‌ಸೈಟ್ recruit.icmr.org.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ:

ಐಸಿಎಂಆರ್ ನೇಮಕಾತಿ 2024: 31 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರಗಳು

  • ವಿಜ್ಞಾನಿ-ಬಿ: 30 ಹುದ್ದೆಗಳು (15 ವೈದ್ಯಕೀಯ ಮತ್ತು 15 ವೈದ್ಯಕೀಯೇತರ ಹುದ್ದೆಗಳು)
  • ವಿಜ್ಞಾನಿ -ಸಿ (ಬಯೋಎಥಿಕ್ಸ್): 1 ಹುದ್ದೆ

ಇದನ್ನೂ ಓದಿ: ಅಗ್ನಿವೀರ್ ಭರ್ತಿಗೆ ಫೆಬ್ರವರಿ 8 ರಿಂದ ಆನ್‌ಲೈನ್ ನೋಂದಣಿ ಆರಂಭ

ಐಸಿಎಂಆರ್ ನೇಮಕಾತಿ 2024 ವಯಸ್ಸಿನ ಮಿತಿ

  • ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ

ಐಸಿಎಂಆರ್ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ

ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (ಎಂಸಿಕ್ಯೂ) ಅಥವಾ ಸಂದರ್ಶನ ಅಥವಾ ಎರಡರ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಗಳನ್ನು ನಡೆಸಿದರೆ, ಸಂಶೋಧನಾ ವಿಧಾನಗಳ ತಿಳುವಳಿಕೆಯನ್ನು ಆಧರಿಸಿ ಅಭ್ಯರ್ಥಿಗಳು ಅರ್ಹತೆ ಪಡೆಯುತ್ತಾರೆ. ಕನಿಷ್ಠ ಅರ್ಹತೆ ಶೇಕಡಾ 75 ರಷ್ಟು ಪಡೆಯಬೇಕು.

ಐಸಿಎಂಆರ್ ನೇಮಕಾತಿ 2024 ಅರ್ಜಿ ಶುಲ್ಕ:

  • ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯೊಂದಿಗೆ 1500 ರೂಪಾಯಿ ಶುಲ್ಕವನ್ನು ಪಾವತಿಸಬೇಕು
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆ, ಅಂಗವಿಕಲರು ಹಾಗೂ ಆರ್ಥಿಕವಾಗಿ ಹಿಂದೂಳಿದವರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ

ಇದನ್ನೂ ಓದಿ: ಬಿಎಂಟಿಸಿಯಲ್ಲಿ 2500 ನಿರ್ವಾಹಕರು, ಸಹಾಯಕ ಲೆಕ್ಕಿಗ, ತಾಂತ್ರಿಕ ಸಿಬ್ಬಂದಿ ನೇಮಕಕ್ಕೆ ಅರ್ಜಿ ಆಹ್ವಾನ

ಐಸಿಎಂಆರ್ ನೇಮಕಾತಿ 2024: ಅರ್ಜಿ ಸಲ್ಲಿಸುವುದು ಹೇಗೆ?

  • ಐಸಿಎಂಆರ್‌ನ ಅಧಿಕೃತ ವೆಬ್‌ಸೈಟ್ https://recruit.icmr.org.in/ ಗೆ ಭೇಟಿ
  • ಮುಖಪುಟದಲ್ಲಿ ಕಾಣಿಸುವ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ
  • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ಅರ್ಜಿ ಶುಲ್ಕವನ್ನು ಪಾವತಿಸಿ

ಫಾರ್ಮ್ ಅನ್ನು ಸಲ್ಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 606 ಸ್ಪೆಷಲಿಸ್ಟ್ ಆಫೀಸರ್ ಭರ್ತಿಗೆ ಅರ್ಜಿ ಆಹ್ವಾನ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 2023ರ ಫೆಬ್ರವರಿ 3 (ಶನಿವಾರ) ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಫೆಬ್ರವರಿ 23 (ಶುಕ್ರವಾರ) ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು www.unionbankofindia.co.in ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ 2024 ರ ಮಾರ್ಚ್ ಅಥವಾ ಏಪ್ರಿಲ್ ಆಗಿರುವ ಸಾಧ್ಯತೆ ಇದೆ. 606 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ ಕುರಿತ ಹೆಚ್ಚಿನ ಮಾಹಿತಿಗಾಗಿ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ವನ್ನು ಫಾಲೋ ಮಾಡಿ. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ