ಬಿಎಂಟಿಸಿಯಲ್ಲಿ 2500 ನಿರ್ವಾಹಕರು, ಸಹಾಯಕ ಲೆಕ್ಕಿಗ, ತಾಂತ್ರಿಕ ಸಿಬ್ಬಂದಿ ನೇಮಕಕ್ಕೆ ಅರ್ಜಿ ಆಹ್ವಾನ; BMTC Recruitment 2024
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಎಂಟಿಸಿಯಲ್ಲಿ 2500 ನಿರ್ವಾಹಕರು, ಸಹಾಯಕ ಲೆಕ್ಕಿಗ, ತಾಂತ್ರಿಕ ಸಿಬ್ಬಂದಿ ನೇಮಕಕ್ಕೆ ಅರ್ಜಿ ಆಹ್ವಾನ; Bmtc Recruitment 2024

ಬಿಎಂಟಿಸಿಯಲ್ಲಿ 2500 ನಿರ್ವಾಹಕರು, ಸಹಾಯಕ ಲೆಕ್ಕಿಗ, ತಾಂತ್ರಿಕ ಸಿಬ್ಬಂದಿ ನೇಮಕಕ್ಕೆ ಅರ್ಜಿ ಆಹ್ವಾನ; BMTC Recruitment 2024

BMTC Recruitment 2024: ಬಿಎಂಟಿಸಿಯಲ್ಲಿ ಖಾಲಿ ಇರುವ 2,503 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ವಿಧಾನ, ಅರ್ಹತೆ ಹಾಗೂ ಮಾನದಂಡಗಳ ಮಾಹಿತಿ ತಿಳಿಯಿರಿ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2,503 ಹುದ್ದೆಗಳ ಭರ್ತಿಗೆ ಬಿಎಂಟಿಸಿ ಅರ್ಜಿ ಆಹ್ವಾನಿಸಿದೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2,503 ಹುದ್ದೆಗಳ ಭರ್ತಿಗೆ ಬಿಎಂಟಿಸಿ ಅರ್ಜಿ ಆಹ್ವಾನಿಸಿದೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-ಬಿಟಿಎಂಸಿಯಲ್ಲಿ ಖಾಲಿ ಇರುವ ನಿರ್ವಾಹಕರು (Conductors), ಸಹಾಯಕ ಲೆಕ್ಕಿಗ (Assistant Accountant) ಹಾಗೂ ತಾಂತ್ರಿಕ ಸಿಬ್ಬಂದಿ (Technical Staff) ಸೇರಿದಂತೆ ಒಟ್ಟು 2503 ಹುದ್ದೆಗಳ ನೇಮಕಾತಿಗೆ (BMTC Recruitment 2024) ಮುಂದಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅರ್ಹ ಅಭ್ಯರ್ಥಿಗಳು ಬಿಎಂಟಿಸಿಯ ಅಧಿಕೃತ ಜಾಲತಾಣ mybmtc.karnataka.gov.in ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಹುದ್ದೆಗಳನ್ನು ಭರ್ತಿ ಮಾಡಲಿದೆ. ಆನ್‌ಲೈನ್‌ನಲ್ಲಿ ಶೀಘ್ರದಲ್ಲಿ ಅರ್ಜಿಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಸೇರಿದಂತೆ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸದ್ಯದಲ್ಲಿ 2,500 ನಿರ್ವಾಹಕರನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗುತ್ತದೆ. ಇದರ ಜೊತೆಗೆ ಒಬ್ಬ ಸಹಾಯಕ ಲೆಕ್ಕಿಗ, ಓರ್ವ ಸ್ಟಾಫ್ ನರ್ಸ್ ಹಾಗೂ ಒಂದು ಫಾರ್ಮಾಸಿಸ್ಟ್ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ.

ಬಿಎಂಟಿಸಿಯಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ವಿದ್ಯಾರ್ಹತೆ, ವೇತನ ವಿವರ

ಬಿಬಿಎಂಪಿಯ ಹುದ್ದೆಗಳಿಗೆ ಅನುಸಾರವಾಗಿ ಅಂಗೀಕೃತ ಬೋರ್ಡ್ ಇಲ್ಲವೇ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಪಿಯುಸಿ, ಪದವಿ, ನರ್ಸಿಂಗ್, ಫಾರ್ಮಾಸಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು.

ರಾಜ್ಯ ಸರ್ಕಾರದ ನಿಯಮಾವಳಿ ಹಾಗೂ ಹುದ್ದೆಗಳ ಅನುಸಾರ ಮೂಲ ವೇತನ ನಿಗದಿಪಡಿಸಲಾಗಿದೆ. ತುಟ್ಟಿಭತ್ಯೆ, ಮನೆಬಾಡಿಗೆ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳು ನಿಮಯಾನುಸಾರ ದೊರಯುತ್ತವೆ.

ಬಿಬಿಎಂಪಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ

ಸಾಮಾನ್ಯ ವರ್ಗದವರರಿಗೆ ಅರ್ಜಿ ಶುಲ್ಕ 500 ರೂಪಾಯಿ ಇರಲಿದೆ. 2ಎ, 2ಬಿ, 3ಎ ಮತ್ತು 3ಬಿ ವರ್ಗದವರಿಗೆ 300 ರೂಪಾಯಿ, ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ 1ಕ್ಕೆ 200 ರೂಪಾಯಿ, ವಿಕಲಚೇನರು ಮತ್ತು ಮಾಜಿ ಸೈನಿಕರು ಸಲ್ಲಿಸುವ ಅರ್ಜಿಗೆ 100 ರೂಪಾಯಿ ಶುಲ್ಕ ಇರಲಿದೆ. ಅರ್ಜಿಯ ವಿವರ ಹಾಗೂ ಇನ್ನಿತರ ಮಾಹಿತಿಗಾಗಿ kea.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸುವ ದಿನಾಂಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಹಾಗೂ ಅರ್ಜಿ ಶುಲ್ಕ ಪಾವತಿಯ ಕೊನೆಯ ದಿನಾಂಕವನ್ನು ಪ್ರಾಧಿಕಾರ ಶೀಘ್ರದಲ್ಲೇ ಬಹಿರಂಗಪಡಿಸಲಿದೆ.

ಆರ್‌ಬಿಐ ಸಹಾಯಕ ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆಯ ಅಂಕಗಳನ್ನು ಬಿಡುಗಡೆ

ಭಾರತೀಯ ರಿಸರ್ವ್ ಬ್ಯಾಂಕ್-ಆರ್‌ಬಿಐ ಸಹಾಯಕ ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆಯ ಅಂಕಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳು ಆರ್‌ಬಿಐನ ಅಧಿಕೃತ ವೆಬ್‌ಸೈಟ್ rbi.org.in ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆರ್‌ಬಿಐ ಸಹಾಯಕ ಪೂರ್ವಭಾವಿ ಪರೀಕ್ಷೆ 2023ರ ನವೆಂಬರ್ 18 (ಶನಿವಾರ) ಮತ್ತು 19 (ಭಾನುವಾರ) ರಂದು ನಡೆದಿತ್ತು. ಈ ನೇಮಕಾತಿಯಲ್ಲಿ ಒಟ್ಟು 450 ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ. ಆರ್‌ಬಿಐ ಸಹಾಯಕ ಪ್ರಿಲಿಮ್ಸ್ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕವನ್ನು ಬಳಸಬಹುದು. ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಲು ಆ ಮಾಹಿತಿಯ ಅಗತ್ಯವಾಗಿದೆ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner