ಅಗ್ನಿವೀರ್ ಭರ್ತಿಗೆ ಫೆಬ್ರವರಿ 8 ರಿಂದ ಆನ್‌ಲೈನ್ ನೋಂದಣಿ ಆರಂಭ, ಕೊನೆಯ ದಿನಾಂಕ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಅಗ್ನಿವೀರ್ ಭರ್ತಿಗೆ ಫೆಬ್ರವರಿ 8 ರಿಂದ ಆನ್‌ಲೈನ್ ನೋಂದಣಿ ಆರಂಭ, ಕೊನೆಯ ದಿನಾಂಕ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

ಅಗ್ನಿವೀರ್ ಭರ್ತಿಗೆ ಫೆಬ್ರವರಿ 8 ರಿಂದ ಆನ್‌ಲೈನ್ ನೋಂದಣಿ ಆರಂಭ, ಕೊನೆಯ ದಿನಾಂಕ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

ಅಗ್ನಿವೀರ್ ನೇಮಕಾತಿ ಆರಂಭಿಸಿರುವ ಸೇನೆ, ಫೆಬ್ರವರಿ 8 ರಿಂದ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಿದೆ. ಕೊನೆಯ ದಿನಾಂಕ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ.

ಅಗ್ನಿವೀರ್ ನೇಮಕಾತಿ ವಿಷಯ ಕುರಿತು ಸೇನಾ ನೇಮಕಾತಿ ವಿಭಾಗದ ಕರ್ನಲ್ ಡಿಪಿ ಸಿಂಗ್ ಲೂಧಿಯಾನದಲ್ಲಿ ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಅಗ್ನಿವೀರ್ ನೇಮಕಾತಿ ವಿಷಯ ಕುರಿತು ಸೇನಾ ನೇಮಕಾತಿ ವಿಭಾಗದ ಕರ್ನಲ್ ಡಿಪಿ ಸಿಂಗ್ ಲೂಧಿಯಾನದಲ್ಲಿ ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಲೂದಿಯಾನ (ಪಂಜಾಬ್): ಸೇನೆಯಲ್ಲಿ ಅಗ್ನಿವೀರರನ್ನು ನೇಮಕಾತಿ ಮಾಡಿಕೊಳ್ಳಲು ಫೆಬ್ರವರಿ 8 ರಿಂದ ನೋಂದಣಿ ಪ್ರಾರಂಭವಾಗಲಿದ್ದು, ಮಾರ್ಚ್ 21 ಕೊನೆಯ ದಿನವಾಗಿದೆ ಎಂದು ಸೇನಾ ನೇಮಕಾತಿ ವಿಭಾಗದ ಕರ್ನಲ್ ಡಿಪಿ ಸಿಂಗ್ ತಿಳಿಸಿದ್ದಾರೆ. ಬುಧವಾರ (ಜನವರಿ 31) ಲೂಧಿಯಾನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಆಸಕ್ತ ಆಕಾಂಕ್ಷಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಲು ಸೇನಾ ಅಧಿಕೃತ ಪೋರ್ಟಲ್ joinindianarmy.nic.in ಗೆ ಭೇಟಿ ನೀಡಬಹದು. ಅರ್ಜಿ ಸಲ್ಲಿಸಿದವರನ್ನು ಏಪ್ರಿಲ್‌ನಲ್ಲಿ ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.

ಅಗ್ನಿವೀರ್ ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?

17 ರಿಂದ 21 ವರ್ಷದೊಳಗಿನ ಅಭ್ಯರ್ಥಿಗಳು ಅಗ್ನಿವೀರ್ ಆಗಲು ಅರ್ಜಿ ಸಲ್ಲಿಸಬಹುದು ಎಂದು ಡಿಸಿ ಸಿಂಗ್ ಅವರು ತಿಳಿಸಿದ್ದಾರೆ. ಜನರಲ್ ಡ್ಯೂಟಿ ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ಟ್ರೇಡ್ಸ್ ಮನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 8ನೇ ತರಗತಿ ಉತ್ತೀರ್ಣರಾಗಿರಬೇಕು. ಇದಲ್ಲದೆ, ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಅಗ್ನಿವೀರ್ ಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡುವ ದಲ್ಲಾಳಿಗಳನ್ನು ನಂಬಬೇಡಿ ಎಂದು ಅಭ್ಯರ್ಥಿಗಳಲ್ಲಿ ಮನವಿ ಮಾಡಿದ್ದಾರೆ."ಅಗ್ನಿವೀರ್ ಯೋಜನೆಯ ಬಗ್ಗೆ ಯುವಕರಿಗೆ ಅರಿವು ಮೂಡಿಸಲು ಶಾಲೆಗಳು, ಕಾಲೇಜುಗಳು ಮತ್ತು ಹಳ್ಳಿಗಳಲ್ಲಿ ಔಟ್ರೀಚ್ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

ಆರ್‌ಬಿಐ ಸಹಾಯಕ ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆಯ ಮಾರ್ಕ್ಸ್‌ಕಾರ್ಡ್ ಬಿಡುಗಡೆ

ಭಾರತೀಯ ರಿಸರ್ವ್ ಬ್ಯಾಂಕ್-ಆರ್‌ಬಿಐ ಸಹಾಯಕ ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆಯ ಅಂಕಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳು ಆರ್‌ಬಿಐನ ಅಧಿಕೃತ ವೆಬ್‌ಸೈಟ್ rbi.org.in ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆರ್‌ಬಿಐ ಸಹಾಯಕ ಪೂರ್ವಭಾವಿ ಪರೀಕ್ಷೆ 2023ರ ನವೆಂಬರ್ 18 (ಶನಿವಾರ) ಮತ್ತು 19 (ಭಾನುವಾರ) ರಂದು ನಡೆದಿತ್ತು. ಈ ನೇಮಕಾತಿಯಲ್ಲಿ ಒಟ್ಟು 450 ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ. ಆರ್‌ಬಿಐ ಸಹಾಯಕ ಪ್ರಿಲಿಮ್ಸ್ ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕವನ್ನು ಬಳಸಬಹುದು. ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಲು ಆ ಮಾಹಿತಿಯ ಅಗತ್ಯವಾಗಿದೆ. ಪರೀಕ್ಷಾ ಪ್ರಾಧಿಕಾರ 2023ರ ಡಿಸೆಂಬರ್ 31 ರಂದು ಆರ್‌ಬಿಐ ಸಹಾಯಕ ಹುದ್ದೆಗಳಿಗೆ ಮುಖ್ಯ ಲಿಖಿತ ಪರೀಕ್ಷೆಯನ್ನು ನಡೆಸಿದೆ. ಫಲಿತಾಂಶ ಬಾಕಿ ಇದೆ. ಅಭ್ಯರ್ಥಿಗಳನ್ನು ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಆರ್‌ಬಿಐ ಸಹಾಯಕ ಪ್ರಿಲಿಮ್ಸ್ ಸ್ಕೋರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಆರ್‌ಬಿಐ ಸಹಾಯಕ ಪ್ರಿಲಿಮ್ಸ್ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ತಮ್ಮ ಸ್ಕೋರ್ ಕಾರ್ಡ್ ಅವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

  • ಆರ್‌ಬಿಐ ಅಧಿಕೃತ ವೆಬ್‌ಸೈಟ್ rbi.org.in ಭೇಟಿ ನೀಡಿ
  • ಮುಖ ಪುಟದಲ್ಲಿ ನೇಮಕಾತಿ ಸಂಬಂಧಿತ ಜಾಹೀರಾತು ಟ್ಯಾಬ್ ಅನ್ನು ಕ್ಲಿಕ್ ಮಾಡಿ
  • ಬಳಿಕ ಆರ್‌ಬಿಐ ಸಹಾಯಕ ಸ್ಕೋರಕಾರ್ಡ್ ಲಿಂಕ್ ಹೊಂದಿರುವ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ
  • ಇಲ್ಲಿ ಅಗತ್ಯ ಮಾಹಿತಿಯನ್ನು ಲಮೂದಿಸಿ
  • ಆರ್‌ಬಿಐ ಸಹಾಯಕ ಸ್ಕೋರ್‌ಕಾರ್ಡ್ ಪರದೆ ಮೇಲೆ ಕಾಣಿಸುತ್ತದೆ
  • ಸ್ಕೋರ್‌ಕಾರ್ಡ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಮುಂದಿನ ಪ್ರಕ್ರಿಯೆಗಳಿಗಾಗಿ ಈ ಸ್ಕೋರ್‌ಕಾರ್ಡ್‌ ಪ್ರತಿಯನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner